ಸಂಡೂರು, 'ಬಳ್ಳಾರಿ' ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಹೊಸಪೇಟೆ ತಾಲ್ಲೂಕು, ಪೂರ್ವದಲ್ಲಿ ಬಳ್ಳಾರಿ ತಾಲ್ಲೂಕು ಮತ್ತು ಆಂಧ್ರ ಪ್ರದೇಶ. ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನೈಋತ್ಯ ಮತ್ತು ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹೊಸಪೇಟೆ ತಾಲ್ಲೂಕು ಸುತ್ತುವರಿದಿವೆ. ತೋರಣಗಲ್ಲು, ಸಂಡೂರು, ಚೋರನೂರು-ಇವು ಹೋಬಳಿಗಳು.

ಸಂಡೂರು
India-locator-map-blank.svg
Red pog.svg
ಸಂಡೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಳ್ಳಾರಿ ಜಿಲ್ಲೆ
ನಿರ್ದೇಶಾಂಕಗಳು 15.1° N 76.55° E
ವಿಸ್ತಾರ
 - ಎತ್ತರ
22.13 km²
 - 564 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
27614
 - 1247.81/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 583 119
 - +08395
 - 

ಭೌಗೋಳಿಕತೆಸಂಪಾದಿಸಿ

ಈ ತಾಲ್ಲೂಕಿನ ಸಂಡೂರು ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ಬೇತೋಹಾರಿ ನಿಸರ್ಗಸೌಂದರ್ಯದಿಂದ, ಹಾಗೂ ,ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ. ಸುಂದರ ಬೆಟ್ಟಗಳಿಂದ ಕೂಡಿದ ಸುಂದರ ನಾಡು ಈ 'ಸಂಡೂರು'. ಇಲ್ಲಿನ ಬೆಟ್ಟಗಳು ಮಲೆನಾಡಿನ ಬೇಟ್ಟಗಳಿಗೆ ಹೋಲುತ್ತವೆ. ಆದರೆ ಈಗ 'ಕಬ್ಬಿಣದ ಅದ್ಇರು' ಹೇರಳವಾಗಿ ದೋರೆಯುವುದರಿಂದ ಪರಿಸರ ನಾಶವಾಗಿದೆ.


ಆಚರಣೆಗಳುಸಂಪಾದಿಸಿ

  • ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ.
  • ಬೊಮ್ಮಘಟ್ಟ ದಲ್ಲಿ ರಥೋತ್ಸವ: ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದದಶಮಿಯಂದು ರತೋತ್ಸವ ಇರುತ್ತದೆ.

ಸೊಂಡೂರು ಭೂ ಹೋರಾಟಸಂಪಾದಿಸಿ

ಸಂಡೂರಿನ ಇತಿಹಾಸ ಮತ್ತು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತವಾಗುವ ಹೊಸತೊಂದು ಪುಸ್ತಕ, ೨೦೦೮ ರಲ್ಲಿ 'ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ'ದಿಂದ ಪ್ರಕಟವಾಗಿದೆ. ಆ ಪುಸ್ತಕದ ಹೆಸರು 'ಸೊಂಡೂರು ಭೂ ಹೋರಾಟ'. ಈ ಕೃತಿಯನ್ನು 'ಡಾ. ಅರುಣ್‌ ಜೋಳದ ಕೂಡ್ಲಿಗಿ' ಸಂಶೋಧನೆ ಮಾಡಿ ಬರೆದಿದ್ದಾರೆ. ಇದು ಕರ್ನಾಟಕದ ಸಮಾಜವಾದಿ ಹೋರಾಟಗಾರರ ಇತಿಹಾಸವನ್ನೂ ಕೂಡ ದಾಖಲಿಸುತ್ತದೆ. ಕರ್ನಾಟಕದಲ್ಲಿ ರೈತ ಹೋರಾಟ ಎಂದರೆ ಕೇವಲ ಕಾಗೋಡು ಸತ್ಯಗ್ರಹವನ್ನು ಮಾತ್ರ ಉಲ್ಲೇಖ ಮಾಡುತ್ತೇವೆ. ಆದರೆ ೧೯೭೩ ರಲ್ಲಿ 'ಸಂಡೂರಿನಲ್ಲಾದ ರೈತರ ಹೋರಾಟ' ಅಸಾಮಾನ್ಯವಾದುದು. ೧೩ ಸಾವಿರ ಎಕರೆ ಭೂಮಿಯನ್ನು ರೈತರು ಈ ಹೋರಾಟದಿಂದ ಪಡೆದರು. ಈ ಹೋರಾಟದಲ್ಲಿ ಹಿರಿಯ ಸಮಾಜವಾದಿ ನಾಯಕ, 'ಜಾರ್ಜ ಫರ್ನಾಂಡೀಸ್' ಮುಂತಾದವರು ಪಾಲ್ಗೊಂಡಿದ್ದರು. ಇದು 'ಸಂಡೂರು ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ಪ್ರಮುಖ ಘಟನೆಯಾಗಿದೆ'. ಈ ಸಮಗ್ರ ದಾಖಲೆಯನ್ನು 'ಅರುಣ್‌ ಜೋಳದ ಕೂಡ್ಲಿಗಿ'ಯವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಪ್ರಸಿದ್ಧ ವ್ಯಕ್ತಿಗಳುಸಂಪಾದಿಸಿ

ಲೇಖಕ ವಸುಧೇಂದ್ರಸಂಪಾದಿಸಿ

'ವಸುಧೇಂದ್ರ', ಮೂಲತಃ ಸಂಡೂರಿನವರು. ವಸುಧೇಂದ್ರರವರು ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾರರಾಗಿ, ಪ್ರಬಂಧಕಾರರಾಗಿ, ಕಾದಂಬರಿಕಾರರಾಗಿ, ಪ್ರಕಾಶಕರಾಗಿ ಗಮನ ಸೆಳೆಯುತ್ತಿದ್ದಾರೆ.

ಸಂಡೂರ್ ಶ್ರೀಕಾಂತಸಂಪಾದಿಸಿ

'ಸಂಡೂರಿನವರಾದ ಶ್ರೀಕಾಂತ' ರವರು 'ಸೃಜನ್‌' ಎನ್ನುವ ಹೆಸರಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಾ ಹೆಚ್ಚು ಪ್ರಸಿದ್ದವಾದವರು.

"https://kn.wikipedia.org/w/index.php?title=ಸಂಡೂರು&oldid=817875" ಇಂದ ಪಡೆಯಲ್ಪಟ್ಟಿದೆ