ಕೆ.ವಿ ರಾಜು ಅವರು ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡವರಾಗಿದ್ದಾರೆ. ಇವರು ಕನ್ನಡ ಚಲನಚಿತ್ರ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದರು.[೧]

ಕೆ.ವಿ.ರಾಜು
ಜನನ
ಬೆಂಗಳೂರು
ಮರಣಡಿಸೆಂಬರ್‌ ೨೪,೨೦೨೧
ಇದಕ್ಕೆ ಖ್ಯಾತರುಚಲನಚಿತ್ರ ನಿರ್ದೇಶಕರು

ಇತರ ವಿವರಗಳು ಸಂಪಾದಿಸಿ

ಕೆವಿ ರಾಜು, ೧೯೮೨ರಲ್ಲಿ ಬಿಡುಗಡೆಗೊಂಡ ‘ಬಾಡದ ಹೂ’ ಎಂಬ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ೧೯೮೪ರಲ್ಲಿ ‘ಒಲವೇ ಬದುಕು’ ಎಂಬ ಚಲನಚಿತ್ರದ ಮೂಲಕ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಸಂಗ್ರಾಮ (೧೯೮೭), ಬಂಧ ಮುಕ್ತ (೧೯೮೭), ಯುದ್ಧಕಾಂಡ (೧೯೮೯), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಕೆ.ವಿ.ರಾಜು ಅವರ ನಿರ್ದೇಶನದ ಜನಪ್ರಿಯ ಚಲನಚಿತ್ರಗಳು.[೨] ೧೯೯೧ರಲ್ಲಿ ಅಮಿತಾಭ್ ಬಚ್ಚನ್ ನಟನೆಯ "ಇಂದ್ರಜೀತ್" ಹಾಗೂ ೧೯೯೪ರಲ್ಲಿ "ಉದಾರ್ ಕಿ ಝಿಂದಗೀ" ಎಂಬ ಹಿಂದಿ ಚಲನಚಿತ್ರಗಳನ್ನೂ ನಿರ್ದೇಶಿಸಿದ್ದರು.[೩]

ಚಲನಚತ್ರಗಳು ಸಂಪಾದಿಸಿ

ಕೆ.ವಿ.ರಾಜು ಅವರ ನಿರ್ದೇಶನದ ಚಲನಚಿತ್ರಗಳು: ಸಂಪಾದಿಸಿ

೧೯೮೪: ಒಲವೇ ಬದುಕು

೧೯೮೭: ಸಂಗ್ರಾಮ

೧೯೮೭: ಬಂಧಮುಕ್ತ

೧೯೮೮: ನವಭಾರತ

೧೯೮೯: ಇಂದ್ರಜಿತ್

೧೯೮೯: ಯುದ್ಧ ಕಾಂಡ

೧೯೯೧: ಸುಂದರಕಾಂಡ

೧೯೯೧: ಇಂದ್ರಜೀತ್ (ಹಿಂದಿ)

೧೯೯೨: ಬೆಳ್ಳಿ ಮೋಡಗಳು

೧೯೯೨: ಬೆಳ್ಳಿ ಕಾಲುಂಗುರ

೧೯೯೨: ಪೊಲೀಸ್ ಲಾಕಪ್

೧೯೯೪: ಉಧಾರ್ ಕಿ ಜಿಂದಗಿ (ಹಿಂದಿ)

೧೯೯೬: ಹುಲಿಯಾ

೨೦೦೧: ಪ್ರೇಮ ರಾಜ್ಯ

‌೨೦೦೧: ರಾಷ್ಟ್ರಗೀತೆ

೨೦೦೧: ರಾಷ್ಟ್ರ ಗೀತ್

೨೦೦೪: ಖೂನಿ ಜಂಗ್

೨೦೦೬: ಪಾಂಡವರು

ಬರಹಗಾರರಾಗಿ ಕಾರ್ಯನಿರ್ವಹಿಸಿರುವ ಚಿತ್ರಗಳು: ಸಂಪಾದಿಸಿ

೧೯೮೬: ಹೊಸ ನೀರು

೧೯೮೯: C.B.I. ಶಂಕರ್

೨೦೦೪: ಕಲಾಸಿಪಾಳ್ಯ

೨೦೦೮: ಗಜ

೨೦೧೦: ಶೌರ್ಯ

೨೦೧೨: ದಶಮುಖ

೨೦೧೩: ಬೃಂದಾವನ

೨೦೧೭: ಟೈಗರ್ ಗಲ್ಲಿ

೨೦೧೯: ಕೆಂಪೇಗೌಡ ೨

ಮರಣ ಸಂಪಾದಿಸಿ

೨೦೨೧ರ ಡಿಸೆಂಬರ್ ೨೪ರಂದು, ಬೆಂಗಳೂರಿರಾಜಾಜಿ ನಗರದಲ್ಲಿ ಇರುವ ತಮ್ಮ ಮನೆಯಲ್ಲಿ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ಮರಣದ ಸಮಯದಲ್ಲಿ ಉವರಿಗೆ ೬೭ ವರ್ಷ ವಯಸ್ಸಾಗಿತ್ತು.[೪]

ಉಲ್ಲೇಖಗಳು ಸಂಪಾದಿಸಿ

  1. "ಬದುಕಿನ `ಯುದ್ಧ' ಮುಗಿಸಿದ ಯುದ್ಧಕಾಂಡ ನಿರ್ದೇಶಕ ಕೆ.ವಿ.ರಾಜು: ಹುಲಿಯಾ ಇನ್ನೂ ನೆನಪು ಮಾತ್ರ! "ಟಿವಿ೧೮ ವರದಿ".
  2. "ಏಶ‍್ಯಾನೆಟ್ ವರದಿ "50ಕ್ಕೂ ಹೆಚ್ಚು ಹಿಟ್‌ ಚಿತ್ರಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ"".
  3. ""ಈ ಸಂಜೆ" ಪತ್ರಿಕೆಯ ವರದಿ". Archived from the original on 2021-12-25. Retrieved 2021-12-25.
  4. "ಪ್ರಜಾವಾಣಿ ವರದಿ "ಖ್ಯಾತ ನಿರ್ದೇಶಕ ಕೆ.ವಿ. ರಾಜು ನಿಧನ "".