ಸಾಹುಕಾರ್ ಜಾನಕಿ
ಕನ್ನಡ ಚಿತ್ರರಂಗದನಾಯಕಿಯರಲ್ಲಿ ಒಬ್ಬರು.
ಸಾಹುಕಾರ್ ಜಾನಕಿ | |
---|---|
ಜನನ | ಶಂಕರಮಂಚಿ ಜಾನಕಿ ೧೨ ಡಿಸೆಂಬರ್ ೧೯೩೧ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೧೯೪೯–ಪ್ರಸ್ತುತ |
ಸಂಗಾತಿ | ಶಂಕರಮಂಚಿ ಶ್ರೀನಿವಾಸ ರಾವ್ (೧೯೪೭) |
ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ `ದೇವಕನ್ನಿಕಾ`. `ಸಾಹುಕಾರ್` ಚಿತ್ರದಲ್ಲಿನ ಅವಿಸ್ಮರಣೀಯ ಅಭಿನಯದಿಂದಾಗಿ ಸಾಹುಕಾರ್ ಎಂಬ ನಾಮಧೇಯ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಉಳಿದುಕೊಂಡಿತು. ಭಾಷೆಗಳ ಗಡಿ ಮೀರಿ ಪ್ರಮುಖ ನಟಿಯಾಗಿ ಹೆಸರು ಗಳಿಸಿದ ಸಾಹುಕಾರ್ ಜಾನಕಿ ಅವರು ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುಂಚೆ ಆಕಾಶವಾಣಿ ಕಲಾವಿದೆಯಾಗಿದ್ದರು.
ಗೌರಿ, ಭಾಗ್ಯ ಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಾಯಕಿಯಾಗಿದ್ದ ಸಾಹುಕಾರ್ ಜಾನಕಿ ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ದವೇದಿ ಹೀಗೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಅಭಿನಯಿಸಿ ಮನೆಮಾತಾಗಿದ್ದಾರೆ.
ಇವರ ಸಿನಿಮಾ ಕೃಷಿಯಲ್ಲಿನ ಸಾಧನೆಗೆ ಕನ್ನಡ ವಾಕ್ಚಿತ್ರ ಅಮೃತೋತ್ಸವ, ಕಲೈಮಾಮಣಿ, ಎಂ.ಜಿ.ಆರ್ ಪ್ರಶಸ್ತಿಗಳು ಸಂದಿವೆ.ದಕ್ಷಿಣ ಭಾರತದ ಮತ್ತೋರ್ವ ಜನಪ್ರಿಯ ತಾರೆ "ಕೃಷ್ಣ ಕುಮಾರಿ" ಇವರ ಕಿರಿಯ ಸಹೋದರಿ.ನಮನ