ಸೊರಬ
ಸೊರಬವು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೆರಗಿನಲ್ಲಿರುವ ಒಂದು ತಾಲೂಕು. ದಂಡಾವತಿ ನದಿ ತೀರದಲ್ಲಿರುವ ಇದು ಸಮುದ್ರಮಟ್ಟದಿಂದ ಅಂದಾಜು ೫೮೦ ಮೀಟರ್ ಎತ್ತರದಲ್ಲಿದೆ. ಶಿವಮೊಗ್ಗ ಜಿಲ್ಲಾಕೇಂದ್ರದಿಂದ ೮೫ ಕಿಮೀ ದೂರದಲ್ಲಿದೆ.
ಸೊರಬ | |
---|---|
Coordinates: 14°23′N 75°06′E / 14.38°N 75.1°ECoordinates: 14°23′N 75°06′E / 14.38°N 75.1°E | |
Country | ![]() |
State | ಕರ್ನಾಟಕ |
District | ಶಿವಮೊಗ್ಗ |
Subdivision | Sagara |
ಸರ್ಕಾರ | |
• ಪಾಲಿಕೆ | Town Panchayat |
Elevation | ೫೮೦ m (೧,೯೦೦ ft) |
Population (೨೦೦೧) | |
• Total | ೭,೪೨೪ |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ವಾಹನ ನೋಂದಣಿ | KA-15(Sagara) |
ಇತಿವೃತ್ತಸಂಪಾದಿಸಿ
ಸೊರಬದ ಮೂಲ ಹೆಸರು ಸುರಭಿಪುರ, ಇಲ್ಲಿ ಒಂದು ಸುರಭಿ (ಆಕಳು) ರಂಗನಾಥದೇವರಿಗೆ ಹಾಲಿನ ಅಭಿಷೇಕ ಮಾಡುತ್ತಿತ್ತೆಂಬ ಪ್ರತೀತಿ ಇದೆ. ಅಲ್ಲಿ ಈಗಿನ ದೇವಸ್ಥಾನವನ್ನು ಹಳೆಸೊರಬದ ಒಬ್ಬ ಗೌಡರು ಕಟ್ಟಿಸಿದರು ಎಂಬುವುದರ ಬಗ್ಗೆ ದಂಡಾವತಿ ನದಿತೀರದಲ್ಲಿ ಶಿಲಾಶಾಸನವಿದೆ. ಸೊರಬವು ಶ್ರೀಗಂಧದ ಕರಕುಶಲ ಕಲೆಗೆ ಪ್ರಸಿದ್ದವಾಗಿದೆ.
ಭೌಗೋಳಿಕ ಲಕ್ಷಣಗಳುಸಂಪಾದಿಸಿ
ಸೊರಾಬಾವು 14.38 ° N 75.1 ° E ನಲ್ಲಿ ಇದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 580 ಮೀಟರ್ (1902 ಅಡಿ)ಎತ್ತರದಲ್ಲಿದೆ [೧]. ಸೊರಾಬ ಪೂರ್ವಕ್ಕೆ ಶಿಕಾರಿಪುರ ತಾಲೂಕು, ದಕ್ಷಿಣಕ್ಕೆ ಸಾಗರ ತಾಲೂಕು, ಪಶ್ಚಿಮಕ್ಕೆ ಸಿದ್ಧಾಪುರ ತಾಲೂಕು, ಪೂರ್ವಕ್ಕೆ ಹಿರೇಕೆರೂರು ತಾಲೂಕುಗಳಿಂದ ಸುತ್ತುವರೆಯಲ್ಪಟಿದೆ.
ಹವಾಮಾನಸಂಪಾದಿಸಿ
ಇಲ್ಲಿನ ಹವಾಮಾನ ಉಷ್ಣವಲಯವಾಗಿದೆ.ಇಲ್ಲಿ ಹವಾಮಾನವನ್ನು ಕೊಪ್ಪನ್-ಗೈಜರ್ ವ್ಯವಸ್ಥೆಯ ಮೂಲಕ ಎವ್ ಎಂದು ವರ್ಗೀಕರಿಸಲಾಗಿದೆ. ಸೊರಬದಲ್ಲಿ ಸರಾಸರಿ ತಾಪಮಾನವು 24.6 °C ಆಗಿದೆ. ಇಲ್ಲಿ ವಾರ್ಷಿಕ ಸರಾಸರಿ 1583 ಮಿಮೀ ಮಳೆ ಸುರಿಯುತ್ತದೆ [೨].
ಜನಸಂಖ್ಯೆಸಂಪಾದಿಸಿ
೨೦೦೧ರ ಜನಗಣತಿಯಂತೆ ಇಲ್ಲಿ೨,೦೦,೮೦೯ ಜನಸಂಖ್ಯೆ ನಮೂದಾಗಿದ್ದು, ಜನಸಂಖ್ಯೆಯ 11% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು [೩]. ೫೧:೪೯ ಅನುಪಾತದಲ್ಲಿ ಪುರುಷರು ಮತ್ತು ಮಹಿಳೆಯರು ಇರುತ್ತಾರೆ. ಸೊರಬ ಸರಾಸರಿ 78.67% ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿಕ್ಕಿಂತ ಹೆಚ್ಚಾಗಿದೆ (ಪುರುಷ ಸಾಕ್ಷರತೆ 85.63% ಮತ್ತು ಮಹಿಳೆಯರ ಸಾಕ್ಷರತೆ 71.62%)[೪]. ಇಲ್ಲಿಯ ಜನರ ಮುಖ್ಯ ಜೀವನಾಧಾರ ಕೃಷಿ. ಸಾಮಾನ್ಯವಾಗಿ ಕೃಷಿಕರೇ ಪ್ರಧಾನವಾಗಿರುವ ಹಳ್ಳಿಗಳೇ ಹೆಚ್ಚು. ಭತ್ತ ಪ್ರಮುಖ ಬೆಳೆ ಇದಲ್ಲದೆ ಅಡಿಕೆ, ಶುಂಠಿ, ಜೋಳ, ಬಾಳೆ ಕೂಡ ಬೆಳೆಯಲಾಗುತ್ತದೆ.
ಶಿಕ್ಷಣ ವ್ಯವಸ್ಥೆಸಂಪಾದಿಸಿ
ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಸರ್ಕಾರಿ ಮತ್ತು ಅನೇಕ ಖಾಸಗಿ ಶಾಲೆಗಳಿದ್ದು ಉತ್ತಮ ಶಿಕ್ಷಣ ನೀಡುತ್ತಿವೆ. ಕಾಲೇಜು ಹಂತದಲ್ಲಿ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಒಂದು ತಾಂತ್ರಿಕ ವಿದ್ಯಾಲಯ(ಪಾಲಿಟೆಕ್ನಿಕ್), ಮತ್ತು ಸರ್ಕಾರಿ ಪದವಿ ಕಾಲೇಜು ಕೂಡ ಇದೆ.
ಸೊರಬ ತಾಲೂಕಿನಲ್ಲಿನ ಪ್ರೇಕ್ಷಣೀಯ ಸ್ಥಳಗಳುಸಂಪಾದಿಸಿ
ಇತರ ಹತ್ತಿರದ ಪ್ರೇಕ್ಷಣೀಯ ಸ್ಥಳಗಳುಸಂಪಾದಿಸಿ
ಸೊರಬ ತಾಲೂಕಿನ ಹಳ್ಳಿಗಳುಸಂಪಾದಿಸಿ
ಉಲ್ಲೇಖಗಳುಸಂಪಾದಿಸಿ
- ↑ https://books.google.co.in/books?id=krgBAAAAYAAJ&rview=1&vq=soraba&pg=PA481&ci=46,32,889,1408&source=bookclip&redir_esc=y
- ↑ https://en.climate-data.org/location/492401/
- ↑ http://www.census2011.co.in/data/subdistrict/5516-sorab-shimoga-karnataka.html
- ↑ http://www.censusindia.gov.in/2011census/dchb/2914_PART_A_DCHB_SHIMOGA.pdf