ಪ್ರಮೀಳಾ ಜೋಷಾಯ್ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ. ನಾಯಕಿಯಾಗಿ, ಹಾಸ್ಯ ಮತ್ತು ಪೋಷಕ ನಟಿಯಾಗಿ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕೆಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಚಿನ್ನಾ ನಿನ್ನ ಮುದ್ದಾಡುವೆ(೧೯೭೭), ದೇವರೆ ದಿಕ್ಕು(೧೯೭೭), ಸಂಗೀತ(೧೯೮೧), ಆನಂದಸಾಗರ(೧೯೮೩), ತಾಯಿಯ ಆಸೆ(೧೯೮೮), ಮೊಮ್ಮಗ(೧೯೯೭) ಮತ್ತು ತಾಯಿ(೨೦೦೮) ಚಿತ್ರಗಳಲ್ಲಿನ ತಮ್ಮ ಪ್ರಬುದ್ಧ ಅಭಿನಯದಿಂದ ಕನ್ನಡ ಚಿತ್ರರಸಿಕರ ನೆನಪಿನ ಪುಟಗಳಲ್ಲಿ ಸ್ಥಾನ ಪಡೆದಿರುವ ನಟಿ. ಹಾಸ್ಯ, ಗಂಭೀರ, ಭಾವನಾತ್ಮಕ ಹೀಗೆ ಯಾವುದೇ ಪಾತ್ರವಾದರೂ ಜೀವ ತುಂಬ ಬಲ್ಲ ಸಮರ್ಥ ನಟಿ. ವಾಣಿಜ್ಯಿಕ ಚಿತ್ರಗಳೊಂದಿಗೆ ಹೊಸ ಅಲೆಯ ಚಿತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ಅಪರೂಪದ ಕಲಾವಿದೆ [೧] [೨].

ಪ್ರಮೀಳಾ ಜೋಷಾಯ್
ಜನನ
ಪುಷ್ಪಾ ತೆರೆಸಾ

ಹೆಗ್ಗಡದೇವನಕೋಟೆ, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
ವೃತ್ತಿ(ಗಳು)ನಟಿ, ನಿರ್ಮಾಪಕಿ
ಸಕ್ರಿಯ ವರ್ಷಗಳು೧೯೭೨-ಪ್ರಸ್ತುತ
ಸಂಗಾತಿಸುಂದರ್ ರಾಜ್

ಆರಂಭಿಕ ಜೀವನ

ಬದಲಾಯಿಸಿ

ಪ್ರಮೀಳಾ ಜೋಷಾಯ್ ಅವರ ಮೂಲ ಹೆಸರು ಪುಷ್ಪಾ ತೆರೆಸಾ. ಹೆಗ್ಗಡದೇವನಕೋಟೆಯ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಶ್ಯಾಮ್ ಉಮಲ್ ಜೋಷಾಯ್ ಮತ್ತು ಜಯಮ್ಮ ಜೋಷಾಯ್ ದಂಪತಿಯ ಮೂರನೆ ಮಗುವಾಗಿ ಜನಿಸಿದ ಇವರಿಗೆ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಚಿಕ್ಕಂದಿನಲ್ಲಿ ಕ್ಯಾಲೆಂಡರಿನಲ್ಲಿದ್ದ ಪ್ರಖ್ಯಾತ ಅಭಿನೇತ್ರಿ ಭಾರತಿ ಅವರ ಭಾವಚಿತ್ರವನ್ನು ನೋಡಿ ನಟಿಯಾಗಬೇಕೆಂದು ಕನಸು ಕಂಡಿದ್ದರು. ೧೯೭೨ರಲ್ಲಿ ತೆರೆಕಂಡ ಬಂಗಾರದ ಮನುಷ್ಯ ಚಿತ್ರದ ಚಿತ್ರೀಕರಣ ನೋಡಲೆಂದು ಹೋಗಿದ್ದವರು ನಿರ್ದೇಶಕ ಸಿದ್ಧಲಿಂಗಯ್ಯ ಅವರ ಒತ್ತಾಯಕ್ಕೆ ಮಣಿದು ಚಿತ್ರದ ಸನ್ನಿವೇಶವೊಂದರಲ್ಲಿ ಅಭಿನಯಿಸಿದ್ದರು. ಶಾಲಾದಿನಗಳಲ್ಲಿ ನಟಿಸಿದ ನಾಟಕವೊಂದರ ಅಭಿನಯಕ್ಕೆ ಪತ್ರಿಕೆಗಳಿಂದ ಗಳಿಸಿದ ಪ್ರಶಂಸೆ ನಟಿಯಾಗಬೇಕೆಂದು ಕನಸು ಕಂಡಿದ್ದ ಪ್ರಮೀಳಾಗೆ ಇನ್ನಷ್ಟು ಉತ್ತೇಜನ ನೀಡಿತ್ತು. ಮಗಳು ನಟಿಯಾಗುವುದನ್ನು ಆಕ್ಷೇಪಿಸಿದ ತಂದೆ ತಾಯಿಯನ್ನು ಒಪ್ಪಿಸಿ ಚಿತ್ರರಂಗಕ್ಕೆ ಬಂದ ಇವರು ಸಹಧರ್ಮಿಣಿ(೧೯೭೩) ಸೇರಿದಂತೆ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವೃತ್ತಿ ಜೀವನ

ಬದಲಾಯಿಸಿ

ಬೆಳ್ಳಿತೆರೆ

ಬದಲಾಯಿಸಿ

೧೯೭೭ರಲ್ಲಿ ತೆರೆಕಂಡ ಹರಕೆ ಎಂಬ ಹೊಸ ಅಲೆಯ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಪ್ರಮೀಳಾ ದೇವದಾಸಿ ಪದ್ಧತಿಯನ್ನಾಧರಿಸಿ ಚಿತ್ರಿತವಾಗಿದ್ದ ಈ ಚಿತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಚಿತ್ರ ಚಿನ್ನಾ ನಿನ್ನ ಮುದ್ದಾಡುವೆ(೧೯೭೭). ಮೇರುನಟ ವಿಷ್ಣುವರ್ಧನ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ಪತ್ನಿಯನ್ನು ಕಳೆದುಕೊಂಡ ನಾಯಕನ ಎರಡನೆ ಪತ್ನಿಯಾಗಿ, ತನ್ನನ್ನು ದ್ವೇಷಿಸುವ ಪತಿಯ ಮೊದಲ ಪತ್ನಿಯ ಮಗುವನ್ನು ಪ್ರೀತಿಯಿಂದ ಗೆಲ್ಲುವ ಮಮತಾಮಯಿ ತಾಯಿಯಾಗಿ ಶ್ಲಾಘನೀಯ ಅಭಿನಯ ನೀಡಿದ ಪ್ರಮೀಳಾಗೆ ನಾಯಕಿಯ ಪಾತ್ರಕ್ಕೆ ಅನೇಕ ಅವಕಾಶಗಳು ಹುಡುಕಿಕೊಂಡು ಬಂದವು. ದೇವರೆ ದಿಕ್ಕು(೧೯೭೭), ಅನುಬಂಧ(೧೯೭೭) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಜನಪ್ರಿಯತೆ ಗಳಿಸಿ, ಬಳಿಕ ಪೋಷಕಪಾತ್ರಗಳಲ್ಲಿ ನಟಿಸಿದರು.[೩]. ಕೆಲವರ್ಷಗಳು ನಟನೆಯಿಂದ ದೂರವಿದ್ದ ಅವರು ಪುನಃ ಅಭಿನಯಿಸಲು ಆರಂಭಿಸಿದರು.[೪]. ಅವುಗಳಲ್ಲಿ ದ್ವಾರಕೀಶ್ ಅವರ ಪ್ರೀತಿ ಮಾಡು ತಮಾಷೆ ನೋಡು(೧೯೭೯) ಎಂಬ ಬಹುತಾರಾಗಣದ ಹಾಸ್ಯಮಯ ಚಿತ್ರದಲ್ಲಿ ದ್ವಾರಕೀಶ್ ಅವರಿಗೆ ಜೋಡಿಯಾಗಿ ಅಭಿನಯಿಸಿದರು. ಚಿತ್ರ ಯಶಸ್ವಿಯಾಯಿತು. ಆ ನಂತರದಲ್ಲಿ ವರದಕ್ಷಿಣೆ(೧೯೮೦), ದೊಡ್ಡ ಮನೆ ಎಸ್ಟೇಟ್(೧೯೮೦) ಮತ್ತು ಹದ್ದಿನ ಕಣ್ಣು(೧೯೮೦) ಮುಂತಾದ ವಿಭಿನ್ನ ಚಿತ್ರಗಳಲ್ಲಿ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದರು.[೩]. ಪ್ರಮೀಳಾ ಅಭಿನಯದ ಬಹುತೇಕ ಚಿತ್ರಗಳಲ್ಲಿ ಎರಡು ನಾಯಕಿಯರಿರುತ್ತಿದ್ದರು. ಬಂಗಾರದ ಮನೆ(೧೯೮೧), ಸಂಗೀತ(೧೯೮೧), ಸ್ನೇಹದ ಸಂಕೋಲೆ(೧೯೮೨) ಮತ್ತು ಗುಣ ನೋಡಿ ಹೆಣ್ಣು ಕೊಡು(೧೯೮೨) ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು. ಈ ಪೈಕಿ ಚಂದ್ರಶೇಖರ ಕಂಬಾರ ನಿರ್ದೇಶನದ ಸಂಗೀತ ಚಿತ್ರದಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸರ್ಕಾರದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು.

ಪ್ರಮೀಳಾ ಅವರ ಪ್ರತಿಭೆಯನ್ನು ಕೊಂಚ ಮಟ್ಟಿಗೆ ಸಮರ್ಥವಾಗಿ ಬಳಸಿಕೊಂಡ ಚಿತ್ರಗಳೆಂದರೆ ಕಣ್ಣು ತೆರೆಸಿದ ಹೆಣ್ಣು(೧೯೮೨) ಮತ್ತು ಆನಂದಸಾಗರ(೧೯೮೩). ಕಣ್ಣು ತೆರೆಸಿದ ಹೆಣ್ಣು ಚಿತ್ರದಲ್ಲಿ ಸ್ತ್ರೀಯರ ಬಗ್ಗೆ ನಿಕೃಷ್ಟ ಮನೋಭಾವನೆ ಹೊಂದಿರುವ ತಾನು ಮದುವೆಯಾಗುವ ಹುಡುಗನ ಕಣ್ಣು ತೆರೆಸುವ ಹುಡುಗಿಯಾಗಿ ಶಕ್ತ ಅಭಿನಯ ನೀಡಿದ ಪ್ರಮೀಳಾ ಆನಂದಸಾಗರ ಚಿತ್ರದ ಮೊದಲಾರ್ಧದಲ್ಲಿ ಪಾಶ್ಚಾತ್ಯ ಜೀವನ ಶೈಲಿಗೆ ಆಕರ್ಷಿತಳಾಗಿ ತನ್ನ ಕುಟುಂಬವನ್ನು ನಿರ್ಲಕ್ಷ್ಯಿಸಿದ ಉದ್ಯೋಗಸ್ಥ ಮಹಿಳೆಯಾಗಿ ಕೊನೆಯಾರ್ಧದಲ್ಲಿ ಭಾರತೀಯ ಕೌಟುಂಬಿಕ ಜೀವನದ ಮೌಲ್ಯವನ್ನು ಅರಿತು ಬಾಳುವ ಗೃಹಿಣಿಯ ಪಾತ್ರದಲ್ಲಿ ಪರಿಣಾಮಕಾರಿಯಾದ ಅಭಿನಯ ನೀಡಿದ್ದಾರೆ.

ಜಾರಿ ಬಿದ್ದ ಜಾಣ(೧೯೮೦) ಚಿತ್ರದಲ್ಲಿ ನಾಯಕನ ತಂಗಿಯಾಗಿ, ಭಕ್ತ ಸಿರಿಯಾಳ(೧೯೮೦) ಚಿತ್ರದಲ್ಲಿ ಉಡಾಫೆ ವ್ಯಕ್ತಿತ್ವದ ಹುಡುಗಿಯಾಗಿ, ಪಟ್ಟಣಕ್ಕೆ ಬಂದ ಪತ್ನಿಯರು(೧೯೮೦) ಚಿತ್ರದಲ್ಲಿ ದಿಟ್ಟ ಉಪಚಾರಿಕೆಯಾಗಿ, ಸುಖ ಸಂಸಾರಕ್ಕೆ ೧೨ ಸೂತ್ರಗಳು(೧೯೮೪) ಚಿತ್ರದಲ್ಲಿ ನಾಯಕನ ಸಂಸಾರದಲ್ಲಿ ಸಂಶಯಕ್ಕೆ ಕಾರಣಳಾಗುವ ನಾಯಕನ ಅಸಹಾಯಕ ಗೆಳತಿಯಾಗಿ ಹದವರಿತ ಅಭಿನಯ ನೀಡಿದ ಇವರು ತಾಯಿಯ ನುಡಿ(೧೯೮೩) ಮತ್ತು ಲಕ್ಷ್ಮಿ ಕಟಾಕ್ಷ(೧೯೮೫) ಚಿತ್ರಗಳಲ್ಲಿ ಋಣಾತ್ಮಕ ಛಾಯೆಯ ಪಾತ್ರಗಳಲ್ಲೂ ಮಿಂಚಿದ್ದಾರೆ[೧].

ಶಂಕರ್ ನಾಗ್ ಅವರೊಂದಿಗೆ ತಾಳಿಯ ಭಾಗ್ಯ(೧೯೮೪) ಮತ್ತು ಚರಣ್ ರಾಜ್ ಅವರೊಂದಿಗೆ ಪ್ರಳಯ ರುದ್ರ(೧೯೮೫) ಮತ್ತು ನಮ್ಮ ಊರ ದೇವತೆ(೧೯೮೬) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ಪ್ರಮೀಳಾ ಕ್ರಮೇಣ ಪೋಷಕ ಪಾತ್ರಗಳಿಗೆ ಸೀಮಿತರಾದರು.

ಅವನೇ ನನ್ನ ಗಂಡ(೧೯೮೯), ಹೂವು ಹಣ್ಣು(೧೯೯೩), ಪಟ್ಟಣಕ್ಕೆ ಬಂದ ಪುಟ್ಟ(೧೯೯೬), ನೀ ಮುಡಿದ ಮಲ್ಲಿಗೆ(೧೯೯೭) ಮತ್ತು ಮೊಮ್ಮಗ(೧೯೯೭) ಮುಂತಾದ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ. ಮೊಮ್ಮಗ ಚಿತ್ರದಲ್ಲಿ ಇನ್ನೋರ್ವ ಜನಪ್ರಿಯ ನಟಿ ಆಶಾಲತ ಅವರೊಂದಿಗೆ ನೀಡಿದ ಪೈಪೋಟಿಯ ಅಭಿನಯ ಗಮನಾರ್ಹವಾಗಿದೆ. ಈ ನಡುವೆ ತಾಯಿಯ ಆಸೆ(೧೯೮೮), ಅಬಲೆ(೧೯೮೮), ಪ್ರೀತಿಯೇ ನನ್ನ ದೈವ(೧೯೯೧), ಸೆರಗು(೧೯೯೨) ಮತ್ತು ಪ್ರತಿಫಲ(೧೯೯೩) ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರಭಾವಶಾಲಿ ಅಭಿನಯ ನೀಡಿದ್ದಾರೆ. ತಾಯಿಯ ಆಸೆ ಚಿತ್ರದಲ್ಲಿ ವಾತ್ಸಲ್ಯಮಯಿ ತಾಯಿಯಾಗಿ ಅಮೋಘ ಅಭಿನಯ ನೀಡಿದ ಪ್ರಮೀಳಾ ಪ್ರಖ್ಯಾತ ಹಿಂದಿ ನಟ ಪ್ರದೀಪ್ ಕುಮಾರ್ ಮತ್ತು ಕರ್ನಾಟಕ ಮೂಲದ ಹೆಸರಾಂತ ಮರಾಠಿ ನಟಿ ಜಯಶ್ರೀ ಗಡ್ಕರ್ ಮುಖ್ಯ ಭೂಮಿಕೆಯಲ್ಲಿದ್ದ ಅಬಲೆ ಚಿತ್ರದಲ್ಲಿ ದೇವದಾಸಿಯ ಆಂತರ್ಯವನ್ನು ಶಕ್ತವಾಗಿ ಅಭಿವ್ಯಕ್ತಿಸಿದ್ದಾರೆ.

ವಾಣಿಜ್ಯಿಕ ಚಿತ್ರಗಳ ಜೊತೆ ಜೊತೆಗೆ ಹೊಸ ಅಲೆಯ ಚಿತ್ರಗಳಲ್ಲೂ ಕ್ರಿಯಶೀಲರಾಗಿದ್ದ ಪ್ರಮೀಳಾ ಪ್ರಸಿದ್ಧ ಬರಹಗಾರ ಮತ್ತು ಚಿಂತಕ ಬರಗೂರು ರಾಮಚಂದ್ರಪ್ಪ ಅವರ ವಿಶಿಷ್ಠ ಚಿತ್ರಗಳಾದ ಬೆಂಕಿ(೧೯೮೨), ಸೂರ್ಯ(೧೯೮೭), ಕೋಟೆ(೧೯೮೮), ಹಗಲುವೇಷ(೨೦೦೦), ಕ್ಷಾಮ(೨೦೦೩)ಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಸಮರ್ಥವಾಗಿ ಜೀವ ತುಂಬಿದ್ದಾರೆ.

ಪ್ರಮೀಳಾ ವೃತ್ತಿ ಬದುಕಿನ ಮಹೋನ್ನತ ಚಿತ್ರ ತಾಯಿ(೨೦೦೮). ರಷ್ಯನ್ ಲೇಖಕ ಮ್ಯಾಕ್ಸಿಂ ಗಾರ್ಗಿ ಅವರ ಮದರ್ ಎಂಬ ಶ್ರೇಷ್ಠ ಕಾದಂಬರಿಯನ್ನು ಆಧರಿಸಿದ ಈ ಚಿತ್ರವನ್ನು ಸ್ವತಃ ಪ್ರಮೀಳಾ ಅವರೇ ನಿರ್ಮಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿದ್ದು ಪ್ರಮೀಳಾ ಅವರ ನೆಚ್ಚಿನ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು. ಕಾರ್ಮಿಕರ ಪರ ಹೋರಾಟದಲ್ಲಿ ಅಧಿಕಾರಶಾಹಿತ್ವದ ಷಡ್ಯಂತ್ರಕ್ಕೆ ಬಲಿಯಾಗಿ ಜೈಲು ಸೇರುವ ಮಗನ ಬಿಡುಗಡೆಗಾಗಿ ಹಂಬಲಿಸುವ, ಮಗ ಬಿಡುಗಡೆಯಾಗದಿದ್ದಾಗ ಹೋರಾಟವನ್ನು ಮೌನವಾಗಿ ಮುಂದುವರೆಸಿ ಕಾರ್ಮಿಕ ವರ್ಗದ ಜೀವನ ಸುಧಾರಣೆಗೆ ಕಾರಣವಾಗುವ ತಾಯವ್ವನ ಅಂತರಂಗವನ್ನು ತಮ್ಮ ಹೃದಯಸ್ಪರ್ಶಿ ಭಾವಾಭಿನಯ ಮತ್ತು ಹದವರಿತ ಸಂಭಾಷಣಾ ಶೈಲಿಯಿಂದ ಮನೋಜ್ಞವಾಗಿ ಅಭಿವ್ಯಕ್ತಿಸಿದ್ದಾರೆ[೫].

ತಮ್ಮ ಸುಧೀರ್ಘ ವೃತ್ತಿ ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಪ್ರಮೀಳಾ ವಿಷ್ಣುವರ್ಧನ್, ರಾಜೇಶ್, ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ಅಶೋಕ್, ಜೈಜಗದೀಶ್ ಮತ್ತು ಶ್ರೀನಿವಾಸಮೂರ್ತಿಯವರಂತಹ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಎಂ.ಆರ್.ವಿಠಲ್, ಎ.ವಿ.ಶೇಷಗಿರಿ ರಾವ್ ಮತ್ತು ಬರಗೂರು ರಾಮಚಂದ್ರಪ್ಪರಂತಹ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಕಿರುತೆರೆ

ಬದಲಾಯಿಸಿ

ಕನ್ನಡ ಚಲನಚಿತ್ರಗಳಲ್ಲಿ ಉತ್ತಮ ಅವಕಾಶಗಳು ಕಡಿಮೆಯಾದಾಗ ಕಿರುತೆರೆ ಪ್ರವೇಶಿಸಿದ ಪ್ರಮೀಳಾ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತಿರುಗುಬಾಣ, ಭಾಗ್ಯಚಕ್ರ, ಆಸೆಗಳು ಮತ್ತು ಸ್ಪಂದನ ಇವರು ಅಭಿನಯಿಸಿದ ಪ್ರಮುಖ ಧಾರಾವಾಹಿಗಳು.

ವೈಯಕ್ತಿಕ ಜೀವನ

ಬದಲಾಯಿಸಿ

ಕನ್ನಡ ಚಲನಚಿತ್ರ ಮತ್ತು ರಂಗ ನಟ ಸುಂದರ್ ರಾಜ್ ಅವರನ್ನು ಪ್ರೀತಿಸಿ ಮದುವೆಯಾದ ಪ್ರಮೀಳಾ ಅವರ ಒಬ್ಬಳೇ ಮಗಳು, ನಟಿ ಮೇಘನ ರಾಜ್.

ಪ್ರಶಸ್ತಿ/ಪುರಸ್ಕಾರ

ಬದಲಾಯಿಸಿ
  • ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ - ಸಂಗೀತಾ(೧೯೮೨)
  • ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರಪ್ರಶಸ್ತಿ - ತಾಯಿ(೨೦೦೫)

ಚಿತ್ರಗಳ ಪಟ್ಟಿ

ಬದಲಾಯಿಸಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೬ ಕನಸು ನನಸು ಅಮೃತಂ ಶ್ರೀನಾಥ್, ಮಂಜುಳಾ
೧೯೭೭ ತಾಯಿಗಿಂತ ದೇವರಿಲ್ಲ ವೈ.ಆರ್.ಸ್ವಾಮಿ ಜಯಂತಿ, ಶ್ರೀನಾಥ್, ಮಂಜುಳಾ
೧೯೭೭ ಚಿನ್ನಾ ನಿನ್ನ ಮುದ್ದಾಡುವೆ ಎ.ಎಂ.ಸಮೀಯುಲ್ಲಾ ವಿಷ್ಣುವರ್ಧನ್, ಜಯಂತಿ
೧೯೭೭ ದೇವರೆ ದಿಕ್ಕು ಬಸವರಾಜ್ ಕೆಸ್ತೂರ್ ಭಾರತಿ, ರಾಮ್ ಗೋಪಾಲ್, ಜಯಸಿಂಹ
೧೯೭೭ ಸಹೋದರರ ಸವಾಲ್ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ರಜನೀಕಾಂತ್, ಕವಿತಾ, ಭವಾನಿ
೧೯೭೭ ಹರಕೆ ನಾಗೇಶ್ ರೂಪೇಶ್ ಕುಮಾರ್
೧೯೭೮ ತಪ್ಪಿದ ತಾಳ ಕೆ.ಬಾಲಚಂದರ್ ರಜನೀಕಾಂತ್, ಸರಿತಾ, ಕಮಲ್ ಹಾಸನ್
೧೯೭೯ ಅತ್ತೆಗೆ ತಕ್ಕ ಸೊಸೆ ವೈ.ಆರ್.ಸ್ವಾಮಿ ಮಾನು, ರೇಖಾ ರಾವ್, ಗಂಗಾಧರ್, ಶ್ರೀಲಲಿತ
೧೯೭೯ ನಾನಿರುವುದೆ ನಿನಗಾಗಿ ಎ.ವಿ.ಶೇಷಗಿರಿ ರಾವ್ ವಿಷ್ಣುವರ್ಧನ್, ಆರತಿ, ದೀಪಾ
೧೯೭೯ ಪ್ರೀತಿ ಮಾಡು ತಮಾಷೆ ನೋಡು ಸಿ.ವಿ.ರಾಜೇಂದ್ರನ್ ಶ್ರೀನಾಥ್, ಶಂಕರ್ ನಾಗ್, ದ್ವಾರಕೀಶ್, ಮಂಜುಳಾ, ಪದ್ಮಪ್ರಿಯ
೧೯೭೯ ವಿಜಯ್ ವಿಕ್ರಮ್ ವಿ.ಸೋಮಶೇಖರ್ ವಿಷ್ಣುವರ್ಧನ್, ಜಯಂತಿ
೧೯೮೦ ಕಪ್ಪುಕೊಳ ನಾಗೇಶ್ ಅಶೋಕ್, ಜಯಮಾಲ
೧೯೮೦ ಜಾರಿ ಬಿದ್ದ ಜಾಣ ವೈ.ಆರ್.ಸ್ವಾಮಿ ಲೋಕೇಶ್, ಜಯಂತಿ, ಶ್ರೀನಿವಾಸಮೂರ್ತಿ, ಅಶೋಕ್, ರೇಖಾ ರಾವ್
೧೯೮೦ ದೊಡ್ಡ ಮನೆ ಎಸ್ಟೇಟ್ ಸಿ.ಚಂದ್ರಶೇಖರ್ ಮಾನು, ಶ್ರೀಲಲಿತ
೧೯೮೦ ಪಟ್ಟಣಕ್ಕೆ ಬಂದ ಪತ್ನಿಯರು ಎ.ವಿ.ಶೇಷಗಿರಿ ರಾವ್ ಶ್ರೀನಾಥ್, ಮಂಜುಳಾ, ಲೋಕೇಶ್, ಪದ್ಮಪ್ರಿಯ
೧೯೮೦ ಬಂಗಾರದ ಜಿಂಕೆ ನಾಗಾಭರಣ ವಿಷ್ಣುವರ್ಧನ್, ಭಾರತಿ, ಆರತಿ
೧೯೮೦ ಮೂಗನ ಸೇಡು ಬಿ.ಸುಬ್ಬರಾವ್ ಶಂಕರ್ ನಾಗ್, ಮಂಜುಳಾ
೧೯೮೦ ವರದಕ್ಷಿಣೆ ಎಂ.ಆರ್.ವಿಠಲ್ ಅಶೋಕ್, ಹೇಮಾ ಚೌಧರಿ
೧೯೮೦ ಹದ್ದಿನ ಕಣ್ಣು ಎ.ವಿ.ಶೇಷಗಿರಿ ರಾವ್ ಶ್ರೀನಾಥ್, ಮಂಜುಳಾ, ಶಂಕರ್ ನಾಗ್, ಲೋಕೇಶ್
೧೯೮೧ ಬಂಗಾರದ ಮನೆ ಬಸವರಾಜ್ ಕೆಸ್ತೂರ್ ಶ್ರೀನಾಥ್, ಅಶೋಕ್, ರೋಜಾರಮಣಿ
೧೯೮೧ ಸಂಗೀತ ಚಂದ್ರಶೇಖರ ಕಂಬಾರ ಲೋಕೇಶ್, ಜಯಮಾಲ, ಮಾನು
೧೯೮೨ ಕಣ್ಣು ತೆರೆಸಿದ ಹೆಣ್ಣು ಕೆ.ಮಣಿಮುರುಗನ್ ಆರತಿ, ಅಶೋಕ್, ಟೈಗರ್ ಪ್ರಭಾಕರ್
೧೯೮೨ ಕಳಸಾಪುರದ ಹುಡುಗರು ವಿ.ಎಲ್.ಆಚಾರ್ಯ ಎಂ.ವಿ.ವಾಸುದೇವ ರಾವ್
೧೯೮೨ ಗುಣ ನೋಡಿ ಹೆಣ್ಣು ಕೊಡು ಎ.ವಿ.ಶೇಷಗಿರಿ ರಾವ್ ಶ್ರೀನಾಥ್, ಮಂಜುಳಾ, ಜೈಜಗದೀಶ್
೧೯೮೨ ಸ್ನೇಹದ ಸಂಕೋಲೆ ಎ.ಕಾಶಿಲಿಂಗಂ ಶ್ರೀನಾಥ್, ಮಂಜುಳಾ, ಅಂಬರೀಶ್
೧೯೮೩ ಆನಂದಸಾಗರ ಆರ್.ತ್ಯಾಗರಾಜನ್ ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ಆರತಿ, ಜೈಜಗದೀಶ್
೧೯೮೩ ತಾಯಿಯ ನುಡಿ ಬಿ.ಸುಬ್ಬರಾವ್ ಕಲ್ಯಾಣ್ ಕುಮಾರ್, ಆರತಿ
೧೯೮೩ ದಂಪತಿಯರು ಎಚ್.ಪಿ.ಪ್ರಕಾಶ್ ಟಿ.ಜನಾರ್ಧನ್
೧೯೮೩ ಬ್ಯಾಂಕರ್ ಮಾರ್ಗಯ್ಯ ಟಿ.ಎಸ್,ನಾಗಾಭರಣ ಲೋಕೇಶ್, ಜಯಂತಿ, ಸುಂದರ್ ರಾಜ್
೧೯೮೩ ಮನೆಗೆ ಬಂದ ಮಹಾಲಕ್ಷ್ಮಿ ಗೀತಪ್ರಿಯ ಅಶೋಕ್, ಮಂಜುಳಾ, ಚರಣ್ ರಾಜ್, ಪ್ರಭಾ
೧೯೮೩ ಮುತ್ತೈದೆ ಭಾಗ್ಯ ಎನ್.ಚಂದ್ರಶೇಖರ್ ಶರ್ಮ ಟೈಗರ್ ಪ್ರಭಾಕರ್, ಆರತಿ
೧೯೮೩ ಸಮರ್ಪಣೆ ಭಾರ್ಗವ ಆರತಿ, ರಾಜೀವ್, ಜೈಜಗದೀಶ್
೧೯೮೩ ಸಿಂಹಾಸನ ಸಿ.ಆರ್.ಸಿಂಹ ಅನಂತ್ ನಾಗ್, ಟೈಗರ್ ಪ್ರಭಾಕರ್
೧೯೮೪ ತಾಳಿಯ ಭಾಗ್ಯ ವಿಜಯ್ ಶಂಕರ್ ನಾಗ್, ಲಕ್ಷ್ಮಿ
೧೯೮೪ ಪ್ರೇಮವೇ ಬಾಳಿನ ಬೆಳಕು ಎ.ವಿ.ಶೇಷಗಿರಿ ರಾವ್ ಅನಂತ್ ನಾಗ್, ಆರತಿ, ಜಯಮಾಲ
೧೯೮೪ ಸುಖ ಸಂಸಾರಕ್ಕೆ ೧೨ ಸೂತ್ರಗಳು ರಾಜಚಂದ್ರ ಅನಂತ್ ನಾಗ್, ಗಾಯತ್ರಿ, ಸಿ.ಆರ್.ಸಿಂಹ, ಶಕುಂತಲಾ
೧೯೮೪ ಹುಲಿ ಹೆಜ್ಜೆ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ವಿಜಯಲಕ್ಷ್ಮಿ ಸಿಂಗ್
೧೯೮೫ ಪ್ರಳಯ ರುದ್ರ ಪಿ.ಎಸ್.ಪ್ರಕಾಶ್ ಟೈಗರ್ ಪ್ರಭಾಕರ್, ಜಯಮಾಲ, ಚರಣ್ ರಾಜ್
೧೯೮೫ ಭಯಂಕರ ಭಸ್ಮಾಸುರ ಸಿ.ಎಸ್.ರಾವ್ ಉದಯಕುಮಾರ್, ಅಶೋಕ್, ಮಂಜುಳಾ
೧೯೮೫ ಲಕ್ಷ್ಮಿ ಕಟಾಕ್ಷ ಬಿ.ಸುಬ್ಬರಾವ್ ಕಲ್ಯಾಣ್ ಕುಮಾರ್, ಆರತಿ, ರಾಜೀವ್, ಶ್ರೀನಿವಾಸಮೂರ್ತಿ
೧೯೮೬ ಈ ಜೀವ ನಿನಗಾಗಿ ವಿ.ಸೋಮಶೇಖರ್ ವಿಷ್ಣುವರ್ಧನ್, ಊರ್ವಶಿ
೧೯೮೬ ತಾಳಿಯ ಆಣೆ ಡಿ.ರಾಜೇಂದ್ರ ಬಾಬು ಭಾರತಿ, ಟೈಗರ್ ಪ್ರಭಾಕರ್
೧೯೮೬ ನಮ್ಮ ಊರ ದೇವತೆ ರೇಣುಕಾ ಶರ್ಮ ಭಾರತಿ, ಚರಣ್ ರಾಜ್, ವಿನೋದ್ ಕುಮಾರ್, ಭವ್ಯ
೧೯೮೬ ಮೃಗಾಲಯ ವಿ.ಸೋಮಶೇಖರ್ ಅಂಬರೀಶ್, ಗೀತಾ
೧೯೮೭ ಲಾರಿ ಡ್ರೈವರ್ ಪೇರಾಲ ಶಂಕರ್ ನಾಗ್, ಭವ್ಯ
೧೯೮೭ ಶುಭಮಿಲನ ಭಾರ್ಗವ ವಿಷ್ಣುವರ್ಧನ್, ಅಂಬಿಕಾ
೧೯೮೭ ಸೂರ್ಯ ಬರಗೂರು ರಾಮಚಂದ್ರಪ್ಪ ಲೋಕೇಶ್, ರೋಹಿಣಿ ಹಟ್ಟಂಗಡಿ
೧೯೮೮ ಕೋಟೆ ಬರಗೂರು ರಾಮಚಂದ್ರಪ್ಪ ತಾರಾ, ಸುಂದರ್ ರಾಜ್, ಮಾನು
೧೯೮೮ ತಾಯಿಯ ಆಸೆ ರಾಜ್ ಕಿಶೋರ್ ರಾಜೇಶ್, ವಿನೋದ್ ಆಳ್ವ, ಭವ್ಯ
೧೯೮೮ ಭೂಮಿ ತಾಯಾಣೆ ರಾಜ್ ಕಿಶೋರ್ ವಿನೋದ್ ಆಳ್ವ, ಭವ್ಯ
೧೯೮೮ ಶ್ರೀ ವೆಂಕಟೇಶ್ವರ ಮಹಿಮೆ ಅನಿಲ್ ಬೈಂದೂರ್ ಅನಂತ್ ನಾಗ್, ಸರಿತಾ
೧೯೮೯ ಅದೇ ರಾಗ ಅದೇ ಹಾಡು ಎಂ.ಎಸ್.ರಾಜಶೇಖರ್ ಶಿವರಾಜ್ ಕುಮಾರ್, ಸೀಮಾ, ಶ್ರೀನಾಥ್
೧೯೮೯ ಅವನೇ ನನ್ನ ಗಂಡ ಎಸ್.ಉಮೇಶ್-ಕೆ.ಪ್ರಭಾಕರ್ ಕಾಶಿನಾಥ್, ಸುಧಾರಾಣಿ
೧೯೮೯ ಮಾಧುರಿ ಕೆ.ವಿ.ಜಯರಾಮ್ ಗೀತಾ, ವಿನೋದ್ ಆಳ್ವ
೧೯೯೦ ಪ್ರಥಮ ಉಷಾಕಿರಣ ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್, ಗೀತಾ, ಗಿರೀಶ್ ಕಾರ್ನಾಡ್
೧೯೯೦ ಶ್ರೀ ಸತ್ಯನಾರಾಯಣ ಪೂಜಾಫಲ ಎನ್.ಎಸ್.ಧನ್ಂಜಯ ಕಲ್ಯಾಣ್ ಕುಮಾರ್, ರಾಜೇಶ್, ಜಯಂತಿ
೧೯೯೧ ಪ್ರೀತಿಯೇ ನನ್ನ ದೈವ ಜೆ.ಅಮ್ಜದ್ ಜೆ.ಅಮ್ಜದ್, ಕನ್ಯಾ, ಸುಂದರ್ ರಾಜ್
೧೯೯೨ ಚಿತ್ರಲೇಖಾ ವಿ.ಸೋಮಶೇಖರ್ ದೇವರಾಜ್, ಶ್ರುತಿ
೧೯೯೨ ಸೆರಗು ವಿ.ರಾಜ್ ಗೋಪಾಲ್ ಧೀರೆಂದ್ರ ಗೋಪಾಲ್, ಜಯಮ್ಮ, ಉಮಾಶ್ರೀ
೧೯೯೩ ಕೆಂಪಯ್ಯ ಐ.ಪಿ.ಎಸ್. ವಿ.ಸೋಮಶೇಖರ್ ಶಶಿಕುಮಾರ್, ರಂಭಾ, ಶ್ರೀಶಾಂತಿ
೧೯೯೩ ಚಿರಬಾಂಧವ್ಯ ಎಂ.ಎಸ್.ರಾಜಶೇಖರ್ ಶಿವರಾಜ್ ಕುಮಾರ್, ಶುಭಾಶ್ರೀ
೧೯೯೩ ಪ್ರತಿಫಲ ಎನ್.ಎಸ್.ಧನಂಜಯ, ಶಂಕರನ್ ನಾಯರ್ ಶ್ರೀನಾಥ್, ಆರ್.ಎನ್.ಸುದರ್ಶನ್, ವಿನ್ಸೆಂಟ್, ವಿಜಯರಂಜಿನಿ
೧೯೯೩ ಭಗವಾನ್ ಶ್ರೀ ಸಾಯಿಬಾಬ ಸಾಯಿಪ್ರಕಾಶ್ ಸಾಯಿಪ್ರಕಾಶ್, ಪಂಢರೀಬಾಯಿ, ಮೈನಾವತಿ, ಸುಧಾರಾಣಿ, ತಾರಾ
೧೯೯೩ ಹೂವು ಹಣ್ಣು ಎಸ್.ವಿ.ರಾಜೇಂದ್ರ ಸಿಂಗ ಬಾಬು ಲಕ್ಷ್ಮಿ
೧೯೯೪ ಇಂಧ್ರನ ಗೆದ್ದ ನರೇಂದ್ರ ಸಾಯಿಪ್ರಕಾಶ್ ಜಗ್ಗೇಶ್, ಶ್ರೀಶಾಂತಿ
೧೯೯೪ ಕರುಳಿನ ಕೂಗು ಡಿ.ರಾಜೇಂದ್ರ ಬಾಬು ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್
೧೯೯೪ ಭೈರವ ರಾಜ್ ಕಿಶೋರ್ ಜಗ್ಗೇಶ್, ನಂದಿನಿ ಸಿಂಗ್
೧೯೯೪ ಹಾಲುಂಡ ತವರು ಡಿ.ರಾಜೇಂದ್ರ ಬಾಬು ವಿಷ್ಣುವರ್ಧನ್, ಸಿತಾರ
೧೯೯೪ ಇಂಧ್ರನ ಗೆದ್ದ ನರೇಂದ್ರ ಸಾಯಿಪ್ರಕಾಶ್ ಜಗ್ಗೇಶ್, ಶ್ರೀಶಾಂತಿ
೧೯೯೫ ಕೊಟ್ರೇಶಿ ಕನಸು ನಾಗತಿಹಳ್ಳಿ ಚಂದ್ರಶೇಖರ್ ವಿಜಯ ರಾಘವೇಂದ್ರ, ಉಮಾಶ್ರೀ, ಕರಿ ಬಸವಯ್ಯ
೧೯೯೫ ತುಂಬಿದ ಮನೆ ಎಸ್.ಉಮೇಶ್ ವಿಷ್ಣುವರ್ಧನ್, ವಿನಯಾ ಪ್ರಸಾದ್
೧೯೯೫ ಪೋಲಿಸ್ ಪವರ್ ಯೋಗೀಶ್ ಹುಣಸೂರ್ ದೇವರಾಜ್, ಪ್ರೇಮಾ
೧೯೯೫ ಶುಭಲಗ್ನ ಕೃಷ್ಣಮೂರ್ತಿ ಶಶಿಕುಮಾರ್, ಶ್ರುತಿ, ನಂದಿನಿ ಸಿಂಗ್
೧೯೯೫ ಹೊಸ ಬದುಕು ಬಿ.ಪರಮೇಶ್ವರ್ ಭವ್ಯ, ರಾಮಕೃಷ್ಣ, ರಾಮ್ ಕುಮಾರ್
೧೯೯೬ ಅಣ್ಣಾವ್ರ ಮಕ್ಕಳು ಫಣಿ ರಾಮಚಂದ್ರ ಶಿವರಾಜ್ ಕುಮಾರ್, ಮಹೇಶ್ವರಿ
೧೯೯೬ ಪಟ್ಟಣಕ್ಕೆ ಬಂದ ಪುಟ್ಟ ಬಲರಾಮ್ ಜಗ್ಗೇಶ್, ಶುಭಾಶ್ರೀ, ರಾಜೇಶ್, ಶ್ರೀನಾಥ್
೧೯೯೭ ಅಕ್ಕ ರಾಜ್ ಕಿಶೋರ್ ಮಾಲಾಶ್ರೀ, ಅರುಣ್ ಪಾಂಡ್ಯನ್, ಪ್ರಮೋದ್ ಚಕೃವರ್ತಿ
೧೯೯೭ ಚೆಲುವ ರವಿಚಂದ್ರನ್ ರವಿಚಂದ್ರನ್, ಗೌತಮಿ, ಮೀನಾ
೧೯೯೭ ನೀ ಮುಡಿದ ಮಲ್ಲಿಗೆ ಕೂಡ್ಲು ರಾಮಕೃಷ್ಣ ರಾಮ್ ಕುಮಾರ್, ಕುಮಾರ್ ಗೋವಿಂದ್, ಭಾವನಾ, ನಿವೇದಿತಾ ಜೈನ್
೧೯೯೭ ಮೊಮ್ಮಗ ರವಿಚಂದ್ರನ್ ರವಿಚಂದ್ರನ್, ಮೀನಾ, ಉಮಾಶ್ರೀ, ಅಶಾಲತ
೧೯೯೭ ಮಂಗಳ ಸೂತ್ರ ಸಿ.ಎ‍ಚ್.ಬಾಲಾಜಿ ಸಿಂಗ್ ವಿಷ್ಣುವರ್ಧನ್, ವಿನಯಾ ಪ್ರಸಾದ್, ಪ್ರಿಯಾ ರಾಮನ್
೧೯೯೭ ಲಕ್ಷ್ಮಿ ಮಹಾಲಕ್ಷ್ಮಿ ಯೋಗೀಶ್ ಹುಣಸೂರ್ ಚಿಪ್ಪಿ, ಶ್ವೇತಾ, ಶಶಿಕುಮಾರ್, ಅಭಿಜಿತ್
೧೯೯೮ ಜೈದೇವ್ ಎಚ್.ವಾಸುದೇವ್ ಜಗ್ಗೇಶ್, ಚಾರುಲತಾ, ಶ್ರೀನಾಥ್
೨೦೦೦ ಅಸ್ತ್ರ ಆನಂದ್ ಪಿ.ರಾಜು ದೇವರಾಜ್, ಬಿ.ಸಿ.ಪಾಟಿಲ್, ರಾಗಸುಧಾ
೨೦೦೦ ನಾಗ ದೇವತೆ ಸಾಯಿಪ್ರಕಾಶ್ ಸೌಂದರ್ಯ, ಸಾಯಿಕುಮಾರ್, ಪ್ರೇಮಾ
೨೦೦೦ ನನ್ನವಳು ನನ್ನವಳು ಎಸ್.ನಾರಾಯಣ್ ಎಸ್.ನಾರಾಯಣ್, ಪ್ರೇಮಾ
೨೦೦೦ ಹಗಲುವೇಷ ಬರಗೂರು ರಾಮಚಂದ್ರಪ್ಪ ಶಿವರಾಜ್ ಕುಮಾರ್, ರೇಷ್ಮಾ, ತಾರಾ
೨೦೦೧ ಮಂಜು ದ್ವಾರಕೀಶ್ ಶರತ್ ಬಾಬು, ಪ್ರಕಾಶ್ ರಾಜ್
೨೦೦೧ ವಿಶಾಲಾಕ್ಷಮ್ಮನ ಗಂಡ ರಾಜ್ ಕಿಶೋರ್ ಎಸ್.ನಾರಾಯಣ್, ಅನು ಪ್ರಭಾಕರ್
೨೦೦೨ ದಿಲ್ ಸತ್ಯ ವಿನೋದ್ ಪ್ರಭಾಕರ್, ಶ್ರೀದೇವಿ ಬಳ್ಳಾರಿ
೨೦೦೨ ಹತ್ತೂರ ಒಡೆಯ ಬಿ.ಸಿ.ಪಾಟಿಲ್ ಬಿ.ಸಿ.ಪಾಟಿಲ್, ಸಾಂಘವಿ
೨೦೦೩ ಒಂದಾಗೋಣ ಬಾ ಕೆ.ಆರ್.ಉದಯಶಂಕರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ
೨೦೦೩ ಕ್ಷಾಮ ಬರಗೂರು ರಾಮಚಂದ್ರಪ್ಪ ಕುಮಾರ್ ಗೋವಿಂದ್, ಭಾವನಾ, ಸುಂದರ್ ರಾಜ್
೨೦೦೩ ನೀನಂದ್ರೆ ಇಷ್ಟ ಬಿ.ಮಲ್ಲೇಶ್ ದರ್ಶನ್, ಹರೀಶ್ ರಾಜ್ಮಾಳವಿಕಾ
೨೦೦೩ ರೀ ಸ್ವಲ್ಪ ಬರ್ತೀರ ಮಹಮದ್ ಗೌಸ್ ಶಶಿಕುಮಾರ್, ಕೌಸಲ್ಯ
೨೦೦೩ ಸ್ವಾತಿ ಮುತ್ತು ಡಿ.ರಾಜೇಂದ್ರ ಬಾಬು ಸುದೀಪ್, ಮೀನಾ
೨೦೦೪ ಆಪ್ತಮಿತ್ರ ಪಿ.ವಾಸು ವಿಷ್ಣುವರ್ಧನ್, ಸೌಂದರ್ಯ, ಪ್ರೇಮಾ, ರಮೇಶ್ ಅರವಿಂದ್, ದ್ವಾರಕೀಶ್
೨೦೦೪ ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಈಶ್ವರ್ ಬಳೆಗುಂಡಿ ಸಿ.ಪಿ.ಯೋಗೇಶ್ವರ್, ಅನು ಪ್ರಭಾಕರ್
೨೦೦೪ ಭಗತ್ ಆನಂದ್ ಪಿ.ರಾಜು ಸ್ವಪ್ನ, ಥ್ರಿಲ್ಲರ್ ಮಂಜು
೨೦೦೫ ಅಣ್ಣ ತಂಗಿ ಸಾಯಿಪ್ರಕಾಶ್ ಶಿವರಾಜ್ ಕುಮಾರ್, ರಾಧಿಕಾ
೨೦೦೫ ಕಾಶಿ ಸಾಯಿಪ್ರಕಾಶ್ ಸುದೀಪ್, ರಕ್ಷಿತಾ
೨೦೦೫ ಮಹಾಸಾಧ್ವಿ ಮಲ್ಲಮ್ಮ ಯೋಗೀಶ್ ಹುಣಸೂರ್ ಮೀನಾ, ಸಾಯಿಕುಮಾರ್, ಶ್ರೀಧರ್
೨೦೦೫ ಲವ್ ಸ್ಟೋರಿ ಭಾರತಿ ಕಣ್ಣನ್ ಮಯೂರ್ ಪಟೇಲ್, ತನು ರಾಯ್
೨೦೦೫ ವರ್ಷ ಎಸ್.ನಾರಾಯಣ್ ವಿಷ್ಣುವರ್ಧನ್, ಮಾನ್ಯ, ಅನು ಪ್ರಭಾಕರ್, ರಮೇಶ್ ಅರವಿಂದ್
೨೦೦೬ ದೇಸಿ ನಿಖಿ ಮಂಜು ಮಣಿ, ಅನನ್ಯ ಕಾಸರವಳ್ಳಿ
೨೦೦೬ ಶಿಷ್ಯ ವಿ.ವಾಸು ದೀಪಕ್, ಚೈತ್ರಾ ಹಳ್ಳಿಕೆರೆ
೨೦೦೬ ಹೆತ್ತವರ ಕನಸು ಸಾಯಿಪ್ರಕಾಶ್ ಮಯೂರ್ ಪಟೇಲ್, ರಾಧಿಕಾ
೨೦೦೭ ನಾನು ನೀನು ಜೋಡಿ ನಂಜುಂಡೇ ಗೌಡ ವಿಜಯ ರಾಘವೇಂದ್ರ, ಮಧುಮಿತಾ
೨೦೦೭ ಶ್ರೀ ದಾನಮ್ಮ ದೇವಿ ಚಿಂದೋಡಿ ಬಂಗಾರೇಶ್ ಅನು ಪ್ರಭಾಕರ್, ಶಿವಧ್ವಜ್
೨೦೦೮ ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ ಬಿ.ಎ.ಓಂಕಾರ್ ಶ್ರೀನಿವಾಸಮೂರ್ತಿ, ಶ್ರೀಧರ್, ತಾರಾ
೨೦೦೮ ತಾಯಿ ಬರಗೂರು ರಾಮಚಂದ್ರಪ್ಪ ಕುಮಾರ್ ಗೋವಿಂದ್, ಶ್ರೀನಿವಾಸಮೂರ್ತಿ
೨೦೦೮ ನಾನು ಗಾಂಧಿ ನಂಜುಂಡೇ ಗೌಡ ಮಾಸ್ಟರ್ ಲಿಖಿತ್
೨೦೦೮ ಮೂರನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯ ಸಾಯಿ ಸಾಗರ್ ಅರ್ಜುನ್, ಅಶ್ವಿನಿ
೨೦೦೯ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಮಹಮದ್ ಗೌಸ್ ಕೋಮಲ್ ಕುಮಾರ್, ನಿಧಿ ಸುಬ್ಬಯ್ಯ
೨೦೦೯ ಮ್ಯಾಡ್ ಲವ್ ತೇಜ ರಾಮು, ರವೀನಾ
೨೦೧೦ ನಾ ರಾಣಿ ನೀ ಮಹಾರಾಣಿ ಬಿ.ರಾಮಮೂರ್ತಿ ಪೂಜಾ ಗಾಂಧಿ, ಅಕ್ಷಯ್, ಶಾಶ್ವತ್
೨೦೧೦ ಶಬರಿ ಬರಗೂರು ರಾಮಚಂದ್ರಪ್ಪ ಕಿಶೋರ್, ಹಂಸ, ಸುಂದರ್ ರಾಜ್

[೬]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ಪ್ರಮೀಳಾ ಪುಟಗಳಲಿ..." ಪ್ರಜಾವಾಣಿ. Archived from the original on 2021-04-21. Retrieved 2015-12-24.
  2. "ಪ್ರಮೀಳಾ ಜೋಷಾಯ್". ಚಿಲೋಕ.ಕಾಮ್.
  3. ೩.೦ ೩.೧ "ಬರಿಗಾಲಿನಿಂದ ಬೆಳ್ಳಿಹೆಜ್ಜೆಗೆ..." ಪ್ರಜಾವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
  4. "ಕನ್ನಡಿಗರಿಗೆ ಹ್ಯಾಟ್ಸ್‌ಆಫ್". ಕನ್ನಡಪ್ರಭ.[ಶಾಶ್ವತವಾಗಿ ಮಡಿದ ಕೊಂಡಿ]
  5. "Thaayi Movie Review - Memorable mother". ಇಂಡಿಯಾಗ್ಲಿಟ್ಜ್.ಕಾಮ್.
  6. "ಪ್ರವೀಳಾ ಜೋಷಾಯ್ ಅಭಿನಯದ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.