ತಾವರಗೇರಾ
ತಾವರಗೇರಾ ( ಅಥವಾ ತಾವರಗೇರಿ) ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿರುವ ಊರು. ಇದು ಜಿಲ್ಲಾಕೇಂದ್ರ ಕೊಪ್ಪಳ ಯಿಂದ ಸುಮಾರು 65 ಕಿ. ಮೀ. ಇದೆ ಮತ್ತು ತಾಲೂಕುಕೇಂದ್ರ ಕುಷ್ಟಗಿಯಿಂದ 24 ಕಿ. ಮೀ. ಇದೆ ಕುಷ್ಟಗಿ ತಾಲ್ಲೂಕಿನ ಯಾವುದೇ ಗ್ರಾಮ ಪಟ್ಟಣಗಳಿಗೆ ಹೋಲಿಸಿದರೆ ಇದು ದೊಡ್ಡದಾಗಿದೆ
ತಾವರಗೇರಾ ದಲ್ಲಿ ಪುರಾತನ ಓಂ ನಾಥ ದೇವಾಲಯವಿದೆ. ನಿಜಾಮರ ಆಳ್ವಕೆಯ ಕಾಲದಲ್ಲಿ ರಜಾಕರ ದಬ್ಬಾಳಿಕೆಗೆ ಒಳಪಟ್ಟ ಪಟ್ಟಣವಿದು. ಇಲ್ಲಿ ಪುರಾತನ ಕಾಲದ ವೆಂಕಟೇಶ್ವರ ದೇವಸ್ಥಾನ ವಿದೆ
ಪುರಾತನ ಕಾಲದಿಂದಲೂ ವೀರಭದ್ರೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ ಮತ್ತು ಉರುಸು ನಡೆಯುತ್ತದೆ.
ಇದೆ ತಾವರಗೇರಾ ದಿಂದ ಸುಮಾರು 11ಕಿ. ಮೀ ದೂರದಲ್ಲಿ ಪುರಾತನ ಕಾಲದ ಕೋಟಿ ಲಿಂಗಗಳ ದೇವಸ್ಥಾನ ಪುರ ಎಂಬ ಗ್ರಾಮವಿದೆ ಈ ಗ್ರಾಮದಲ್ಲಿ ಸೋಮೇಶ್ವರ ಎಂಬ ದೇವಸ್ಥಾನವಿದ್ದು ಅದರಲ್ಲಿ ಕೋಟಿ ಲಿಂಗಗಳು ಇದ್ದು 7 ಬಾವಿಗಳನ್ನೊಳಗೊಂಡಿದೆ ಇದರ ಒಂದು ಪ್ರತಿತಿ ಏನಂದರೆ ಏಳು ಬಾವಿಗಳನ್ನು ನೋಡಬಾರದು ನೋಡಿದ ಮರುದಿನವೇ ಮರಣ ಸಂಭವಿಸುತ್ತದೆ ಎಂಬ ಹಿರಿಯರ ಪ್ರತಿತಿಯಿದೆ..
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಶಿಕ್ಷಣ ಈ ಪಟ್ಟಣದಲ್ಲಿ ಶಿಕ್ಷಣಕ್ಕೆ ಅಪಾರವಾದ
ಹಲವಾರು ಸರ್ಕಾರಿ ಪ್ರಾಥಮಿಕ ಶಾಲೆಗಳು , ಸರ್ಕಾರಿ ಪ್ರೌಢಶಾಲೆಗಳು , ಪದವೀಪೂರ್ವ ಕಾಲೇಜುಗಳು ಮತ್ತು ಒಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಇದೆ..
ಭೌಗೋಳಿಕ ಮಾಹಿತಿ,
ಪೂರ್ವಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಉತ್ತರಕ್ಕೆ ಲಿಂಗಸಗೂರು ತಾಲೂಕು ಈಶಾನ್ಯಕ್ಕೆ ಕುಷ್ಟಗಿ ತಾಲೂಕು ದಕ್ಷಿಣಕ್ಕೆ ಗಂಗಾವತಿ ತಾಲೂಕುಗಳೊಂದಿಗೆ ತನ್ನ ಭೌಗೋಳಿಕ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಪಟ್ಟಣವೂ ಸುಮಾರು 5 ಪಥಗಳನ್ನುಹೊಂದಿದೆ ಸಿಂಧನೂರು , ಕಲಬುರಗಿ , ಮುದೇನೂರು, ಕುಷ್ಟಗಿ , ಗಂಗಾವತಿ ಮುಂತಾದ ನಗರಗಳ ಪಥಗಳನ್ನು ಹೊಂದಿದೆ
ಹಲವಾರು ಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ಈ ಪಟ್ಟಣವು ಪಟ್ಟಣ ಪಂಚಾಯತ್, ನಾಢಕಚೇರಿ, ಸರಕಾರಿ ಆಸ್ಪತ್ರೆ, SBI BANK , ಬಸ್ ನಿಲ್ದಾಣ, ಪೆಟ್ರೋಲಿಯಂ, APMC YARD, ರಾಸಾಯನಿಕ ಗೊಬ್ಬರ ವ್ಯವಸ್ಥೆ ಕೂಡ ಹೊಂದಿದೆ
ಈ ಪಟ್ಟಣಕ್ಕೆ ತಾವರಗೇರಾ ಎಂದು ಹೆಸರು ಬರಲು ಕಾರಣವೇನೆಂದರೆ ಈ ಪಟ್ಟಣದಲ್ಲಿ ರಾಯನ ಕೆರೆ ಅಂತ ಒಂದು ಕೆರೆ ಇದೆ ಈ ಕೆರೆಯು ವಿಜಯನಗರ ಸಾಮ್ರಾಜ್ಯದ ದೊರೆಯಾದ 2ನೇ ಪ್ರೌಢದೇವರಾಯ ನಿರ್ಮಿಸಿದ್ಧನಂತೆ ಮತ್ತು ಆವಾಗಿನ ಕಾಲದಲ್ಲಿ ಈ ಕೆರೆಯಲ್ಲಿ ತಾವರೆ ಹುವು (ಕಮಲದ ಹೂವು) ಬೆಳೆಯುತ್ತಿದ್ದರಂತೆ ಮತ್ತು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೇವಾಲಯವಾದ ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ ಪೂಜೆಗೆ ಇಲ್ಲಿರುವ ತಾವರೆ ಹೂಗಳನ್ನೇ ಅಲ್ಲಿಗೆ ಇಲ್ಲಿ ಮತ್ತೊಂದು ಆಶ್ಚರ್ಯಕರವಾದ ವಿಷಯವೇನಂದರೆ ಇಲ್ಲಿ ಮತ್ತೊಂದು ಪ್ರಸಿದ್ಧವಾದ ದೇವಸ್ಥಾನವೆಂದರೆ ಶ್ರೀ ಜಗದ್ಗುರು ತಿಂತಣಿ ಮೌನೇಶ್ವರ ದೇವಸ್ಥಾನವಿದೆ ಅದರ ಹಿಂಬದಿಯಲ್ಲಿ ಒಂದು ಸುರಂಗಮಾರ್ಗ ಅಂದರೆ ಇಲ್ಲಿಂದ ಹಂಪಿಗೆ ದಾರಿಯಿದೆಯೆಂದು ಹಿರಿಯರ ಒಂದು ನಂಬಿಕೆ ಈ ಸುರಂಗಮಾರ್ಗ ಮೂಲಕವೇ ಆ ವಿರೂಪಾಕ್ಷ ದೇವರಿಗೆ ತಾವರೆ ಹೂವುಗಳನ್ನು ಪೂಜೆ ಮಾಡುತಿದ್ದರೆಂದು ಹಿರಿಯರ ಒಂದು ಮಾತಿನಂತೆ ಹೇಳಲಾಗಿದೆ... ಈ ಕಾರಣದಿಂದಾನೆ ಈ ಊರಿಗೆ ಮುಂಚೆ ತಾವರೆಕೆರೆ ಅಂತ ಇದ್ದ ಹೆಸರನ್ನು ಜನರ ರೂಢಿಭಾಷೆಯಲ್ಲಿ ತಾವರಗೇರಾ ಅಂತ ಕರೆಯಲಾಗಿದೆ