ಭಾರತಿ (ನಟಿ)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಬಹುಭಾಷಾ ಕಲಾವಿದೆ.
ಭಾರತಿ | |
---|---|
ಜನನ | ಭಾರತಿ 15 ಅಗಸ್ಟ್ 1950 ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ |
ಉದ್ಯೋಗ | ನಟಿ, ಗಾಯಕಿ, ಸಹ ನಿರ್ದೇಶಕಿ, ಅಂಕಣಗಾರ್ತಿ |
ಸಕ್ರಿಯ ವರ್ಷಗಳು | ೧೯೬೫–ಪ್ರಸ್ತುತ |
ಬಹು ಭಾಷಾ ಕಲಾವಿದೆಸಂಪಾದಿಸಿ
ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ. ಭಾರತಿಯವರ ಮಾತೃಭಾಷೆ ಮರಾಠಿ . ೧೯೬೬ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ 'ದುಡ್ಡೇ ದೊಡ್ಡಪ್ಪ' ಇವರ ಬಿಡುಗಡೆಗೊಂಡ ಮೊದಲ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಇವರ ಚಿತ್ರಗಳು ಯಶಸ್ಸು ಕಂಡಿವೆ. ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನ, ರಾಕೇಶ್ ರೋಶನ್, ಮೆಹಮೂದ್ ; ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಎನ್. ಟಿ. ಆರ್, ಕೃಷ್ಣ, ಶೋಬನ್ ಬಾಬು, ಕೃಷ್ಣಂ ರಾಜು, ಕಾಂತಾರಾವ್ ; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ ಗಣೀಶನ್, ಜೆಮಿನಿ ಗಣೀಶನ್, ಮುತ್ತುರಾಮನ್, ಜೈಶಂಕರ್, ರವಿಚಂದ್ರನ್, ಎ.ವಿ.ಎಮ್. ರಾಜನ್ ಮುಂತಾದ ನಟರೊಂದಿಗೆ ನಟಿಸಿದ್ದಾರೆ. ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಕ್ರೀಡಾಪಟುವೂ ಆಗಿದ್ದರು.
ಕನ್ನಡ ಚಿತ್ರರಂಗದಲ್ಲಿಸಂಪಾದಿಸಿ
ಕನ್ನಡ ಚಿತ್ರರಂಗದಲ್ಲಿ 'ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.
ವೈಯಕ್ತಿಕ ಜೀವನಸಂಪಾದಿಸಿ
ನಟ ವಿಷ್ಣುವರ್ಧನ್ ಅವರನ್ನು ಮದುವೆಯಾದ ಭಾರತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಶಸ್ತಿ. ಗೌರವಗಳುಸಂಪಾದಿಸಿ
- ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ.
- ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ.
ಭಾರತಿ ಅಭಿನಯದ ಕೆಲವು ಚಿತ್ರಗಳುಸಂಪಾದಿಸಿ
ಕನ್ನಡಸಂಪಾದಿಸಿ
ಹಿಂದಿಸಂಪಾದಿಸಿ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೭ | ಮೆಹರ್ಬಾನ್ | ಗೀತಾ ಶಾಂತಿಸ್ವರೂಪ್ | ಎ.ಭೀಮ್ ಸಿಂಗ್ | ಸುನಿಲ್ ದತ್, ನೂತನ್ |
೧೯೬೮ | ಸಾಧು ಔರ್ ಶೈತಾನ್ | ವಿದ್ಯಾ ಶಾಸ್ತ್ರಿ | ಎ.ಭೀಮ್ ಸಿಂಗ್ | ಮೆಹಮೂದ್ |
೧೯೭೦ | ಘರ್ ಘರ್ ಕಿ ಕಹಾನಿ | ಸೀಮಾ | ಟಿ.ಪ್ರಕಾಶ್ ರಾವ್ | ರಾಕೇಶ್ ರೋಶನ್ |
೧೯೭೦ | ಪೂರಬ್ ಔರ್ ಪಶ್ಚಿಮ್ | ಗೋಪಿ | ಮನೋಜ್ ಕುಮಾರ್ | ಮನೋಜ್ ಕುಮಾರ್, ಸಾಯಿರಾ ಬಾನು |
೧೯೭೦ | ಮಸ್ತಾನ | ಶಾರದಾ | ಎ.ಸುಬ್ಬರಾವ್ | ವಿನೋದ್ ಖನ್ನ, ಪದ್ಮಿನಿ, ಮೆಹಮೂದ್ |
೧೯೭೧ | ದುನಿಯಾ ಕ್ಯಾ ಜಾನೆ | ಭಾರತಿ | ಸಿ.ವಿ.ಶ್ರೀಧರ್ | ಪ್ರೇಮೇಂದ್ರ, ಅನುಪಮ |
೧೯೭೧ | ಸೀಮಾ | ಸುರೇಂದ್ರ ಮೋಹನ್ | ಸಿಮಿ ಗರೆವಾಲ್, ರಾಕೇಶ್ ರೋಶನ್, ಕಬೀರ್ ಬೇಡಿ | |
೧೯೭೧ | ಹಮ್ ತುಮ್ ಔರ್ ವೋ | ಆರತಿ | ಶಿವ್ ಕುಮಾರ್ | ವಿನೋದ್ ಖನ್ನ, ಅಶೋಕ್ ಕುಮಾರ್, ಅರುಣಾ ಇರಾನಿ, ಹೆಲೆನ್ |
೧೯೭೨ | ಆಂಖ್ ಮಿಚೋಲಿ | ರಾಮಣ್ಣ | ರಾಕೇಶ್ ರೋಶನ್ | |
೧೯೭೨ | ಸಬ್ ಕಾ ಸಾಥಿ | ಚಿತ್ರಾ | ಎ.ಭೀಮ್ ಸಿಂಗ್ | ವಿನೋದ್ ಖನ್ನ, ಸಂಜಯ್ ಖಾನ್, ರಾಖೀ ಗುಲ್ಜಾರ್ |
೧೯೭೪ | ಕುಂವಾರಾ ಬಾಪ್ | ರಾಧಾ | ಮೆಹಮೂದ್ | ವಿನೋದ್ ಮೆಹ್ರ |
೧೯೮೭ | ಉತ್ತರ್ ದಕ್ಷಿಣ್ | ಪ್ರಭಾತ್ ಖನ್ನ | ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್, ರಜನಿಕಾಂತ್ | |
೧೯೯೦ | ಇಜ಼ತ್ ದಾರ್ | ಸುಜಾತ | ಕೆ.ಬಪ್ಪಯ್ಯ | ದಿಲೀಪ್ ಕುಮಾರ್, ಗೋವಿಂದ, ಮಾಧುರಿ ದೀಕ್ಷಿತ್ |
೧೯೯೨ | ಖೇಲ್ | ಕಾಮಿನಿ/ಶಾರದ | ರಾಕೇಶ್ ರೋಶನ್ | ಮಾಲಾ ಸಿನ್ಹಾ, ಅನಿಲ್ ಕಪೂರ್, ಮಾಧುರಿ ದೀಕ್ಷಿತ್ |
೧೯೭೪ | ಆವೋ ಪ್ಯಾರ್ ಕರೆ | ಅಂಜಲಿ | ರವೀಂದ್ರ ಪೀಪಟ್ | ಸೈಫ್ ಅಲಿ ಖಾನ್, ಶಿಲ್ಪಾ ಶೆಟ್ಟಿ |
ತೆಲುಗುಸಂಪಾದಿಸಿ
ತಮಿಳುಸಂಪಾದಿಸಿ
ಮಲಯಾಳಂಸಂಪಾದಿಸಿ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೯ | ಪಡಿಚ್ಚ ಕಳ್ಳನ್ | ಕೃಷ್ಣನ್ ನಾಯರ್ | ಪ್ರೇಮ್ ನಜೀರ್ | |
೧೯೭೫ | ಕಬಿನಿ ನದಿ ಚುವನ್ನಪ್ಪೊಳ್ | ರವೀಂದ್ರನ್ | ||
೧೯೯೧ | ಸಾಂತ್ವನಂ | ಸಿಬಿ ಮಲಯಾಳಿ | ನೆಡುಮುಡಿ ವೇಣು, ಸುರೇಶ್ ಗೋಪಿ | |
೧೯೯೩ | ದೇವಾಸುರಂ | ಐ.ವಿ.ಶಶಿ | ಮೋಹನ್ ಲಾಲ್ | |
೧೯೯೫ | ಅಚನ್ ಕೊಂಬತ್ತು ಅಮ್ಮ ವರಂಪತ್ತು | ಪಾರ್ವತಿ | ಮುರಳಿ | |
೧೯೯೭ | ಒರು ಯಾತ್ರಾ ಮೊಳಿ | ಶಿವಾಜಿ ಗಣೇಶನ್, ಮೋಹನ್ ಲಾಲ್ | ||
೧೯೯೮ | ನಕ್ಷತ್ರತಾರಾಟ್ಟು | ಎಮ್.ಶಂಕರ್ | ಕುಂಚಕೊ ಬೊಬನ್, ಶಾಲಿನಿ | |
೧೯೯೮ | ವರ್ಣಪಕಿಟ್ಟು | ಸನ್ನಿಯ ತಾಯಿ | ಐ.ವಿ.ಶಶಿ | ಮೋಹನ್ ಲಾಲ್, ಮೀನಾ |
೨೦೦೦ | ನರಸಿಂಹಂ | ಶಾಜಿ ಕೈಲಾಸ್ | ಮೋಹನ್ ಲಾಲ್ | |
೨೦೦೧ | ಕರುಮಾಡಿಕಾಟ್ಟನ್ | |||
೨೦೦೨ | ಮಳತುಳ್ಳಿಕಿಲುಕ್ಕಮ್ | ಶಾರದಾ, ದಿಲೀಪ್, ನವ್ಯಾ ನಾಯರ್ |
ಉಲ್ಲೇಖಗಳುಸಂಪಾದಿಸಿ
- ↑ "ಭಾರತಿ ವಿಷ್ಣುವರ್ಧನ್, ಚಿಲೋಕ.ಕಾಮ್". Archived from the original on 2016-04-04. Retrieved 2016-01-17.
- ↑ ಭಾರತಿ ನಟಿಸಿರುವ ಕೆಲವು ತೆಲುಗು ಚಿತ್ರಗಳ ಪಟ್ಟಿ, ಮೂವಿಶೂವಿ.ಕಾಮ್[ಶಾಶ್ವತವಾಗಿ ಮಡಿದ ಕೊಂಡಿ]
- ↑ ಭಾರತಿ, ಸ್ಪೈಸಿ ಆನಿಯನ್.ಕಾಮ್
- ↑ ಭಾರತಿ ನಟಿಸಿರುವ ಮಲಯಾಳಂ ಚಿತ್ರಗಳ ಪಟ್ಟಿ, ಮಲಯಾಳ ಚಲಚಿತ್ರಂ.ಕಾಮ್