ಜಯಮಾಲಾ

(ಜಯಮಾಲ ಇಂದ ಪುನರ್ನಿರ್ದೇಶಿತ)

ಡಾ. ಜಯಮಾಲ ಒಬ್ಬ ಕನ್ನಡ ಚಿತ್ರನಟಿ. ಗೀತಪ್ರಿಯ ನಿರ್ದೇಶನದ "ಕಾಸ್ ದಾಯೆ ಕಂಡನೆ' ತುಳು ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದ ಜಯಮಾಲಾ, ನಟಿ, ನಿರ್ಮಾಪಕಿ, ಶಾಸಕಿ ಮತ್ತು ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಜಯಮಾಲ
ಜನನ
ಜಯಮಾಲಾ

೨೮ ಫೆಬ್ರುವರಿ ೧೯೫೯
ಕುಡ್ಲ, ಪಣಂಬೂರು, ಮಂಗಳೂರು (ಕರ್ನಾಟಕ), ಭಾರತ
ವೃತ್ತಿ(ಗಳು)ನಟಿ, ನಿರ್ಮಾಪಕಿ,ಚಲನಚಿತ್ರ ಕಲಾವಿದೆ ಮತ್ತು ವ್ಯವಸಾಯ
ಸಕ್ರಿಯ ವರ್ಷಗಳು೧೯೭೩–ಪ್ರಸ್ತುತ
ಸಂಗಾತಿರಾಮಚಂದ್ರ ಹೆಚ್ ಎಂ

ವೈಯುಕ್ತಿಕ ವಿವರ

ಬದಲಾಯಿಸಿ
  • ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.[]

ಸಿನೇಮಾ ನಂಟು

ಬದಲಾಯಿಸಿ
  • ಹೈಸ್ಕೂಲ್‌ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್‌.ಟೈಲರ್‌ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ ಕರೆಬಂದಿತು. ಆ ಚಿತ್ರ ಶತದಿನೋತ್ಸವ ಆಚರಿಸಿತು. ಆ ಸಮಾರಂಭದಲ್ಲಿ ಫಲಕ ಸ್ವೀಕರಿಸಲು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲಿಗೆ ಬೆಂಗಳೂರಿಗೆ ಬಂದರು ಜಯಮಾಲ. ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದರು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್‌ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಆಗ ಜಯಮಾಲಾ 16ರ ಬಾಲೆ. ಅಲ್ಲಿ ಸ್ವತಃ ರಾಜ್‌ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪಾತ್ರದ ತನ್ಮಯತೆಯ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್‌ಗುರು'– ಹೀಗೆ ಸಾಲಾಗಿ ರಾಜ್‌ ಪ್ರಪಂಚದ ಸೂಪರ್‌ಹಿಟ್‌ ಚಿತ್ರಗಳು ಬಂದವು. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಅವರು ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.[]
  • ಅವರು ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿಯೂ ಜಯಮಾಲ ಜಯಗಳಿಸಿರು. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ತಾಯಿಸಾಹೇಬ’ ರಾಷ್ಟ್ರಮಟ್ಟದಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು.
  • ಅವರು ಸಿನಿಮಾ ವೃತ್ತಿಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು.

ಸಾಧನೆಗಳು

ಬದಲಾಯಿಸಿ
  • ಹದಿಮೂರನೆ ವಯಸ್ಸಿನಲ್ಲಿ ‘ಕಾಸ್‍ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ.
  • 1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. *ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ.
  • ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ "ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ" ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ "ಶಕ್ತಿಧಾಮ"ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ. ಏಡ್ಸ್ ಪೀಡಿತರ ನೆರವು,ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ. ಕರ್ನಾಟಕದಲ್ಲಿ "ರಂಗಮಂದಿರ"ಗಳನ್ನು ಕುಟುಂಬ ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

ಹುದ್ದೆಗಳು

ಬದಲಾಯಿಸಿ
  1. ಅಧ್ಯಕ್ಷರು- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
  2. ಅಧ್ಯಕ್ಷರು- ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ
  3. ಅಧ್ಯಕ್ಷರು- ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ
  4. ಸದಸ್ಯರು – ಕರ್ನಾಟಕ ವಿಧಾನ ಪರಿಷತ್
  5. ಸ್ಥಾಪಕ ನಿರ್ದೇಶಕರು, ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘ(ನಿ)
  6. ವ್ಯವಸ್ಥಾಪಕ ಧರ್ಮದರ್ಶಿ- ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು.
  7. ಭಾರತೀಯ ಪನೋರಮ-2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು (ಜ್ಯೂರಿ)
  8. ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ.

ಸಾಹಿತ್ಯಾಸಕಿ

ಬದಲಾಯಿಸಿ
  • ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ.
  • ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ.
  • ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ
  • ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.

ಪ್ರಶಸ್ತಿಗಳ ವಿವರ

ಬದಲಾಯಿಸಿ
  1. ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998- "ತಾಯಿಸಾಹೇಬ"
  2. ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ1998-"ತಾಯಿಸಾಹೇಬ"
  3. ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ2006-"ತುತ್ತೂರಿ"
  4. 15ನೇ ಟೋಕಿಯೋ ಅರ್ತ್‍ವಿಷನ್‍ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ-ಪ್ರಶಸ್ತಿ 2006,"ತುತ್ತೂರಿ"
  5. ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ"
  6. ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- ತಾಯಿಸಾಹೇಬ"
  7. . ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – ‘ತಾಯಿಸಾಹೇಬ"
  8. ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001
  9. ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001
  10. ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ"
  11. ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999- "ತಾಯಿಸಾಹೇಬ"
  12. ಸಿನಿ ಎಕ್ಸ್‍ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-1999- "ತಾಯಿಸಾಹೇಬ"
  13. ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ- "ಕಾಸದಾಯೆ ಕಂಡನಿ"
  14. ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995
  15. ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994
  16. ರಾಜೀವ್‍ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995
  17. ಗ್ಲೋಬಲ್‍ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ.
  18. ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ"
  19. ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ"
  20. ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-"ತಾಯಿಸಾಹೇಬ"
  21. ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-"ತಾಯಿಸಾಹೇಬ"
  22. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- "ಕಿತ್ತೂರುರಾಣಿ ಚೆನ್ನಮ್ಮ" ಪ್ರಶಸ್ತಿ
  23. ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ
  24. 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ

ರಾಜಕೀಯ ಮತ್ತು ಸಮಾಜ ಸೇವೆ

ಬದಲಾಯಿಸಿ
  • ಅವರು ವಿಧಾನ ಪರಿಷತ್ತಿನ ಸದಸ್ಯೆಯಾಗಿ ನೇಮಿಸಲ್ಪಟ್ಟರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಸಮಾಜ ಮತ್ತು ಬದುಕಿನ ಕುರಿತ ಅವರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ.
  • 2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ.
  • 2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ.
  • ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ
  • 2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಪದಗ್ರಹಣ.

ಡಾಕ್ಟರೇಟ್

ಬದಲಾಯಿಸಿ
  • ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.
  • ಕಾಂಗ್ರೆಸ್‌ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನೇಮಕವಾಗಿದ್ದಾರೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿಯೂ ಆಗಿದ್ದಾರೆ..ಹೀಗೆ, ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಆಗಿದ್ದಾರೆ.[]

ಜಯಮಾಲ ಅಭಿನಯದ ಕೆಲವು ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೫ ತ್ರಿಮೂರ್ತಿ ಸಿ.ವಿ.ರಾಜೇಂದ್ರನ್ ಡಾ.ರಾಜ್ ಕುಮಾರ್
೧೯೭೫ ದಾರಿ ತಪ್ಪಿದ ಮಗ ಪೆಕೇಟಿ ಶಿವರಾಂ ಡಾ.ರಾಜ್ ಕುಮಾರ್, ಕಲ್ಪನಾ, ಆರತಿ, ಮಂಜುಳಾ
೧೯೭೬ ಪ್ರೇಮದ ಕಾಣಿಕೆ ವಿ.ಸೋಮಶೇಖರ್ ಡಾ.ರಾಜ್ ಕುಮಾರ್, ಆರತಿ
೧೯೭೬ ಬಡವರ ಬಂಧು ವಿಜಯ್ ಡಾ.ರಾಜ್ ಕುಮಾರ್
೧೯೭೬ ಯಾರು ಹಿತವರು ಪಿ.ಎಸ್.ಮೂರ್ತಿ ರಾಮ್ ಗೋಪಾಲ್, ವಿಜಯಕಲಾ
೧೯೭೭ ಗಿರಿಕನ್ಯೆ ದೊರೈ-ಭಗವಾನ್ ಡಾ.ರಾಜ್ ಕುಮಾರ್
೧೯೭೭ ಬಭ್ರುವಾಹನ ಹುಣಸೂರು ಕೃಷ್ಣಮೂರ್ತಿ ಡಾ.ರಾಜ್ ಕುಮಾರ್, ಬಿ.ಸರೋಜಾದೇವಿ, ಕಾಂಚನಾ
೧೯೭೮ ಶಂಕರ್ ಗುರು ವಿ.ಸೋಮಶೇಖರ್ ಡಾ.ರಾಜ್ ಕುಮಾರ್, ಕಾಂಚನಾ, ಪದ್ಮಪ್ರಿಯ
೧೯೭೮ ಸವಾಲಿಗೆ ಸವಾಲ್ ರಮೇಶ್, ಶಿವರಾಂ ಶ್ರೀಕಾಂತ್
೧೯೭೯ ಖಂಡವಿದೆಕೋ ಮಾಂಸವಿದೆಕೋ ಪಿ.ಲಂಕೇಶ್ ಸುರೇಶ್ ಹೆಬ್ಳೀಕರ್, ರೂಪ
೧೯೭೫ ಮಧುಚಂದ್ರ ರಮೇಶ್, ಶಿವರಾಂ ಶಂಕರ್ ನಾಗ್, ರಾಮಕೃಷ್ಣ
೧೯೮೦ ಅಖಂಡ ಬ್ರಹ್ಮಚಾರಿಗಳು ವಿಷುಕುಮಾರ್ ವಿಷುಕುಮಾರ್, ಜಯಶ್ರೀ ಸುವರ್ಣ
೧೯೮೦ ಕಪ್ಪುಕೊಳ ನಾಗೇಶ್ ಅಶೋಕ್
೧೯೮೦ ಜನ್ಮ ಜನ್ಮದ ಅನುಬಂಧ ಶಂಕರ್ ನಾಗ್ ಅನಂತ್ ನಾಗ್, ಜಯಂತಿ, ಶಂಕರ್ ನಾಗ್, ಮಂಜುಳಾ
೧೯೮೦ ನಮ್ಮಮ್ಮನ ಸೊಸೆ ವಾದಿರಾಜ್-ಜವಾಹರ್ ಮೋಹನ್, ಸುನಂದ, ಲೀಲಾವತಿ
೧೯೮೦ ಹಂತಕನ ಸಂಚು ಬಿ.ಕೃಷ್ಣನ್ ವಿಷ್ಣುವರ್ಧನ್, ಆರತಿ
೧೯೮೧ ಅಂತ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಂಬರೀಶ್, ಲಕ್ಷ್ಮಿ, ಲತಾ
೧೯೮೧ ನಂಬರ್ ಐದು ಎಕ್ಕ ಎಸ್.ಶಿವಕುಮಾರ್ ಶ್ರೀನಾಥ್
೧೯೮೧ ನಾಗ ಕಾಳ ಭೈರವ ತಿಪಟೂರು ರಘು ವಿಷ್ಣುವರ್ಧನ್, ಜಯಂತಿ
೧೯೮೧ ಭಾಗ್ಯದ ಬೆಳಕು ಕೆ.ವಿ.ಎಸ್.ಕುಟುಂಬ ರಾವ್ ಆರತಿ, ಮಾನು
೧೯೮೧ ಭರ್ಜರಿ ಬೇಟೆ ನಾಗೇಶ್ ಅಂಬರೀಶ್, ಶಂಕರ್ ನಾಗ್, ಸ್ವಪ್ನ
೧೯೮೧ ಮುನಿಯನ ಮಾದರಿ ದೊರೈ-ಭಗವಾನ್ ಜೈಜಗದೀಶ್, ಶಂಕರ್ ನಾಗ್
೧೯೮೧ ಸಂಗೀತ (ಚಲನಚಿತ್ರ) ಚಂದ್ರಶೇಖರ್ ಕಂಬಾರ ಲೋಕೇಶ್
೧೯೮೨ ಅಜಿತ್ ವಿ.ಸೋಮಶೇಖರ್ ಅಂಬರೀಶ್
೧೯೮೨ ಖದೀಮ ಕಳ್ಳರು ವಿಜಯ್ ಅಂಬರೀಶ್
೧೯೮೨ ಧರ್ಮ ದಾರಿ ತಪ್ಪಿತು ಬಂಡಾರು ಗಿರಿಬಾಬು ಶ್ರೀನಾಥ್, ಶಂಕರ್ ನಾಗ್, ಜಯಂತಿ
೧೯೮೨ ಪೆದ್ದ ಗೆದ್ದ ಭಾರ್ಗವ ದ್ವಾರಕೀಶ್, ಆರತಿ
೧೯೮೨ ಪ್ರೇಮ ಮತ್ಸರ ಸಿ.ವಿ.ರಾಜೇಂದ್ರನ್ ಅಂಬರೀಶ್
೧೯೮೨ ರಾಗ ತಾಳ ಹೆಚ್.ಎಂ.ಕೃಷ್ಣಮೂರ್ತಿ ಪ್ರಥ್ವಿರಾಜ್ ಸಾಗರ್
೧೯೮೨ ಶಂಕರ್ ಸುಂದರ್ ಎ.ಟಿ.ರಘು ಅಂಬರೀಶ್, ಸ್ವಪ್ನ
೧೯೮೩ ಗೆಲುವು ನನ್ನದೆ ಎಸ್.ಎ.ಚಂದ್ರಶೇಖರ್ ಅಂಬರೀಶ್, ಟೈಗರ್ ಪ್ರಭಾಕರ್
೧೯೮೩ ಚಂಡಿ ಚಾಮುಂಡಿ ವಿ.ಸೋಮಶೇಖರ್ ಶಂಕರ್ ನಾಗ್, ಟೈಗರ್ ಪ್ರಭಾಕರ್
೧೯೮೩ ತಿರುಗುಬಾಣ ಕೆ.ಎಸ್.ಆರ್.ದಾಸ್ ಅಂಬರೀಶ್, ಆರತಿ
೧೯೮೩ ನ್ಯಾಯ ಗೆದ್ದಿತು ಜೋ ಸೈಮನ್ ಟೈಗರ್ ಪ್ರಭಾಕರ್, ಶಂಕರ್ ನಾಗ್, ರೂಪಾದೇವಿ
೧೯೮೩ ಪ್ರೇಮಯುದ್ಧ ಟಿ.ಎಸ್.ನಾಗಾಭರಣ ಟೈಗರ್ ಪ್ರಭಾಕರ್
೧೯೮೩ ಸಿಡಿದೆದ್ದ ಸಹೋದರ ಜೋ ಸೈಮನ್ ವಿಷ್ಣುವರ್ಧನ್, ಆರತಿ
೧೯೮೩ ಹೊಸ ತೀರ್ಪು ಶಂಕರ್ ನಾಗ್ ಅಂಬರೀಶ್, ಮಂಜುಳಾ
೧೯೮೪ ಒಂಟಿಧ್ವನಿ ಟಿ.ಎಸ್.ನಾಗಾಭರಣ ಅಂಬರೀಶ್, ಮಂಜುಳಾ, ಲೋಕೇಶ್
೧೯೮೪ ಗಂಡಭೇರುಂಡ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಂಬರೀಶ್, ಶ್ರೀನಾಥ್, ಲಕ್ಷ್ಮಿ
೧೯೮೪ ಜಿದ್ದು ಡಿ.ರಾಜೇಂದ್ರ ಬಾಬು ಟೈಗರ್ ಪ್ರಭಾಕರ್
೧೯೮೪ ನಗಬೇಕಮ್ಮ ನಗಬೇಕು ಬಿ.ಸುಬ್ಬರಾವ್ ಶಂಕರ್ ನಾಗ್, ರಾಮಕೃಷ್ಣ
೧೯೮೪ ಪ್ರೇಮವೇ ಬಾಳಿನ ಬೆಳಕು ಎ.ವಿ.ಶೇಷಗಿರಿ ರಾವ್ ಅನಂತ್ ನಾಗ್, ಆರತಿ
೧೯೮೪ ಬೆಂಕಿ ಬಿರುಗಾಳಿ ತಿಪಟೂರು ರಘು ವಿಷ್ಣುವರ್ಧನ್, ಶಂಕರ್ ನಾಗ್
೧೯೮೪ ಬೆದರು ಬೊಂಬೆ ಭಾರ್ಗವ ಶಂಕರ್ ನಾಗ್
೧೯೮೪ ರಕ್ತ ತಿಲಕ ಜೋ ಸೈಮನ್ ಶಂಕರ್ ನಾಗ್, ಟೈಗರ್ ಪ್ರಭಾಕರ್, ಕಾಂಚನಾ
೧೯೮೪ ವಿಘ್ನೇಶ್ವರ ವಾಹನ ಪಿ.ಎಸ್.ಪ್ರಕಾಶ್ ಟೈಗರ್ ಪ್ರಭಾಕರ್
೧೯೮೪ ಹುಲಿಯಾದ ಕಾಳ ಬಿ.ಎಸ್.ರಂಗಾ ಟೈಗರ್ ಪ್ರಭಾಕರ್
೧೯೮೪ ಹೊಸ ಇತಿಹಾಸ ಡಿ.ರಾಜೇಂದ್ರ ಬಾಬು ಟೈಗರ್ ಪ್ರಭಾಕರ್
೧೯೮೫ ಪ್ರಳಯ ರುದ್ರ ಪಿ.ಎಸ್.ಪ್ರಕಾಶ್ ಟೈಗರ್ ಪ್ರಭಾಕರ್
೧೯೯೫ ಗಡಿಬಿಡಿ ಅಳಿಯ ಸಾಯಿಪ್ರಕಾಶ್ ಶಿವರಾಜ್ ಕುಮಾರ್, ಮಾಲಾಶ್ರೀ, ಮೋಹಿನಿ, ಶ್ರೀನಾಥ್
೧೯೯೬ ಗೆಲುವಿನ ಸರದಾರ ರೇಲಂಗಿ ನರಸಿಂಹ ರಾವ್ ರಾಘವೇಂದ್ರ ರಾಜ್ ಕುಮಾರ್, ಶ್ರುತಿ, ಶ್ರೀನಾಥ್
೧೯೯೬ ನಿರ್ಬಂಧ ಹ.ಸು.ರಾಜಶೇಖರ್ ಶಶಿಕುಮಾರ್, ಅನಂತ್ ನಾಗ್
೧೯೯೭ ತಾಯಿ ಸಾಹೇಬ ಗಿರೀಶ್ ಕಾಸರವಳ್ಳಿ ಸುರೇಶ್ ಹೆಬ್ಳೀಕರ್
೨೦೦೪ ರೌಡಿ ಅಳಿಯ ಸಾಯಿಪ್ರಕಾಶ್ ಶಿವರಾಜ್ ಕುಮಾರ್, ಪ್ರಿಯಾಂಕ

[]

ಉಲ್ಲೇಖಗಳು

ಬದಲಾಯಿಸಿ
  1. Jayamala Biography
  2. "ಸಂಸ್ಕೃತಿ ಸಲ್ಲಾಪ:ಜಯಮಾಲ". http://www.sallapa.com/. {{cite web}}: External link in |website= (help)
  3. "ಆಗ ನಾಯಕಿ ಈಗ ಸಭಾನಾಯಕಿ". Archived from the original on 2018-06-12. Retrieved 2018-06-10.
  4. "ಜಯಮಾಲ ಅಭಿನಯದ ಚಿತ್ರಗಳ ಪಟ್ಟಿ". ಚಿಲೋಕ.ಕಾಮ್.
"https://kn.wikipedia.org/w/index.php?title=ಜಯಮಾಲಾ&oldid=1244276" ಇಂದ ಪಡೆಯಲ್ಪಟ್ಟಿದೆ