ಹರಿಹರ (ಊರು)
ಹರಿಹರ ದಾವಣಗೆರೆ ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕ ರಾಜ್ಯದ ಮಧ್ಯದಲ್ಲಿದೆ. ಈ ಕಾರಣದಿಂದಾಗಿ ಇದನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡುವ ವಿಚಾರವಿತ್ತಂತೆ.ಇದು ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾಗಿದೆ. ತುಂಗಭದ್ರಾ ನದಿಯ ದಡದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಯಾಗಿ ಸುಮಾರು ೨೭೫ ಕಿ.ಮಿ.ದೂರದಲ್ಲಿದೆ.ಹುಬ್ಬಳ್ಳಿಯಿಂದ ಸರಿಯಾಗಿ ಸುಮಾರು ೧೩೦ ಕಿ.ಮಿ.ದೂರದಲ್ಲಿದೆ ಇದು ರಾಷ್ಟ್ರೀಯ ಹೆದ್ದಾರಿ ೪ (ಪೂನಾ-ಬೆಂಗಳೂರು ಮಾರ್ಗದಲ್ಲಿದೆ.)[೧]
ಹರಿಹರ | |
---|---|
ಪಟ್ಟಣ | |
Coordinates: 14°30′25″N 75°48′00″E / 14.507°N 75.8°E |
'ಹರಿಹರವನ್ನು ದೇವಸ್ಥಾನಗಳ ಊರೆಂದು ಕರೆಯಬಹುದು.ಇದನ್ನು ದಕ್ಷಿಣ ಕಾಶಿ ಎನ್ನುವರು. ಕೆಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಾಗಿ ಈ ಊರು ಸಾಕಷ್ಟು ಜನರಿಗೆ ಜೀವನಾಧಾರವಾಗಿದೆ. ಇಲ್ಲಿನ ಪ್ರಮುಖ ಕೈಗಾರಿಕಾ ಸಂಸ್ಥೆಗಳಲ್ಲಿ ಉಲ್ಲೇಖನೀಯವಾದವುಗಳೆಂದರೆ, 'ಮೈಸೂರ್ ಕಿರ್ಲೋಸ್ಕರ್ ಲಿಮಿಟೆಡ್ (ಮೆಷಿನ್ ಟೂಲ್) ಕಾರ್ಖಾನೆ,' (ಈಗ ಮುಚ್ಚಲಾಗಿದೆ) ಹಾಗು 'ಹರಿಹರ್ ಪಾಲಿಫೈಬರ್ಸ್ (ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್').
ಹರಿಹರೇಶ್ವರ ದೇವಾಲಯ
ಬದಲಾಯಿಸಿಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ, ಹೊಯ್ಸಳರ ಕಾಲದ ಹರಿಹರೇಶ್ವರ ದೇವಸ್ಥಾನ. ಹರಿಹರೇಶ್ವರ ಸ್ವಾಮಿಯು ಇರುವುದರಿಂದ ಊರಿಗೆ ಹರಿಹರ ಎಂದು ಹೆಸರು ಬಂದಿತು. ಇಸವಿ ೧೨೨೪ರಲ್ಲಿ ಹೊಯ್ಸಳ ದೊರೆ ೨ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಈ ದೇವಾಲಯವನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ. ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಇಲ್ಲಿ ಮುಖಮಂಟಪವೇ ಸುಖನಾಸಿ. ಮುಖಮಂಟಪದಲ್ಲಿ ೬೦ ಕಲಾತ್ಮಕ ಕಂಬಗಳ ರಚನೆಯಿದೆ. ಇವು ಹೊಯ್ಸಳ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣಿಸುವ ಕಂಬಗಳು. ದೇವಾಲಯದ ಮುಂದೆ ಎರಡೂ ಪಾರ್ಶ್ವಗಳಲ್ಲಿ ಅತ್ಯಾಕರ್ಷಕವಾದ ದೀಪಸ್ತಂಭಗಳಿವೆ. ಈ ಎರಡೂ ದೀಪಸ್ತಂಭಗಳ ಬುಡದಲ್ಲಿ ಸಣ್ಣ ನಂದಿ ಮೂರ್ತಿಯನ್ನು ಕೆತ್ತಲಾಗಿದೆ.[೨]
ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿದ್ದು, ಎರಡೂ ಸೇರಿ ಹರಿಹರೇಶ್ವರನಾಗಿದೆ. ಇದೇ ಕಾರಣದಿಂದ ದೇವಾಲಯದಲ್ಲೆಲ್ಲೂ ನಂದಿ ಕಾಣಸಿಗುವುದಿಲ್ಲ. ಆದರೆ ಹರಿಹರೇಶ್ವರ ದೇವಾಲಯದ ಬಲಕ್ಕೆ ಗರ್ಭಗುಡಿಗೆ ಸಮಾನಾಂತರವಾಗಿ ಸಣ್ಣದಾದ ಶಿವ ದೇವಾಲಯವೊಂದಿದೆ. ನಂದಿ ಈ ಸಣ್ಣ ದೇವಾಲಯದ ಹೊರಗಡೆ ಆಸೀನನಾಗಿದ್ದಾನೆ. ಅಲ್ಲೇ ಮುಂದೆ ರಾಮೇಶ್ವರನ ಗುಡಿಯೊಂದಿದೆ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು ೭ ಅಡಿಯಷ್ಟು ಎತ್ತರವಿದ್ದು ಆಕರ್ಷಕವಾಗಿದೆ.ಹರಿಹರ ತುಂಗಭದ್ರ ನದಿಯ ದಂಡೆಯಲ್ಲಿದ್ದು ಹರಿಹರ ಎರಡು ಹಿಂದೂ ದೇವತೆಗಳ ಸಂಯೋಜನೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹರಿ ಎಂದರೆ ವಿಷ್ಣು ಮತ್ತು ಹರ ಅಂದರೆ ಶಿವ. ಹೊಯ್ಸಳರ ಕಾಲದಲ್ಲಿ ಹರಿಹರೇಶ್ವರ ದೇವಸ್ಥಾನ 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಪ್ರಸಿದ್ಧ ದೇವಾಲಯವಾಗಿದೆ. ಹರಿಹರವನ್ನು"ದಕ್ಷಿಣ ಕಾಶಿ"ಎಂದೂ ಕರೆಯುವರು...
ಇಲ್ಲಿನ ಸ್ಥಳ ಪುರಾಣ ಒಂದರ ಪ್ರಕಾರ ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿ(ವಿಷ್ಣು) ಮತ್ತು ಹರ(ಶಿವ)ರು ಜೊತೆಗೂಡಿ ಹರಿಹರ ಸ್ವಾಮಿಯ ಅವತಾರ ತಳೆದರೆಂಬ ಪ್ರತೀತಿ ಇದೆ. ಹರಿಹರೇಶ್ವರ ದೇವಾಲಯದ ಬಲ ಭಾಗದಲ್ಲಿ 'ಓಂಕಾರ ಮಠ'ವಿದ್ದು 'ಸ್ವಾಮಿ ಶ್ರೀ ಶಿವಾನಂದ ತೀರ್ಥ' ರಿಂದ ಸ್ಥಾಪಿಸಲಾಗಿದೆ. ಹರಿಹರೇಶ್ವರ ದೇವಾಲಯದ ಪಕ್ಕದಲ್ಲಿ ಒಂದು ಉದ್ಭವ ಗಣಪತಿಯಿದೆ.ಇದು ದಿನೇ ದಿನೇ ಅದು ಬೆಳೆಯುತ್ತಿದೆ.
ಹತ್ತಿರದ ದೇವಾಲಯಗಳು :
- ಇಲ್ಲಿನ ತುಂಗಭದ್ರಾ ನದಿಯ ದಂಡೆಯಲ್ಲಿ "ಶ್ರೀ ರಾಘವೇಂದ್ರ ಸ್ವಾಮಿ" ಮಠವು ಇದೆ.
- ೧೦೮ ಲಿಂಗೇಶ್ವರ ಸ್ವಾಮಿ ದೇವಸ್ಥಾನ,
- ವಿಠ್ಠಲ ಮಂದಿರ,
- ಸಂತ ಮೇರಿಯಮ್ಮನ ಚರ್ಚ್
- ನಾರಾಯಣ ಆಶ್ರಮ,
- ಅಯ್ಯಪ್ಪಸ್ವಾಮಿ ದೇವಸ್ಥಾನ,
- ರಾಜನಹಳ್ಳಿಯವರು ನಿರ್ಮಿಸಿದ ಆಂಜನೇಯ ಸ್ವಾಮಿ ದೇವಸ್ಥಾನ (ಹರಿಹರದಿಂದ ೬ ಕಿ.ಮಿ. ದೂರದಲ್ಲಿದೆ),
- ಗ್ರಾಮದೇವತೆಯ ದೇವಸ್ಥಾನ,
- ಶ್ರೀ ಹೆಳವನಕಟ್ಟೆ ರಂಗನಾಥ ಸ್ವಾಮಿ ದೇವಾಲಯ (25 ಕಿ.ಮಿ. ದೂರದಲ್ಲಿರುವ ಕೋಮಾರಹಳ್ಳಿಯಲ್ಲಿದೆ) ಇವೆ.
ಹರಿಹರದಲ್ಲಿನ ವಿದ್ಯಾಕೇಂದ್ರಗಳು
ಬದಲಾಯಿಸಿ- ಕಿಯಮ್ಸ್ (ಕೆ.ಐ.ಎ.ಎಮ್.ಎಸ್) - [ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ ಮ್ಯಾನೇಜಮೆಂಟ್ ಸ್ಟಡೀಸ್ ]
- ಎಮ್.ಕೆ.ಇ.ಟಿ.ಎಲ್.ಕೆ [ಮೈಸೂರು ಕಿರ್ಲೋಸ್ಕರ್ ಎಜುಕೇಷನ್ ಟ್ರಸ್ಟ್ - ಲಕ್ಷ್ಮಣ್ ರಾವ್ ಕಿರ್ಲೋಸ್ಕರ್ ] ಮಾಧ್ಯಮಿಕ ಶಾಲೆ
- ಎಮ್.ಕೆ.ಇ.ಟಿ. - ಸೀ.ಬೀ.ಎಸ್.ಸಿ ಶಾಲೆ
- ಸೈಂಟ್ ಮೇರಿಸ್ ಕಾನ್ವೆಂಟ್ ಶಾಲೆ
- ಮರಿಯಾ ನಿವಾಸ್ ಶಾಲೆ
- ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆ
- ಬಾಪೂಜಿ ಶಾಲೆ (ತುಂಗಭದ್ರಾ ನದಿಯ ತೀರದಲ್ಲಿ )
- ಎಸ್.ಜೆ.ವಿ.ಪಿ ಸ್ವಾಯತ್ತ ಕಾಲೇಜು,
- ಎಸ್.ಜೆ.ಯು.ಪಿ. ಬಿ.ಎಡ್.ಕಾಲೇಜು,
- ಗಿರಿಯಮ್ಮಾ ಶಾಲೆ ಹಾಗೂ ಮಹಿಳಾ ಕಾಲೇಜು
- ವಿದ್ಯಾದಾಯಿನಿ- ಸಿ.ಬಿ.ಎಸ್.ಸಿ ಶಾಲೆ
- ಹರಿಹರ ಪಾಲಿಫೈಬರ್ಸ್ - ಸೀ.ಬೀ.ಎಸ್.ಸಿ ಶಾಲೆ ತುಂಗಭದ್ರಾ ನದಿಯ ತೀರದಲ್ಲಿ - ಕುಮಾರಪಟ್ಟಣಂ - ಹರಿಹರದಿಂದ ೩ ಕಿ.ಮಿ.ದೂರದಲ್ಲಿದೆ ]
ಹರಿಹರದ ಸಾಹಿತಿಗಳು
ಬದಲಾಯಿಸಿ- ಎಚ್.ಎ. ಭಿಕ್ಷಾವರ್ತಿಮಠ
- ಸಿ.ವಿ. ಪಾಟೀಲ್
- ಪ್ರೊ. ಎ ಬಿ ರಾಮಚಂದ್ರಪ್ಪ
- ಬ್ರಹ್ಮದೇವ ಹದಳಗಿ
- ಕೊಟ್ರೇಶ ಉತ್ತಂಗಿ
- ಎಸ್.ಎಚ್. ಹೂಗಾರ್
- ಲಲಿತಮ್ಮ ಡಾ.ಚಂದ್ರಶೇಖರ್
- ಹಿ.ಗೊ. ದುಂಡ್ಯ್ರಪ್ಪ
- ವಿರುಪಾಕ್ಷ ಕುಲಕರ್ಣಿ
- ಡಿ. ಪ್ರಾನ್ಸಿಸ್ ಕ್ಸೇವಿಯರ್,
ಖ್ಯಾತ ನಾಮರುಗಳು
ಬದಲಾಯಿಸಿ- ಪತ್ರಿಕಾ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ, ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸಿದ ವ್ಯಕ್ತಿಗಳಲ್ಲಿ ಶ್ರೀ ಬಿ ರಾಜಶೇಖರ ಪ್ರಥಮ
- ಇನಾಯತ್ ವುಲ್ಲಾ, ಶೇಖರ್ ಗೌಡರು, ಕೆ. ಜೈಮುನಿ, ಕೀರ್ತಿ ಕುಮಾರ್, ಸುಬ್ರಮಣ್ಯ ನಾಡಿಗೇರ್, ಶಾಂಭವಿ, ಸಂತೋಷ್ ಎಂ ನೋಟದವರ್, ಡಿ. ಪ್ರಾನ್ಸಿಸ್ ಕ್ಸೇವಿಯರ್, ಸುರೇಶ್ ಕುಣೆಬೆಳಕೆರೆ, ವಿಶ್ವನಾಥ್ ಮೈಲಾಳ್ ಹೊಳೆಸಿರಿಗೆರೆ, ಮಂಜನಾಯ್ಕ ಹೆಚ್ ಪ್ರಥಮಹೆಜ್ಜೆ, ಪತ್ರಿಕಾರಂಗದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಕ್ಕಳ ಸಾಹಿತ್ಯ ಮತ್ತು ಸಾಂಸ್ಖ್ರುತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಠೆ " ಮಕ್ಕಳ ಲೋಕ"
ಅಂತರಾಷ್ಟ್ರೀಯ ಯೋಗ ಪಟು ಕೆ. ಜೈಮುನಿ ಇವರು ತಮ್ಮ ಯೋಗ ಸಾಧನೆಯನ್ನು ಮಾಡುತ್ತಿದ್ದಾರೆ