ರಮೇಶ್ ಅರವಿಂದ್
ರಮೇಶ್ ಅರವಿಂದ್(ಜನನ ೧೧ ಸಪ್ಟೆಂಬರ್ ೧೯೬೪೪) ಒಬ್ಬ ಭಾರತದ ನಟ, ನಿರ್ದೇಶಕ ಮತ್ತು ನಿರೂಪಕ.ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ.
ರಮೇಶ್ ಅರವಿಂದ್ | |
---|---|
![]() ರಮೇಶ್ ಅರವಿಂದ್ | |
ಜನನ | ಕುಂಭಕೋಣಂ, ತಮಿಳು ನಾಡು, ಭಾರತ | ೧೧ ಸೆಪ್ಟೆಂಬರ್ ೧೯೬೪
ಉದ್ಯೋಗ | ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ನಿರೂಪಕ |
ಸಕ್ರಿಯ ವರ್ಷಗಳು | 1989– |
ಜೀವನ ಸಂಗಾತಿ | ಅರ್ಚನ ರಮೇಶ್ |
ಮಕ್ಕಳು | 2 |
ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ವೈಯಕ್ತಿಕ ಜೀವನ ಸಂಪಾದಿಸಿ
ಇವರು ಅರ್ಚನ ಅವರನ್ನು ವಿವಾಹವಾಗಿದ್ದಾರೆ ಹಾಗು ಅವರು ಒಬ್ಬಳು ಪುತ್ರಿ (ನಿಹಾರಿಕಾ) ಮತ್ತು ಮಗನನ್ನು (ಅರ್ಜುನ್) ಪಡೆದಿದ್ದಾರೆ.[೧]
ವೃತ್ತಿ ಜೀವನ ಸಂಪಾದಿಸಿ
ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ನಟ. ಇದರ ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಆಪ್ತಮಿತ್ರ, ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ ಮತ್ತು ಅಮೃತವರ್ಷಿಣಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪಾತ್ರಕ್ಕೆ ೨ ಫಿಲ್ಮ್ ಫೇರ್ ಪ್ರಶಸ್ತಿ, ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ರಮೇಶ್ ಕೆ. ಬಾಲಚಂದರ್ ಅವರ ಜೊತೆಗಿನ ಸಹಭಾಗಿತ್ವದಿಂದ ಗುರುತಿಸಿಕೊಂಡಿದ್ದಾರೆ. ಕೆ. ಬಾಲಚಂದರ ರಮೇಶ್ ಅವರನ್ನು ೧೯೮೬ರಲ್ಲಿ ಕನ್ನಡದ ಸುಂದರ ಸ್ವಪ್ನಗಳು ಚಿತ್ರದಲ್ಲಿ ಪರಿಚಯಿಸಿದರು ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನಥಿಲ್ ಉರುತಿ ವೆಂದುಮ್ (ಅವರ ತಮಿಳು ಪದಾರ್ಪಣೆ), ಡ್ಯುಎಟ್ ಮತ್ತು ರುದ್ರವೀಣ (ಅವರ ತೆಲುಗು ಪದಾರ್ಪಣೆ) ಇವುಗಳಲ್ಲಿ ಜೊತೆಗೆ ಕೆಲಸ ಮಾಡಿದರು.
ರಮೇಶ್ ಅಭಿನಯಿಸಿರುವ ಕೆಲವು ಚಿತ್ರಗಳು ಸಂಪಾದಿಸಿ
- ಸುಂದರ ಸ್ವಪ್ನಗಳು
- ಮೌನಗೀತೆ
- ಏಳು ಸುತ್ತಿನ ಕೋಟೆ
- ಅಮೆರಿಕಾ ಅಮೆರಿಕಾ
- ಅಮೃತ ವರ್ಷಿಣಿ
- ಶ್ರೀಗಂಧ
- ಅರುಣೋದಯ
- ಸಂಭ್ರಮ
- ಪಂಚಮವೇದ
- ಪಕ್ಕ ಚುಕ್ಕ
- ಅನುರಾಗ ಸಂಗಮ
- ಕುರಿಗಳು ಸಾರ್ ಕುರಿಗಳು
- ಕೋತಿಗಳು ಸಾರ್ ಕೋತಿಗಳು
- ಕತ್ತೆಗಳು ಸಾರ್ ಕತ್ತೆಗಳು
- ಶಾಂತಿ ಕ್ರಾಂತಿ
- ಯಾರೇ ನೀನು ಚೆಲುವೆ
- ಓ ಮಲ್ಲಿಗೆ
- ಅಂತರ್ಗಾಮಿ
- ಪುಂಡ ಪ್ರಚಂಡ
- ನಮ್ಮೂರ ಮಂದಾರಹೂವೆ
- ಮುಂಗಾರಿನ ಮಿಂಚು
- ಜೋಕ್ ಫಾಲ್ಸ್
- ಆಪ್ತಮಿತ್ರ
- ಚಂದ್ರಮುಖಿ ಪ್ರಾಣಸಖಿ
- ಹೃದಯಾ ಹೃದಯ
- ರಾಮ ಶಾಮ ಭಾಮ
- ತುತ್ತಾ ಮುತ್ತಾ
- ವೆಂಕಟ ಇನ್ ಸಂಕಟ
- ಸತ್ಯವಾನ್ ಸಾವಿತ್ರಿ
- ಚೆಲುವೆಯೇ ನಿನ್ನ ನೋಡಲು
- ನಮ್ಮಣ್ಣ ಡಾನ್
- ಚಂದ್ರೋದಯ
- ಕ್ರೇಜಿ ಕುಟುಂಬ
- ಭೂಮಿ ತಾಯಿ ಚೊಚ್ಚಲ ಮಗ
- ಪ್ರೇಮರಾಗ ಹಾಡು ಗೆಳತಿ
- ಆಪ್ತಮಿತ್ರ
- ವಿಷ್ಣು ಸೇನೆ
- ವರ್ಷ
- ದೀಪಾವಳಿ
- ಶಾಪ
- ಶ್ರೀರಸ್ತು ಶುಭಮಸ್ತು
- ಬಿಸಿ ಬಿಸಿ
- ಆಕ್ಸಿಡೆಂಟ್
- ಅಮ್ಮಾ ನಿನ್ನ ತೋಳಿನಲ್ಲಿ
- ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ
- ಮುತ್ತು
- ಪ್ರೇಮಿ ನಂ. 1
- ಇದು ಎಂಥಾ ಪ್ರೇಮವಯ್ಯ,
ಬರಹಗಾರ ಸಂಪಾದಿಸಿ
ಇವರು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಹೂಮಳೆಯನ್ನು ಸಂಕಲನೆ ಮಾಡಿದ್ದಾರೆ. ಇದು ಅವರಿಗೆ ನಿರ್ದೇಶಕ ವೃತ್ತಿಗೆ ದಾರಿ ಮಾಡಿಕೊಟ್ಟಿತು.