ಮಧುಚಂದ್ರವು ಹೊಸದಾಗಿ ವಿವಾಹವಾದವರು ತಮ್ಮ ವಿವಾಹವಾದ ತಕ್ಷಣ ತಮ್ಮ ಮದುವೆಯನ್ನು ಆಚರಿಸಲು ಕೈಗೊಳ್ಳುವ ರಜೆ; ಇಂದು, ಮಧುಚಂದ್ರಗಳನ್ನು ಹಲವುವೇಳೆ ವಿದೇಶಿ ಅಥವಾ ರಮ್ಯವೆಂದು ಪರಿಗಣಿಸಲಾದ ಸ್ಥಳಗಳಲ್ಲಿ ಆಚರಿಸಲಾಗುತ್ತದೆ.

ಇತಿಹಾಸಸಂಪಾದಿಸಿ

 
ನವದಂಪತಿಗಳು ತಮ್ಮ ಮಧುಚಂದ್ರಕ್ಕೆ ತೆರಳುತ್ತಿರುವುದು, ೧೯೪೬

ಪಾಶ್ಚಾತ್ಯ ಸಂಸ್ಕೃತಿ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗಳಲ್ಲಿ, ಹೊಸದಾಗಿ ಮದುವೆಯಾದ ದಂಪತಿಗಳು ಒಟ್ಟಾಗಿ ರಜೆಗೆ ಹೋಗುವ ರೂಢಿಯು ಮುಂಚಿನ ೧೯ನೇ ಶತಮಾನದ ಗ್ರೇಟ್ ಬ್ರಿಟನ್‌‍ನಲ್ಲಿ ಹುಟ್ಟಿಕೊಂಡಿತು. ಮೇಲ್ವರ್ಗದ ದಂಪತಿಗಳು, ಕೆಲವೊಮ್ಮೆ ಸ್ನೇಹಿತರು ಅಥವಾ ಕುಟುಂಬದ ಜೊತೆಯಲ್ಲಿ, ವಿವಾಹಕ್ಕೆ ಬರುವುದಕ್ಕೆ ಸಾಧ್ಯವಾಗದಿದ್ದ ಸಂಬಂಧಿಕರನ್ನು ಭೇಟಿಯಾಗಲು "ವಧು ಪ್ರವಾಸ"ವನ್ನು ಕೈಗೊಳ್ಳುತ್ತಿದ್ದರು.[೧] ಈ ಅಭ್ಯಾಸ ಬೇಗನೇ ಐರೋಪ್ಯ ಖಂಡಕ್ಕೆ ಹರಡಿತು. ಇದು ಫ಼್ರಾನ್ಸ್‌ನಲ್ಲಿ ೧೮೨೦ರ ದಶಕದ ನಂತರ ಅ ಲಾ ಫ಼ಾಷೋನ್ ಆಂಗ್ಲೇಸ್ (ಆಂಗ್ಲ ಶೈಲಿಯ ಪ್ರಯಾಣ) ಎಂದು ಪರಿಚಿತವಾಗಿತ್ತು.

ಉಲ್ಲೇಖಗಳುಸಂಪಾದಿಸಿ

  1. Strand, Ginger (January 2008). "Selling Sex in Honeymoon Heaven". The Believer.