ಸಿಕ್ಕಿಂ
ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.
ಸಿಕ್ಕಿಂ | |
ರಾಜಧಾನಿ - ಸ್ಥಾನ |
ಗ್ಯಾಂಗ್ಟಾಕ್ - |
ಅತಿ ದೊಡ್ಡ ನಗರ | ಗ್ಯಾಂಗ್ಟಾಕ್ |
ಜನಸಂಖ್ಯೆ (2001) - ಸಾಂದ್ರತೆ |
540,493 (28th) - 76.17/km² |
ವಿಸ್ತೀರ್ಣ - ಜಿಲ್ಲೆಗಳು |
7,096 km² (27th) - 4 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಮೇ ೧೬, ೧೯೭೫ - ಶ್ರೀ ಗಂಗಾ ಪ್ರಸಾದ್ - ಪ್ರೇಮ್ ಸಿಂಗ್ ತಮಂಗ್ - Unicameral (32) |
ಅಧಿಕೃತ ಭಾಷೆ(ಗಳು) | ನೇಪಾಳಿ,ಲಿಂಬು,ಭೂತಿಯ,ಲೆಪ್ಚಾ |
Abbreviation (ISO) | IN-SK |
ಅಂತರ್ಜಾಲ ತಾಣ: www.sikkim.nic.in | |
ಸಿಕ್ಕಿಂ ರಾಜ್ಯದ ಮುದ್ರೆ |
Namgyal ಮನೆತನವು 17ನೇ ಶತಮಾನದಲ್ಲಿ ಸಿಕ್ಕಿಂ ನಲ್ಲಿ ಆಡಳಿತ ನಡೆಸುತ್ತಿತ್ತು. ಈ ಮನೆತನದ ರಾಜರು ಬೌದ್ಧ ಸನ್ಯಾಸಿ ರಾಜರಾಗಿದ್ದರು, ಇವರನ್ನು chogyal ಗಳೆಂದು ಕರೆಯಲಾಗುತ್ತಿತ್ತು.೧೮೯೦ ರಲ್ಲಿ ಸಿಕ್ಕಿಂ ಬ್ರಿಟಿಷ್ ಇಂಡಿಯಾದ ಆಡಳಿತಕ್ಕೊಳಪಟ್ಟಿತ್ತು. 1973 ರಲ್ಲಿ chogyal ಅರಮನೆಯಲ್ಲಿ ನಡೆದ ದಂಗೆಯ ನಂತರ, ಭಾರತ ಸರ್ಕಾರವು ಸೇನಾ ಕಾರ್ಯಾಚರಣೆ ನಡೆಸಿ ಗ್ಯಾಂಗ್ಟಕ್ ಅನ್ನೋ ವಶಪಡಿಸಿಕೊಂಡಿತು. ತದನಂತರ ಸಿಕ್ಕಿಂ ಭಾರತದ 22ನೆ ರಾಜ್ಯವಾಗಿ ಸೇರ್ಪಡೆಗೊಂಡಿತ್ತು.
ಸಿಕ್ಕಿಂ ಒಂದು ವಿಶಿಷ್ಟ ಮತ್ತು ಬಹುಸಂಸ್ಕೃತಿಯ ರಾಜ್ಯ, ಇಲ್ಲಿ ಇಂಗ್ಲೀಷ್,ನೇಪಾಳಿ, ಸಿಕ್ಕಿಂಮಿಸ್ಸ,ಲೇಪಚ್ಚ ಭಾಷೆಗಳನ್ನು ಅಧಿಕೃತವಾಗಿಯೂ, ಮತ್ತು ಆಡಳಿತದ ಅನುಕೂಲಕ್ಕಾಗಿ ಲಿಂಬು,ಮಗರ್, ರಾಯ್, ತಮಂಗ್ ಮುಂತಾದ ಭಾಷೆಗಳನ್ನು ಬಳಸುತ್ತಾರೆ. ಇಂಗ್ಲಿಷ್ ಶಾಲೆಗಳಲ್ಲಿ ಮತ್ತು ಸರ್ಕಾರಿ ಕಡತಗಳಲ್ಲಿ ಬಳಸುವ ಭಾಷೆಯಾಗಿದೆ.
ಸಿಕ್ಕಿಂನ ಆರ್ಥಿಕತೆಗೆ ಸಂಪೂರ್ಣವಾಗಿ ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.
ಸಿಕ್ಕಿಂನಲ್ಲಿ ಭಾರತದಲ್ಲಿ ಹೆಚ್ಚು ಸಾಂಬಾರ್ ಪದಾರ್ಥವಾದ ಚಕ್ಕೆಯನ್ನು ಬೆಳೆಯಲಾಗುತ್ತದೆ, ಮತ್ತು ಇದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.
ಲೆಪಚ್ಚಗಳನ್ನು ಸಿಕ್ಕಿಂನ ಮೂಲನಿವಾಸಿಗಳು ಎಂದು ತಿಳಿಯಲಾಗಿದೆ, ಆದರೆ ಲಿಂಬುಸ್ ಮತ್ತು ಮಗರ್ ಗಳು ಕೂಡ ಸಿಕ್ಕಿಂನ ಪೂರ್ವ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಲೆಪಚ್ಚಗಳ ಮೊದಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ.
ಎಂಟನೇ ಶತಮಾನದಲ್ಲಿ ಬೌದ್ಧ ಸನ್ಯಾಸಿಯಾದ ಪದ್ಮಸಂಭವ ಎಂಬುವವರು ಸಿಕ್ಕಿಂನಲ್ಲಿ ಬೌದ್ಧ ಧರ್ಮವನ್ನು ಹರಡಲು ಪ್ರಮುಖ ಕಾರಣಕರ್ತರಾಗಿದ್ದಾರೆ, ಇವರನ್ನು ಗುರು ರಿನ್ಪೋಚೆ ಎಂದು ಕೂಡ ಸಂಬೋಧಿಸುತ್ತಾರೆ.
ಧರ್ಮಗಳು
ಬದಲಾಯಿಸಿಹಿಂದೂ ಧರ್ಮವು ಒಂದನೆಯ ಸ್ಥಾನದಲ್ಲಿದ್ದರೆ,ಬೌದ್ಧದರ್ಮವು ಎರಡನೆಯ ಸ್ಥಾನದಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Census of India – Socio-cultural aspects". Government of India, Ministry of Home Affairs. 2001 data. Retrieved 11 November 2013.
{{cite web}}
: Check date values in:|date=
(help); Cite has empty unknown parameter:|coauthors=
(help)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |