ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.ರಾಮದುರ್ಗ ತಾಲೂಕಿನಲ್ಲಿ ಒಟ್ಟಾರೆ ೧೨೮ ಹಳ್ಳಿಗಳಿದ್ದು, ರಾಮದುರ್ಗವು ಸಾಕಷ್ಟು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ.ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಗೊಡಚಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ತೊರಗಲ್ ಗ್ರಾಮದ ಭೂತನಾತೇಶ್ವರ ದೇವಸ್ಥಾನ ತುಂಬಾ ಪ್ರಸಿದ್ದಿ ಹೊಂದಿದ ದೇವಸ್ಥಾನಗಳಾಗಿವೆ. ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಪ್ರಸಿದ್ದಿ ಇವೆ. ಅಷ್ಟೇ ಅಲ್ಲದೇ ಕೊಳ್ಳಗಳಿಗೂ ಹೆಸರುವಾಸಿಯಾದ ತಾಲೂಕು ಇದಾಗಿದೆ.ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹತ್ತಿರ ಇರುವ ಶಬರಿಕೊಳ್ಳ ಮತ್ತು ಸಿದ್ದೇಶ್ವರಕೊಳ್ಳ ನೊಡಲು ಸುಂದರ ಸ್ಥಳಗಳು. ಅಷ್ಟೇ ಅಲ್ಲದೇ ಮುಳ್ಳೂರಿನ ಬಳಿಯ ರಾಮತೀರ್ಥ ಕೊಳ್ಳ, ರಾಮದುರ್ಗದ ಹೂವಿನ ಕೊಳ್ಳ, ಈಶ್ವರಪ್ಪನ ಕೊಳ್ಳ, ಹಳೆ ತೊರಗಲ್ನ ಮೇಗುಂಡೇಶ್ವರಕೊಳ್ಳ, ಇಡಗಲ್ ಗ್ರಾಮದ ಪಡಿಯಪ್ಪನ ಕೊಳ್ಳ ಸುಪ್ರಸಿದ್ಧ ಕೊಳ್ಳಗಳಾಗಿದ್ದು ಕೊಳ್ಳಗಳ ತಾಲೂಕು ಎಂದರೂ ತಪ್ಪಾಗಲಾರದು. ರಾಮದುರ್ಗ ಪಟ್ಟಣವು ಮಲಪ್ರಭಾ ನದಿಯ ದಡದಲ್ಲಿ ಇದೆ. ಹಳೆ ಸೇತುವೆಯ ನದಿ ತೀರದಲ್ಲಿ ರಾಮದುರ್ಗ ಸಂಸ್ಥಾನದ ಪುರಾತನ ಕಾಲದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಇದೆ. ೨೦೦೧ ಜನಗಣತಿ ಪ್ರಕಾರ ರಾಮದುರ್ಗದ ಜನ ಸಂಖ್ಯೆ ೩೧೮೨೨.

ರಾಮದುರ್ಗ
India-locator-map-blank.svg
Red pog.svg
ರಾಮದುರ್ಗ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಳಗಾವಿ
ನಿರ್ದೇಶಾಂಕಗಳು 15.95° N 75.3° E
ವಿಸ್ತಾರ
 - ಎತ್ತರ
೩.೫೭ km²
 - ೫೭೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೩೧೮೩೦
 - ೮೯೧.೯೭/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೯೧ ೧೨೩
 - +೯೧ (೦) ೮೩೩೫೨
 - ಕೆಎ-೨೨
ಅಂತರ್ಜಾಲ ತಾಣ: [http://ರಾಮದುರ್ಗ ತಾಲೂಕ ಭೂಪಟ ರಾಮದುರ್ಗ ತಾಲೂಕ ಭೂಪಟ]

ಧಾರ್ಮಿಕಸಂಪಾದಿಸಿ

ಮೊದಲಿನಿಂದಲೂ ರಾಮದುರ್ಗ ತಾಲೂಕು ಧಾರ್ಮಿಕತೆಗೆ ಹೆಸರುವಾಸಿಯಾದ ತಾಲೂಕುಗಳಲ್ಲಿ ಒಂದಾಗಿದೆ. ಸಂಸ್ಥಾನಕ್ಕೂ ಪೂರ್ವದಲ್ಲಿ ಬದಾಮಿ ಚಾಲುಕ್ಯರು, ರಾಷ್ಟ್ರಕೂಟರೂ, ಕಲ್ಯಾಣದ ಚಾಲುಕ್ಯರು, ಆದಿಲ್ ಷಾಹಿಗಳು, ಮರಾಠರು ಮುಂತಾದವರು ಈ ಪ್ರದೇಶಕ್ಕೆ ತಮ್ಮದೇ ಆದ ಅದ್ಭುತ ವಾಸ್ತು ಶಿಲ್ಪ ರಚಿತ ದೇವಸ್ಥಾನ, ಮಸೀದಿಗಳನ್ನು ಕಟ್ಟಿದ್ದಾರೆ.

ರಾಮದುರ್ಗ ತಾಲೂಕಿನ ಪ್ರಮುಖ ದೇವಸ್ಥಾನಗಳು ೧. ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ೨. ಶ್ರೀ ಜಾನಕಿ ರಾಮೇಶ್ವರ ದೇವಸ್ಥಾನ ೩. ಶ್ರೀ ರಾಘವೇಂದ್ರ ಮಠ ೪. ಶ್ರೀ ಶಂಕರ ಮಠ ೫. ಶ್ರೀ ವಿಠ್ಠಲ ಹರಿಮಂದಿರ ೬. ಶ್ರೀ ಹನುಮಾನ್ ಮಂದಿರ ೭. ಶ್ರೀ ಬನಶಂಕರಿ ಮಂದಿರ ೮. ಶ್ರೀ ಫಲಹಾರೇಶ್ವರ ಮಠ ೯. ಶ್ರೀ ಬನಶಂಕರಿ ದೇವಸ್ಥಾನ ೧೦. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ೧೧. ಶ್ರೀ ಸಂಕಮ್ಮಾದೇವಿ ದೇವಸ್ಥಾನ ೧೨. ಶ್ರೀ ಆದಿಶಕ್ತಿ ದ್ಯಾಮವ್ವ ದೇವಿ ದೇವಸ್ಥಾನ ೧೩. ಶ್ರೀ ಆದಿಶಕ್ತಿ ದುರ್ಗಾಮಾತಾ ದೇವಸ್ಥಾನ ೧೪. ಶ್ರೀ ಅಂಬಾಭವಾನಿ ದೇವಸ್ಥಾನ ೧೫. ಶ್ರೀ ಮಲ್ಲಮ್ಮಾದೇವಿ ದೇವಸ್ಥಾನ ೧೬. ಶ್ರೀ ಗಣಪತಿ ದೇವಸ್ಥಾನ ೧೭. ಶ್ರೀ ಎಚ್ಚರಪ್ಪಜ್ಜನ ದೇವಸ್ಥಾನ ೧೮. ಶ್ರೀ ಶಂಕರಲಿಂಗ ದೇವಸ್ಥಾನ ೧೯. ಶ್ರೀ ವೀರಭದ್ರೇಶ್ವರ ದೇವಸ್ಥಾನ ೨೦. ಶ್ರೀ ರಾಚಣ್ಣಾ ದೇವಸ್ಥಾನ ೨೧. ಶ್ರೀ ನಾಗರಾಜ ದೇವಸ್ಥಾನ

ಸಾಂಸ್ಕೃತಿಕಸಂಪಾದಿಸಿ

 • ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಡಿಸೆ೦ಬರ್) ತಿಂಗಳಲ್ಲಿ ಜರುಗುತ್ತದೆ.
 • ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
 • ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ
 • ಇಡಗಲ್ಲ ಪಡಿಯಪ್ಪಾ ದೇವಾಲಯ ಇಡಗಲ್ಲ
 • ಮಧುಕೇಶ್ವರ ದೇವಾಲಯ ಸಂಗಳ
 • ಸುನ್ನಾಳ ಶ್ರೀ ಧೀರ ಮಾರುತಿ ದೇವಸ್ತಾನ [ರಾಮದುಗಱ ತಾಲ್ಲುಕ]
 • ಅವರಾದಿ ಶ್ರೀ ಫಲಹಾರೇಶ್ವರ ಮಠ
 • ಮುದೇನೂರು ಶ್ರೀ ಲಕ್ಷ್ಮೀ ನಾರಾಯಣ,ದೇವಾಲಯ

ಸಮೀಪದ ಸ್ಥಳಗಳುಸಂಪಾದಿಸಿ

ಅವರಾದಿ ಖಾನಫೇಟ, ತೋರಗಲ, ಬುದುನೂರ, ಬಟಕುರ್ಕಿ, ಕಡಕೋಳ ಸುರೇಬಾನ, ಸುರೇಬಾನ, ಚಂದ್ರಗಿರಿ, ಮತ್ತು ಮುದಕವಿ ಹತ್ತಿರದ ಸ್ಥಳಗಳು.

 • ಗೊಡಚಿ ವೀರಭದ್ರೇಶ್ವರ ದೇವಾಲಯ, ಗೊಡಚಿ
 • ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ, ಸುರೇಬಾನ
 • ಶ್ರೀ ಫಲಹಾರೇಶ್ವರ ಮಠ, ಅವರಾದಿ
 • ಶ್ರೀ ಲಕ್ಷ್ಮೀ-ನಾರಾಯಣ ದೇವಾಲಯ, ಮೂದೇನುರ

ಪ್ರವಾಸಸಂಪಾದಿಸಿ

 • ಶ್ರೀರಾಮೇಶ್ವರಲಿಂಗ ದೇವಸ್ಥಾನ, ಶಿವಗಿರಿ ರಾಮದುರ್ಗ - ಅಶೋಕವನ
 • ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ ಮುದೇನೂರು
 • ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
 • ಶ್ರೀ ಫಲಹಾರೇಶ್ವರ ಮಠ - ಅವರಾದಿ
 • ರಾಮದುರ್ಗ ತಾಲೂಕಿನ ತೊರಗಲ್ ಗ್ರಾಮವು ಒಂದು ಸುಪ್ರಸಿದ್ಧ-ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರಸಿದ್ದ ಏಳು ಸುತ್ತಿನ ಕೋಟೆ ಮತ್ತು ಭೂತನಾಥ ದೇವಾಲಯಗಳು ಜೊತೆಗೆ ಇನ್ನೂ ಅನೇಕ ಸ್ಥಳಗಳು

ಪ್ರವಾಸಿ ಸ್ಥಳಗಳಾಗಿವೆ. ಇದರ ಇನ್ನೊಂದು ವಿಶೇ‌‌ಷತೆಯೆಂದರೆ ಇಲ್ಲಿಯ ಮಹಾರಾಜರು ಇನ್ನೂ ವಾಸವಾಗಿದ್ದಾರೆ.

ವಿಮಾನ ನಿಲ್ದಾಣ ಹಾಗೂ ಬಂದರುಸಂಪಾದಿಸಿ

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣ. ಬೆಳಗಾವಿ ಹತ್ತಿರದ ರೈಲು ನಿಲ್ದಾಣ.

ಕ್ರೀಡಾಂಗಣಸಂಪಾದಿಸಿ

 1. ಕುದುರೆ ಬೈಲ್, ರಾಮದುರ್ಗ
 2. ಬಸವೆಶ್ವರ್ ಕ್ರೀಡಾಂಗಣ, ರಾಮದುರ್ಗ
 3. ಸಾಯಿ ಮೈದಾನ, ರಾಮದುರ್ಗ
 4. ಎಂ.ಎಲ್.ಬಿ.ಸಿ. ಮೈದಾನ, ರಾಮದುರ್ಗ
 5. ಕ್ರೀಡಾಶಾಲೆ, ಚಂದರಗಿ