ಗುಡವಿ
ಇತರ ಲೇಖನಗಳಿಂದ ಈ ಲೇಖನಕ್ಕೆ ಕೊಂಡಿಗಳಿಲ್ಲ. ದಯವಿಟ್ಟು ಈ ಲೇಖನಕ್ಕೆ ಇತರ ಲೇಖನಗಳ ಕೊಂಡಿಯನ್ನು ಸೇರಿಸಿ.. (ಡಿಸೆಂಬರ್ ೨೦೧೫) |
ಸೊರಬ ತಾಲೂಕಿನಲ್ಲಿರುವ ಗುಡವಿ ಕರ್ನಾಟಕದ ಎರಡನೆ ದೊಡ್ಡ ಪಕ್ಷಿಧಾಮ. ಇಲ್ಲಿ ಮಳೆಗಾಲ ಪ್ರಾರಂಭವಾದೊಡನೆ ಸುಮಾರು ೨೦೦ ಕ್ಕು ಹೆಚ್ಚು ತಳಿಯ ಹಕ್ಕಿಗಳು ವಲಸೆ ಬರುತ್ತವೆ. ಇಲ್ಲಿನ ವಿಶಾಲವದು ಕೆರೆ ಕ್ಷೇಮವಾದ ತಾಣವಾಗಿ ಪಕ್ಷಿಗಳ ಸಂತಾನಾಭಿವೃದ್ಧಿಗೆ ಸಹಕಾರಿಯಾಗಿದೆ. ಇವು ಜೂನ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗು ಇಲ್ಲಿ ತಂಗಿರುತ್ತವೆ. ಪಕ್ಷಿಧಾಮದಲ್ಲಿ ದೋಣಿ ವಿಹಾರ ವ್ಯವಸ್ಥೆ ಕೂಡ ಇದ್ದು ಪ್ರವಾಸಿಗರು ವಿಹಾರದ ಆನಂದ ಪಡೆಯಬಹುದಾಗಿದೆ. ತಲುಪಲು ಮಾರ್ಗಗಳು: ಶಿವಮೊಗ್ಗ -> ಸಾಗರ -> ಸೊರಬ -> ಗುಡುವಿ, ಅಥವಾ ಶಿರಸಿ -> ಬನವಾಸಿ -> ಸೊರಬ ಮಾರ್ಗ -> ಗುಡುವಿ. ಪಕ್ಷಿಧಾಮ ವೀಕ್ಷಿಸಲು ಪ್ರಶಸ್ತ ಕಾಲ - ಜೂನ್ ನಿಂದ ನವೆಂಬರ್.