ಬೆಳೆ
ಬೆಳೆ (ಫಸಲು, ಪಯಿರು) ಎಂದರೆ ಲಾಭ ಅಥವಾ ಜೀವನಾಧಾರಕ್ಕಾಗಿ ವ್ಯಾಪಕವಾಗಿ ಬೆಳೆಸಿ ಕಟಾವು ಮಾಡಬಲ್ಲ ಸಸ್ಯ ಅಥವಾ ಪ್ರಾಣಿ ಉತ್ಪನ್ನ. ಬೆಳೆ ಪದವು ಕೊಯ್ಲು ಮಾಡಲಾದ ಭಾಗಗಳನ್ನು ಅಥವಾ ಹೆಚ್ಚು ಸಂಸ್ಕರಿಸಿದ ಸ್ಥಿತಿಯಲ್ಲಿನ ಕಟಾವನ್ನು ಸೂಚಿಸಬಹುದು. ಬಹುತೇಕ ಬೆಳೆಗಳನ್ನು ಕೃಷಿ ಅಥವಾ ಜಲಚರ ಸಾಕಣೆಯಲ್ಲಿ ಬೆಳೆಸಲಾಗುತ್ತದೆ. ಕಣ್ಣಿಗೆ ಕಾಣುವ ಶಿಲೀಂಧ್ರ (ಉದಾ. ಅಣಬೆಗಳು), ಅಥವಾ ಆಲ್ಗೆಯನ್ನು ಒಳಗೊಳ್ಳುವಂತೆ ಬೆಳೆ ಪದವನ್ನು ಸಾಮಾನ್ಯವಾಗಿ ವಿಸ್ತರಿಸಲಾಗುತ್ತದೆ.
ಬಹುತೇಕ ಬೆಳೆಗಳನ್ನು ಮಾನವರಿಗಾಗಿ ಆಹಾರವಾಗಿ ಅಥವಾ ಜಾನುವಾರುಗಳಿಗಾಗಿ ಮೇವಾಗಿ ಕಟಾವು ಮಾಡಲಾಗುತ್ತದೆ. ಕೆಲವು ಬೆಳೆಗಳನ್ನು (ಸಾಂದ್ರ ಸಂಗ್ರಹಣೆ ಸೇರಿದಂತೆ, ಉದಾ. ಜಿನ್ಸೆಂಗ್) ಕಾಡಿನಿಂದ ಸಂಗ್ರಹಿಸಲಾಗುತ್ತದೆ.
ಪ್ರಮುಖ ಆಹಾರೇತರ ಬೆಳೆಗಳಲ್ಲಿ ತೋಟಗಾರಿಕೆ, ಹೂಕೃಷಿ ಮತ್ತು ಕೈಗಾರಿಕಾ ಬೆಳೆಗಳು ಸೇರಿವೆ. ತೋಟಗಾರಿಕಾ ಬೆಳೆಗಳಲ್ಲಿ ಇತರ ಬೆಳೆಗಳಿಗಾಗಿ ಬಳಸಲಾದ ಸಸ್ಯಗಳು (ಉದಾ. ಹಣ್ಣಿನ ಮರಗಳು) ಸೇರಿವೆ. ಹೂಕೃಷಿ ಬೆಳೆಗಳಲ್ಲಿ ಮನೆಸಸ್ಯಗಳು, ಹೂ ಉದ್ಯಾನ ಮತ್ತು ಮಡಿಕೆ ಸಸ್ಯಗಳು, ಕತ್ತರಿಸಿ ಬೆಳೆಸಿದ ಹಸಿರು ಸಸ್ಯಗಳು, ಮತ್ತು ಕತ್ತರಿಸಿದ ಹೂವುಗಳು ಸೇರಿವೆ.
ಹೆಚ್ಚಿನ ಓದಿಗಾಗಿ
ಬದಲಾಯಿಸಿ- Sleper, David A.; Poehlman, John M. (2006). Breeding Field Crops. Blackwell Publishing. ISBN 9780813824284. Retrieved December 5, 2011.