ಬಾಳು ಬೆಳಗಿತು

1970ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಬಾಳು ಬೆಳಗಿತು (೧೯೭೦, ಕನ್ನಡ): ಸಿದ್ದಲಿ೦ಗಯ್ಯನವರ ನಿರ್ದೇಶನ, ಡಾ|| ರಾಜಕುಮಾರ್ (ದ್ವಿಪಾತ್ರ), ಭಾರತಿ, ಜಯಂತಿ ಮತ್ತು ದ್ವಾರಕೀಶ್ ಮುಖ್ಯತಾರಾಗಣದಲ್ಲಿ ತೆರೆಕಂಡ ಕನ್ನಡ ಸಿನಿಮಾ ಬಾಳು ಬೆಳಗಿತು. ಚಿತ್ರಶ್ರೀ ಅಂತರರಾಷ್ಟ್ರೀಯ ಬ್ಯಾನರ್ ಅಡಿಯಲ್ಲಿ ಮೂಡಿಬ೦ದ ಈ ಚಿತ್ರದ ನಿರ್ಮಾಪಕರು ಕೆ. ಎಸ್. ಪ್ರಸಾದ್, ಬಿ. ವಿ. ಶ್ರೀನಿವಾಸ್ ಮತ್ತು ಎ. ಎಸ್. ಭಕ್ತವತ್ಸಲಂ. ಪತ್ತೇದಾರಿ ಮತ್ತು ಸಾಂಸಾರಿಕ ಕಥಾಹಂದರ ಹೊಂದಿರುವ ಈ ಚಿತ್ರ ಡಾ|| ರಾಜಕುಮಾರ್ ಅಭಿನಯದಲ್ಲಿ ಮೂಡಿಬಂದ ೧೨೬ನೇ ಚಿತ್ರವಾಗಿದೆ.

ಬಾಳು ಬೆಳಗಿತು
ನಿರ್ದೇಶನಸಿದ್ಧಲಿಂಗಯ್ಯ
ನಿರ್ಮಾಪಕಕೆ.ಎಸ್.ಪ್ರಸಾದ್
ಬಿ.ವಿ.ಶ್ರೀನಿವಾಸ್
ಎ ಎಸ್.ಭಕ್ತವತ್ಸಲಂ
ಲೇಖಕಸಿದ್ಧಲಿಂಗಯ್ಯ
ಪಾತ್ರವರ್ಗರಾಜ್‌ಕುಮಾರ್
ಜಯಂತಿ_(ನಟಿ)
ಭಾರತಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಸಂಕಲನಪಿ.ಭಕ್ತವತ್ಸಲಂ
ವಿತರಕರುಚಿತ್ರಶ್ರೀ
ಬಿಡುಗಡೆಯಾಗಿದ್ದು1970
ಅವಧಿ145 ನಿಮಿಷ
ದೇಶಭಾರತ
ಭಾಷೆಕನ್ನಡ

ಇದನ್ನು ತೆಲುಗು ಭಾಷೆಯಲ್ಲಿ ಮಂಚಿವಾಡು (Manchivadu), ಹಿಂದಿಯಲ್ಲಿ ಹಮ್‌ಶಕಲ್( Humshakal (1974 film)) ತಮಿಳಿನಲ್ಲಿ ಊರುಕ್ಕು ಉೞೈಪವನ್ (Oorukku Uzhaippavan.) [] ಎಂದು ರೀಮೇಕ್ ಮಾಡಲಾಗಿದೆ

ಕಥಾವಸ್ತು

ಬದಲಾಯಿಸಿ

ಇದರಲ್ಲಿ ನಾಯಕ ರಾಜ್‌ಕುಮಾರ್ ಶಂಕರ್ ಮತ್ತು ಪಾಪಣ್ನ ಎಮ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಂಕರನ ಸೇವಕ ಪಾಪಣ್ಣ. ಶಂಕರ್ ದೊಡ್ಡ ಶ್ರೀಮಂತ. ಅವನ ಪತ್ನಿಯ ಪಾತ್ರ ಜಯಂತಿ_(ನಟಿ) ( ಲಲಿತಾ).ಪಾಪಣ್ಣನ ಪತ್ನಿ ಭಾರತಿ_(ನಟಿ) (ಲಕ್ಷ್ಮಿ). ಈಗಾಗಲೇ ಪಾಪಣ್ಣ (ರಾಜ್‌ಕುಮಾರ್) ಬಡ ಲಕ್ಷ್ಮಿಯನ್ನು ಮದುವೆಯಾಗಿದ್ದಾನೆ ಆದರೆ ಇನ್ನೊಂದು ಕಡೆ ಶ್ರೀಮಂತ ಉತ್ತರಾಧಿಕಾರಿ ಲಲಿತಾಳನ್ನು ಮದುವೆಯಾಗಿದ್ದಾನೆ ಮತ್ತು ಅವನೇ ಶಂಕರ್ ಎಂದು ನಟಿಸುತ್ತಿದ್ದಾನೆ. ಅವನು ಎರಡು ಸಮಯದಲ್ಲಿ, ಎರಡು ಮುಖವನ್ನು ಹೊಂದಿರುವ ವ್ಯಕ್ತಿಯಾಗಿ ನಾಯಕನೇ ಯಾವುದೋ ರಹಸ್ಯವನ್ನು ಮರೆಮಾಡಲು ಯತ್ನಿಸುತ್ತಿದ್ದಾನೆ, ಏನಿರಬಹುದು? ಇಬ್ಬರು ಹೆಂಗಸರ ನಡುವೆ ಸಿಕ್ಕಿಬಿದ್ದ ತನ್ನ ಜೀವನದಲ್ಲಿ ಸಂದಿಗ್ಧತೆಯನ್ನು ಹೇಗೆ ನಿಭಾಯಿಸುತ್ತಾನೆ? ಕೊನೆಯವರೆಗೂ ಸಸ್ಪೆನ್ಸ್, ಉತ್ತಮ ಸಂಗೀತ ಮತ್ತು ಆಲ್-ರೌಂಡ್ ಉತ್ತಮ ಅಭಿನಯ ಪ್ರದರ್ಶನಗಳು ಇವೆ

ಧ್ವನಿಮುದ್ರಿಕೆ

ಬದಲಾಯಿಸಿ

ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ ಮತ್ತು ಗೀತೆಗಳಿಗೆ ಸಾಹಿತ್ಯವನ್ನು ಚಿ. ಉದಯಶಂಕರ್ ಮತ್ತು ವಿಜಯನಾರಸಿಂಹ ನೀಡಿದ್ದಾರೆ.

# Title Singer(s)
1 "ಚೆಲುವಾದ ಮುದ್ದಾದ" ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
2 "ಕಮಲದ ಹೂವಿಂದ" ಪಿ.ಬಿ.ಶ್ರೀನಿವಾಸ್
3 "ನೀತಿವಂತ ಬಾಳಲೇಬೇಕು" ಪಿ.ಬಿ.ಶ್ರೀನಿವಾಸ್
4 "ಹೆಣ್ಣು ಆಡಿದಾಗ" ಎಲ್.ಆರ್.ಈಶ್ವರಿ

ಉಲ್ಲೇಖಗಳು

ಬದಲಾಯಿಸಿ
  1. "Dr Rajkumar's 91st birth anniversary: 12 films of the actor that were released in 1970 and so complete 50 years this year". Cinema Express. Archived from the original on 12 ಜೂನ್ 2023. Retrieved 12 ಜೂನ್ 2023.