ಕೋಲಾರ ಜಿಲ್ಲೆ
'''ಕೋಲಾರ''' ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ.
ಕೋಲಾರ | |
ಶ್ರೀ ಕೋಲಾರಮ್ಮ ದೇವಾಲಯ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಕೋಲಾರ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.
ಕರ್ನಾಟಕದ ಮೊದಲ ಮುಖ್ಯಮಂತ್ರಿಗಳಾದ ದಿವ೦ಗತ ಕೆ.ಸಿ.ರೆಡ್ಡಿ,ಚೆಂಗಲರಾಯ ರೆಡ್ಡಿ ಕೋಲಾರ ಜಿಲ್ಲೆಯವರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಹಾಗೂ ಕರ್ನಾಟಕದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾದ ಸರ್. ಎಂ. ವಿಶ್ವೇಶ್ವರಯ್ಯ ನವರು ಸಹ ಕೋಲಾರ ಜಿಲ್ಲೆಯವರು.
ಜಿಲ್ಲೆಯ ಪ್ರಮುಖರು
ಬದಲಾಯಿಸಿ- "ಮಂಕು ತಿಮ್ಮನ ಕಗ್ಗ " ದ ಕರ್ತೃ ಶ್ರೀಯುತ ಡಿ. ವಿ. ಗುಂಡಪ್ಪ ನವರು ಮತ್ತು ಚಿತ್ರ ನಟಿ ದಿ: ಸೌಂದರ್ಯ ಮುಳಬಾಗಿಲಿನವರು
- ಮಾಜಿ ಸಚಿವ ಶ್ರೀ ರಮೇಶ್ ಕುಮಾರ್ ಶ್ರೀನಿವಾಸಪುರದವರು
- ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ " ಮಾಸ್ತಿ ಕನ್ನಡದ ಆಸ್ತಿ " ವೆಂಕಟೇಶ ಅಯ್ಯಂಗಾರ್ ಮಾಲೂರು ತಾಲ್ಲೂಕಿನ ಮಾಸ್ತಿಯವರು
- ಕರ್ನಾಟಕ ಮೊತ್ತ ಮೊದಲ ಸಮುದಾಯ ರೇಡಿಯೋ ಕೇಂದ್ರ ಪ್ರಾಂರಂಭವಾದದ್ದು ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ ಇದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದು ಕೆಲವೇ ದಿನದಲ್ಲಿ ತರಂಗಾಂತರದಲ್ಲಿ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.voices4all.org ನ್ನು ನೋಡಿ. ಜೊತೆಗೆ ಕೋಲಾರ ಜಿಲ್ಲೆಯ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿಯಾದ ಮಾರ್ಕಂಡೇಯ ಕೆರೆ ಸಹ ಇದೆ.
- ಮೈಸೂರು ಹುಲಿ ಎಂದು ಪ್ರಸಿದ್ದಿಯಾದ ಟಿಪ್ಪುವಿನ ತಂದೆ ಹೈದರ್ ಆಲಿ ಜನಿಸಿದ್ದು ಸಹ ಇಲ್ಲಿಯೇ.
- ರಾಷ್ಡ್ರೀಯ ದಾಲೆಯ ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ . ಇವರು ಕೋಲಾರ ತಾಲ್ಲುಕಿನ ಅಬ್ಬಣಿ ಗ್ರಾಮದವರು. ಪದಬಂಧಕಾರರಾಗಿ, ಲೇಖಕರಾಗಿ ಹೆಸರು ಮಾಟಿದ್ದಾರೆ
- ಕೋಲಾರದ ಅಂತರಗಂಗೆ ಬೆಟ್ಫದ ಶಿವಗಂಗೆಯಲ್ಲಿ ನೆಲ ಸಂಸ್ಕೃತಿಗಳ ರಂಗ ಚಟುವಟಿಕೆಗಳ ಕುಟೀರ ಅದಿಮ ಸಂಸ್ಥಾಪಕ ಕೋಟಿಗಾನಹಳ್ಳಿ ರಾಮಯ್ಯ
- ಕೋಲಾರ ಜಿಲ್ಲೆಯ ಖ್ಯಾತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಪ್ರಸ್ತುತ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರುb
ಎಂ.ಆರ್.ಮುರಳಿ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗ ಅದ್ಯಕ್ಷರು ಖ್ಯಾತ ಉದ್ಯಮಿಗಳು ಹಾಗೂ ನುರಿತ ರಾಜಕೀಯ ತಜ್ಞರು ಸಮಾಜ ಸೇವಕರು
ಆಕರ್ಷಣೆಗಳು
ಬದಲಾಯಿಸಿಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆ
- ಚಿನ್ನದ ಗಣಿ (ಕೆ.ಜಿ.ಎಫ್),
- ಮುಳಬಾಗಿಲು,
- ಬ೦ಗಾರು ತಿರುಪತಿ,
- ಕೋಟಿಲಿ೦ಗೇಶ್ವರ,
- ಅ೦ತರಗ೦ಗೆ,
- ಮಾರ್ಕ೦ಡೇಯ ಪರ್ವತ,
- ಸೋಮೇಶ್ವರ ದೇವಸ್ಥಾನ,
- ಕೋಲಾರಮ್ಮ ದೇವಸ್ಥಾನ,
- ಕುರುಡುಮಲೆ,
- ಆವಣಿ,
- ಚಿಕ್ಕ ತಿರುಪತಿ
- ಮುರುಗಮಲ್ಲ ದರ್ಗ(ಚಿಂತಾಮಣಿ), ಮರುಗಮಲ್ಲ ಗ್ರಾಮ ಮುಸ್ಲಿಂರ ಪವಿತ್ರ ಕ್ಷೇತ್ರವಾಗಿದೆ. ಪ್ರತಿವರ್ಷ ಇಲ್ಲಿ ಉರುಸ್ ನಡೆಯುತ್ತದೆ. ಉರುಸ್ನಲ್ಲಿ ಅಪಾರ ಜನತೆ ಭಾಗಿಯಾಗುತ್ತಾರೆ. ಮಾಲೂರೂ ಒಂದು ಸಣ್ಣ ಗ್ರಾಮ.
- ನಂದಿ ಬೆಟ್ಟ (ಈಗ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದೆ),
- ವಿಧುರಾಶ್ವತ್ಥ (ಗೌರಿಬಿದನೂರು)
- ವೀರಕಪುತ್ರ, ಮಾಲೂರು ತಾ.
ಕೋಲಾರ ಜಿಲ್ಲೆಯಲ್ಲಿ ಕೋಲಾರ- ಮುಳಬಾಗಿಲು ರಸ್ತೆಯಲ್ಲಿ ಶ್ರೀ ಮಧ್ವಾಚಾರ್ಯರ ಪರಮಾಪ್ತ ಶಿಷ್ಯಾರಾದ ಶ್ರೀ ಮನ್ಮಾಧವ ತೀಥ೯ರ ಮೂಲ ಮಹಾ ಸಂಸ್ಠಾನ ಮಠ ಇದೆ.
ಕೋಲಾರದಲ್ಲಿ ಆರಂಭವಾದ ಕೋಲಾರ ಧ್ವನಿ ಕನ್ನಡ ದಿನ ಪತ್ರಿಕೆ ಇಂದು ಕೋಲಾರ-ತುಮಕೂರು- ಚಿಕ್ಕಬಳ್ಳಾಪುರ- ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಏಕೈಕ ಪ್ರಾದೇಶಿಕ ದಿನ ಪತ್ರಿಕೆಯಾಗಿದೆ ಪ್ರಕಟಗೊಳ್ಳುತ್ತಿದೆ.
ಕೋಲಾರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇಲ್ಲಿ ಚಾಲ್ತಿಯಲ್ಲಿರುವ ಇತರ ಭಾಷೆಗಳೆ೦ದರೆ ತೆಲುಗು, ತಮಿಳು ಮತ್ತು ಉರ್ದು.
ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆ೦ದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.