ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲಿ ಒಬ್ಬರು ವೈ.ಆರ್.ಸ್ವಾಮಿ.

ಜನನ,ಬಾಲ್ಯ

ಬದಲಾಯಿಸಿ

ಹುಟ್ಟಿದ್ದು ಕರ್ನಾಟಕಚಿತ್ರದುರ್ಗದಲ್ಲಾದರೂ ಬೆಳೆದದ್ದು ನೆರೆಯ ಆಂಧ್ರಪ್ರದೇಶಹೈದರಾಬಾದ್‌ನಲ್ಲಿ.ಮೊದಲ ತೆಲುಗು ವಾಕ್ಚಿತ್ರದ ನಿರ್ದೇಶಕ ಹೆಚ್.ಎಂ.ರೆಡ್ಡಿ ಇವರ ಸಾಕುತಂದೆ.

ಬೆಳ್ಳಿತೆರೆಯ ನಂಟು

ಬದಲಾಯಿಸಿ

ಹೆಚ್.ಎಂ.ರೆಡ್ಡಿಯವರ ನಿರ್ದೇಶನದ ತೆಲುಗು ಚಿತ್ರ 'ಭಕ್ತ ಪ್ರಹ್ಲಾದ'ದಲ್ಲಿ ಪ್ರಹ್ಲಾದನ ಪಾತ್ರ ನಿರ್ವಹಿಸುವ ಮೂಲಕ ಸ್ವಾಮಿ ಬೆಳ್ಳಿತೆರೆಗೆ ಬಂದರು.ತಂದೆಯ ಸಹಾಯಕರಾಗಿ ದುಡಿದು,ಚಿತ್ರರಂಗದ ಅಪಾರ ಅನುಭವ ಗಳಿಸಿಕೊಂಡರು.ಸ್ನಾತಕೋತ್ತರ ಪದವಿ ಪಡೆದು,ಸರಕಾರದ ಉನ್ನತ ಹುದ್ದೆಯಲ್ಲಿದ್ದರು.ಆದರೆ ಚಿತ್ರರಂಗದ ಸೆಳೆತ,ಅವರನ್ನು ಆ ಹುದ್ದೆ ತ್ಯಜಿಸುವಂತೆ ಮಾಡಿತು.ಮೊದಮೊದಲು ತೆಲುಗು,ತಮಿಳು ಚಿತ್ರಗಳನ್ನು ನಿರ್ದೇಶಿಸುತ್ತಿದ್ದರು.ನಂತರ ತಮ್ಮ ಸ್ವಂತ ಲಾಂಛನ ರೋಹಿಣಿ ಫಿಲಂಸ್ ಮೂಲಕ ಕನ್ನಡ ಚಲನಚಿತ್ರ ರೇಣುಕಾ ಮಹಾತ್ಮೆ ನಿರ್ಮಿಸಿ,ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.ಸ್ವಾಮಿಯವರು ಒಟ್ಟಾರೆ ೩೮ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅವರ ಪ್ರತಿಯೊಂದು ಚಿತ್ರವೂ ವಿಶಿಷ್ಟವಾಗಿದೆ,ವಿಭಿನ್ನವಾಗಿದೆ.

ಇವರ ನಿರ್ದೇಶನದ ಕೆಲವು ಕನ್ನಡ ಚಲನಚಿತ್ರಗಳು - ವಿಶೇಷತೆ

ಬದಲಾಯಿಸಿ

ಪ್ರಶಸ್ತಿ,ಗೌರವಗಳು

ಬದಲಾಯಿಸಿ

ವೈ.ಆರ್.ಸ್ವಾಮಿಯವರು ೨೦೦೨ರಲ್ಲಿ ವಿಧಿವಶರಾದರು.