ಚರಿತ್ರೆ

ಬದಲಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುಮಾರು ೧೬ಕಿ.ಮೀ ದೂರದಲ್ಲಿ ಸವಣೂರು ಎಂಬ ಒಂದು ಪ್ರದೇಶವಿದೆ. ಹಿಂದೆ ಜೈನ ಮುನಿಗಳಿಂದ ,ಶ್ರಾವಕರು ಓದ ತುಂಬಿಕೊಂಡಿದ್ದ ಈ ಊರಿಗೆ ಜೈನ ಪೇಟೆ ಎಂಬ ಹೆಸರಿತ್ತು.ಇಲ್ಲಿ ಅತ್ಯಂತ ಹಳೆಯದಾದ ,ಕಲಾತ್ಮಕವಾದ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಎಲ್ಲರ ಭಕ್ತಿ,ಶ್ರದ್ಧೆ,ನಂಬಿಕೆಗಳಿಗೆ ಪಾತ್ರವಾಗಿದೆ. ಅನೇಕ ಶ್ರವಣರು ಧರ್ಮ ಕಾರ್ಯತತ್ಪರರಾಗಿ ನಾಡು,ನುಡಿ,ಸಂಸ್ಕೃತಿಯನ್ನು ಮೆರೆದರು. ಶ್ರವಣರ ಊರು ಮುಂದೆ "ಸವಣೂರು" ಆಯಿತು.ಒಂದು ದಾಖಲೆಯಂತೆ ಈ ಬಸದಿಗೆ ಒಳಪಡುವ ೧೦೧ ಮನೆಗಳು,೧೦೧ ಬಾವಿಗಳು ಇದ್ದುವು.ಸುತ್ತಲೂ ಕೋಟೆ ದ್ವಾರಗಳಿದ್ದವು.ಆಸುಪಾಸಿನ ಜನ ಕೆಲವು ಬಾವಿಗಳನ್ನು ದುರಸ್ತಿ ಮಾಡಿ ಇಂದಿಗೂ ಬಳಸುತ್ತಿದ್ದಾರೆ.ಹಿಂದೊಮ್ಮೆ ಚಂದ್ರನಾಥ ಬಸದಿ ಸಂಪೂರ್ಣ ಶಿಲಾಮಯಗೊಂಡಿದ್ದು ೧೮೩೭ ರ ಕಲ್ಯಾಣಪ್ಪನ ಕಾಟುಕಾಯಿ ಎಂಬ ದಂಗೆಯ ಸಮಯದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಇದೀಗ ಮಂದಿರದ ಗರ್ಭ ಗುಡಿ ಮಾತ್ರ ಶಿಲಾಮಯವಾಗಿದೆ.

ಜೋಕ್ಲೆನ ಬಸದಿ

ಬದಲಾಯಿಸಿ

ಜೈನ ಪರಂಪರೆಯಲ್ಲಿ ಮಡಿದವರ ಸ್ಮಾರಕವನ್ನು "ನಿಸಿದ್ಧಿ" ಕಲ್ಲುಗಳೆಂದು ಕರೆಯಲಾಗುತ್ತದೆ. ಸವಣೂರಿನಲ್ಲೂ ಒಂದು ನಿಸಿದ್ಧಿ ಕಲ್ಲು ಕಾಣಸಿಗುವುದು. ಇದನ್ನು ಇಲ್ಲಿಯ ಜನ ತುಳು ಭಾಷೆಯಲ್ಲಿ "ಜೋಕ್ಲೆನ ಬಸದಿ" ಅಂದರೆ ಮಕ್ಕಳ ಬಸದಿ ಎಮ್ದು ಕರೆಯುತ್ತಾರೆ.ಮಕ್ಕಳೇ ಸೇರಿ ಈ ಬಸದಿಯನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. ಮಕ್ಕಳ ಬಸದಿಯ ಒಳಗೆ ೩೭೩ ವರ್ಷಗಳ ಹಿಂದಿನ ಶಿಲಾಶಾಸನವನ್ನು ಅಧ್ಯಯನ ಮಾಡಿರುವ ಇ೮ತಿಹಾಸಜ್ನ ವೈ.ಉಮಾನಾಥ ಶೆಣೈ ಅವರು ಈ ಶಾಸನವನ್ನು ಹೊಂಬುಜ ಮಠದ ಶ್ರೀ ದೇವೇಂದ್ರ ತೀರ್ಥ ಸ್ವಾಮಿಗಳ ಆದೇಶಾನುಸಾರ ಶಾಲಿವಾಹನ ಶಕ ೧೫೫೮ ರಲ್ಲಿ ಬರೆಯಲಾಗಿದೆ. ಶ್ರೀ ಮದ್ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಯವರ ಶಿಷ್ಯರಾಗಿದ್ದ ದೇವಣ ಎಂಬವರು ನಿರ್ವಾಣ ಹೊಂದಿದ ಮುನಿ ಮತ್ತುಅವರ ಶಿಷ್ಯರ ಸ್ಮರಣೆ ಹಾಗೂ ಪುಣ್ಯಾರ್ಥವಾಗಿ ಅವರಿಬ್ಬರ ಬಿಂಬಗಳನ್ನು ಮಠಾಧೀಶರ ಹಾರೈಕೆಯಂತೆ ಸ್ಥಾಪಿಸಿ ,ಶಿಲಾಶಾಸನವಾನ್ನು ಮಧ್ಯಯುಗದ ಕನ್ನಡ ಲಿಪಿಯಲ್ಲಿ ಬರೆಸಲಾಗಿದೆ ಎಂದು ಹೇಳಿರುವುದು ಇಲ್ಲಿನ ಇತಿಹಾಸಕ್ಕಿಡಿದ ಕನ್ನಡಿ.

"https://kn.wikipedia.org/w/index.php?title=ಸವಣೂರು&oldid=637508" ಇಂದ ಪಡೆಯಲ್ಪಟ್ಟಿದೆ