ಮೂಡಲಗಿ
ಮೂಡಲಗಿ ಇದು ಬೆಳಗಾವಿ ಜಿಲ್ಲೆಯ ಹೊಸ ತಾಲೂಕಾಗಿದೆ. 2013ರಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಸರ್ಕಾರ ಘೋಷಿಸಿದ 43 ತಾಲೂಕುಗಳ ಪೈಕಿ ಇದು ಒಂದಾಗಿದೆ. ಗೋಕಾಕ್ ತಾಲೂಕಿನ ಪೂರ್ವಭಾಗವನ್ನು ವಿಭಜಿಸಿ ಇದನ್ನು ರಚಿಸುವ ಪ್ರಸ್ತಾವಣೆ ಇದೆ. ಆದ್ರೆ ಸದ್ಯ ಇದು ಗೋಕಾಕ್್ತಾಲೂಕಿನಲ್ಲೇ ಇದ್ದು, ಸರ್ಕಾರದ ಅಧಿಕೃತ ಆದೇಶ ಇನ್ನು ಹೊರಬಿದ್ದಿಲ್ಲ. ಗೋಕಾಕ್ ಗ್ರಾಮೀಣ ವಿಧಾನಸಭಾ(ಅರಭಾಂವಿ )ಕ್ಷೇತ್ರದ ಭಾಗಗಳನ್ನು ಒಳಗೊಳ್ಳುವ ಈ ಪ್ರದೇಶ ಹೆಚ್ಚು ಕಡಿಮೆ ಪೂರ್ಣವಾಗಿ ನೀರಾವರಿಗೆ ಒಳಪಟ್ಟ ಪ್ರದೇಶವಾಗಿದೆ. ಕಬ್ಬು, ಗೋವಿನ ಜೋಳ ಈ ನಿಯೋಜಿತ ತಾಲೂಕಿನ ಪ್ರಧಾನ ವಾಣಿಜ್ಯ ಬೆಳೆಗಳಾಗಿದ್ದು, ಗೋವಿನ ಜೋಳವನ್ನು ಆಹಾರ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಈಗಾಗಲೆ ನಿಯೋಜಿತ ತಾಲೂಕು ಕೇಂದ್ರ ಮೂಡಲಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಮುನ್ಸಿಫಲ್್ ಕೋರ್ಟ, ಉಪಖಜಾನೆ ಕಚೇರಿ, ಕಂದಾಯ ಸರ್ಕಲ್ ಕಚೇರಿ ಸೇರಿದಂತೆ ಹಲವು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಅಲ್ದೆ ಪಟ್ಟಣದಲ್ಲಿ ಪದವಿ ಹಂತದ ಕಾಲೇಜುಗಳು, ಕೈಗಾರಿಕಾ ತರಬೇತಿ ಕೇಂದ್ರಗಳು ಸೇರಿದಂತೆ ಶೈಕ್ಷಣಿಕವಾಗಿಯೂ ಸಾಕಷ್ಟು ಮುಂದುವರಿದಿದೆ. ಇನ್ನು ಪಟ್ಟಣದಲ್ಲಿ ನಡೆಯುವ ' ದನದ ಸಂತೆ ' ರಾಜ್ಯದಲ್ಲಿ ಪ್ರಸಿದ್ದಿಯಾಗಿದೆ.
Mudalgi ಮೂಡಲಗಿ | |
---|---|
city | |
Country | ![]() |
State | Karnataka |
District | Belgaum |
ಕ್ಷೇತ್ರಫಲ | |
• ಒಟ್ಟು | ೧೩.೮೫ km೨ (೫.೩೫ sq mi) |
ಜನಸಂಖ್ಯೆ (2011) | |
• ಒಟ್ಟು | ೪೧,೨೭೯ |
• Density | ೨,೩೮೭.೭/km೨ (೬,೧೮೪/sq mi) |
Languages | |
• Official | Kannada |
ಸಮಯ ವಲಯ | UTC+5:30 (IST) |
PIN | 591 312 |
Telephone code | 08334 |
ಇತಿಹಾಸಸಂಪಾದಿಸಿ
ಮೂಡಲಗಿ ಐತಿಹಾಸಿಕವಾಗಿಯೂ ಪ್ರುಮುಖ ಸ್ಥಳವಾಗಿದೆ. ಬಿಜಾಪುರದ ಆದಿಲ್ ಷಾಹಿಗಳು, ಸವಣೂರು ನವಾಬರು, ಪೇಶ್ವೆಗಳು, ಕಿತ್ತೂರಿನ ಸಂಸ್ಥಾನ, ಜಮಖಂಡಿ ಸಂಸ್ಥಾನ , ಹಾಗೂ ಬ್ರಿಟಿಷರು ಇಲ್ಲಿ ಆಡಳಿತ ನಡೆಸಿದ್ದಾರೆ. ಪಟ್ಟಣದ ಶಿವಬೋಧರಂಗ ಮಠ ಜಾಗೃತ ಸ್ಥಳವಾಗಿದ್ದು ಲೋಕಪ್ರಸಿದ್ಧಿಯಾಗಿದೆ. ಇನ್ನು ಕಲ್ಲೋಳಿ ಗ್ರಾಮದ ಮಾರುತಿ ಮಂದಿರ ಸಾಕಷ್ಟು ಪ್ರಸಿದ್ಧಿಯಾಗಿದ್ದು, ಹೊರ ರಾಜ್ಯಗಳಿಂದಲೂ ಭಕ್ತರನ್ನು ಆಕರ್ಷಿಸುತ್ತಿದೆ. ಇದು ಪೇಶ್ವೆಗಳಿಂದ ಜಹಗೀರು ಪಡೆದ ದೇಗುಲವಾಗಿದೆ.
ಪುರಸಭೆಸಂಪಾದಿಸಿ
ಪಟ್ಟಣದಲ್ಲಿ ಪುರಸಭೆ ಇದ್ದು ಸ್ಥಳೀಯಾಡಳಿತ ನೋಡಿಕೊಳ್ಳುತ್ತಿದೆ. ಪಟ್ಟಣ ಸುಮಾರು 35 ಸಾವಿರ ಜನಸಂಖ್ಯೆ ಹೊಂದಿದೆ. 23 ವಾರ್ಡಗಳಿವೆ.