ಸಿಂಧನೂರು

ಕರ್ನಾಟಕದ ಒಂದು ತಾಲೂಕು

ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ್ತವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು ಭತ್ತದ ಖಣಜ ' ' ' ಭತ್ತದ ನಾಡು ' ' ' ಎಂದು ಕರೆಯಲಾಗುತ್ತದೆ. ೨೦೧೧ನೇ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯು ೩೬೦೧೬೪ ಇದ್ದು ಸಾಕ್ಷರತೆ ಪ್ರಮಾಣ ಶೇ. ೫೦.೬ ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ ೧೫೬೭.೭೦ ಚದರ ಕಿ.ಮೀ. ಇದೆ.[]

Sindhanur
taluk
Country ಭಾರತ
StateKarnataka
DistrictRaichur
Lok Sabha ConstituencyKoppal
HeadquartersSindhanur
Area
 • Total೧,೫೬೭.೭೦ km (೬೦೫.೨೯ sq mi)
Elevation
೩೭೭ m (೧,೨೩೭ ft)
Population
 • Total೩,೬೦,೧೬೪ (city: ೭೫,೮೩೭)
 • ಸಾಂದ್ರತೆ೨೨೯.೭೪/km (೫೯೫�೦/sq mi)
Languages
 • OfficialKannada
ಸಮಯ ವಲಯಯುಟಿಸಿ+5:30 (IST)
PIN
584128
Telephone code8535
ISO 3166 codeIN-KA-RA-SI
ವಾಹನ ನೋಂದಣಿKA-36


ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲ್ಲೂಕು

ಇತಿಹಾಸ

ಬದಲಾಯಿಸಿ

"ಸಿಂಧ" ಎಂದರೆ ಈ ಭಾಗದಲ್ಲಿ ಆಳುತ್ತಿದ್ದ ಸಿಂಧರು ಎಂಬ ಅರಸು ಮನೆತನ "ನೂರು" ಎಂದರೆ ಊರು. "ಸಿಂಧನೂರು" ಎಂಬ ಹೆಸರು ಈ ಭಾಗದಲ್ಲಿ ಆಳುತ್ತಿದ್ದ ಚಾಲುಕ್ಯರ ಮಾಂಡಲಿಕರಾಗಿದ್ದ ಸಿಂಧರಿಂದ ಬಂದಿದೆ ಎಂದು ಹೇಳಲಾಗುತ್ತದೆ.

ಭೌಗೋಳಿಕ ಲಕ್ಷಣಗಳು

ಬದಲಾಯಿಸಿ

ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಮತ್ತು ಹತ್ತಿ ಬೆಳೆಯಲು ಯೋಗ್ಯವಾಗಿದೆ.

ರಾಜಕೀಯ

ಬದಲಾಯಿಸಿ
 
ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ
  • ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು ಇವರು ಮಾಜಿ ಸೈನಿಕರು ಇವರು ಎರಡು ಬಾರಿ ಪಾಕಿಸ್ತಾನ ಮತ್ತು ಚೀನಾ ಯುದ್ದದಲ್ಲಿ ಭಾಗವಹಿಸಿದ್ದರು. ಬಾದರ್ಲಿ ಮಂಡಲ ಪಂಚಾಯಿತಿಗೆ 4 ಬಾರಿ ಅವಿರೋಧವಾಗಿ ಆಯ್ಕೆಯಾದರು.
  • ಶ್ರೀ ಕರಡಿ ಸಂಗಣ್ಣ, ಸಂಸದರು, ಕೊಪ್ಪಳ ಕ್ಷೇತ್ರ ಇವರು ಕೊಪ್ಪಳರವರಾಗಿದ್ದು, ಬಿ ಜೆ ಪಿ ಪಕ್ಷದಿಂದ ಚುನಾಯಿತರಾಗಿದ್ದಾರೆ.
  • ಶ್ರೀ ಹಂಪನಗೌಡ ಬಾದರ್ಲಿ ಶಾಸಕರು, ಸಿಂಧನೂರು ವಿಧಾನ ಸಭಾ ಕ್ಷೇತ್ರ. ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಿದ್ದಾರೆ.
  • ಕನ್ನಡ,ತೆಲುಗು,ಬೆಂಗಾಲಿ ಹಾಗೂ ಉರ್ದು ಮಾತನಾಡುವ ಭಾಷಿಕರಿದ್ದಾರೆ.
  • ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ/ ಉಪಯೋಗಿಸುವ ಕೇಂದ್ರವಾಗಿದೆ.
  • ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.

ಇದು ರಾಯಚೂರು ಜಿಲ್ಲೆಯ ಒಂದನೇ ಅತಿ ದೊಡ್ಡ ತಾಲ್ಲೂಕು ಇಲ್ಲಿ ತುಂಗಭದ್ರಾ ನದಿಯ ಎಡದಂಡೆ ಕಾಲುವೆ ನೀರು ಹರಿದು ಬರುತ್ತದೆ.ಇಲ್ಲಿ ಜನರು ಕೃಷಿಯಲ್ಲಿ ಭತ್ತವನ್ನು ಅತಿ ಹೆಚ್ಚು ಬೇಳಿಯುತಾರೆ ಆದರಿಂದ. ಈ ಪ್ರದೇಶವನ್ನು ಭತ್ತದ ಕಣಜ ಎಂದು ಕರೆಯಲಾಗಿದೆ.ಇಲ್ಲಿ ಕೃಷಿ ಮತ್ತು ಸರಕು ಸಾಮಾಗ್ರಿಗಳನ್ನು ರಫ್ತು ಮಾಡಲಾುತ್ತಿದೆ.ಅತಿ ಹೆಚ್ಚು ಟ್ರ್ಯಾಕ್ಟರ್ ಆಮದು ಮಾಡಿಕೊಳ್ಳುವ ಮೂಲಕ ಮೊದಲನೇ ಸ್ಥಾನ ಹೊಂದಿದೆ .ಬಟ್ಟೆ ಗಿರಣಿಗಳು ಕೂಡ ಇವೆ . ಕುಡಿಯುವ ನೀರು ಶುದ್ಧೀಕರಣ ಘಟಕ ಇದೆ.ಇದರಿಂದ ೨೫ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ