ಪದ್ಮಪ್ರಿಯ
ಭಾರತೀಯ ನಟಿ
ಪದ್ಮಪ್ರಿಯ ೧೯೭೦ ಮತ್ತು ೧೯೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಪದ್ಮಪ್ರಿಯ | |
---|---|
ಉದ್ಯೋಗ | ನಟಿ,ನಿರ್ಮಾಪಕಿ |
ಸಕ್ರಿಯ ವರ್ಷಗಳು | 1971–1991 |
ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಯಶಸ್ವಿ ಚಿತ್ರಗಳಾದ ಶಂಕರ್ ಗುರು, ತಾಯಿಗೆ ತಕ್ಕ ಮಗ ಮತ್ತು ಆಪರೇಶನ್ ಡೈಮಂಡ್ ರಾಕೆಟ್ ಮತ್ತು ವಿಷ್ಣುವರ್ಧನ್ ಅಭಿನಯದ ಅಸಾಧ್ಯ ಅಳಿಯ, ನನ್ನ ರೋಷ ನೂರು ವರುಷ ಮತ್ತು ಊರಿಗೆ ಉಪಕಾರಿಗಳಲ್ಲಿ ನಾಯಕಿಯಾಗಿ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಅನಂತ್ ನಾಗ್ ಜೊತೆಗಿನ ಬಾಡದ ಹೂ ಚಿತ್ರದಲ್ಲಿ ಪದ್ಮಪ್ರಿಯ ಸ್ಮರಣೀಯ ಅಭಿನಯ ನೀಡಿದ್ದರು. ಶ್ರೀನಾಥ್, ಲೋಕೇಶ್, ಅಂಬರೀಶ್ ಮತ್ತು ಅಶೋಕ್ ಮುಂತಾದ ನಟರೊಂದಿಗೆ ನಟಿಸಿದ್ದರು.
ತಮಿಳಿನಲ್ಲಿ ಶಿವಾಜಿ ಗಣೇಶನ್, ಮುತ್ತುರಾಮನ್, ಜೈಶಂಕರ್ ಮತ್ತು ಶಿವಕುಮಾರ್ರಂಥ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದರು. ತೆಲುಗಿನಲ್ಲಿ ಎನ್.ಟಿ.ರಾಮರಾವ್, ಕೃಷ್ಣ, ಕೃಷ್ಣಂರಾಜು, ಮಲಯಾಳಂನಲ್ಲಿ ಪ್ರೇಮ್ ನಜೀರ್, ಮಧು, ಕಮಲ್ ಹಾಸನ್ ಮುಂತಾದವರೊಂದಿಗೆ ನಟಿಸಿದ್ದರು.
ಪದ್ಮಪ್ರಿಯ ಅಭಿನಯದ ಚಿತ್ರಗಳುಸಂಪಾದಿಸಿ
ಕನ್ನಡಸಂಪಾದಿಸಿ
ತಮಿಳುಸಂಪಾದಿಸಿ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೭೫ | ಉರವು ಸೊಲ್ಲ ಒರುವನ್ | ದೇವರಾಜ್ ಮೋಹನ್ | ಮುತ್ತುರಾಮನ್, ಸುಜಾತ, ಶಿವಕುಮಾರ್ | |
೧೯೭೫ | ಕರೊಟ್ಟಿ ಕಣ್ಣನ್ | ಆರ್.ಪಾಟ್ಟು | ತೆಂಗೈ ಶ್ರೀನಿವಾಸನ್ | |
೧೯೭೫ | ವಾಳ್ದು ಕಾಟ್ಟುಗಿರೇನ್ | ಕೃಷ್ಣನ್-ಪಂಜು | ಮುತ್ತುರಾಮನ್, ಸುಜಾತ | |
೧೯೭೫ | ವೈರ ನೇಂಜಂ | ಸಿ.ವಿ.ಶ್ರೀಧರ್ | ಶಿವಾಜಿ ಗಣೇಶನ್ | |
೧೯೭೭ | ಅಂಡ್ರು ಸಿಂಧಿಯ ರಥಂ | ಆರ್.ಸುಂದರಂ | ಜೈಶಂಕರ್ | |
೧೯೭೭ | ಪೆರುಮೈಕ್ಕುರಿಯವಳ್ | ಆರ್.ಎ.ಶಂಕರ್ | ಶಿವಕುಮಾರ್, ಫಟಾಫಟ್ ಜಯಲಕ್ಷ್ಮಿ | |
೧೯೭೭ | ಸೊರ್ಗಂ ನರಗಂ | ಆರ್.ತ್ಯಾಗರಾಜನ್ | ಶಿವಕುಮಾರ್, ಫಟಾಫಟ್ ಜಯಲಕ್ಷ್ಮಿ, ವಿಜಯಕುಮಾರ್ | |
೧೯೮೧ | ಮೋಹನ ಪುನ್ನಗೈ | ಸಿ.ವಿ.ಶ್ರೀಧರ್ | ಶಿವಾಜಿ ಗಣೇಶನ್, ಜಯಭಾರತಿ |
ತೆಲುಗುಸಂಪಾದಿಸಿ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೭೫ | ಚೀಕಟಿ ವೆಲುಗುಲು | ಕೆ.ಎಸ್.ಪ್ರಕಾಶ್ ರಾವ್ | ಕೃಷ್ಣ, ವಾಣಿಶ್ರೀ | |
೧೯೭೬ | ಮಂಚಿಕಿ ಮರೋಪೇರು | ಸಿ.ಎಸ್.ರಾವ್ | ಎನ್.ಟಿ.ರಾಮರಾವ್, ಪ್ರಭಾ | |
೧೯೭೭ | ಭಲೇ ಅಲ್ಲುಡು | ಪಿ.ಚಂದ್ರಶೇಖರ್ ರೆಡ್ಡಿ | ಕೃಷ್ಣಂ ರಾಜು, ಶಾರದಾ, ಚಂದ್ರಮೋಹನ್ | |
೧೯೭೮ | ಪೊಟ್ಟೆಲು ಪೊನ್ನಮ್ಮ | ಆರ್.ತ್ಯಾಗರಾಜನ್ | ಮುರಳಿಮೋಹನ್, ಶ್ರೀಪ್ರಿಯಾ, ಮೋಹನ್ ಬಾಬು | |
೧೯೮೦ | ಮಾ ಇಂಟಿ ದೇವತಾ | ಪದ್ಮನಾಭಂ | ಕೃಷ್ಣ, ಜಮುನಾ |
ಮಲಯಾಳಂಸಂಪಾದಿಸಿ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೭೭ | ಅಕಾಲೇ ಆಕಾಶಂ | ಐ.ವಿ.ಶಶಿ | ಮಧು, ಎಂ.ಜಿ.ಸೋಮನ್ | |
೧೯೭೭ | ಅಭಿನಿವೇಷಂ | ಐ.ವಿ.ಶಶಿ | ರವಿಕುಮಾರ್, ಸುಮಿತ್ರಾ | |
೧೯೭೭ | ಅಷ್ಟಮಾಂಗಲ್ಯಂ | ಪಿ.ಗೋಪಿ ಕುಮಾರ್ | ಕಮಲ್ ಹಾಸನ್, ವಿಧುಬಾಲ | |
೧೯೭೭ | ಚತುರ್ವೇದಂ | ಸಸಿಕುಮಾರ್ | ಪ್ರೇಮ್ ನಜೀರ್ | |
೧೯೭೭ | ಸುಜಾತ | ಹರಿಹರನ್ | ಪ್ರೇಮ್ ನಜೀರ್, ಜಯಭಾರತಿ, ಎಂ.ಜಿ.ಸೋಮನ್ | |
೧೯೭೮ | ಅವಳ್ ಕಂಡ ಲೋಕಂ | ಎಂ.ಕೃಷ್ಣನ್ ನಾಯರ್ | ರವಿಕುಮಾರ್, ಸೀಮಾ | |
೧೯೭೮ | ಪತಿವ್ರತಾ | ಎಂ.ಎಸ್.ಚಕೃವರ್ತಿ | ಮಧು, ಶೀಲಾ | |
೧೯೭೯ | ಮಾಣಿ ಕೋಯ ಕುರುಪ್ | ಎಸ್.ಎಸ್.ದೇವದಾಸ್ | ವಿನ್ಸೆಂಟ್ |