ಬಾಲಕೃಷ್ಣ
ಟಿ.ಎನ್.ಬಾಲಕೃಷ್ಣ (ಬಾಲಣ್ಣ) - ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ ಬಾಲಣ್ಣ ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ.
ಹಿನ್ನೆಲೆ ಸಂಪಾದಿಸಿ
ಬಾಲಕೃಷ್ಣರ ಜನನ ನವೆಂಬರ್ ೨,೧೯೧೬''''''ರಂದು ಹಾಸನ ಜಲ್ಲೆಯ ಅರಸೀಕೆರೆಯಲ್ಲಿ ಆಯಿತು.ಇವರ ತಂದೆ ತಾಯಿಯರು ದಿನಗೂಲಿಯಲ್ಲಿ ಜೀವಿಸುತಿದ್ದರು. ಈ ಶ್ರಮಜೀವಿಗಳಿಗೆ ಒಬ್ಬನೇ ಮಗ ಬಾಲಕೃಷ್ಣ.ಇದ್ದಕ್ಕಿದ್ದಂತೆ ತಂದೆಯು ಕಾಯಿಲೆ ತೀವ್ರ ಸ್ವರೂಪ ಪಡೆದಾಗ ತಾಯಿ ಕಂಡ ಕಂಡಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಲು ಶ್ರಮ ಪಟ್ಟಳು,ಅದೂ ಸಾಲದಾದಾಗ ಬೇರೆ ದಾರಿ ಕಾಣದೆ ಅರಸೀಕೆರೆಯ ಮಂಡಿ ವ್ಯಾಪಾರಿಯ ಉಪ ಪತ್ನಿಗೆ ಮಗು ಬಾಲಕೃಷ್ಣನನ್ನು ಎಂಟು ರೂಪಾಯಿಗೆ ಮಾರಿದಳು.ಆ ಸಾಕು ತಾಯಿ ಬಾಲಕನನ್ನು ಅರಸೀಕೆರೆಯ ಶಾಲೆಗೆ ಸೇರಿಸಿದಳು.
ಆದರೆ ಎಂಟನೆ ವಯಸ್ಸಿಗೆ ಬಾಲಣ್ಣನ ಶ್ರವಣಶಕ್ತಿ ಸಂಪೂರ್ಣ ಮಾಯವಾಯಿತು.ಕಲಿಕೆ ಕಷ್ಟವಾಯಿತು.ಲೋಯರ್ ಸೆಕಂಡರಿ ದಾಟುವುದೇ ಕಷ್ಟವಾದಾಗ ಕಲೆಯ ಕಡೆಗೆ ಆಸಕ್ತಿ ಹೊರಳಿತು.ಸ್ನೇಹಿತರ ಜೊತೆಗೂಡಿ ನಾಟಕವಾಡುವ ಹವ್ಯಾಸ ಬಲವಾಯಿತು.ಒಮ್ಮೆ ಸಾಕು ತಂದೆಯ ಜೇಬಿನಿಂದ ದುಡ್ಡು ಕದ್ದು ಸಿಕ್ಕಿ ಬಿದ್ದಾಗ ಸಾಕು ತಾಯಿ ಮನೆಯಿಂದಲೇ ದೂರ ಕಳುಹಿಸಿದಳು.
ಅಲ್ಲಿಗೆ ಇದ್ದ ಮನೆಯ ಋಣ ತೀರಿತು.ಜಗತ್ತೇ ಮನೆಯಾಯಿತು. ನಾಟಕ ಕಂಪೆನಿಯ ಗೇಟು ಕಾಯುವುದು,ಬೋರ್ಡು ಬರೆಯುವುದು,ಪೋಸ್ಟರ್ ಅಂಟಿಸುವುದು...ಹೀಗೆ ಆರಂಭವಾದ ಇವರ ವೃತ್ತಿಜೀವನ ಮುಂದೆ ರಂಗಭೂಮಿಯ ನಟನೆಗೆ ತಿರುಗಿತು.’ಕೃಷ್ಣಲೀಲಾ ’ ಇವರು ಅಭಿನಯಿಸಿದ ಮೊದಲ ನಾಟಕ. ಚಾಮುಂಡೇಶ್ವರಿ,ಗುಬ್ಬಿ ಕಂಪೆನಿಗಳಲ್ಲಿ ಅಭಿನಯಿಸಿದ್ದ ಬಾಲಣ್ಣ ನೀಲಾಂಜನೆ,ಚಿತ್ರಾಂಗದೆ ಮುಂತಾದ ೫೦ ನಾಟಕಗಳನ್ನು ಬರೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ ಸಂಪಾದಿಸಿ
ವರ್ಷ ೧೯೪೩ ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ಸುಮಾರು ೫೧೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಹಾಸ್ಯ ನಟ,ಖಳ ನಟ,ಪೋಷಕ ನಟ ..-ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. ಕಣ್ತೆರೆದು ನೋಡು,ಬಂಗಾರದ ಮನುಷ್ಯ,ತ್ರಿಮೂರ್ತಿ,ಸಂಪತ್ತಿಗೆ ಸವಾಲ್, ಗಂಧದ ಗುಡಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.ಯಮಕಿಂಕರ ಅವರ ಅಭಿನಯದ ಕೊನೆಯ ಚಿತ್ರ. ಪರ ಭಾಷೆಯ ಸ್ಟುಡಿಯೋದವರು ಕನ್ನಡ ಚಿತ್ರಗಳ ಬಗ್ಗೆ ತೋರಿಸುವ ನಿರ್ಲಕ್ಷ ಅರಿತಿದ್ದ ಬಾಲಣ್ಣ ತಾವೇ ಸ್ವಂತ ಸ್ಟುಡಿಯೋ ನಿರ್ಮಿಸುವ ಸಂಕಲ್ಪ ಮಾಡಿದರು.ಕನ್ನಡಿಗರ ಅಭಿಮಾನದ ಸಾಕಾರವಾಗಲಿ ಎಂದು ಅದಕ್ಕೆ "ಅಭಿಮಾನ್"ಎಂದು ಹೆಸರಿಟ್ಟರು.ನಮನ
ವರ್ಷ | ಚಿತ್ರದ ಹೆಸರು | ಸಹ ಕಲಾವಿದರು |
---|---|---|
೧೯೪೩ | ರಾಧಾ ರಮಣ | ಎಂ.ವಿ.ರಾಜಮ್ಮ |
ಜಿದ್ದು | ಟೈಗರ್ ಪ್ರಭಾಕರ್, ಜಯಮಾಲಾ | |
ಸಂಪತ್ತಿಗೆ ಸವಾಲ್ | ಡಾ.ರಾಜ್ ಕುಮಾರ್,ರಾಜಾ ಶಂಕರ್,ಮಂಜುಳ,ಜೋಕರ್ ಶ್ಯಾಮ್,ವಜ್ರಮುನಿ, | |
ಗಲಾಟೆ ಸಂಸಾರ | ಡಾ.ವಿಷ್ಣುವರ್ಧನ್,ಮಂಜುಳ,ರಜನೀಕಾಂತ್,ಶುಭಾ,ದ್ವಾರಕೀಶ್, | |
ಬಂಗಾರದ ಮನುಷ್ಯ | ಡಾ.ರಾಜ್ ಕುಮಾರ್,ಭಾರತಿ, ಶ್ರೀನಾಥ್,ವಜ್ರಮುನಿ,ಆದ್ವಾನಿ ಲಕ್ಷ್ಮೀದೇವಿ,ಲೋಕನಾಥ, ಭಟ್ಟಿ ಮಹಾದೇವಪ್ಪ,ಎಂ.ಪಿ.ಶಂಕರ್, | |
ಕಣ್ತೇರೆದು ನೋಡು | ಡಾ.ರಾಜ್ ಕುಮಾರ್,ಲೀಲಾವತಿ,ಜಿ.ವಿ.ಅಯ್ಯರ್, | |
ರಾಜಾ ನನ್ನ ರಾಜಾ | ಡಾ.ರಾಜ್ ಕುಮಾರ್,ಆರತಿ, ಎಡಕಲ್ಲು ಚಂದ್ರಶೇಖರ್, ಉಪಾಸನೆ ಸೀತಾರಾಂ, | |
ಗಂಧದ ಗುಡಿ | ಡಾ.ರಾಜ್ ಕುಮಾರ್,ಕಲ್ಪನಾ, ಡಾ.ವಿಷ್ಣುವರ್ಧನ್,ಆದ್ವಾನಿ ಲಕ್ಷ್ಮೀದೇವಿ,ನರಸಿಂಹ ರಾಜು,ಎಂ.ಪಿ.ಶಂಕರ್, | |
ಬಂಗಾರದ ಪಂಜರ | ಡಾ.ರಾಜ್ ಕುಮಾರ್,ಆರತಿ, ಅಶ್ವಥ್,ಲೋಕನಾಥ್,ಪಂಢರೀಬಾಯಿ, ಎಂ.ವಿ.ರಾಜಮ್ಮ,ಬೆಂಗಳೂರ್ ನಾಗೇಶ್,, | |
ಭಾಗ್ಯದ ಲಕ್ಷ್ಮೀ ಬಾರಮ್ಮ | ಡಾ.ರಾಜ್ ಕುಮಾರ್,ಮಾಧವಿ,ಪರ್ವತ ವಾಣಿ, ಶಿವರಾಂ,, | |
ಭಕ್ತ ಕುಂಬಾರ | ಡಾ.ರಾಜ್ ಕುಮಾರ್,ಲೀಲಾವತಿ,ದ್ವಾರಕೀಶ್,ಎಂ.ಎನ್.ಲಕ್ಷ್ಮೀದೇವಿ,ರಾಜಾಶಂಕರ್,ಮಂಜುಳ, | |
ಸಂತ ತುಕಾರಾಂ | ಡಾ.ರಾಜ್ ಕುಮಾರ್,ಲೀಲಾವತಿ,,, |
ನಿರ್ಮಾಪಕರಾಗಿ ಬಾಲಕೃಷ್ಣ ಸಂಪಾದಿಸಿ
ಬಾಲಕೃಷ್ಣ ಅವರು ಕೆಲವು ಚಿತ್ರಗಳಿಗೆ ಸಹನಿರ್ಮಾಪಕರಾಗಿದ್ದರು.
ಪಂಚರತ್ನ,ಭಕ್ತ ಮಲ್ಲಿಕಾರ್ಜುನ ಚಿತ್ರಗಳಿಗೆ ಹಾಡು,ಸಂಭಾಷಣೆ ಬರೆದಿದ್ದರು.
ಪ್ರಶಸ್ತಿ /ಪುರಸ್ಕಾರಗಳು ಸಂಪಾದಿಸಿ
- ೧೯೮೯ -೯೦ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
- ಬಂಗಾರದ ಮನುಷ್ಯ ಚಿತ್ರದ ಅಭಿನಯಕ್ಕೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ.
ಬಾಲಕೃಷ್ನ ಅವರು ಜುಲೈ ೧೯,೧೯೯೬ರಂದು ಕ್ಯಾನ್ಸರ್ ನಿಂದ ನಿಧನರಾದರು.ಬಾಲ್ಯದಲ್ಲಿಯೇ ಶ್ರವಣ ಶಕ್ತಿ ಸಂಪೂರ್ಣ ಹೋದರೂ ೫೬೧ ಚಿತ್ರಗಳಲ್ಲಿ ಅಭಿನಯಿಸಿದ ಬಾಲಣ್ಣನ ಜನ್ಮ ಶತಮಾನೋತ್ಸವದ (೨೦೧೧) ಸಂದರ್ಭದಲ್ಲಿ ಅವರಿಗೊಂದು "ನಮನ".