ಮಳವಳ್ಳಿ ಮಳವಳ್ಳಿ- 571430 ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೈತರನ್ನು ಒಳಗೊಂಡಿರುವುದು ಈ ತಾಲೂಕಿನ ವಿಶೇಷವಾಗಿದೆ. ಮಳವಳ್ಳಿ ಇದು ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ ಆಗ್ನೇಯ್ ಭಾಗದಲ್ಲಿರುವ ಈ ತಾಲ್ಲೂಕನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿ ಟಿ.ನರಸೀಪುರ,ಪೂರ್ವದಲ್ಲಿ ಕನಕಪುರ,ಆಗ್ನೇಯದಲ್ಲಿ ಕೊಳ್ಳೇಗಾಲ,ವಾಯುವ್ಯದಲ್ಲಿ ಮಂಡ್ಯ,ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ- ಈ ತಾಲ್ಲೂಕುಗಳು ಸುತ್ತುವರಿದಿವೆ. ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ,ಮತ್ತು ಹಲಗೂರು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ ೮೦೪ ಚ.ಕಿಮೀ.

ಮಳವಳ್ಳಿ ತಾಲ್ಲೂಕು ಮೊದಲು ಮೈಸೂರು ಜಿಲ್ಲೆಗೆ ಸೇರಿತ್ತು. ೧೯೩೯ ಜುಲೈ ೧ ರಂದು ಹೊಸದಾಗಿ ರಚಿಸಲ್ಪಟ್ಟ ಮಂಡ್ಯ ಜಿಲ್ಲೆಗೆ ಸೇರಿತು. ಈ ತಾಲ್ಲೂಕು ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರಮಟ್ಟದಿಂದ ಸುಮಾರು ೭೬೨ ಮೀಟರ್ ನಿಂದ ೯೧೪ ಮೀಟರ್ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರೆದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಮಳವಳ್ಳಿ ಮಂಡ್ಯದಿಂದ ಸುಮಾರು ೩೦ ಕಿಮೀ ದೂರದಲ್ಲಿದೆ,ಮೈಸೂರಿನಿಂದ ೪೨ ಕಿಮೀ ಮತ್ತು ಬೆಂಗಳೂರಿನಿಂದ ೧00 ಕಿಮೀ ದೂರದಲ್ಲಿದೆ. ಮದ್ದೂರಿನಿಂದ ೨೫ ಕಿಲೋ ಮೀಟರ್ ದೂರದಲ್ಲಿದೆ.

ಹತ್ತಿರದ ಪ್ರವಾಸ ತಾಣಗಳು

ಬದಲಾಯಿಸಿ
  • ಶಿವನ ಸಮುದ್ರ - ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ವಿಶ್ವದ ಎರಡು ಪ್ರಮುಖ ೧೦೦ ಜಲಪಾತಗಳಲ್ಲಿ ಎರಡಾಗಿವೆ. ಇಡೀ ಏಷ್ಯಾದಲ್ಲೇ ಪ್ರಪ್ರಥಮ ಜಲವಿದ್ಯುತ್ಗಾರ ಇಲ್ಲಿ ಸ್ಥಾಪಿಸಲಾಯಿತು....
  • ಬ್ಲಫ್
  • ಕಿರುಗಾವಲು

ಇದು ಮಂಡ್ಯ ಜಿಲ್ಲೆಯ ಪ್ರಮುಖ ವ್ಯಾಪಾರಿ ತಾಣ ಪ್ರತಿ ಶನಿವಾರ ಸಾವಿರಾರು ಜನರು ವ್ಯಾಪಾರ ಮಾಡಲು ಬರುತ್ತಾರೆ.

  • ಹಲಗೂರು ಇದು ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ. ಸುತ್ತ ಮುತ್ತಲಿನ ಗ್ರಾಮಗಳ ಜನರು ಎಲ್ಲಾ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು ೮೫ ಕಿ.ಮೀ.ದೂರವಿದೆ ಮತ್ತು ಮಂಡ್ಯದಿಂದ ಸುಮಾರು ೫೦ ಕಿ.ಮೀ ದೂರವಿದೆ.

ವ.ಕು.ಹು.ಚ.

  • ಮುತ್ತತ್ತಿ ಇದು ಈ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದು. ಬೆಂಗಳೂರಿನಿಂದ ಮಳವಳ್ಳಿ ಮಾರ್ಗ ಹಲಗೂರು ಇಂದ ೨೨ ಕಿ.ಮೀ. ಕರಲಕಟ್ಟೆ ಮಾರ್ಗದಲ್ಲಿ ಇದೆ. ಮುತ್ತತ್ತಿ ಎಂಬ ಹೆಸರು ಬರಲು ಕಾರಣಕರ್ಥು ಶ್ರೀ ಆಂಜನೇಯ ಸ್ವಾಮಿ ರಾಮಾಯಣದಲ್ಲಿ ಸೀತಾದೇವಿಯು ನದಿಯಲ್ಲಿ ಸ್ನಾನ ಮಾಡುವಾಗ ಮೂಗುತಿ ನದಿಯಲ್ಲಿ ಜಾರಿದಾಗ ಸೀತಾಮಾತೆಯು ಆಂಜನೆಯಸ್ವಾಮಿಯ ಬಳಿ ಬಿನ್ನವಿಸಿದಾಗ ಸ್ವಾಮಿಯು ತನ್ನ ಬಾಲದಿಂದ ಮೂರು ಸುತ್ತು ಸುತ್ತಿ ಮೂಗುತಿಯನ್ನು ಎತ್ತಿ ಕೊಟ್ಟನೆಂಬ ಪ್ರತೀತಿಯಿದೆ, ಆ ಸ್ತಳದಲ್ಲಿ ಈಗಲು ಕಾವೇರಿ ನದಿ ನೀರೆಲ್ಲ ಮೂರು ಸುತ್ತು ಸುತ್ತಿ ಮುಂದೆ ಸಾಗುತ್ತದೆ, ಆ ಸ್ತಳಕ್ಕೆ "ತಿರುಗಣೆ ಮಡ"ಎಂಬ ಹೆಸರು.

ಬೊಪ್ಪೆಗೌಡನಪುರ : ಐತಿಹಾಸಿಕ ಮತ್ತು ಜನಪದ ಪ್ರಮುಖ ಸ್ಥಳ. ಇದು ಹೋಬಳಿ ಕೇಂದ್ರವಾಗಿದ್ದು, ಪ್ರವಾಸಿ ಸ್ಥಳವಾದ ತಲಕಾಡಿ ಮತ್ತು ಮುಡುಕುತೊರೆಗೆ ಸಮೀಪದಲ್ಲಿದೆ.

[[Category :ಮಂಡ್ಯ ಜಿಲ್ಲೆಯ ತಾಲೂಕು.

"https://kn.wikipedia.org/w/index.php?title=ಮಳವಳ್ಳಿ&oldid=1158356" ಇಂದ ಪಡೆಯಲ್ಪಟ್ಟಿದೆ