ಮಾಲಾ ಸಿನ್ಹಾ (ಟೆಂಪ್ಲೇಟು:Lang-ne) (ಜನನ: 11 ನವೆಂಬರ್‌ 1936), ನೇಪಾಳಿ ಜನಾಂಗ ಮೂಲದ ಒಬ್ಬ ಭಾರತೀಯ ನಟಿ. 1950ರ ದಶಕದಿಂದ ಹಿಡಿದು, 1970ರ ದಶಕದ ಆರಂಭದಕಾಲದ ವರೆಗೆ ಬಿಡುಗಡೆಯಾದ ಹಲವು ವಿಕ್ರಮ ಸಾಧನೆಯ ಬಾಲಿವುಡ್‌ನ ಹಿಂದಿ ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾದರು. ಪ್ಯಾಸಾ (1957), ಧೂಲ್‌ ಕಾ ಫೂಲ್‌ (1959), ಅನಪಢ್‌ (1962), ಹಿಮಾಲಯ್‌ ಕಿ ಗೋದ್‌ ಮೇಂ (1965), ಆಂಖೇಂ (1968) ಹಾಗೂ ಮರ್ಯಾದಾ (1971) ಸೇರಿದಂತೆ ಹಲವು ಯಶಸ್ವೀ ಹಿಂದಿ ಚಲನಚಿತ್ರಗಳಲ್ಲಿ ಮಾಲಾ ಸಿನ್ಹಾ ಪ್ರಮುಖ ನಟಿಯಾಗಿದ್ದರು.[]

Mala Sinha
ಚಿತ್ರ:Mala Sinha.jpg
Mala Sinha in Baharen Phir Bhi Aayengi (1966)
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Alda Sinha
(1936-11-11) ನವೆಂಬರ್ ೧೧, ೧೯೩೬ (ವಯಸ್ಸು ೮೮)
Kashmir, India
ವೃತ್ತಿ Actress
ವರ್ಷಗಳು ಸಕ್ರಿಯ 1952 - 1994
ಪತಿ/ಪತ್ನಿ C. P. Lohani

ಆರಂಭಿಕ ಜೀವನ

ಬದಲಾಯಿಸಿ

ಮಾಲಾ ನೇಪಾಳಿ ಕ್ರಿಶ್ಚಿಯನ್‌ ಕುಟುಂಬದಲ್ಲಿ ಅಲ್ಬರ್ಟ್‌ ಸಿನ್ಹಾ ಅವರ ಪುತ್ರಿಯಾಗಿ ಜನಿಸಿದರು. ಇವರಿಗೆ ಆಲ್ಡಾ ಎಂದು ನಾಮಕರಣ ಮಾಡಿದ್ದರು. ಶಾಲೆಯಲ್ಲಿ ಈ ಬಾಲಿಕೆಯನ್ನು 'ಡಾಲ್ಡಾ ' (ಭಾರತದಲ್ಲಿ ಮಾರಾಟವಾಗುತ್ತಿದ್ದ ಒಂದು ತರಕಾರಿ ತೈಲ) ಎಂದು ಚುಡಾಯಿಸಿ,ಕಾಲೆಳೆಯುತ್ತಿದ್ದರು. ಆದ್ದರಿಂದ ಆಲ್ಡಾ ಹೆಸರು ಬದಲಾಯಿಸಿ ಮಾಲಾ ಆದರು.[]

ವೃತ್ತಿಜೀವನ

ಬದಲಾಯಿಸಿ

ಜೈ ವೈಷ್ಣೊ ದೇವಿ, ಶ್ರೀ ಕೃಷ್ಣ ಲೀಲಾ, ಜೋಗ್‌ ಬಿಯೊಗ್‌ ಮತ್ತು ಧೂಳಿ ಎಂಬ ಬಂಗಾಳೀ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸುವುದರೊಂದಿಗೆ, ಮಾಲಾ ಸಿನ್ಹಾ ತಮ್ಮ ವೃತ್ತಿಜೀವನ ಆರಂಭಿಸಿದರು. ಶಾಲಾ ನಾಟಕವೊಂದರಲ್ಲಿ ನಟಿಸುತ್ತಿದ್ದ ಬಾಲಿಕೆ ಮಾಲಾರನ್ನು ಗಮನಿಸಿದ ಖ್ಯಾತ ಬಂಗಾಳಿ ಚಲನಚಿತ್ರ ನಿರ್ದೇಶಕ ಅರ್ಧೇಂದು ಬೋಸ್‌, ಮಾಲಾರ ತಂದೆಯ ಒಪ್ಪಿಗೆ ಪಡೆದು, ತಮ್ಮ ಚಲನಚಿತ್ರ 'ರೋಷನಾರಾ ' (1952)ರಲ್ಲಿ ಮುಖ್ಯನಟಿಯಾಗಿ ಸೇರಿಸಿಕೊಂಡರು. ಇದು ಮಾಲಾ ಸಿನ್ಹಾರ ಮೊಟ್ಟಮೊದಲ ಚಲನಚಿತ್ರವಾಗಿತ್ತು.

ಕೋಲ್ಕತ್ತಾದಲ್ಲಿ ಇನ್ನೂ ಕೆಲವು ಚಲನಚಿತ್ರಗಳಲ್ಲಿ ನಟಿಸಿದ ನಂತರ, ಬಂಗಾಳಿ ಚಲನಚಿತ್ರವೊಂದಕ್ಕಾಗಿ ಚಿತ್ರೀಕರಣ-ನಟನೆಯಲ್ಲಿ ಪಾಲ್ಗೊಳ್ಳಲು ಮಾಲಾ ಮುಂಬಯಿಗೆ ತೆರಳಬೇಕಿತ್ತು. ಅಲ್ಲಿ ಅವರು ಹಿಂದಿ ಚಲನಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಗೀತಾ ದತ್‌ರನ್ನು ಭೇಟಿಯಾದರು. ಗೀತಾ, ಮಾಲಾರಿಂದ ಬಹಳಷ್ಟು ಪ್ರಭಾವಿತರಾಗಿ, ಅವರನ್ನು ಚಲನಚಿತ್ರ ನಿರ್ದೇಶಕ ಕಿದಾರ್‌ ಶರ್ಮಾ ಅವರಿಗೆ ಪರಿಚಯಿಸಿದರು. ತಮ್ಮ ಚಲನಚಿತ್ರ ರಂಗೀನ್‌ ರಾತೇಂ 'ನಲ್ಲಿ ಕಿದಾರ್‌ ಶರ್ಮಾ ಮಾಲಾ ಸಿನ್ಹಾರನ್ನು ಪ್ರಧಾನ ನಟಿಯ ಪಾತ್ರಕ್ಕಾಗಿ ಆರಿಸಿಕೊಂಡರು. ಆದರೆ, ಪ್ರದೀಪ್‌ ಕುಮಾರ ಜೊತೆ ಅಭಿನಯಿಸಿದ ಬಾದಷಾಹ್‌ ' ಮಾಲಾರ ಮೊಟ್ಟಮೊದಲ ಹಿಂದಿ ಚಲನಚಿತ್ರವಾಗಿತ್ತು. ನಂತರ 'ಏಕಾದಶಿ' ಎಂಬ ಪೌರಾಣಿಕ ಕಥಾವಸ್ತುವಿನ ಚಲನಚಿತ್ರದಲ್ಲಿ ನಟಿಸಿದರು. ಇವರೆಡೂ ಚಲನಚಿತ್ರಗಳು ವಿಫಲವಾದವು. ಆದರೆ, ಕಿಶೋರ್‌ ಸಾಹು ನಿರ್ದೇಶನದ ಹ್ಯಾಮ್ಲೆಟ್ ‌ ಚಲನಚಿತ್ರದಲ್ಲಿ ಮಾಲಾ ಸಿನ್ಹಾರ ಅಭಿನಯ ಬಹಳಷ್ಟು ಪ್ರಶಂಸೆ ಗಳಿಸಿತು. ಆದರೆ ಈ ಚಲನಚಿತ್ರವೂ ಹಣ ಗಳಿಕೆಯಲ್ಲಿ ವಿಫಲವಾಯಿತು.[]

ಮಾಲಾ ಸಿನ್ಹಾ ತಕ್ಕಮಟ್ಟಗಿನ ಗಾಯಕಿಯೂ ಆಗಿದ್ದರು. ಆಕಾಶವಾಣಿ (ಆಲ್‌ ಇಂಡಿಯಾ ರೇಡಿಯೊ)ಗಾಗಿ ಅವರು ಹಾಡಿದ್ದರು. ಆದರೂ, ಚಲನಚಿತ್ರಗಳಲ್ಲಿ, ಸ್ವತಃ ತಮಗಾಗಿಯೂ ಹಿನ್ನೆಲೆ ಗಾಯನ ಮಾಡಲು ಮಾಲಾಗೆ ಅವಕಾಶ ದೊರೆಯಲಿಲ್ಲ. 1957ರಲ್ಲಿ, ಬಾಲಿವುಡ್‌ನ ಖ್ಯಾತ ನಟ-ನಿರ್ದೇಶಕ ಗುರುದತ್‌ (ಗೀತಾ ದತ್‌ರ ಪತಿ) ತಮ್ಮ ಚಲನಚಿತ್ರ ಪ್ಯಾಸಾ ದ ತಾರಾಬಳಗಲ್ಲಿ ಮಾಲಾ ಸಿನ್ಹಾರನ್ನು ಸೇರಿಸಿಕೊಂಡರು. ಈ ಪಾತ್ರಕ್ಕೆ ಮೂಲತಃ ಮಧುಬಾಲಾರನ್ನು ಪರಿಗಣಿಸಲಾಗಿತ್ತು. ಒಬ್ಬ ಬಡ, ವಿಫಲ ಕವಿಯ (ಗುರುದತ್‌ ನಿರ್ವಹಿಸಿದ ಪಾತ್ರ) ಬದಲಿಗೆ, ಒಬ್ಬ ಶ್ರೀಮಂತನನ್ನು (ಪೋಷಕ ನಟ ರಹಮಾನ್ ನಿರ್ವಹಿಸಿದ ಪಾತ್ರ‌) ವಿವಾಹವಾಗಲು ನಿರ್ಧರಿಸುವ ಮಹಿಳೆಯ ಮಾರ್ಮಿಕ ಪಾತ್ರ ನಿರ್ವಹಿಸಿ, ಮಾಲಾ ಅಮೋಘ ಅಭಿನಯ ನೀಡಿದರು. ಈ ಚಲನಚಿತ್ರವು ಇಂದಿಗೂ ಸಹ, ಭಾರತೀಯ ಚಲನಚಿತ್ರರಂಗದಲ್ಲಿ ಒಂದು ಮೇರು ಚಲನಚಿತ್ರವೆನಿಸಿ, ಮಾಲಾ ಸಿನ್ಹಾರಿಗೆ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು.

ಪ್ಯಾಸಾ ಚಲನಚಿತ್ರದ ಯಶಸ್ಸಿನ ನಂತರ, ಯಶ್‌ ಚೋಪ್ರಾ ನಿರ್ದೇಶಿಸಿದ ಮೊದಲ ಚಲನಚಿತ್ರ ಧೂಲ್‌ ಕಾ ಫೂಲ್ ‌(1959)ನಲ್ಲಿ ನಟಿಸಿ ಪ್ರಶಂಸೆ ಗಳಿಸಿದರು. ನಾಟಕದಂತಹ ಕಥಾಹಂದರವುಳ್ಳ ಚಲನಚಿತ್ರಗಳಲ್ಲಿ ಅಮೋಘ ಪ್ರತಿಭೆ ಪ್ರದರ್ಶಿಸಿದ ನಾಯಕಿಯೆನಿಸಿಕೊಂಡರು. ಈ ಚಲನಚಿತ್ರವೂ ಬಹಳ ಯಶಸ್ವಿಯಾಯಿತು.[] ನಂತರ, ಮಾಲಾ ಸಿನ್ಹಾ ನಟಿಸಿದ 'ಪರವರಿಶ್‌', 'ಫಿರ್‌ ಸುಬಹ್‌ ಹೋಗೀ', 'ಮೈಂ ನಶೇ ಮೇಂ ಹ್ಞೂಂ', 'ಲವ್‌ ಮ್ಯಾರೀಜ್‌', 'ಬಹುರಾನೀ', 'ಅನಪಢ್‌', 'ಆಸರಾ', 'ದಿಲ್‌ ತೇರಾ ದೀವಾನಾ', ಗುಮರಾಹ್‌ , 'ಆಂಖೇಂ', 'ಹರಿಯಾಲೀ ಔರ್‌ ರಾಸ್ತಾ', 'ಹಿಮಾಲಯ್‌ ಕೀ ಗೋದ್‌ ಮೇಂ' ಸೇರಿದಂತೆ ಹಲವು ಚಲನಚಿತ್ರಗಳು ಭಾರೀ ಯಶಸ್ಸು ಗಳಿಸಿದವು. ಹಿಂದಿ ಚಲನಚಿತ್ರರಂಗದಲ್ಲಿ ಮಾಲಾ ಸಿನ್ಹಾರ ತಾರಾ ಮೌಲ್ಯವೂ ಬಹಳ ಹೆಚ್ಚಾಯಿತು. ಆದರೂ, ಹಲವು ವಿಮರ್ಶಕರ ಪ್ರಕಾರ, ಮಾಲಾ ಸಿನ್ಹಾರ ವೃತ್ತಿಜೀವನದಲ್ಲೇ ಅತ್ಯುತ್ತಮ ನಟನಾ ಪ್ರತಿಭೆಯು ಗುಮರಾಹ್‌ ಚಲನಚಿತ್ರದಲ್ಲಿ ಕಾಣಸಿಕ್ಕಿತು ಎಂದಿದ್ದಾರೆ. ಮಾಲಾ ಸಿನ್ಹಾ ನಟಿಸಿದ 1960ರ ದಶಕದ ಚಲನಚಿತ್ರಗಳು, ನಾಯಕನಟರ ಮೌಲ್ಯದಷ್ಟೇ ತಮ್ಮದೇ ಆದ ತಾರಾಮೌಲ್ಯದ ಮೇಲೆ ನಡೆದು ಯಶಸ್ವಿಯಾಗಿದ್ದು ಪ್ರಶಂಸನೀಯ ವಿಚಾರವಾಗಿತ್ತು. ತಮ್ಮ ಪಾತ್ರ ಅತ್ಯುತ್ತಮ ಮತ್ತು ಮೌಲ್ಯ ದೃಢತೆ ಹೊಂದಿದ್ದರೆ ಅವರು ಹೊಸ ನಟರೊಂದಿಗೆ ಅಭಿನಯಿಸಲು ಹಿಂಜರಿಯಲಿಲ್ಲ. ಅವರ ಸಮಕಾಲೀನ ಖ್ಯಾತ ನಟರೊಂದಿಗೆ ನಟಿಸುವಾಗ, ತಮ್ಮ ಪಾತ್ರಕ್ಕೂ ಸಮನಾದ ತಾರಾ ಮೌಲ್ಯವಿದೆಯೆಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಧರ್ಮೇಂದ್ರ, ಸುನಿಲ್‌ ದತ್‌, ಸಂಜಯ ಖಾನ್‌ ಹಾಗೂ ಅಮಿತಾಭ್ ಬಚ್ಚನ್‌ ಸೇರಿದಂತೆ, ತಮ್ಮ ಕಾಲದಲ್ಲಿ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಹಲವು ನಟರೊಂದಿಗೆ ಮಾಲಾ ಸಿನ್ಹಾ ನಾಯಕಿಯಾಗಿ ನಟಿಸಿದ್ದರು. ತಾವು ನಟಿಸಿದ ಚಲನಚಿತ್ರಗಳ ಪೈಕಿ ಬಹಳಷ್ಟರಲ್ಲಿ ತಮ್ಮ ಹೆಸರು ನಾಯಕ ನಟರ ಹೆಸರುಗಳಿಗಿಂತಲೂ ಮುಂಚೆ ನಮೂದಿಸಲಾಗುತ್ತಿತ್ತು.

1966ರಲ್ಲಿ, ಮೈತಿಘರ್‌ ಎಂಬ ನೇಪಾಳಿ ಚಲನಚಿತ್ರವೊಂದರಲ್ಲಿ ನಟಿಸಲೆಂದು ಮಾಲಾ ಸಿನ್ಹಾ ನೇಪಾಳ ದೇಶಕ್ಕೆ ಹೋದರು. ಅಂದು ನೇಪಾಳ ಚಲನಚಿತ್ರೋದ್ಯಮವು ಇನ್ನೂ ಆರಂಭದೆಶೆಯಲ್ಲಿತ್ತು. ದೊಡ್ಡ ತೋಟದ ಮಾಲೀಕ ಸಿ. ಪಿ. ಲೊಹಾನಿ ಎಂಬೊಬ್ಬರು ಈ ಚಲನಚಿತ್ರದ ನಾಯಕನಟರಾಗಿದ್ದರು.[] ಇದಾದ ಕೂಡಲೇ, ತಮ್ಮ ಹೆತ್ತವರ ಆಶೀರ್ವಾದೊಂದಿಗೆ, ಮಾಲಾ ಸಿ. ಪಿ. ಲೊಹಾನಿಯವರನ್ನು ವಿವಾಹವಾದರು. ವೈವಾಹಿಕ ಜೀವನದ ಆರಂಭದಿಂದಲೂ, ಈ ಜೋಡಿಯದ್ದು ಅತಿ-ದೂರದ ಬದುಕಿನ ವಿವಾಹವಾಗಿತ್ತು. ಲೊಹಾನಿ ಕಾಠ್ಮಂಡುವಿನಲ್ಲಿದ್ದು, ತಮ್ಮ ಉದ್ದಿಮೆ-ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು; ಮಾಲಾ ತಮ್ಮ ಪುತ್ರಿ ಪ್ರತಿಭಾರೊಂದಿಗೆ ಮುಂಬಯಿಯಲ್ಲಿ ವಾಸಿಸುತ್ತಿದ್ದರು. ವಿವಾಹದ ನಂತರವೂ ಮಾಲಾ ಚಲನಚಿತ್ರಗಳಲ್ಲಿ ಅಭಿನಯ ಮುಂದುವರೆಸಿದರು.[]

ನೇಪಾಳಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿಯೂ ಮಾಲಾ ನಾಯಕಿಯಾಗಿದ್ದಾರೆ. ಬೆಂಗಾಳಿ ಚಲನಚಿತ್ರರಂಗದಲ್ಲಿ ಮಾಲಾ ಉತ್ತಮ್‌ ಕುಮಾರ್‌ ಮತ್ತು ಕಿಶೋರ್‌ ಕುಮಾರ್‌ ಒಂದಿಗೆ ನಟಿಸಿದ್ದಾರೆ. 1977ರಲ್ಲಿ ಬಿಡುಗಡೆಯಾದ ಕಬಿತಾ , ಮಾಲಾರ ಕೊನೆಯ ಬಂಗಾಳಿ ಚಲನಚಿತ್ರವಾಗಿತ್ತು. ಇದರಲ್ಲಿ ರಣಜಿತ್‌ ಮಲ್ಲಿಕ್‌ ಮತ್ತು ಕಮಲ್‌ ಹಾಸನ್ ನಟರಾಗಿದ್ದರು. ಮಹಿಳಾಪರ ಪ್ರಬಲ ವಿಚಾರಗಳನ್ನು ಅವರು ಪ್ರತಿಪಾದಿಸುತ್ತಿದ್ದರೂ, ಸೌಂದರ್ಯವುಳ್ಳ ಮನಮೋಹಕ ಮತ್ತು ಚಿತ್ತಾಕರ್ಷಕ ಪಾತ್ರಗಳಲ್ಲಿ ಮಾಲಾ ಸಿನ್ಹಾ ನಟಿಸಿದ್ದಾರೆ. ಇದರಿಂದಾಗಿ ಚಲನಚಿತ್ರಗಳಲ್ಲಿ ಅವರ ಪಾತ್ರದ ಮೌಲ್ಯ ನಟರ ತಾರಾ ಮೌಲ್ಯಕ್ಕೆ ಸರಿಸಾಟಿಯಿತ್ತು. ಧೂಲ್ ಕಾ ಫೂಲ್‌ , ಅನಪಢ್‌ , ಫಿರ್‌ ಸುಬಹ್‌ ಹೋಗೀ , ಹರಿಯಾಲಿ ಔರ್‌ ರಾಸ್ತಾ , ದಿಲ್ ತೇರಾ ದೀವಾನಾ , ಬಹುರಾನಿ , ಆಸರಾ , ದೋ ಕಲಿಯಾಂ , ಗುಮರಾಹ್‌ , ಆಂಖೇಂ , ಹಿಮಾಲಯ್ ಕೀ ಗೋದ್‌ ಮೇಂ , ಮರ್ಯಾದಾ ಸೇರಿದಂತೆ ಹಲವು ಚಲನಚಿತ್ರಗಳು ಭಾರೀ ಯಶಸ್ಸು ಗಳಿಸಿದವು.[]

ಅವರು ನಟಿಸಿದ ವಿವಿಧ ಕಥಾವಸ್ತುಗಳುಳ್ಳ ಹಾಗೂ ವೈವಿಧ್ಯಮಯ ಚಲನಚಿತ್ರಗಳ ಪೈಕಿ 1964ರಲ್ಲಿ ಬಿಡುಗಡೆಯಾದ ಜಹಾಂ ಆರಾ ಚಲನಚಿತ್ರವು ಅವರ ನೆಚ್ಚಿನದು ಎಂದು ಹೇಳಿದ್ದಾರೆ. ಇದು ಐತಿಹಾಸಿಕ ಕಥಾವಸ್ತುವಿನ ಚಲನಚಿತ್ರ, ಮೇರುನಟಿ ಮೀನಾ ಕುಮಾರಿ ತಮಗೆ ಈ ಪಾತ್ರವನ್ನು ಹಸ್ತಾಂತರಿಸಿದ್ದನ್ನು ಮಾಲಾ ಸಿನ್ಹಾ ಸ್ಮರಿಸಿಕೊಳ್ಳುತ್ತಾರೆ. 'ತಾವು ಈ ಪಾತ್ರಕ್ಕೆ ಸೂಕ್ತವಾಗಿರುವ ಕುರಿತು ಮೀನಾಜಿಗೆ ಸಂಶಯವಿತ್ತು. ನಾನು ಸೂಕ್ತ ಎಂದು ಅವರಿಗೆ ಅನಿಸಿತು. ನನಗೆ ಉರ್ದು ಗೊತ್ತಿರದ ಕಾರಣ ನಾನು ಈ ಪಾತ್ರಕ್ಕೆ ಸರಿಹೋಗುವೆನಾ ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ಈ ಪಾತ್ರವನ್ನು ನಾನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬುದು ಮೀನಾರಿಗೆ ಭರವಸೆಯಿತ್ತು. ಮುಮ್ತಾಜ್‌ ಮಹಲ್‌ರ ಜ್ಯೇಷ್ಠ ಪುತ್ರಿಯ ಪಾತ್ರ ನಿರ್ವಹಿಸಲು ಬಹಳ ಕಷ್ಟಕರವಾದ ಉರ್ದು ತರಗತಿಗಳು ಹಾಗೂ ರಾಜಮನೆತನದ 'ತಹಜೀಬ್' ಕಲಿಯಬೇಕಾಯಿತು. ‌ ರಣಜಿತ್‌ ಸ್ಟುಡಿಯೊದಲ್ಲಿ ನಿರ್ಮಿಸಲಾದ ವೈಭವೋಪೇತ ಸೆಟ್ ವಿನ್ಯಾಸಗಳಲ್ಲಿ ಆಗ ತಾಪಮಾನ ಬಹಳ ಹೆಚ್ಚಿತ್ತು.ಆದರೆ ಚಲನಚಿತ್ರಕ್ಕೆ ಮದನ್‌ ಮೋಹನ್‌ರ ಆಹ್ಲಾದಕರ ಸಂಗೀತ ಸದಾ ಚಿರಸ್ಮರಣೀಯ. ಹಲವು ಭಾವಗೀತೆಯಂತಹ ಸಾಹಿತ್ಯಕ್ಕೆ ಪೂರಕ ಸನ್ನಿವೇಶಗಳಿಂದ ತುಂಬಿದ್ದ ಚಲನಚಿತ್ರ ಅದಾಗಿತ್ತು ".[]

ಮಾಲಾ ಸಿನ್ಹಾರ ವಯಸ್ಸು ಹೆಚ್ಚಾಗಿ, ಮಾಗಿದಂತೆ, ತಮ್ಮ ವಯಸ್ಸಿಗೆ ಸರಿಹೊಂದುವಂತಹ ಪೋಷಕನಟಿಯ ಪಾತ್ರ ನಿರ್ವಹಿಸಲಾರಂಭಿಸಿದರು. 1994ರಲ್ಲಿ ಬಿಡುಗಡೆಯಾದ ಝಿದ್‌ ಮಾಲಾ ಸಿನ್ಹಾರ ಕೊನೆಯ ಚಲನಚಿತ್ರವಾಗಿತ್ತು.[] ಮಾಲಾರು ತಮ್ಮ ವೃತ್ತಿಯಲ್ಲಿ ತೋರಿದ ಆಸಕ್ತಿಯಂತೆಯೇ, ತಮ್ಮ ಪುತ್ರಿ ಪ್ರತಿಭಾ ಅವರ ವೃತ್ತಿಯಲ್ಲಿ ತೋರಿದರೂ, ಅಲ್ಲದೇ ಪ್ರತಿಭಾರ ತಂದೆಯ ಪ್ರಯತ್ನವಿದ್ದರೂ ಪುತ್ರಿ,ಅಷ್ಟೇನು ಯಶಸ್ಸು ಗಳಿಸಿಕೊಳ್ಳಲಾಗಲಿಲ್ಲ.[]

ವೈಯಕ್ತಿಕ ಜೀವನ

ಬದಲಾಯಿಸಿ

ಮಾಲಾ ಸಿನ್ಹಾ ಇಂದು ತಮ್ಮ ನಿವೃತ್ತ ಪತಿ ಹಾಗೂ ಬಾಲಿವುಡ್ ನಟಿ ಪ್ರತಿಭಾ ಸಿನ್ಹಾರೊಂದಿಗೆ ಮುಂಬಯಿಯಲ್ಲಿ ವಾಸವಾಗಿದ್ದಾರೆ.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
  • ವಿಜೇತೆ , ಅತ್ಯುತ್ತಮ ನಟಿಗಾಗಿ ಬಿಎಫ್‌ಜೆಎ ಪ್ರಶಸ್ತಿ(1965) - ಜಹಾಂ ಆರಾ
  • ವಿಜೇತೆ , ಅತ್ಯುತ್ತಮ ನಟಿಗಾಗಿ ಬಿಎಫ್‌ಜೆಎ ಪ್ರಶಸ್ತಿ (1966) - ಹಿಮಾಲಯ್‌ ಕೀ ಗೋದ್‌ ಮೇಂ[]
  • ಸ್ಟಾರ್ ಸ್ಕ್ರೀನ್‌ ಜೀವಮಾನ ಸಾಧನಾ ಪ್ರಶಸ್ತಿ (2007)

ಧೂಲ್‌ ಕಾ ಫೂಲ್‌ (1959), ಬಹುರಾನೀ (1963), ಜಹಾಂ ಆರಾ (1964), ಹಿಮಾಲಯ್‌ ಕೀ ಗೋದ್‌ ಮೇಂ (1965) ಚಲನಚಿತ್ರಗಳಲ್ಲಿ ಮಹಿಳಾ-ಪ್ರಧಾನ ಪಾತ್ರಗಳಲ್ಲಿ ಅಮೋಘ ನಟನೆಗಾಗಿ ಮಾಲಾ ಸಿನ್ಹಾ ಅವರಿಗೆ ಹಲವು ಫಿಲ್ಮ್‌ಫೇರ್‌ ಪ್ರಶಸ್ತಿಗಳು ಅತ್ಯುತ್ತಮ ನಟಿಗಾಗಿ ನಾಮನಿರ್ದೇಶನಗಳು ದಕ್ಕಿದವು. ಆದರೆ, ಹರಿಯಾಲೀ ಔರ್‌ ರಾಸ್ತಾ (1962), ಅನಪಢ್‌ (1962), ಗುಮರಾಹ್‌ (1963) ಹಾಗೂ ಆಂಖೇಂ (1967) ಸೇರಿದಂತೆ ಉತ್ತಮ ಮೌಲ್ಯವುಳ್ಳ ಪಾತ್ರಗಳಿದ್ದರೂ ಅವರ ನಟನೆಗೆ ನಾಮನಿರ್ದೇಶನವು ಲಭಿಸಲಿಲ್ಲ. 1976ರಲ್ಲಿ ಬಿಡುಗಡೆಯಾದ ಜಿಂದಗೀ ಚಲನಚಿತ್ರದಲ್ಲಿ ಸಂಜೀವ್‌ ಕಪೂರ್‌ ಅವರ ನರೆಗೂದಲುಳ್ಳ ಪತ್ನಿಯಾಗಿ ನಟಿಸಿ ಪ್ರಶಂಸೆ ಗಳಿಸಿದರು. ತಮ್ಮ ನಟನೆಗಾಗಿ ಅಷ್ಟೆಲ್ಲಾ ವಿಮರ್ಶಾತ್ಮಕ ಪ್ರಶಂಸೆ ಮತ್ತು ವ್ಯಾಪಕ ಮನ್ನಣೆ ಗಳಿಸಿದರೂ, ಮಾಲಾ ಸಿನ್ಹಾರಿಗೆ ಇದುವರೆಗೂ ಒಂದು ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿಲ್ಲ. 2007ರಲ್ಲಿ, ಅವರಿಗೆ ಸ್ಟಾರ್‌ ಸ್ಕ್ರೀನ್‌ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.[೧೦]

ಆಗ 2004 ಮತ್ತು 2005ರಲ್ಲಿ ಅವರಿಗೆ ಕ್ರಮವಾಗಿ ಸಿಕ್ಕಿಮ್‌ ಹಾಗೂ ನೇಪಾಳ ಸರ್ಕಾರಗಳಿಂದ ಸನ್ಮಾನಗಳು ದೊರಕಿದವು.[೧೧]

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ಹಿಂದಿ ಚಲನಚಿತ್ರಗಳು

  • ಝಿದ್‌(1994) (ಜಯ್‌ ಮೆಹ್ತಾ)
  • ರಾಧಾ ಕಾ ಸಂಗಮ್‌(1992) (ಗೋವಿಂದ)
  • ಖೇಲ್‌(1992) (ಅನಿಲ್‌ ಕಪೂರ್‌)
  • ದಿಲ್‌ ತುಝಕೊ ದಿಯಾ(1987) (ಕುಮಾರ್‌ ಗೌರವ್‌)
  • ಬಾಬೂ (1985) (ನವೀನ್‌ ನಿಶ್ಚಲ್)‌
  • ಯೆ ರಿಶ್ತಾ ನ ಟೂಟೆ(1985) (ರಾಜೇಂದ್ರ ಕುಮಾರ್)
  • ಆಸ್ಮಾಂ(1984) (ರಾಜೀವ್‌ ಕಪೂರ್‌)
  • ಬೆರಹಮ್‌(1982) ಸಂಜೀವ್‌ ಕುಮಾರ್‌
  • ಹರಜಾಯೀ(1981) ಶಮ್ಮಿ ಕಪೂರ್‌
  • ಧನ್‌ ದೌಲತ್‌(1980) (ರಾಜೇಂದ್ರ ಕುಮಾರ್‌)
  • ಕರ್ಮಯೋಗಿ(1977) (ರಾಜ್‌ ಕುಮಾರ್‌)
  • ಪ್ರಾಯಶ್ಚಿತ್‌(1977) (ಪರೀಕ್ಷಿತ್‌ ಸಾಹ್ನಿ)
  • ದೊ ಲಡಕಿಯಾಂ(1977) (ಸಂಜೀವ್ ಕುಮಾರ್‌)
  • ಜಿಂದಗಿ(1976) (ಸಂಜೀವ್‌ ಕುಮಾರ್)‌
  • ಮಝದೂರ್‌ ಜಿಂದಾಬಾದ್‌(1976) (ರಾಜೇಂದ್ರ ಕುಮಾರ್)
  • ನಸೀಬ್‌ (1976) (ವಿಶೇಷ ನಟನೆ)
  • ಸುನಹರಾ ಸನ್ಸಾರ್‌ (1975) (ರಾಜೇಂದ್ರ ಕುಮಾರ್‌)
  • ಅರ್ಚನಾ (1974) (ಸಂಜೀವ್‌ ಕುಮಾರ್‌)
  • ಕೋರಾ ಬದನ್‌ (1974) (ವಿಶೇಷ ನಟನೆ)
  • 36 ಘಂಟೆ (1974) ರಾಜಕುಮಾರ್‌
  • ನೇಕ್‌ ಪರ್ವೀನ್‌(1974) ರಾಕೇಶ್‌ ಪಾಂಡೆ
  • ರಿಕ್ಷಾವಾಲಾ (1973) ಸುಜಿತ್‌ ಕುಮಾರ್‌
  • ಕಹಾನಿ ಹಮ್‌ ಸಬ್ ಕೀ (1973) ವಿನೋದ್‌ ಮೆಹ್ರಾ
  • ಫಿರ್‌ ಕಬ್ ಮಿಲೋಗಿ (1973) ಬಿಸ್ವಜೀತ್‌
  • ರಿವಾಜ್‌ (1972) ಸಂಜೀವ್‌ ಕುಮಾರ್‌
  • ಲಲ್ಕಾರ್‌ (1972) ರಾಜೇಂದ್ರ ಕುಮಾರ್‌
  • ಮರ್ಯಾದಾ (1971) ರಾಜಕುಮಾರ್‌ / ರಾಜೇಶ್‌ ಖನ್ನಾ
  • ಸಂಜೋಗ್‌ (1971) ಅಮಿತಾಭ್‌ ಬಚ್ಚನ್‌
  • ಚಾಹತ್‌ (1971) ಬಿಸ್ವಜೀತ್‌
  • ಹೋಲೀ ಆಯೀ ರೆ (1970) ಪ್ರಕಾಶ್‌ ಥಾಪಾ
  • ಕಂಗನ್‌ (1970) ಸಂಜೀವ್‌ ಕುಮಾರ್‌
  • ಗೀತ್‌ (1970) ರಾಜೇಂದ್ರ ಕುಮಾರ್‌
  • ದೋ ಭಾಯಿ (1970) ಜಿತೇಂದ್ರ
  • ಪೈಸಾ ಯಾ ಪ್ಯಾರ್‌ (1970) ಬಿಸ್ವಜೀತ್‌
  • ಜಲ್ದೀಪ್‌ (1970) (ಚಿಲ್ಡ್ರನ್ಸ್‌ ಫಿಲ್ಮ್‌ ಸೊಸೈಟಿ)
  • ಮೇರೆ ಹುಝೂರ್‌ (1969) (ರಾಜಕುಮಾರ್‌ / ಜಿತೇಂದ್ರ)
  • ಹಮ್‌ಸಾಯಾ(1968) (ಜಯ್‌ ಮುಖರ್ಜಿ)
  • ದೊ ಕಲಿಯಾಂ (1968) (ಬಿಸ್ವಜೀತ್)‌
  • ಪ್ಯಾರ್‌ ಕಾ ಸಪ್ನಾ (1968) ಬಿಸ್ವಜೀತ್‌
  • ಆಂಖೇಂ (1968) (ಧರ್ಮೇಂದ್ರ)
  • ದಿಲ್ಲಗಿ (1966) (ಸಂಜಯ್‌ ಖಾನ್‌)
  • ನಯೀ ರೋಷನೀ (1967) (ಬಿಸ್ವಜೀತ್)‌
  • ನೈಟ್‌ ಇನ್‌ ಲಂಡನ್‌ (1967) (ಬಿಸ್ವಜೀತ್‌)
  • ಜಾಲ್‌ (1967) (ಬಿಸ್ವಜೀತ್‌)
  • ಆಸರಾ (1966) (ಬಿಸ್ವಜೀತ್)‌
  • ತಮನ್ನಾ (1966) (ಬಿಸ್ವಜೀತ್‌)
  • ಅಪನೆ ಹುಯೆ ಪರಾಯೆ (1966) (ಮನೋಜ್‌ ಕುಮಾರ್‌)
  • ಮೆರೆ ಲಾಲ್‌ (1966) (ದೇವ್‌ ಕುಮಾರ್‌)
  • ಬಹಾರೇಂ ಫಿರ್‌ ಭೀ ಆಯೇಗೀ(1966) (ಧರ್ಮೇಂದ್ರ)
  • ಹಿಮಾಲಯ್‌ ಕೀ ಗೋದ್‌ ಮೇಂ (1965) (ಮನೋಜ್‌ ಕುಮಾರ್‌) ........ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ
  • ಜಬ್‌ ಯಾದ್‌ ಕಿಸೀಕೀ ಆತೀ ಹೈ (1965) (ಧರ್ಮೇಂದ್ರ)
  • ನೀಲಾ ಆಕಾಶ್‌ (1965) ಧರ್ಮೇಂದ್ರ
  • Bahu Beti (1965) ಜಯ್‌ ಮುಖರ್ಜಿ
  • ಮೈಂ ಸುಹಾಗನ್‌ ಹ್ಞೂಂ (1965) (ಅಜಿತ್‌ ಖಾನ್‌)
  • ಜಹಾಂ ಆರಾ (1964) (ಭಾರತ್‌ ಭೂಷಣ್‌) .......... ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ
  • ಸುಹಾಗನ್‌ (1964) (ಗುರು ದತ್‌)
  • ಫೂಲ್‌ ಬನೇ ಅಂಗಾರೆ (1963) (ರಾಜಕುಮಾರ್)‌
  • ಪೂಜಾ ಕೆ ಫೂಲ್‌ (1963) (ಧರ್ಮೇಂದ್ರ)
  • ಗುಮರಾಹ್‌ (1963) (ಸುನಿಲ್‌ ದತ್‌)
  • ಬಹು ರಾನಿ (1963) (ಗುರು ದತ್‌) ............ ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ
  • ಗಹರಾ ದಾಗ್‌ (1963) (ರಾಜೇಂದ್ರ ಕುಮಾರ್)‌
  • ಹರಿಯಾಲಿ ಔರ್‌ ರಾಸ್ತಾ (1962) (ಮನೋಜ್‌ ಕುಮಾರ್)‌
  • ಅನಪಢ್‌ (1962) (ಧರ್ಮೇಂದ್ರ)
  • ಬಾಂಬೆ ಕಾ ಚೋರ್‌ (1962) (ಕಿಶೋರ್‌ ಕುಮಾರ್)‌
  • ಆಂಖ್‌ ಮಿಚೊಲಿ (1962) (ಶೇಖರ್‌)
  • ಗ್ಯಾರಹ್‌ ಹಜಾರ್ ಲಡಕಿಯಾಂ (1962) (ಭಾರತ್‌ ಭೂಷಣ್‌)
  • ದಿಲ್‌ ತೇರಾ ದೀವಾನಾ (1962) (ಶಮ್ಮಿ ಕಪೂರ್‌)
  • ಸುಹಾಗ್‌ ಸಿಂಧೂರ್‌ (1961) (ಮನೋಜ್‌ ಕುಮಾರ್)‌
  • ಮಾಯಾ (1961) (ದೇವಾನಂದ್‌)
  • ಧರ್ಮಪುತ್ರ (1961) (ರಹಮಾನ್‌)
  • ಪತಂಗ್‌ (1960) (ರಾಜೇಂದ್ರ ಕುಮಾರ್‌)
  • ಮೈಂ ನಶೇ ಮೇಂ ಹ್ಞೂಂ (1960) (ರಾಜ್‌ ಕಪೂರ್)‌
  • ಬೇವಕೂಫ್‌ (1960) (ಕಿಶೋರ್‌ ಕುಮಾರ್)‌
  • ಮಿಟ್ಟೀ ಮೇಂ ಸೋನಾ (1960) (ಪ್ರದೀಪ್‌ ಕುಮಾರ್)‌
  • ಧೂಲ್‌ ಕಾ ಫೂಲ್‌ (1959) (ಅಶೋಕ್‌ ಕುಮಾರ್‌ / ರಾಜೇಂದ್ರ ಕುಮಾರ್‌) .......ನಾಮನಿರ್ದೇಶಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ
  • ಲವ್‌ ಮ್ಯಾರೀಜ್ (1959) (ದೇವಾನಂದ್)‌
  • ದುನಿಯಾ ನ ಮಾನೆ (1959) (ಪ್ರದೀಪ್‌ ಕುಮಾರ್)‌
  • ಉಜಾಲಾ (1959) (ಶಮ್ಮಿ ಕಪೂರ್‌)
  • ದೇವರ್‌ ಭಾಭಿ(1958) (ರಾಜೇಂದ್ರ ಕುಮಾರ್‌)
  • ಪರವರೀಶ್‌ (1958) (ರಾಜ್‌ ಕಪೂರ್) ‌
  • ಫಿರ್‌ ಸುಬಹ್‌ ಹೋಗೀ (1958) (ರಾಜ್‌ ಕಪೂರ್)‌
  • ಜಾಲ್‌ಸಾಜ್‌ (1959) (ಕಿಶೋರ್‌ ಕುಮಾರ್) ‌
  • ಚಂದನ್‌ (1958) (ಕಿಶೋರ್‌ ಕುಮಾರ್)‌
  • ಡಿಟೆಕ್ಟಿವ್‌ (1958) (ಪ್ರದೀಪ್‌ ಕುಮಾರ್‌)
  • ನೌಷರ್ವಾನ್‌-ಎ-ಆದಿಲ್‌ (1957) (ರಾಜಕುಮಾರ್‌)
  • ಏಕ್‌ ಗಾಂವ್‌ ಕೀ ಕಹಾನಿ(1957) (ಅಭಿ ಭಟ್ಟಾಚಾರ್ಯ / ತಲತ್‌ ಮಹ್ಮೂದ್‌)
  • ಅಪರಾಧೀ ಕೌನ್‌(1957) (ಅಭಿ ಭಟ್ಟಾಚಾರ್ಯ)
  • ಲಾಲ್‌ ಬತ್ತೀ (1957) (ಬಾಲರಾಜ್‌ ಸಾಹ್ನಿ)
  • ಫ್ಯಾಷನ್‌ (1957) (ಪ್ರದೀಪ್‌ ಕುಮಾರ್)‌
  • ಪ್ಯಾಸಾ (1957) (ಗುರುದತ್‌ / ರಹ್ಮಾನ್‌)
  • ರಂಗೀನ್ ರಾತೇಂ (1956) (ಶಮ್ಮಿ ಕಪೂರ್‌)
  • ಏಕ್‌ ಶೋಲಾ (1956) (ಪ್ರದೀಪ್‌ ಕುಮಾರ್)‌
  • ಪೈಸಾ ಹೀ ಪೈಸಾ (1956) (ಕಿಶೋರ್‌ ಕುಮಾರ್)‌
  • ನಯಾ ಜಮಾನಾ (1955) (ಪ್ರದೀಪ್‌ ಕುಮಾರ್)‌
  • ರತ್ನ ಮಂಜರಿ (1955) (ಮಹಿಪಾಲ್‌)
  • ಏಕಾದಶಿ (1955) (ತ್ರಿಲೋಕ್‌ ಕಪೂರ್‌)
  • ರಿಯಾಸತ್‌ (1955) (ಮಹಿಪಾಲ್‌)
  • ಬಾದಷಾಹ್‌ (1954) (ಪ್ರದೀಪ್‌ ಕುಮಾರ್)‌
  • ಹ್ಯಾಮ್ಲೆಟ್‌ (1954) (ಪ್ರದೀಪ್‌ ಕುಮಾರ್)‌
  • ಸುಹಾಗನ್‌ (1952) (ಗುರು ದತ್‌)
  • ಝಾನ್ಸಿ ಕೀ ರಾನೀ (1952) (ಸೊಹ್ರಾಬ್‌ ಮೋದಿ)

ಬಂಗಾಳಿ ಭಾಷೆಯ ಚಲನಚಿತ್ರಗಳು

  • ಶಹರರ್‌ ಇತಿಕಥಾ (ಉತ್ತಮ್‌ ಕುಮಾರ್‌)
  • ಸಾಥಿಹಾರಾ (ಉತ್ತಮ್‌ ಕುಮಾರ್‌)
  • ಅಭಯ ಓ ಶ್ರೀಕಾಂತ (1961)
  • ಕೆಲಾಘರ್‌ (1959) ಉತ್ತಮ್‌ ಕುಮಾರ್‌
  • ಲೂಕೊಚುರಿ (1958) (ಕಿಶೋರ್‌ ಕುಮಾರ್‌)
  • ಲೌಹಾ ಕಪತ್‌ (1958)
  • ಕಬಿತಾ
  • ಬಂಧು
  • ಸುರರ್‌ ಪರಷಯ್‌ (1957)
  • ಪೃಥ್ವಿ ಅಮರೆ ಚಾಯ್‌ (1957)
  • ಪುತ್ರಬಧು (1956)
  • ಧೂಲಿ (1954)
  • ಚಿತ್ರಾಂಗದಾ (1954)
  • ಜೋಗ್‌ ಬಿಯೋಗ್‌ (1953)
  • ರೋಷನಾರಾ (1952)

ನೇಪಾಳಿ ಚಲನಚಿತ್ರ

  • ಮೇತಿಘರ್‌

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ http://www.bollywoodhungama.com/features/2007/03/13/2373/index.html
  2. "ಆರ್ಕೈವ್ ನಕಲು". Archived from the original on 2010-05-04. Retrieved 2011-01-14.
  3. http://www.suraurtaal.com/forums/mala-sinhatrip-down-the-memory-lane-vt354.html
  4. [೧]
  5. http://fursad.com/flashback.php?subaction=showfull&id=1168635469&archive=&start_from=&ucat=13&
  6. http://www.bollymood.com/biography/mala-sinha/
  7. "ಆರ್ಕೈವ್ ನಕಲು". Archived from the original on 2011-07-08. Retrieved 2011-01-14.
  8. "ಆರ್ಕೈವ್ ನಕಲು". Archived from the original on 2010-04-16. Retrieved 2011-01-14.
  9. "ಆರ್ಕೈವ್ ನಕಲು". Archived from the original on 2012-08-02. Retrieved 2011-01-14.
  10. "ಆರ್ಕೈವ್ ನಕಲು". Archived from the original on 2012-10-14. Retrieved 2011-01-14.
  11. [೨]

[೩]-ಮಾಲಾ ಸಿನ್ಹಾರ ಜೀವನಪರಿಚಯ [೪]-ಮಾಲಾ ಸಿನ್ಹಾರ ಜೀವನ ಚರಿತ್ರೆ

ಬಾಹ್ಯ ಕೊಂಡಿಗಳು

ಬದಲಾಯಿಸಿ