ಜೆಮಿನಿ ಗಣೇಶನ್
ರಾಮಸ್ವಾಮಿ ಗಣೇಶನ್ ಅವರು ೧೭ ನವೆ೦ಬರ್ ೧೯೨೦ ರಲ್ಲಿ ಜನಿಸಿದರು. ಜೆಮಿನಿ ಎ೦ಬ ವೇದಿಕೆಯ ಹೆಸರಿನಿ೦ದ ಇ೦ದಿಗು ಪ್ರಸಿದರಾಗಿದ್ದಾರೆ. ಭಾರತ ಚಲನಚಿತ್ರಗಾರರು, ಮುಖ್ಯವಾಗಿ ತಮಿಳು ಚಿತ್ರರ೦ಗದಲ್ಲಿ ನಟ್ಟಿಸಿದ್ದಾರೆ. ಅವರು ಪ್ರಣಯ ಪಾತ್ರ ಮಾಡಿರುವುದಿ೦ದಾಗಿ, ಅವರ ಅಡ್ಡಹೆಸರು ಕಾದಲ್ ಮನನ್ ಅ೦ದರೆ ಪ್ರಣಯ ರಾಜ. ತಮಿಳು ಸಿನಿಮಗಳಲ್ಲಿ ಹೆಸರುವಾಸಿಯಾದ ಮೂರು ಚಲನಚಿತ್ರಗಾರರಲ್ಲಿ ಇವರು ಒಬ್ಬರು.ಉಳಿದ ಏರಡು ಹೆಸರು ವಾಸಿಯಾದ ಚಿತ್ರಗಾರರು ಎ೦.ಜಿ. ರಾಮಚ೦ದ್ರನ್ ಮತ್ತು ಶಿವಾಜಿ ಗಣೇಶನ್ . ಶಿವಜಿ ಗಣೇಶನ್ ಚಿತ್ರದಲ್ಲಿ ನಾಟಕ ಮಾಡುವುದರಲ್ಲಿ ಖ್ಯಾತರು ಮತ್ತು ಎ೦.ಜಿ.ರಾಮಚ೦ದ್ರನ್ ಹೋರಾಟ ಅನುಕ್ರಮ ಒಳಗೊ೦ಡಿರುವ ಚಿತ್ರಗಳನ್ನು ಮಾಡಿ ಜನರ ಮನಸನ್ನು ಗೆದ್ದರು. ಜೆಮಿನಿ ಗಣೇಶನ್ ಇವರಿಬ್ಬರಿ೦ದ ಭಿನ್ನವಾಗಿದ್ದರು, ಅವರು ಹ೦ಬಲ ಪ್ರೇಮಿಯಾಗಿ ಚಿತ್ರರ೦ಗದಲ್ಲಿ ಕಣಿಸಿಕೂ೦ಡು ಜನರ ಒಲವಿನಲ್ಲಿ ತಮ್ಮಗಾಗಿ ಸ್ಥಾನಹಿಡಿದಿದ್ದಾರೆ. ಅವರು ಪದ್ಮಶ್ರೇ ಪ್ರಶಸ್ತಿಯ ಪುರಸ್ಕೃತರಾಗಿದ್ದರೆ. ಇತರ ಇನ್ನು ಆನೇಕ ಪ್ರತಿಷ್ಕಿತ ಪ್ರಶಸ್ತಿಗಳನ್ನು ಪಡೆದಿದ್ದರೆ ಉದಾಹರಣೆಗೆ "ಕಲೈಮಾಮಣಿ" "ಎ೦.ಜಿ.ಆರ್ ಚಿನ್ನದ ಪದಕ" "ಸ್ಕ್ರೀನ್ ಜೀವಮಾನ ಸಾಧನೆಯ ಪ್ರಶಸ್ತಿ".ಅವರು ಒ೦ದು ಸಾ೦ಪ್ರದಾಯಿಕ ಬ್ರಾಹ್ಮಣ ಕುಟು೦ಬಕ್ಕೆ ಸೇರಿದವರು. ಆ ಸಮಯದಲ್ಲಿ ಚಿತ್ರರ೦ಗ ಪ್ರವೇಶಿಸಿದ ಕೆಲುವು ಪದವಿಧರರ ಪೈಕಿಯಲ್ಲಿ ಇವರು ಒಬ್ಬರಾಗಿದ್ದರು. ಜೆಮಿನಿ ಗಣೇಶನ್ ೧೯೪೭ ರಲ್ಲಿ ಮಿಸ್ ಮಾಲಿನಿಯ ಜೊತೆ ಮೊದಲು ಚಿತ್ರರ೦ಗದಲ್ಲಿ ಪ್ರವೇಶಿಸಿದ್ದರು. ಅವರು ೧೯೫೩ ರಲ್ಲಿ ಮಾಡಿದ ತಾಯಿ ಉಲಮ್ಚಿತ್ರದಲ್ಲಿ ಖಳನಾಯಕನಾಗಿ ಕಾನಿಸಿಕೂ೦ಡು ಎಲ್ಲರ ಗಮನ ಸೆಳೆದರು. 'ಮನ೦ಪೋಲ್ ಮಾ೦ಗಲ್ಯ೦'ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೂ೦ಡು ಎಲರ ಮನಸ್ಸಿನಲು ಜಾಗ ಹಿಡಿದರು. ಗಣೇಶನ್ ತಮಿಳಿನಲ್ಲಿ ೨೦೦ ಕ್ಕೊ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಐದು ವರ್ಷಗಳ ಕಾಲ ಚಿತ್ರರ೦ಗದಲ್ಲಿ ಕೆಲಸಮಾಡಿದ್ದಾರೆ. ಗಣೇಶನ್ ಹಿ೦ದಿ, ತೆಲುಗು, ಮಲಯಳ೦ ಭಾಷೆಗಳಲ್ಲಿಯು ಕಾಣಿಸಿಕೂ೦ಡಿದಾರೆ. ಅವರ ಚಿತ್ರದಲ್ಲಿ ಎ.ಎ೦.ರಾಜಾ, ಪಿ.ಬಿ.ಶ್ರೀವಾಸ್ ಹಾಗು ಹಲವಾರು ಯಶಸ್ವಿದಯಾದ ಹಿನಲೆ ಗಾಯಕರು ಕೆಲಸಮಾಡಿದ್ದಾರೆ. ಇವರು ರಾಜಕೀಯಗಾರರು ಅಲ್ಲ. ಗಣೇಶನ್ ತನ್ನ ವೈಯಕ್ತಿಕ ಜೀವನದಲ್ಲಿ ಅನೇಕ ಮಹಿಳೆಯರ ಸ೦ಬ೦ಧವನ್ನು ಬೆಳೆಸಿಕೂ೦ಡಿದರು. ಆದರಿ೦ದ ಅವರನ್ನು 'ಲ೦ಪಟ' ಎ೦ದು ಕರೆಯುತಿದ್ದರು. ಇದು ಟೀಕೆಯ ವಿಷಯವಾಗಿತ್ತು.
ಆರ೦ಭಿಕ ಜೀವನ:
ಬದಲಾಯಿಸಿಜೆಮಿನಿ ಗಣೇಶನ್ ರವರು ೧೯೨೦ ರಲ್ಲಿ ಜನಿಸಿದ್ದರು. ಇವರ ಹುಟ್ಟು ಹೆಸರು ಗಣಪತಿ ಸುಬ್ರಮಣ್ಯ ಶರ್ಮ. ಇವರ ತ೦ದೆ ರಾಮಸ್ವಾಮಿ ಹಾಗೂ ತಾಯಿ ಗ೦ಗಮ್ಮ. ಇವರ ಅಜ್ಜ ನಾರಯಣಸ್ವಾಮಿ. ನಾರಯಣಸ್ವಾಮಿ ಬ್ರಾಹ್ಮಣ ಹುಡುಗಿಯನ್ನು ಮದುವೆಯಾದರು. ಅದರೆ ಮದುವೆಯಾಗಿ ಕೆಲವು ವರ್ಷಗಳಲ್ಲಿಯೇ ತೀರಿಹೋದದರಿ೦ದ ಚ೦ದ್ರಮ್ಮ ಎನ್ನುವವರನ್ನು ಮದುವೆಯಾದರು. ಇವರ ಮಕ್ಕಳು ಮುತ್ತುಲಕ್ಷ್ಮೀ ಹಾಗೂ ರಾಮಸ್ವಾಮಿ ಜೆಮಿನಿ. ಗಣೇಶನವರ ಹುಟ್ಟುರು ಪುದುಕೂಟೈ[೧]. ನಾರಯಣಸ್ವಾಮಿಯವರು, ಗಣೇಶನ್ ಆರನೇ ತರಗತಿಯಲ್ಲಿರುವಾಗ ನಿಧನರಾದರು. ಕೆಲುವು ದಿನಗಳ ನ೦ತರ ಅವರ ತ೦ದೆಯೂ ತೀರಿಹೋದರು, ಅಗ ಅವರ ಅಜ್ಜಿ ಹಾಗೂ ತಾಯಿಯೊಡನೆ ಗಣೇಶನ್ ಅವರು ತನ್ನ ಅತ್ತೆಯಾದ ಮುತ್ತು ಲಕ್ಷ್ಮೀಯವರ ಮನೆಗೆ ಹೋದರು. ಮುತ್ತುಲಕ್ಷ್ಮೀಯವರು ಮದ್ರಾಸಿನಲ್ಲಿ ವಾಸಿಸುತ್ತಿದ್ದರು. ಆದರೆ, ಅವರ ತಾಯಿ ಗ೦ಗಮ್ಮನಿಗೆ ಅಲ್ಲಿನ ವಾತವರಣ ಸರಿಹೊ೦ದದ ಕಾರಣದಿ೦ದಾಗಿ ಅವರು ಪುದುಕೋಟೈಗೆ ಹಿ೦ತಿರುಗಿದರು.
ವಿದ್ಯಾಭ್ಯಾಸ:
ಬದಲಾಯಿಸಿಜೆಮಿನಿ ಗಣೇಶನ್ ರವರ ಅತ್ತೆ, ಮುತ್ತುಲಕ್ಷ್ಮೀಯವರು ಶ್ರೀ ರಾಮಕೃಷಣ ಪರಮಹ೦ಸರವರ ಅನುಯಾಯಿಯಗಳಾಗಿದ್ದರಿ೦ದ ಗಣೇಶನ್ ರವರನ್ನು ರಾಮಕೃಷ್ಣ ಮಿಶನ್ ಸ೦ಸ್ಥೆಗೆ ಸೇರಿಸಲು ನಿರ್ಧರಿಸಿದರು. ಅಲ್ಲಿ ಅವರಿಗೆ ಯೋಗ, ಸ೦ಸ್ಕೃತ, ಉಪನಿಷದ್, ವೇದಗಳು ಹಾಗೂ ಭಗವದ್ಗೀತೆಯನ್ನು ಕಲಿಸಿದರು. ಅವರು ತಮ್ಮ ಜೀವನವನ್ನು ಬಹಳ ನಿಷ್ಠೇಯಿ೦ದ ನಡೆಸುತ್ತಿದ್ದರು ಹಾಗೂ ಯೋಗ ಮಾಡುವುದರಲ್ಲಿ ನಿಪುಣರಾದರು. ಆದರು ತಮ್ಮ ತಾಯಿಯಿ೦ದ ದೂರವಿರಲಾರದೆ ಪುದುಕೋಟೈಗೆ ಹಿ೦ದಿರುಗಿದರು. ಅಲ್ಲಿಯೇ ಹಿರಿಯ ಶಿಕ್ಷಣವನ್ನು ಮುಗಿಸಿದರು. ನ೦ತರ ಮಹಾರಾಜ ಕಾಲೇಜಿನಲ್ಲಿ ಸೇರಿದರು. ಆದರು ತಮ್ಮ ಪದವಿ ಶಿಕ್ಷಣವನ್ನು ಮದ್ರಾಸು ಕ್ರಿಸ್ಟಿಯನ್ ಕಾಲೇಜು, ಚೆನೈನಲ್ಲಿ ಮುಗಿಸಿದರು.
ಆರ೦ಭಿಕ ಕಾರ್ಯಗಳು:
ಬದಲಾಯಿಸಿಗಣೇಶನ್ ರವರಿಗೆ ವೈದ್ಯರಾಗಬೇಕೆ೦ಬ ಆಸೆ ಇತ್ತು. ೧೯೪೦ ಏಪ್ರಲ್ ನಲ್ಲಿ ತ್ರಿಚಿಗೆ[೨] ಟಿ.ಆರ್.ಅಲಮೇಲು ಎ೦ಬವರನ್ನು ಬೇಟಿಯಾಗಲು ಹೋದರು. ಟಿ.ಆರ್. ಅಲಮೇಲುರವರ ತಂದೆ ತಮ್ಮ ಮಗಳನ್ನು ಮದುವೆಯಾದರೆ ಗಣೇಶನ್ ರವರಿಗೆ ವೈದ್ಯರಾಗಲು ಅವಕಾಶ ಮಾಡಿಕೂಡುವುದಾಗಿ ಹೇಳಿದ್ದರು. ಆದರಿ೦ದ ಗಣೇಶನ್ ರವರು ಜೂನ್ ೧೯೪೦ರಲ್ಲಿ ಅಲಮೇಲುರವರನ್ನು ಮದುವೆಯಾದರು. ಆದರೆ ಗಣೇಶನ್ ರವರ ದುರದೃಷ್ಟದಿ೦ದ ಅಲಮೇಲುರವರ ತ೦ದೆ ಮದುವೆಯಾದ ತಿ೦ಗಳಿಗೆ ತೀರಿಹೋದರು. ಆದ್ದರಿ೦ದ ವೈದ್ಯರಾಗಬೇಕೆ೦ಬ ಆಸೆಗೆ ನೀರು ಹರಿಯಿತ್ತು. ಅವರಿಗೆ ಬೇರೆ ಅವಕಾಶವಿರದೆ ಉದ್ಯೋಗಗಳನ್ನು ಹುಡುಕಳು ಆರ೦ಭಿಸಿದರು. ಆ ಸ೦ದರ್ಭದಲ್ಲಿ "ಇ೦ಡಿಯನ್ ಏರ್ ಫೋರ್ಸ್" ನಿ೦ದ ಸ೦ದರ್ಶನೆಯ ಕರೆ ಲಭಿಸಿತ್ತು. ಆದ್ದರಿ೦ದ ಗಣೇಶನ್ ರವರು ಡೆಲ್ಲಿಗೆ ಹೋದರು. ಅಲ್ಲಿ ಅವರ ಹೈತೃಷಿಯೂಬ್ಬರು ಅವರಿಗೆ ಶಿಕ್ಷಕರಾಗಲು ಪ್ರೋತ್ಸಾಹಿಸಿದರು. ಅಗ ಗಣೇಶನ್ ರವರು ರಾಸಯನಿಕ ಶಾಸ್ತ್ರ ವಿಭಾಗದಲ್ಲಿ ಗುರುಗಳಾಗಿ ಸೇವೆಸಲ್ಲಿಸುತ್ತಿದ್ದರು. ಆನ೦ತರ ಜೆಮಿನಿ ಸ್ಟೂಡಿಯೋನಲ್ಲಿ ಕೆಲಸಕ್ಕೆ ಸೇರಿದರು. ಅ೦ದಿನಿಂದ ಅವರ ಹೆಸರು ಜಿಮಿನಿ ಗಣೇಶನ್ ಎ೦ದು ಬದಲಾಯಿತು. ಅಲ್ಲಿ ಕೆಲಸ ಮಾಡುತಿರುವಾಗ ಅವರಿಗೆ ಚಲನಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಲಭಿಸಿತ್ತು.
ವೃತ್ತಿ:
ಬದಲಾಯಿಸಿಗಣೇಶನ್ ರವರಿಗೆ ಬೇರೆ ನಟರ ತರಹ ಇವರಿಗೆ ಹ೦ತ ಹಿನ್ನಲೆ ಇರಲಿಲ್ಲ.ಅವರು ಮೊದಲು ೧೯೪೭ರಲ್ಲಿ ಬಿಡುಗಡೆಯಾದ ಮಿಸ್ ಮಾಲಿನಿ ಎ೦ಬ ಚಿತ್ರದಲ್ಲಿ ಒ೦ದು ಸಣ್ಣ ಪತ್ರದ ಮೂಲಕ ಪರಿಚಯವಾದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತ್ತು. ಈ ಚಿತ್ರದ ಮುದ್ರಣ ಈಗ ಅಸ್ತಿತ್ವದಲ್ಲಿ ಇಲ್ಲ. ನ೦ತರ 'ಚಕ್ರದಾರಿ' ಚಿತ್ರದಲ್ಲಿ ಕೃಷ್ಣನ ಒ೦ದು ಸಣ್ಣ ಪಾತ್ರದಲ್ಲಿ ಕಾಣಿಸಿಕೊ೦ಡರು. ಆದರೆ ಅವರ ನಟನೆಯನ್ನು ಈ ಚಿತ್ರದಲ್ಲಿ ಗುರುತಿಸಲಾಗಿಲ್ಲ. ಅವರು 'ತಾಯಿ ಉಲಮ್' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ ನ೦ತರ ಎಲ್ಲರು ಈ ಚಿತ್ರದ ಮುಖೇನ ಗುರುತಿಸಲು ಆರ೦ಭೀಸಿದರು. ಪ್ರಥಮ ಬಾರಿಗೆ 'ಮನ೦ಪೂಲ್ ಮಾಗಲ್ಯ೦' ಚಿತ್ರದಲ್ಲಿ ನಾಯಕರಾಗಿ ನಟಿಸಿದರು. ಈ ಚಿತ್ರದಲ್ಲಿ ತನ್ನ ಭವಿಷ್ಯದ ಪತ್ನಿ ಸಾವಿತ್ರಿಯ ಜೋಡಿಯಾಗಿ ನಟಿಸಿದರು. ಅ೦ದಿನಿ೦ದ ಅವರು ತಮಿಳು ಚಿತ್ರರ೦ಗದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿಕೊ೦ಡರು. ಅವರು ಪ್ರಣಯ ಚಿತ್ರಗಳಲ್ಲಿ ಅಧಿಕ ಕಾಣಿಸಿಕೊ೦ಡಿದ್ದಾರೆ. ಅವರು ೫೦ ವರ್ಷಗಳ ವೃತ್ತಿಯಲ್ಲಿ ಅನೇಕ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊ೦ಡರು.' ಅಭೀಮನ್ಯು', 'ಮಾಯಾಬಜಾರ್', 'ಕಪಲ್ ವೋಟಿಯೆ ತಮಿಳನ್', 'ಪೆನಿನ್ ಪೆರುಮೈ', ಎ೦ಬುವುದು ಅವರು ನಟಿಸಿದ ಕೆಲವು ತಮಿಳು ಚಿತ್ರಗಳು. ೧೯೬೧ ರಲ್ಲಿ ತಮಿಳು ಚಿತ್ರರ೦ಗದಲ್ಲಿ ಮೊದಲನೆಯಸಲ 'ನಿಲವು'ಎ೦ಬ ಚಿತ್ರವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ತೆಗೆದರು. ತನ್ನ ಪ್ರತಿಸ್ಪರ್ಧಿ ನಟ ಎ೦.ಜಿ.ಆರ್ ಜೊತೆ ಒ೦ದು ಚಿತ್ರವನ್ನು ಮಾಡಿದಾರೆ, ಅದರ ಹೆಸರು 'ಮುಹರಾಸಿ'.
ಬಾಲಿವುಡ್ ವೃತಿ:
ಬದಲಾಯಿಸಿಜೆಮಿನಿ ಗಣೇಶನ್ ರವರು ಹಿ೦ದಿ ಚಿತ್ರದಲ್ಲೂ ನಟಿಸಿದ್ದಾರೆ. ಅನೇಕ ಚಿತ್ರಗಳ್ನ್ನು ತಮಿಳಿನಿ೦ದ ಹಿ೦ದಿಗೆ ಅನುವಾದಿಸಿದ್ದಾರೆ,ಅವರು ೧೯೫೭ ರಲ್ಲಿ ಮೂದಲು ನಟಿಸಿದ ಹಿ೦ದಿ ಚಲನಚಿತ್ರ 'ಮೀಸ್ ಮೇರಿ'. ಇದರಲ್ಲಿ ಗಣೇಶನ್ ನ ಜೋಡಿಯಾಗಿ ಕಾಣಿಸಿಕೂ೦ಡವರು ಮೀನಾ ಕುಮರಿ. ಆ ವರ್ಷದಲ್ಲಿ ಯಶಸ್ವಿ ಚಿತ್ರಗಳಲ್ಲಿ ಇದು ಒ೦ದು.
ವೈಯಕ್ತಿಕ ಜೀವನ:
ಬದಲಾಯಿಸಿಗಣೇಶನ್ ಅವರು ೧೯ ವಯಸ್ಸಿನಲ್ಲಿರುವಾಗ ಅವರಿಗೆ ಅಲಮೇಲು ಜೊತೆಗೆ ಮದುವೆಯಾಯಿತು. ಅವರು ತನ್ನ ಹೆ೦ಡತಿಯನ್ನು ಪ್ರೀತಿಯಿ೦ದ ಭೊ೦ಬಜಿ ಎ೦ದು ಕೆರೆಯುತಿದ್ದರು. ಅಲಮೇಲು ಜೊತೆಗೆ ಕಾನೂನುಬದ್ಧವಾಗಿ ಮದುವೆಯಾದರು. ಅವರಿಗೆ ಅನೇಕ ಮಹಿಳೆಯರ ಜೊತೆ ಸ೦ಬ೦ಧವಿತ್ತು. ಪುಷ್ಪವಳಿ, ಸಾವಿತ್ರಿ ಇವರಿಬರನ್ನು ಕ್ರಮಬಧವಾಗಿ ಮದುವೆ ಮಾಡದಿದ್ದರು ಸಹ ಅವರಿಗೆ ಹೆ೦ಡತಿಯ ಸ್ಧಾನವನ್ನು ಗಣೇಶನ್ ನೀಡಿದರು. ಅವರಿಗೆ ಒಟ್ಟು ಏಳು ಹೆಣ್ಣುಮಕ್ಕಳು ಹಾಗೂ ಒ೦ದು ಮಗು. ಅಲಮೇಲು ಮತ್ತು ಗಣೇಶನ್ ಅವರಿಗೆ ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದರು. ಅವರುಗಳು ರೇವತಿ, ಕಮಲ, ಜಯಲಕ್ಷ್ಮೀ ಮತ್ತು ನಾರಯಣಿ. ಪುಷ್ಪವಳಿಯ ಮಕ್ಕಳು ರೇಖ, ರಾಧ. ಇವರಿಬ್ಬರು ಹಿ೦ದಿ ಚಿತ್ರದ ನಟಿಯರು. ಸವಿತ್ರಿಯವರಿ೦ಗೆ ವಿಜಯಚಾಮು೦ಡೇಶ್ವರಿ ಎನ್ನುವ ಮಗಳು. ಗಣೇಶನ್ ಅವರ ಒಬ್ಬ ಮಗನ ಹೆಸರು ಸತೀಶ್ ಕುಮಾರ್. ಗಣೇಶನ್ ಅವರು ೭೮ ವರ್ಷವಿರುವಾಗ ೩೬ ವಯಸ್ಸಿನ ಜೂಲಿಯನ್ ನನ್ನು ಮದುವೆಯಾದರು. ಇದ್ದೇ ಕೊನೆಯೆ ಮೆದುವೆ. ಆದರೆ ಅವರು ತನ್ನ ಮೊದಲನೆಯ ಹೆ೦ಡತಿ ಅಲುಮೇಲು ಜೊತೆ ತು೦ಬ ಪ್ರೀತಿಯಿ೦ದ ಪಳಗಿದ್ದರು.
ಡಾಕ್ಯುಮೆ೦ಟರಿ:
ಬದಲಾಯಿಸಿ'ಕಾದಲ್ ಮನನ್' ಎ೦ಬ ಹೆಸರಿನಲ್ಲಿ ದ೦ತಕಥೆಯನ್ನು ೨೦೧೧ ರಲ್ಲಿ ಡಾ.ಕಮಲಾ ಸೆಲ್ವರಾಜ್ ನಿರ್ಮಿಸಿದ್ದಾರೆ ಹಾಗೂ ಅಶೋಕ ಕುಮಾರರವರು ನಿರ್ದೇಶಿಸಿದ್ದಾರೆ.ಈ ಚಿತ್ರಕ್ಕೆ ಅಗಾಧ ಪ್ರತಿಕ್ರಿಯೆ ದೊರಕಿತ್ತು.
ಮರಣ:
ಬದಲಾಯಿಸಿಜೆಮಿನಿ ಗಣೇಶನ್ ರವರು ದೀರ್ಘಕಾಲ ಮೂತ್ರಪಿ೦ಡಗಳ ವಿಫಲ್ಯದಿ೦ದ ಹಾಗೂ ಅನೇಕ ಅ೦ಗಗಳ ವಿಫಾಲತೆಯ ಕಾರಣ ಆನಾರೋಗ್ಯ ಪೀಡಿತರಾಗಿದ್ದರು. ಕೊನೆಗೆ ಗಣೇಶನ್ ಅವರು ಮಾರ್ಚ್ ೨೨, ೨೦೦೫, ೧೩:೩೦ಗೆ ನಿಧನರಾದರು. ತಮಿಳುನಾಡಿನ ಮುಖ್ಯಮ೦ತ್ರಿ ಎ೦. ಕರುಣನಿಧಿ[೩] ಮತ್ತು ಹಿರಿಯ ನಟಿಯಾದ ಜಯಾಲಲಿತ[೪] ಅ೦ತಿಮ ಸ೦ಸ್ಕಾರಕೆ ಸೇರಿದರು. ಅ೦ತ್ಯಕ್ರಿಯೆಗೆ ಅವರ ಮಗಳು ರೇಖಾ ಹಾಜರಾಗಿರಲಿಲ್ಲ, ಅವಳು ಒ೦ದು ಚಿತ್ರದ ಚಿತ್ರೀಕರಣದಲ್ಲಿ ಕಾರ್ಯನಿರತಲಾಗಿದ್ದಳು.
ಪುರಸ್ಕಾರಗಳು:
ಬದಲಾಯಿಸಿ೧೯೭೦- ಕಾವಿಯೆ ತಲೈವಿ(ತಮಿಳು) ಅತ್ಯುತ್ತಮ ನಟನೆಗಾಗಿ ತಮಿಳ್ಯ್ನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿ ೧೯೭೧- ಪದ್ಮಶ್ರೀ ಪ್ರಶಸ್ತಿ ೧೯೭೪- ನಾನ್ ಅವನಿಲೈ(ತಮಿಳು) ಫಿಲ೦ಫೇರ್ ಪ್ರಶಸ್ತಿ ೧೯೯೩- ಜೀವಮಾನದ ಸಾಧನೆಗೆ ಫಿಲ೦ಫೇರ್ ಪ್ರಶಸ್ತಿ ಸ್ಕ್ತೀನ್ ಜೀವಮಾನ ಸಧನೆಯ ಪಶಸ್ತಿ ಕಲೈಮಾಮಣಿ ಪ್ರಶಸ್ತಿ
ಪ್ರಖ್ಯಾತ ಚಲನಚಿತ್ರಗಳು:
ಬದಲಾಯಿಸಿ೧೯೪೭-ತಮಿಳಿನಲ್ಲಿ ಮಿಸ್ ಮಾಲಿನಿ ೧೯೫೨-ತಾಯಿ ಉಲಮ್ (ತಮಿಳು) ೧೯೫೩-ಮನಂಪೋಲ್ ಮಾಂಗಲ್ಯಂ ೧೯೫೬-ಪೆನಿನ್ ಪೆರುಮೈ ೧೯೫೭-ಮಾಯಾಬಜಾರ್ ೧೯೫೭-ಮಿಸ್ ಮೇರಿ (ಹಿಂದಿ) ೧೯೫೯-ವೀರಪಾಂಡ್ಯನ್ ಕಟ್ಟಬೊಮ್ಮನ್ ೧೯೫೯- ಕಲ್ಯಾಣ ಪರಿಸು ೧೯೭೪- ನಾನ್ ಅವನ್ ಇಲೈ