ಗುಡಿಬಂಡೆ

ದೇವಾಲಯದ ಕಲ್ಲು

ಗುಡಿಬಂಡೆ, ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲ್ಲೂಕು, . ಹಾವಳಿ ಬೈರೆ ಗೌಡರ ಕಾಲದಲ್ಲಿ ರೂಪುಗೊಂಡು, ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು. ಇವನೊಬ್ಬ ಸ್ಥಳೀಯ ಮುಖಂಡ. ಇವನು ಆಗಿನ ಕಾಲದಲ್ಲಿ ರಾಬಿನ್ ಹುಡ್ ತರಹ ಶ್ರೀಮಂತರನ್ನು ದೋಚಿ ಬಡವರಿಗೆ ಹಂಚುತ್ತಿದ್ದನಂತೆ. ಹಾಗಾಗಿ ಅತ್ಯಂತ ಜನಪ್ರಿಯನಾಗಿದ್ದ ಇವನು ಔರಂಗಜೇಬನ ಮಗನಾದ ಮೊಹಮ್ಮದ್ ಅಜಮ್ ಶಾನನ್ನೂ ಎದುರಿಸಿ ಗೆರಿಲ್ಲಾ ಯುದ್ಧದಿಂದ ಅವನನ್ನು ಓಡಿಸಿದ ಖ್ಯಾತಿ ಇವನಿಗಿದೆ. ಭೈರೇಗೌಡನ ಹೆಚ್ಚುತ್ತಿದ್ದ ಪ್ರಸಿದ್ಧಿಯನ್ನು ಸಹಿಸದೆ ಇವನಿಂದ ಲೂಟಿಗೊಳಗಾಗುತ್ತಿದ್ದ ಶ್ರೀಮಂತರ ಒಳಸಂಚಿಗೆ ಕೊನೆಗೂ ಇವನು ಬಲಿಯಾದ. ಆ ನಂತರ ಇವನ ವಂಶಜರು ಬೆಂಗಳೂರಿನ ಬನ್ನೇರುಘಟ್ಟದ ಗೊಟ್ಟಿಗೆರೆಗೆ ಸ್ಥಳಾಂತರ ಹೊಂದಿದರು. ಇವನು ವಿಜಯನಗರದರಸರ ತುಳುವ ವಂಶಕ್ಕೆ ಸೇರಿದವನೆಂದು ಹೇಳಲಾಗುತ್ತಿದ್ದು ಈ ಕೋಟೆಯನ್ನು ೧೭ನೇ ಶತಮಾನದಲ್ಲಿ ಕಟ್ಟಿಸಿದ. ಇದು ಮಧುಗಿರಿ ಕೋಟೆಯ ಚಿಕ್ಕ ಪ್ರತಿರೂಪದಂತಿದೆ. ಏಳು ಹಂತದ ಕೋಟೆ ಇದಾಗಿದ್ದು ಶತೃಗಳ ಆಕ್ರಮಣ ಎದುರಾದಾಗ ತಪ್ಪಿಸಿಕೊಳ್ಳಲು ಅಲ್ಲಲ್ಲಿ ಕಳ್ಳ ದಾರಿಗಳಿವೆ. ಕೋಟೆಯ ತುತ್ತ ತುದಿಯಲ್ಲಿ ಶ್ರೀರಾಮೇಶ್ವರ ದೇವಸ್ಥಾನವಿದೆ. ಕೋಟೆಯ ಮೇಲಿಂದ ನೋಡಿದರೆ ಅಮಾನಿ ಕೆರೆಯ ಸುಂದರ ನೋಟ ನೋಡಲು ಸಿಗುತ್ತದೆ. ಕೋಟೆಯಲ್ಲಿ ಸುಮಾರು ೧೯ ಚಿಕ್ಕ-ಪುಟ್ಟ 'ದೊಣೆ'ಗಳಿವೆ. ಇದರಿಂದ ಗುಡ್ಡದ ಮೇಲೆ ಬಿದ್ದ ಮಳೆ ನೀರು ಇವುಗಳಲ್ಲಿ ಸಂಗ್ರಹವಾಗಿ ಕೋಟೆ ಜನಕ್ಕೆ ಉಪಯೋಗವಾಗಲೆಂಬ ದೂರಾಲೋಚನೆ ಸ್ಪಷ್ಟವಾಗುತ್ತದೆ. ಇದು ಇಂದಿನ ಮಳೆನೀರು ಕೊಯ್ಲಿಗೆ ಆಗಿನ ಕಾಲದ ಉತ್ತರದಂತಿದೆ. ಇವುಗಳಲ್ಲಿ ಸುಮಾರು ೩ ಲಕ್ಷ ಲೀಟರ್ ನೀರು ಸಂಗ್ರಹಿಸಬಹುದೆಂದು ಅಂದಾಜಿಸಲಾಗಿದೆ. ಅವರು ಕಟ್ಟಿಸಿದ ಸುಂದರ ಕೋಟೆಗಳನ್ನು ಇಂದಿಗೂ ಕಾಣಬಹುದು. ಈ ಊರಿನ ಬೃಹದಾಕಾರದ ಬಂಡೆಯೊಂದರ ಮೇಲೆ ಗುಡಿಯಿರುವುದರಿಂದ ಇದಕ್ಕೆ ಗುಡಿಬಂಡೆ ಎಂದು ಹೆಸರು ಬಂದಿದೆ.

ಗುಡಿಬಂಡೆ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಬಳ್ಳಾಪುರ
Elevation
೮೨೬ m (೨,೭೧೦ ft)
Population
 (2001)
 • Total೮,೭೯೪
Languages
 • Officialಕನ್ನಡ
ಸಮಯ ವಲಯUTC+5:30 (IST)

ಗುಡಿಬಂಡೆ ತಾಲ್ಲೂಕಿನ ೨ ಕಸಬಾಗಳಿವೆ.

ಹೋಬಳಿಗಳು ೧೦೨ ಗ್ರಾಮಗಳು ಈ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತವೆ. ನೀರಾವರಿ ವ್ಯವಸ್ಥೆಯಿಂದಾಗಿ ಅರೆ ಭೂಮಿ ಕೃಷಿಗೆ ಲಭ್ಯವಿದೆ. ಭತ್ತ, ಕಡಲೆಕಾಯಿ, ರಾಗಿ, ಜೋಳ, ತರಕಾರಿ ಇಲ್ಲಿಯ ಪ್ರಮುಖ ಬೆಳೆಗಳು. ಪಟ್ಟಣಕ್ಕೆ ಬರುವ ಮೊದಲು, ಪಾಳೆಗಾರ ಕಾಲದಲ್ಲಿ ನಿರ್ಮಿಸಲಾದ ಬೃಹದ್ ಅಮಾನಿ ಬೈರಸಾಗರದ ಕೆರೆ ಏರಿ, ಏರಿ ಬರಬೇಕು. ಇದು ಜಿಲ್ಲೆಯ ಅತಿ ದೊಡ್ಡಕೆರೆ.

ಕನ್ನಡ ಕವಿಗಳು-ಗುಡಿಬಂಡೆ ಪೂರ್ಣಿಮ, ಎ,ಕೇಶವಯ್ಯ.

ಗುಡಿಬಂಡೆಗೆ ಸೇರಿದ ಗ್ರಾಮಗಳುಸಂಪಾದಿಸಿ

ಗುಡಿಬಂಡೆ ತಾಲ್ಲೂಕಿನಲ್ಲಿ ೮೫ ನಿವಾಸಿತ ಮತ್ತು ೨೦ ಅನಿವಾಸಿತರೂ ಸೇರಿದಂತೆ ಒಟ್ಟು ೨೩೯ ಗ್ರಾಮಗಳಿವೆ. ಗ್ರಾಮಾಂತರ ಪ್ರದೆಶದಲ್ಲಿ ೪೩,೦೨೧ ಮತ್ತು ನಗರ ಪ್ರದೇಶದಲ್ಲಿ ೮,೮೦೭ ಮಂದಿ ಸೇರಿದಂತೆ ೫೧,೮೨೮ ಮಂದಿ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ವಿಸ್ತೀರ್ಣ ೨೨೫.೪೩ ಚ. ಕಿ. ಮೀ. ಊರಿನ ದಕ್ಷಿಣ ಉತ್ತರಕ್ಕೆ ಸುಂದರವಾದ ಐತಿಹಾಸಿಕ ಮಹತ್ವದ ಬೆಟ್ಟ ಸುರಸದ್ಮಗಿರಿ. ಬೃಹದಾಕಾರದ ೭ ಸುತ್ತಿನ ಕೋಟೆಯನ್ನು ನಿರ್ಮಿಸಲಾಗಿದೆ. ಇದು ಶ್ರೀರಾಮನಿಂದ ಪ್ರತಿಷ್ಠಾಪಿಸಲಾಗಿದೆಯೆಂದು ಹೇಳುವ ಶ್ರೀ ರಾಮೇಶ್ವರ ದೇವಾಲಯ ವಿದೆ. ಇಲ್ಲಿ ನೀರನ್ನು ಸಂಗ್ರಹಮಾಡಲು ೧೯ ಕೊಳಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಕೋಟೆ-ಕೊತ್ತಲಗಳ ಜೊತೆಗೆ,ಸಿಪಾಯಿಗಳ ವಾಸದ ತಾಣಗಳು, ಶ್ರೀರಾಮ ದೋಣಿ, ಸೀತಾದೋಣಿ, ಲಕ್ಷ್ಮಣ ದೋಣಿ, ಉಪದೋಣಿ, ಆಂಜನೇಯನ ದೋಣಿ, ಉಪದೋಣಿ, ಸಿಹಿನೀರಿನ ದೋಣಿ, ಉಪ್ಪಿನ ದೋಣಿಗಳಿವೆ. ಬೆಟ್ಟ ಹತ್ತಲು ಸುಲಭ. ರಾಮದೋಣಿಯ ನೀರು ಪವಿತ್ರ ತೀರ್ಥ. ಇಲ್ಲಿ ಸ್ನಾನಮಾಡಿದರೆ ಯಾವುದೇ ರೋಗರುಜಿನಗಳಿಲ್ಲ. ನಿವಾರಣೆ ಯಾಗುತ್ತದೆಂಬ ನಂಬಿಕೆಯಿದೆ. ಆಷಾಢಮಾಸದಲ್ಲಿ ವಿಶೇಷವಾಗಿ ಕುಂಬಾಭಿಷೇಕ ನಡೆಯುತ್ತದೆ.

ದೇವಾಲಯಗಳುಸಂಪಾದಿಸಿ


ತಾಲ್ಲೂಕಿನ ಎಲ್ಲೋಡು ಗ್ರಾಮ ಕೂರ್ಮಗಿರಿ ಪುಣ್ಯ ಕ್ಷೇತ್ರ. ಪ್ರಮುಖ ಯಾತ್ರಾಸ್ಥಳ. ಬೆಟ್ಟದಮೇಲೆ ದೇವಸ್ಥಾನಲ್ಲಿ ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿಯ ಉದ್ಭವ ಮೂರ್ತಿಯಿದೆ. ಭಕ್ತರು ಎಲ್ಲಾ ಕಡೆಗಳಿಂದ ಬಂದು ಸೇವೆಯನ್ನು ಮಾಡಿಸುತ್ತಾರೆ. ಕೆರೆ ತುಂಬಿದಾಗ ಕೆಂಪುನೀರು ಎಲ್ಲೆಡೆ ಏರಿಯಮೇಲೆ ’ವಡ್ಡಮ್ಮನ ಗುಡಿ’ ಯಿದೆ. ಪಂಚಮಹಾ ವೈಶಿಷಿಠ್ಯಗಳಲ್ಲೊಂದಾದ, ಪಂಚಲಿಂಗಗಳಲ್ಲಿ ’ಸೋಮೇಶ್ವರ ಸ್ವಾಮಿ ಗುಡಿ,’ , ’ಗಂಗಾಧರೇಶ್ವರ ಸ್ವಾಮಿಯ ದೇವಾಲಯ,’ ಗಳಿವೆ. ಬೆಟ್ಟದಮೇಲೆ, ರಾಮೇಶ್ವರವಿದೆ. ಊರಿನಲ್ಲಿ ’ಚಂದ್ರಮೌಳೇಶ್ವರ ದೇವಾಲಯ’, ವಿದೆ. ಗ್ರಾಮದೇವತೆ, ಬಸದಿಗಳು ಮತ್ತಿತರ ಆಕರ್ಷಣೆಯ ತಾಣಗಳು. ಗುಡಿಬಂಡೆಯ ಸ್ಥಳೀಯ ಪುರಾಣವನ್ನು ನಾವು ಅಲ್ಲಿ ಪ್ರದರ್ಶನಕ್ಕಿಟ್ಟಿರುವ ತಾಳೆಗರಿಗಳಲ್ಲಿ ಕಾಣಬಹುದು.

ದೇವಾಲಯಗಳ ಸಮೂಹಸಂಪಾದಿಸಿ

ಸೋಮೇನಹಳ್ಳಿಯಲ್ಲಿ ಪುರಾತನ ಲಕ್ಷ್ಮೀ ವೆಂಕಟೇಶದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಪ್ರಸನ್ನಾಂಜನೇಯ, ಪ್ರಮುಖ ಆಕರ್ಶಣೆಗಳು. ಗಡಿಭಾಗದಲ್ಲಿ ವೀರಾಪುರ ಗ್ರಾಮದ ಪಕ್ಷಿಧಾಮ ಹೆಸರುವಾಸಿ. ತಾಲ್ಲುಕು ಕೇಂದ್ರದಿಂದ ೧೫ ಕಿ. ಮೀ ದೂರದಲ್ಲಿದೆ. ನೈಜೀರಿಯ, ಆಷ್ಟ್ರಿಯ, ಮುಂತಾದ ರಾಷ್ಟ್ರಗಳ ಪಕ್ಷಿಗಳು ಸಂತಾನೋತ್ಪತ್ತಿಗೆ, ವಲಸೆಬರುತ್ತವೆ. ಸುತ್ತಮುತ್ತಲ ಅರಣ್ಯಗಳಲ್ಲಿ ಜಿಂಕೆ, ನವಿಲು, ಮುಂತಾದ ಕಾಡು-ಮೃಗಗಳಿವೆ.ಅಪ್ಪಿರೆಡ್ಡಿಹಳ್ಳಿಯಲ್ಲಿ ಇರುವ ಪುರಾತನ ಶ್ರೀಆಂಜನೇಯಸ್ವಾಮಿ ದೇವಾಲಯ.

ಸಂಪರ್ಕಸಂಪಾದಿಸಿ

ಜಿಲ್ಲಾ ಕೇಂದ್ರದಿಂದ ೩೫ ಕಿ. ಮೀ ದೂರದಲ್ಲಿದ್ದು ಬೆಂಗಳೂರಿಗೆ ೯೦ ಕಿ. ಮೀ ದೂರದಲ್ಲಿದೆ. ಚಿಕ್ಕಬಳ್ಳಾಪುರದಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಬಾಗೇಪಲ್ಲಿ, ಪೆರೇಸಂದ್ರ ಗ್ರಾಮ [ಹೆದ್ದಾರಿ ೭ ರಲ್ಲಿ] ಎಡಕ್ಕೆ ತಿರುಗಿದರೆ, ೧೪ ಕಿ. ಮೀ ಅಂತರದಲ್ಲಿ ಇದೆ. ಸರ್ಕಾರಿ, ಹಾಗೂ ಖಾಸಗೀ ಬಸ್ ಗಳು, ದಿನವಿಡೀ ಸಿಗುತ್ತವೆ.

ಗ್ರಾಮಗಳುಸಂಪಾದಿಸಿ

 1. ಅಪ್ಪಿರೆಡ್ಡಿಹಳ್ಳಿ
 2. ತೀಲಕುಂಟಹಳ್ಳಿ
 3. ಕೊಂಡವಾಬನಹಳ್ಳಿ
 4. ಚಿಕ್ಕಕುರಬರಹಳ್ಳಿ
 5. ದೂಮುಕುಂಟಹಳ್ಳಿ
 6. ನಲ್ಲೋಜನಹಳ್ಳಿ(ಬೆ)
 7. ಪಾವಜೇನಹಳ್ಳಿ
 8. ಬಂದಾಳಹಳ್ಳಿ
 9. ಬೀಚಗಾನಹಳ್ಳಿ
 10. ರಾಮಗಾನಹಳ್ಳಿ
 11. ಸಿಂಗನ್ನದಿನ್ನೆ
 12. ಸದಾಶಿವನಹಳ್ಳಿ
 13. ಹಂಪಸಂದ್ರ
 14. ಆದಿನಾರಾಯಣಹಳ್ಳಿ
 15. ಓಬನ್ನಗಾರಿಹಳ್ಳಿ
 16. ಬೆಣ್ಣೆಪರ್ತಿ
 17. ಮರವೇನಹಳ್ಳಿ
 18. ಸಂಜೀವರಾಯನಹಳ್ಳಿ
 19. ಕಂಬಾಲಹಳ್ಳಿ
 20. ತಿರುಮಣಿ
 21. ದೊಡ್ಡಕುರುಬರಹಳ್ಳಿ
 22. ಭೋಗೇನಹಳ್ಳಿ
 23. ಮಿಂಚನಹಳ್ಳಿ (ಮ)
 24. ಮ್ಯಾಕಲಮದ್ದಯ್ಯಗಾರಿಹಳ್ಳಿ
 25. ವರ್ಲಕೊಂಡ

ಶಿಕ್ಷಣ ಸಂಸ್ಥೆಗಳುಸಂಪಾದಿಸಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಡಿಬಂಡೆ.ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು ಗುಡಿಬಂಡೆ.