ಹೆಗ್ಗಡದೇವನ ಕೋಟೆ ಇದು ಮೈಸೂರು ಜಿಲ್ಲೆಯ ತಾಲೂಕಾಗಿದ್ದು, ಅರಣ್ಯ ಸಂಪತ್ತನ್ನು ಹೊಂದಿರುವ ಕಾಡುಪ್ರಾಣಿಗಳಿಗೆ ಆವಾಸ ಸ್ಥಳವಾಗಿದೆ. ಇಲ್ಲಿ ನಾಲ್ಕು ನದಿಗಳು ಹರಿಯುತ್ತಿದ್ದು, ಅವುಗಳಲ್ಲಿ ಕಬಿನಿ ಪ್ರಮುಖವಾಗಿದೆ. ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ರಾಗಿ, ಹತ್ತಿ, ಜೋಳ, ಭತ್ತ ಮುಂತಾದ ವಾಣಿಜ್ಯ ಹಾಗೂ ಆಹಾರಬೆಳೆಗಳನ್ನು ಬೆಳೆಯಲಾಗುತ್ತದೆ.

ಹೆಗ್ಗಡದೇವನಕೋಟೆ
ಹೆಗ್ಗಡದೇವನಕೋಟೆ
town
Population
 (2001)
 • Total೧೨,೦೪೩

ಹೆಗ್ಗಡದೇವನ ಕೋಟೆ ತಾಲ್ಲೂಕಿನ ಇತಿಹಾಸ ಹಾಗೂ ಭೌಗೋಳಿಕ ಹಿನ್ನಲೆ

ಬದಲಾಯಿಸಿ

'ಹೆಗ್ಗಡದೇವನಕೋಟೆ ಕರ್ನಾಟಕ ರಾಜ್ಯದ ಕೇರಳ ಗಡಿ ಭಾಗದಲ್ಲಿರುವ ತಾಲ್ಲೂಕುಇದು ಸುಮಾರು ೧೬೨೨ ಚದರ ಕಿ ಮೀ ವಿಸ್ತೀರ್ಣ ಹೊಂದಿದ್ದು ಮೈಸೂರಿನ ನೈಋತ್ಯ ಭಾಗದಲ್ಲಿದೆ,ಇದರ ಪಶ್ಚಿಮ ಮತ್ತು ದಕ್ಚಿಣ ಭಾಗಗಳು ದಟ್ಟವಾದ ಅರಣ್ಯದಿಂದ ಆವೃತವಾಗಿದೆ. ಈ ತಾಲ್ಲೂಕಿನಲ್ಲಿ ಭೂಮಿಯು ಹೆಚ್ಚಾಗಿ ಕಪ್ಪು ಹಾಗೂ ಕೆಂಪು ಮಣ್ಣನ್ನು ಹೊಂದಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ ಇಲ್ಲಿ ಪ್ರಮುಖ ವಾಗಿ ನಾಲ್ಕುಜಲಾಶಯಗಳು ಹರಿಯುತ್ತಿದ್ದರು ಮಳೆಯಾಶ್ರಿತ ರೈತರು ಹಾಗೂ ಜಮೀನುಗಳೆ ಹೆಚ್ಚು ಈ ಕಾರಣದಿಂದಾಗಿ ಮಳೆಯನ್ನೇ ನಂಬಿಕೊಂಡು ವರ್ಷಕ್ಕೆ ಎರಡು ಬಾರಿ ಬೆಳೆ ತೆಗೆಯಲಾಗುತ್ತದೆ. ಇಲ್ಲಿ ಅಪಾರವಾಗಿ ಅರಣ್ಯ ಸಂಪತ್ತಿದ್ದು ಕಾಡುಕುರುಬ ಜೇನು ಕುರುಬ ಸೋಲಿಗ ಪಣಿಯ ಯರವ ಹಾಡಿಗಳಲ್ಲಿ ವಾಸಮಾಡುವುದರೊಂದಿಗೆ ಹುಲಿ ಜಿಂಕೆ ಕಾಡುನಾಯಿ ಕಾಡೆಮ್ಮೆ ಮುಂತಾದ ಪ್ರಮುಖ ಪ್ರಾಣಿಗಳ ವಾಸಸ್ತಾನ ವಾಗಿದೆ ಏಷ್ಯಾದಲ್ಲೇ ಹೆಚ್ಚಾಗಿ ಈ ಭಾಗದಲ್ಲಿ ಆನೆಗಳಿರುವುದನ್ನು ನಾವು ಕಾಣಬಹುದಾಗಿದೆ.

ಪೂರ್ವ ಇತಿಹಾಸ

ಬದಲಾಯಿಸಿ

ಮೈಸೂರು ಒಡೆಯರ ಸಾಮಂತನಾದ ಹೆಗ್ಗಡದೇವನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು ಈ ನಾಡಿಗೆ ಮೊದಲು ಪುನ್ನಾಟ ಎಂಬ ಹೆಸರಿತ್ತು ಈ ಪುನ್ನಾಟ ಪ್ರದೇಶವನ್ನು ಹೋಯ್ಸಳ ಹಾಗೂ ವಿಜಯನಗರದ ಅರಸರೂ ಕೂಡ ಆಳಿದ್ದಕ್ಕೆ ಇಂದಿಗೂ ಹಲವಾರು ಶಾಸನಗಳು ಇಲ್ಲಿ ಲಭ್ಯವಾಗಿವೆ. ಹೆಗ್ಗಡದೇವನು ಈ ನಾಡಿನಲ್ಲಿ ಮಣ್ಣಿನಿಂದ ಕೋಟೆಯನ್ನು ಕಟ್ಟಿದ್ದರಿಂದ ಇದಕ್ಕೆ ಅವನಹೆಸರಲ್ಲೇ ಹೆಗ್ಗಡದೇವನ ಕೋಟೆ ಎಂಬುದಾಗಿ ಕರೆಯಲಾಯಿತು.

ಉಲ್ಲೇಖಗಳು

ಬದಲಾಯಿಸಿ