ರಾಧಾ ರಮಣ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
(ರಾಧಾರಮಣ ಇಂದ ಪುನರ್ನಿರ್ದೇಶಿತ)
"ರಾಧಾ ರಮಣ" ೧೯೪೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ಜ್ಯೋತಿ ಸಿನ್ಹ ಅವರು ನಿರ್ದೇಶನ ಹಾಗೂ.ಎಂ.ವಿ.ರಾಜಮ್ಮ ಅವರು ಚಿತ್ರವನ್ನು ನಿರ್ಮಿಸಿದ್ದರು. ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಪದ್ಮನಾಭ ಶಾಸ್ತ್ರಿ.
ರಾಧಾ ರಮಣ (ಚಲನಚಿತ್ರ) | |
---|---|
ರಾಧಾರಮಣ | |
ನಿರ್ದೇಶನ | ಜ್ಯೋತಿ ಸಿನ್ಹ |
ನಿರ್ಮಾಪಕ | ಎಂ.ವಿ.ರಾಜಮ್ಮ |
ಪಾತ್ರವರ್ಗ | ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ |
ಸಂಗೀತ | ಪದ್ಮನಾಭ ಶಾಸ್ತ್ರಿ |
ಛಾಯಾಗ್ರಹಣ | (ಸ್ಟೂಡಿಯೊ) |
ಬಿಡುಗಡೆಯಾಗಿದ್ದು | ೧೯೪೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀವಿಜಯ ಫಿಲಂಸ್ |
ಇತರೆ ಮಾಹಿತಿ | ಬಾಲಕೃಷ್ಣ ಅವರ ಅಭಿನಯದ ಮೊದಲ ಕನ್ನಡ ಚಿತ್ರ |
ಕಥಾ ಸಾರಾಂಶ
ಬದಲಾಯಿಸಿರಾಧಾ-ಕೃಷ್ಣರ ಪ್ರಣಯದ ನಿಷ್ಕಳಂಕತೆಯನ್ನು ಹೇಳುವ ಕಥೆ ಇದಾಗಿದೆ. ರಾಧೆಯ ಪತಿ ಅನಯನಿಗೆ ಆಕೆಯ ಮೇಲೆ ಸಂಶಯ. ಕೃಷ್ಣನ ಜನ್ಮ ರಹಸ್ಯ ತಿಳಿದ ಮೇಲೆ ಕೃಷ್ಣನ ವೈರಿ ಕಂಸನೊಂದಿಗೆ ಸೇರಿ ಆ ಮೂಲಕ ರಾಧಾ ಕೃಷ್ಣರನ್ನು ದೂರ ಮಾಡುವುದು ಇವನ ಉದ್ದೇಶವಾಗಿರುತ್ತದೆ. ಆದರೆ ನಂತರದ ಘಟನೆಗಳಲ್ಲಿ ಅನಯನು ತನ್ನ ಸಂಶಯವನ್ನು ನಿವಾರಿಸಿಕೊಂಡು ರಾಧೆತ ಪತಿ ನಿಷ್ಠೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ.
ವಿಶೇಷತೆ
ಬದಲಾಯಿಸಿಈ ಚಿತ್ರವನ್ನು ನಿರ್ಮಿಸುವ ಮೂಲಕ ಎಂ.ವಿ. ರಾಜಮ್ಮ ಕನ್ನಡದ ಮೊದಲ ಚಲನಚಿತ್ರ ನಿರ್ಮಾಪಕಿ ಎನ್ನಿಸಿದರು. ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್ ಅವರ ಮೊದಲ ಚಿತ್ರವಾಗಿದೆ.