ಸರಗೂರು

ವನಜಲಸಿರಿ ನಾಡು -

ಮೈಸೂರು ಜಿಲ್ಲೆಯ ಹೊಸ ತಾಲೂಕಾಗಿದೆ. ಪ್ರಮುಖ ವಾಣಿಜ್ಯ ಸ್ಥಳವಾದ ಸರಗೂರಲ್ಲಿ ಪ್ರಮುಖವಾಗಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಇದೆ. ಪಟ್ಟಣ ಪಂಚಾಯ್ತಿಯೂ ಇದೆ. ನಾಡ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ಅರಣ್ಯ, ಕೃಷಿ, ರೇಷ್ಮೆ, ಒಳನಾಡು ಸಾರಿಗೆ ಇಲಾಖೆ ಕಚೇರಿಗಳು, ಸೆಸ್ಕ್ ಕಚೇರಿ, ಪೊಲೀಸ್ ಠಾಣೆ, ವಸತಿಗೃಹಗಳು ಇವೆ.

ಹಳೇ ಹೆಗ್ಗುಡಿಲು

ಬದಲಾಯಿಸಿ

ಮೈಸೂರು ಜಿಲ್ಲೆಯ ಹಿಂದುಳಿದ ತಾಲೂಕಾದ ಸರಗೂರು ತಾಲೂಕಿನ ಹಿಂದುಳಿದ ಗ್ರಾಮವೆಂದರೆ ಹಳೆ ಹೆಗ್ಗುಡಿಲು ಗ್ರಾಮ. ಈ ಗ್ರಾಮದಲ್ಲಿ ಸುಮಾರು 700ರ ಜನಸಂಖ್ಯೆಯನ್ನು ಹೊಂದಿದ್ದು ಈ ಗ್ರಾಮವು ಕಾಡಿನ ಅಂಚಿನಲ್ಲಿ ಇದೆ. []

ಗ್ರಾಮದ ಹಿನ್ನೆಲೆ-

ಈ ಗ್ರಾಮವು ನುಗು ಜಲಾಶಯದ ಹಿಂಭಾಗದ ನೀರಿನಿಂದ ಬೇರೆಯಾಗಲ್ಪಟ್ಟ ಗ್ರಾಮವಿದು. ಗ್ರಾಮದ ಸುತ್ತ ಅಚ್ಚ ಹಸಿರಿನಿಂದ ಕೂಡಿದ್ದು ಸುತ್ತಲೂ ಸುಂದರವಾದ ಪರಿಸರವನ್ನು ಹೊಂದಿದೆ. ಈ ಗ್ರಾಮಕ್ಕೆ ವಲಸೆ ಬಂದ ಕಾರಣ ಗ್ರಾಮವು ಯಾವುದರಲ್ಲಿಯೂ ಸಹ ಸಮೃದ್ಧಿಯನ್ನು ಕಾಣದೆ ತಾಲೂಕಿನಲ್ಲಿ ಹಿಂದುಳಿದ ಗ್ರಾಮವಾಗಿ ಉಳಿದಿದೆ.

ಕೃಷಿ-

ಪ್ರಸ್ತುತ ಈ ಗ್ರಾಮದಲ್ಲಿ ಅತಿ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹತ್ತಿ ,ಹೊಗೆ ಸೊಪ್ಪು ,ರಾಗಿ, ಜೋಳ, ಶುಂಠಿ ,ಇತ್ಯಾದಿ...

ಈ ಗ್ರಾಮದ ಸುತ್ತ ಕಾಡು ಇದ್ದು ಅಲ್ಲಿನ ಪ್ರಾಣಿಗಳು ಹತ್ತಿರವಿರುವ ನಗು ಜಲಾಶಯದ ನೀರಿಗಾಗಿ ಆ ತೊರೆದು ಬಂದು ಅಲ್ಲಿನ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಈ ಕಾಡಿನಲ್ಲಿ ಎಲ್ಲಾ ರೀತಿಯ ಪ್ರಾಣಿಗಳಿದ್ದು ಅತಿ ಹೆಚ್ಚು ಕಾಡಾನೆಗಳ ಸಮಸ್ಯೆಯನ್ನು ಈ ಗ್ರಾಮದ ನಿವಾಸಿಗಳು ಅನುಭವಿಸುತ್ತಿದ್ದಾರೆ.

ಗ್ರಾಮದಲ್ಲಿ ನಡೆಯುವ ಹಬ್ಬ ಮತ್ತು ಸಂಭ್ರಮಗಳು-

ಈ ಗ್ರಾಮದಲ್ಲಿ ಗ್ರಾಮ ದೇವತೆಯಾದ ಮಾರಮ್ಮ ತಾಯಿಯ ಹಬ್ಬವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ತುಂಬಾ ವಿಜೃಂಭಣೆಯಿಂದ ಮಾಡಲಾಗುತ್ತದೆ. ಈ ಹಬ್ಬದ  ಮೂರು ದಿನಗಳ ನಂತರ ಕಾಡಿನಲ್ಲಿರುವ ನೂರಾಳೇಶ್ವರ ಸ್ವಾಮಿಯ ಕೊಂಡೋತ್ಸವವನ್ನು ಸುತ್ತ ಮುತ್ತಲಿನ ಗ್ರಾಮಸ್ಥರಿಂದ ನೆರವೇರಿಸಲಾಗುತ್ತದೆ. ಹೀಗೆ ಇನ್ನೂ ಕೆಲ ಹಬ್ಬಗಳನ್ನು ಜಯಂತಿಗಳನ್ನು ಗ್ರಾಮದಲ್ಲಿ ಗ್ರಾಮಸ್ಥರ ಒಕ್ಕೂಟದಲ್ಲಿ ಸಡಗರದಿಂದ ನಡೆಸಲಾಗುತ್ತದೆ.

ಗ್ರಾಮದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು-

ಗ್ರಾಮದ ಸುತ್ತಲೂ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇದ್ದು ನುಗು ಜಲಾಶಯ ,ಕಪಿಲ ಜಲಾಶಯ, ಚಿಕ್ಕದೇವಮ್ಮನ ಬೆಟ್ಟ ,ಮತ್ತು ಭೀಮನ ಕೊಲ್ಲಿಯ ಮಹದೇಶ್ವರ ದೇವಾಲಯಗಳು ಪ್ರಮುಖವಾಗಿವೆ.

  1. ನನ್ನ ಸ್ವಂತಿಕೆ ಅನುಭವದಿಂದ ಉಲ್ಲೇಖವನ್ನು ಸೇರಿಸಿದ್ದೇನೆ.
"https://kn.wikipedia.org/w/index.php?title=ಸರಗೂರು&oldid=1259126" ಇಂದ ಪಡೆಯಲ್ಪಟ್ಟಿದೆ