ಬಾಗೇಪಲ್ಲಿ
ಬಾಗೇಪಲ್ಲಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ೧೦೦ಕಿ.ಮಿ ದೂರದಲ್ಲಿ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಿತವಾಗಿದೆ. ಈ ಊರಿನ ಹಳೆಯ ಹೆಸರು ಅ೦ದರೆ ಸುಮಾರು ೫ ರಿಂದ ೭ ಶತಮಾನಗಳ ಹಿ೦ದೆ ಬಾಗಿನ ಕೊಟ್ಟ ಹಳ್ಳಿ. ಹಿ೦ದಿನ ಪಾಳೇಗಾರರು ತಮ್ಮ ಮಗಳಿಗೆ ಬಾಗಿನವಾಗಿ ಕೊಟ್ಟಂತಾ ಹಳ್ಳಿ.. ಶತ ಶತಮಾನಗಳಿ೦ದ ಈ ಪ್ರದೇಶದಲ್ಲಿ ಕನ್ನಡ ಬಾಷೆ ಆಡು ಬಾಷೆಯಾಗಿತ್ತು, ಆದರೆ ಸುಮಾರು ೨ ಶತಮಾನಗಳಿ೦ದ ತೆಲುಗು ಭಾಷಿಕರ ಹೆಚ್ಚಿನ ವಲಸೆಯ ಕಾರಣ, ಹಾಗು ಆ೦ದ್ರಪ್ರದೇಶದ ಗಡಿಯ ಕಾರಣ, ತೆಲುಗು ಬಾಷಿಕರು ಹೆಚ್ಚು. ಈಗ ಇದು ತಾಲ್ಲುಕು ಕೇ೦ದ್ರವಾಗಿದ್ದು ಪ್ರಮುಖ ಊರುಗಳಾದ ಗೂಳೂರು, ಚೇಳೂರು, ಪಾತಪಾಳ್ಯ, ಮಿಟ್ಟೇಮರಿ, ಬಿಳ್ಳೂರು ಗಳನ್ನು ಹೊಂದಿದೆ. ಈ ಊರಿನ ವಿಶೇಷ ಶ್ರೀ ಗಡಿದ೦ ಲಕ್ಶ್ಮೀ ವೆ೦ಕಟರಮಣ ಸ್ವಾಮಿ ದೇವಾಲಯ, ಈ ದೇವಾಲಯವನ್ನು ಶ್ರೀ ಜನಮೇಜನ ರಾಯರು ನಿರ್ಮಿಸಿದರೆ೦ದು ಹೇಳುತ್ತಾರೆ. ಇದು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿದ್ದು, ಶ್ರೀ ಪ್ರಕಾಶ್ ರಾವ್ ರವರು ಪ್ರಧಾನ ಅರ್ಚಕರಾಗಿರುತ್ತರೆ. ಇಲ್ಲಿ, ಶ್ರೀ ಕೆ.ವಿ ಲಕ್ಷಮಯ್ಯ ರವರ ಅದ್ಯಕ್ಷತೆಯಲ್ಲಿ ನಿರ್ಮಿಸಲಾದ ಶ್ರೀ ಶಿರಡಿ ಸಾಯಿ ದೇವಾಲಯ ಮತ್ತೊ೦ದು ವಿಶೇಷ. ಈ ತಾಲ್ಲುಕಿನಲ್ಲಿ ಪ್ರಮುಖ ಪ್ರೇಕ್ಷಣೀಯ ಮತ್ತು ಪ್ರಾಚೀನ ಪ್ರದೇಶವೆ೦ದರೆ ಪಾಳ್ಯದ ಬೆಟ್ಟ
ಬಾಗೇಪಲ್ಲಿ
ಬಾಗೇಪಲ್ಲಿ | |
---|---|
ನಗರ | |
Population (೨೦೦೧) | |
• Total | ೨೦೧೨೦ |