ಕುಷ್ಟಗಿ
ಕುಷ್ಟಗಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕುಷ್ಟಗಿಯ ಪಟ್ಟಣದಲ್ಲಿ,ಶ್ರೀ ಬುತ್ತಿ ಬಸವೇಶ್ವ ದೇವಸ್ಥಾನ,ಮತ್ತು ಶ್ರೀ ಅಡವಿರಾಯ ದೇವಸ್ಥಾನಗಳಿವೆ ಮತ್ತು ಇಲ್ಲಿನ ಜನರು ದಾಳಿಂಬೆ ಮತ್ತು ಪಪ್ಪಾಯ ಹಣ್ಣುಗಳನ್ನು ಬೆಳೆಯುತ್ತಾರೆ. ಹನಮಸಾಗರ, ಹನಮನಾಳ ಮತ್ತು ತಾವರಗೇರಾ ಇಲ್ಲಿನ ಹೋಬಳಿಗಳು ಮತ್ತು ಈ ತಾಲ್ಲೂಕಿನ ದೊಣ್ಣೆಗುಡ್ಡ ದುಗಾ೯ದೇವಿ ದೇವಸ್ಥಾನವು ಯಾತ್ರಾಸ್ಥಳಕ್ಕೆ ಪ್ರಸಿದ್ಧಿ ಪಡಿದಿದೆ . ಕುಷ್ಟಗಿ ತಾಲ್ಲೂಕಿನ ದೋಟಿಹಾಳದಲ್ಲಿ ಶ್ರೀಅವದೂತ ಶುಕಮುನಿ ತಾತನ ದೇವಸ್ಥಾನ ಮತ್ತು ಪುರ ಗ್ರಾಮದಲ್ಲಿ ಐತಿಹಾಸಿಕ ಲಿಂಗಗಳು ಇರುವ ದೇವಸ್ಥಾನಗಳಿವೆ
Kushtagi
ಕುಷ್ಟಗಿ | |
---|---|
city | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಕೊಪ್ಪಳ |
Elevation | ೬೩೯ m (೨,೦೯೬ ft) |
Population (2001) | |
• Total | ೨೧,೧೮೦ |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 583277 |
ವಾಹನ ನೋಂದಣಿ | KA 37 |
ಇಲ್ಲಿ ಹನಮಸಾಗರದ ಹತ್ತಿರ ಕಪಲೆಪ್ಪ (ಕಪಿಲ ತೀರ್ಥವೆಂಬ) ಜಲಪಾತ ಪ್ರವಾಸಿ ತಾಣವಾಗಿದೆ.ಮತ್ತು ಚಂದಾಲಿಂಗ ವೆಂಬ ಪುರಾತನ ದೇವಸ್ಥಾನವು ಪ್ರಕೃತಿಯಲ್ಲಿ ಇದೆ, ನೈಸರ್ಗಿಕವಾದ ಪವನ ಶಕ್ಥಿಗೆ ಹನಮಸಾಗರ ಬಹಳ ಪ್ರಸಿದ್ದಿ ಪಧೆದಿದೆಈ ತಾಲೂಕಿನಲ್ಲಿ ಒಟ್ಟು ೧೭೭ ಹಳ್ಳಿಗಳಿವೆ . ಅವುಗಳಲ್ಲಿ ೧೬೪ ಜನವಸತಿ ಇರುವ ಗ್ರಾಮಗಳು. ೧೩ ಜನವಸತಿ ಇಲ್ಲದ್ ಗ್ರಾಮಗಳು ಇರುತ್ತವೆ. ಅದರಂತೆ ನಾಲ್ಕು ಕಂದಾಯ ಹೋಬಳಿಗಳು ಇವೆ. ಕುಷ್ಟಗಿಯು ಇಲಕಲ್,ಹೊಸಪೇಟೆ,ಗಜೇಂದ್ರಗಡ,ಕೊಪ್ಪಳ ಎಂಬ ಪ್ರಮುಖವಾದ ನಗರಗಳ ಮಧ್ಯಭಾಗದಲ್ಲಿ ಅಂದರೇ (100ಕಿ,ಮೀ,ಒಳಗೆ)ಇದೆ,
೨೮ ಗ್ರಾಮಪಂಚಾಯತಿಗಳು ಒಳಪಡುತ್ತವೆ. ಕುಷ್ಟಗಿ ಪಟ್ಟಣವು ರಾ.ಹೆ ೧೩ಕ್ಕೆ ಹೊಂದಿಕೊಂಡಿದೆ.ತಾಲೂಕಿನಲ್ಲಿ ಬರುವ ವಣಗೇರಿ ಎಂಬ ಗ್ರಾಮದಲ್ಲಿ ಪ್ರತಿ ವರ್ಷ ಹುಣ್ಣಮೆ ಮುಂದೆ ಬರುವ ಮಂಗಳವಾರ ದಿನದದ್ದು ಗ್ರಾಮದೇವತೆಯಾದ ಶಿವನಮ್ಮದೇವಿಯ ಜಾತ್ರೆ ನಡೆಯುತ್ತದೆ ಆದರೆ ಈ ಜಾತ್ರೆಯ ವಿಶೆಷತೆನ್ನದರೆ ಊರಿನ ಲಿಂಗಾಯತ ಜನರು ಮಡಿಯಿದ ಚೌಕಿಮಠದಲ್ಲಿ ಅಡಗಿಯನ್ನು ಮಾಡಿ ನಂತರ ಅದನ್ನು ಊರಿನ ಎಲ್ಲಾ ಮುತೈದರ ಮಡಿಯಿಂದ ಬಂದು ಸ್ವಿಕರಿಸುತ್ತಾರೆ .
ಉಲ್ಲೇಖಗಳು
ಬದಲಾಯಿಸಿಮತ್ತು ಕಲಾಲಬಂಡಿ ಕರೀಯಮ್ಮ ಮತ್ತು ದುರ್ಗಾದೇವಿಯ ಜಾತ್ರೆ ತುಂಬಾ ಅದ್ಭುತ ವಾಗಿ ನಡಿಯುತ್ತೆ ರಾಜಾಬಕ್ಷಾ ದರ್ಗಾ ಮರ್ತುಜಾಖಾದ್ರಿ ದರ್ಗಾ ದಾವಲಮಲ್ಲಿಕ್ ದರ್ಗಾ ಇಲ್ಲಿ ಹಿಂದು ಮುಸ್ಲಿಮ್ ಅಣ್ಣಾ ತಂಮ್ಮದಿರು ತರ್ ಜೀವನ ನಡೇಸುತಾರೆ ಎಲ್ಲಾ ರೀತಿಯ ಹಬ್ಬಗಳನ್ನುಆಚರಣೆ ಮಾಡುತ್ತಾರೆ.
ತಾಲೂಕಿನ ಪ್ರಮುಖ ಕವಿಗಳು
ಜಿ.ಎಸ್.ಶರಣು ಇವರು ತಾಲೂಕಿನ ಪ್ರಮುಖ ವಾಗ್ಮಿ ಮತ್ತು ಬರಹಗಾರರಾಗಿದ್ದಾರೆ.ಇವರ ಊರು ಮತ್ತು ಹಿನ್ನೆಲೆ ಬಗ್ಗೆ ಮಾಹಿತಿಯಿಲ್ಲ.ಜಿ.ಎಸ್.ಶರಣು ರವರು ಇತ್ತೀಚಿಗೆ "ಭೀಮ್ ಫೌಂಡೇಶನ್" ಉದ್ಘಾಟನೆಯಲ್ಲಿ ಭೀಮಸೇವಾ ರಾಜ್ಯಪ್ರಶಸ್ತಿ ಪಡೆದಿದ್ದಾರೆ ಹಾಗೂ ಹಲವೇಡೆ ಭಾಷಣ ಮಾಡುವ ಮೂಲಕ ಜನರ ಗಮನವನ್ನು ಸೆಳೆದಿದ್ದಾರೆ.ಕೆಂಡಸಂಪಿಗೆ ವೆಬ್ಸೈಟ್ ನಲ್ಲಿ ಇವರ "ಜಗತ್ ಜ್ಯೋತಿ" ಎಂಬ ಇವರ ಕವನಸಂಕಲನ ನೋಡಬಹುದು."ಜಗತ್ ಜ್ಯೋತಿ" ಇದೊಂದು ಇ-ಪುಸ್ತಕ ಆಗಿದೆ. ಇವರು ತಮ್ಮ ಯಾವುದೇ ಪುಸ್ತಕವನ್ನು ಪ್ರಕಟಿಸಿಲ್ಲ, ತಮ್ಮ ಬರಹಗಳನ್ನು ಕಾರ್ಯಕ್ರಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.ಸದ್ಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವಿನಲ್ಲಿ ಬಿ.ಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಸಮಾಜ ಪರ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ.
ಜಿ.ಎಸ್.ಶರಣು ರವರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |