ದೇವನಹಳ್ಳಿ (ಹಳೆಯ ಹೆಸರುಗಳು ದೇವನದೊಡ್ಡಿ, ದೇವನಪುರ ) ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪಟ್ಟಣ. ಇದು ಬೆಂಗಳೂರು ನಗರದಿಂದ ೩೦ ಕಿ.ಮಿ ದೂರದಲ್ಲಿದೆ.

ದೇವನಹಳ್ಳಿ
India-locator-map-blank.svg
Red pog.svg
ದೇವನಹಳ್ಳಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಂಗಳೂರು ಗ್ರಾಮೀಣ
ನಿರ್ದೇಶಾಂಕಗಳು 13.23° N 77.7° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
23,190
 - /ಚದರ ಕಿ.ಮಿ.
ವೇಣುಗೋಪಾಲಸ್ವಾಮಿ ದೇವಸ್ಥಾನ

ದೇವನಹಳ್ಳಿ ಪುರಸಭೆಯು 1959 ರಲ್ಲಿ ಸ್ಥಾಪನೆಯಾಯಿತು.

•    ದೇವನಹಳ್ಳಿ ಪುರಸಭೆಯು ಬೆಂಗಳೂರಿನಿಂದ ಹೈದಾರಬಾದ್ ಗೆ ಹೋಗುವ ಎನ್ಎಚ್-7 ರಸ್ತೆಯಲ್ಲಿದ್ದು ಬೆಂಗಳೂರಿನಿಂದ ಸುಮಾರು 34 ಕೀಲೋಮೀಟರ್ ದೂರದಲ್ಲಿರುತ್ತದೆ.

•    20011 ರ ಜನಗಣತಿಯ ಪ್ರಕಾರ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 28,039 ಜನಸಂಖ್ಯೆಯನ್ನು ಹೊಂದಿರುತ್ತದೆ.

•    ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು    23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ.

•    ದೇವನಹಳ್ಳಿ ಪುರಸಭೆಯ ವ್ಯಾಪ್ತಿಯು ಒಟ್ಟು 16.00 ಚದುರ ಕೀಲೋಮೀಟರ್ ಗಳಿರುತ್ತದೆ.

•     ಮೈಸೂರು ಹುಲಿ ಎಂದೆ ಪ್ರಸಿದ್ದಿ ಪಡೆದಿದ್ದ   ಟಿಪ್ಪು ಸುಲ್ತಾನರ ಜನ್ಮ ಸ್ಥಳವು ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ.

•    ದೇವನಹಳ್ಳಿ ಯಲ್ಲಿ 1501 ನೇ  ಇಸವಿಯ ಪುರಾತನ ಕೋಟೆ ಇದ್ದು, ಇದು ಸಹ ಪುರಾತತ್ವ ಇಲಾಖೆಗೆ ಒಳಪಡುತ್ತದೆ.

•    ಪ್ರವಾಸ ತಾಣವೆಂದೆ ಪ್ರಸಿದ್ದಿ ಪಡೆದ ನಂದಿಬೆಟ್ಟವು ಸುಮಾರು 20 ಕೀಲೋಮೀಟರ್ ದೂರದಲ್ಲಿರುತ್ತದೆ. ಬೆಂಗಳೂರು ಅಂತರ್ ರಾಷ್ಷೀಯ ವಿಮಾನ ನಿಲ್ದಾಣವು ದೇವನಹಳ್ಳಿಯಿಂದ 6.5 ಕೀಲೋಮೀಟರ್  ದೂರದಲ್ಲಿರುತ್ತದೆ.

•    ದೇವನಹಳ್ಳಿಯಲ್ಲಿ ಹಾರ್ಡ್ ವೇರ್ ಪಾರ್ಕ್ ನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ .

•    ದೇವನಹಳ್ಳಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ವೇಣುಗೋಪಾಲ ಸ್ವಾಮಿ ದೇವಸ್ಥನವಿದ್ದು ಈ ದೇವಲಯದ ಒಡವೆಗಳು ಕೋಟ್ಯಾಂತರ ಬೆಲೆ ಬಾಳುವಂತಹದಾಗಿರುತ್ತದೆ. ಹಾಗೂ ವರ್ಷಕೊಮ್ಮೆ ನೆಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.ಸಂಪಾದಿಸಿ

ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣಸಂಪಾದಿಸಿ

  • ಬೆಂಗಳೂರು ಗ್ರಾಮಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದಾಗಿ ವಿಶ್ವದ ವಿಮಾನಸಾರಿಗೆ ಸಾಗಾಣಿಕೆಯ ನಕ್ಷೆಯಲ್ಲಿ ಮೂಡಿಬಂದಿದೆ. ೨೦೦೮ ರ ಮೇ ೨೩ ರಂದು ಕರ್ನಾಟಕ ರಾಜ್ಯದ ಪ್ರಪ್ರಥಮ ಅಂತಾ-ರಾಷ್ಟ್ರೀಯ ವಿಮಾನನಿಲ್ದಾಣ' ದ ಉದ್ಘಾಟನೆಯಾಯಿತು. ಬೆಂಗಳೂರು ನಗರದಿಂದ ಸುಮಾರು ೩೨ ಕಿ. ಮೀ ದೂರದಲ್ಲಿರುವ ಈ ಸಾರಿಗೆ ವಿಮಾನ ನಿಲ್ದಾಣಕ್ಕೆ ಸಂಪರ್ಕರಸ್ತೆಗಳು ಸರಿಯಾಗಿವೆ.
  • 'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್‍ಗಳು ಪ್ರತಿ ೧೫ ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ.
  • ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಭ್ಯವಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ, ಸಾರಿಗೆ ಸೌಲಭ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯ ಬಹುದು. ಸಹಾಯವಾಣಿ ಸಂಖ್ಯೆ : ೪೦೫೮೧೧೧೧. ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇ ಹಂತದ ತಪಾಸಣಾ ವ್ಯವಸ್ಥೆ 'ಯನ್ನು ನಿರೂಪಿಸಲಾಗಿದೆ. ೫೩ 'ಚೆಕ್-ಇನ್ ಕೌಂಟರ್' ಗಳು, ಹಾಗೂ ೧೮ 'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ ಆರೋಗ್ಯ-ಸೇವೆಗೆ (ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ) ಪ್ರತ್ಯೇಕ ಜಾಗವಿದೆ.

ಅಂತಾರಾಷ್ಟ್ರೀಯ ಗುಣಮಟ್ಟವನ್ನು 'ಬೆಂಗಳೂರು ವಿಮಾನನಿಲ್ದಾಣ' ಹೊಂದಿಲ್ಲವೆಂಬ ದೂರುಸಂಪಾದಿಸಿ

  • ಕರ್ನಾಟಕ ಸರ್ಕಾರದ ಗಮನಕ್ಕೆ ಇದು ಆಗಲೇ ಬಂದಿದ್ದು ಸರ್ಕಾರ ಒಂದು ' 'ಜಂಟಿ ಸದನ ಸಮಿತಿ' ಯನ್ನು ರಚಿಸಿ, ಅದರ ವರದಿಗಾಗಿ ಕಾದಿದೆ. ದೇವನಹಳ್ಳಿ ಜಿಲ್ಲೆಯ ಭೂಮಿಯ ಬೆಲೆ ಗಗನಕ್ಕೇರಿದೆ. 'ರಿಯಲ್ ಎಸ್ಟೇಟ್' ಉದ್ಯಮ, ರೈತರ ಬೆಳೆಬೆಳೆಯುವ ಹೊಲಗಳನ್ನು ಆಕ್ರಮಿಸಿದೆ. ದೇವನಹಳ್ಳಿ, 'ಟಿಪ್ಪೂ ಸುಲ್ತಾನ' ನ ಹುಟ್ಟೂರು ಸಹಿತ. 'ಟಿಪ್ಪೂ ಸುಲ್ತಾನನ ಕೋಟೆ' ಯೂ ಪರ್ಯಟಕರ ಗಮನ ಸೆಳೆಯುತ್ತದೆ.
  • 'ಡಿವಿಜಿ' ಯವರು ವಾಸಿಸುತ್ತಿದ್ದ ಹಳೆಯ ಮನೆ ಇಲ್ಲಿದೆ. ದುಬೈ, ಶಾರ್ಜಾಗಳಿಗೆ ರಫ್ತಾಗುವ, 'ಚಕ್ಕೋತನ ಹಣ್ಣು' ಗಳಿಗೆ ದೇವನಹಳ್ಳಿ ಪ್ರಸಿದ್ಧಿಯಾಗಿದೆ. ಸಭೆ-ಸಮಾರಂಭಗಳಲ್ಲಿ ನಮ್ಮ ಜನ, ನಿಂಬೆಹಣ್ಣನ್ನು ಕೊಟ್ಟು ಅತಿಥಿಗಳ ದಣಿವಾರಿಕೆಯನ್ನು ವ್ಯವಸ್ಥೆ ಮೊದಲಿಂದ ಇದೆ. ಆದರೆ, ದೇವನಹಳ್ಳಿಯಲ್ಲಿ 'ಚಕ್ಕೋತ ಹಣ್ಣು' ನಿಂಬೆಹಣ್ಣಿನ ಜಾಗವನ್ನು ಆಕ್ರಮಿಸಿದೆ.

ಚಂದ್ರಮೌಳೇಶ್ವರ ದೇವಸ್ಥಾನದ ಲಕ್ಷದೀಪೋತ್ಸವಸಂಪಾದಿಸಿ

ವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಗಳಿವೆ. ಪ್ರತಿದೀಪಾವಳಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯುವ 'ಲಕ್ಷದೀಪೋತ್ಸವ' ನೋಡುವುದೇ ಕಣ್ಣಿಗೆ ಹಬ್ಬ. ಪುರಾತನ 'ಶ್ರೀನಗರೇಶ್ವರ ದೇವಾಲಯ,' ಹತ್ತಿರದ ವಿಜಯಪುರದಲ್ಲಿದೆ. ಊರ ನಾಲ್ಕೂ ದಿಕ್ಕಿನಲ್ಲಿ ೩೦೦ ವರ್ಷಗಳ ಹಿಂದಿನ ಕಲ್ಯಾಣಿಗಳು ಇನ್ನೂ ಇವೆ. 'ಬೆಂಗಳೂರು ಬ್ಲೂ ದ್ರಾಕ್ಷಿ' ಯಿಂದ ದ್ರಾಕ್ಷಾರಸವನ್ನು ತಯಾರಿಸುತ್ತಾರೆ. ದೇವನಹಳ್ಳಿಯ ಆಡಳಿತ ದೃಷ್ಟಿಯಿಂದ ವಿಜಯಪುರ(ಬೆಂಗಳೂರು ಗ್ರಾಮಾಂತರ) ಹಾಗೂ ದೇವನಹಳ್ಳಿ ನಗರಸಭೆಗಳು ಇರುವುದನ್ನು ನಾವು ಕಾಣಬಹುದು.

ಬಾಹ್ಯ ಸಂಪರ್ಕಗಳುಸಂಪಾದಿಸಿ