ರಜನೀಕಾಂತ್

ಭಾರತೀಯ ನಟ
(ರಜನಿಕಾಂತ್ ಇಂದ ಪುನರ್ನಿರ್ದೇಶಿತ)

ರಜನೀಕಾಂತ್ ಕನ್ನಡಿಗ(ಜನನ: ಡಿಸೆಂಬರ್ ೧೨ ೧೯೪೯) - ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಕನ್ನಡ ಚಿತ್ರರಂಗವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ. ಇವರು ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದುಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ೧೯೭೩ರಲ್ಲಿ ಇವರು ಅಭಿನಯದಲ್ಲಿ ಡಿಪ್ಲೊಮಾ ಪಡೆಯಲು ಮದ್ರಾಸ್ ಚಲನಚಿತ್ರ ಸಂಸ್ಥೆ ಸೇರಿಕೊಂಡರು. ಇವರ ಚೊಚ್ಚಲ ಚಿತ್ರ "ಅಪೂರ್ವ ರಾಗಂಗಳ್"ನ ನಂತರ ಕೆಲ ಸಮಯ ತಮಿಳು ಚಿತ್ರಗಳಲ್ಲಿ ಇವರ ವೃತ್ತಿ ವಿರೋಧಿ ಪಾತ್ರಗಳಿಂದ ಶುರುವಾಯಿತು. ಕೆಲ ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ "ಸೂಪರ್ ಸ್ಟಾರ್" ಎಂದು ಕರೆಯಲಾಯಿತು, ಮತ್ತು ಅಂದಿನಿಂದ ಈ ಬಿರುದನ್ನು ಉಳಿಸಿಕೊಂಡಿದ್ದಾರೆ. ಇವರ ಲಕ್ಷಣತೆ ಮತ್ತು ವಿಭಿನ್ನ ಶೈಲಿಯ ನಟನೆ ಮತ್ತು ಸಂಭಾಶಣೆಗಳು ಇವರ ಅಪೂರ್ವ ಜನಪ್ರೀಯತೆಗೆ ಕಾರಣವಾಗಿದೆ. ಶಿವಾಜಿ ಚಿತ್ರದ ಪಾತ್ರಕ್ಕೆ ೨೬ ಕೋಟಿ ರುಪಾಯಿಗಳನ್ನು ಪಡೆದ ನಂತರ, ಇವರು ಎಶಿಯಾದ ಎರಡನೆ ಅತಿ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕಗೆ ಪಾತ್ರರಾದರು, ಮೊದಲ ಸ್ಥಾನದಲ್ಲಿ ಜಾಕೀ ಚಾನ್ ಇದ್ದರು. ಭಾರತದ ಇತರೆ ಪ್ರಾದೇಶಿಕ ಭಾಶೆಗಳ ಚಿತ್ರಗಳಲ್ಲಿ ನಟಿಸುತ್ತ, ಇವರು ಕೆಲ ಅಮೇರಿಕಾದ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ೨೦೧೪ರ ವರೆಗೆ, ಇವರು ತಮಿಳುನಾಡಿನ ೬ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ- ೪ ಉತ್ತಮ ನಟ ಪ್ರಶಸ್ತಿಗಳು ಮತ್ತು ೨ ವಿಶೇಷ ಪ್ರಶಸ್ತಿಗಳು ಉತ್ತಮ ನಟಕ್ಕೆ, ಮತ್ತು ಒಂದು ಉತ್ತಮ ನಟ ಪಾತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ. ನಟನೆಯ ಜೊತೆಗೆ, ಇವರು ನಿರ್ಮಾಪಕರಾಗಿಯೂ ಚಿತ್ರಕಥೆಗಾರರಾಗಿಯು ಕಾಣಿಸಿಕೊಂಡಿದ್ದಾರೆ. ವೃತ್ತಿಯನ್ನು ಹೊರತುಪಡಿಸಿ, ಇವರು ಲೋಕೋಪಕಾರಿಯಾಗಿ, ಅಧ್ಯಾತ್ಮಕರಾಗಿ, ಮತ್ತು ದ್ರಾವಿಡ ರಾಜಕೀಯದಲ್ಲಿ ಪ್ರಭಾವ ಬೀರಿದ್ದಾರೆ.

ಡಿಸೆಂಬರ್ ೧೨,೧೯೪೯ರಲ್ಲಿ ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು. ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು. ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ಕರ್ನಾಟಕದ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕರ್ನಾಟಕದಲ್ಲಿ ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ.೧೯೬೮ ರಿಂದ ೧೯೭೩ ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಕರ್ನಾಟಕದಲ್ಲಿ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡರು. ಸಿನಿಮಾ ಹುಚ್ಚು. ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತರು."ನಮನ". ರಜನೀಕಾಂತ್ ತಮ್ಮ ಶಾಲಾಶಿಕ್ಷಣವನ್ನು ನಡೆಸಿದ್ದು ಬೆಂಗಳೂರಿನಲ್ಲಿ. ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್‍ವಾಡ್. ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರೂ, ರಜನಿಕಾಂತ್ ಪ್ರಸಿದ್ಧಿ ಪಡೆದಿದ್ದು] ಚಿತ್ರರಂಗದಲ್ಲಿ. ಚಿತ್ರರಂಗ ಪ್ರವೇಶಿಸುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಚಿತ್ರರಂಗಕ್ಕೆ ಸೇರಿದ ನಂತರ ಶಿವಾಜಿ ರಾವ್ ಗಾಯಕ್‍ವಾಡ್ ಅವರು ರಜನೀಕಾಂತ್ ಆದರು......

ಕನ್ನಡದಲ್ಲಿ ಪುಸ್ತಕ

ಬದಲಾಯಿಸಿ

ರಜನಿಕಾಂತ್ ಅವರನ್ನು ಕುರಿತು ಲೇಖಕ ಅ.ನಾ.ಪ್ರಹ್ಲಾದರಾವ್ ಅವರು `ನನ್ನ ದಾರಿ ವಿಭಿನ್ನ ದಾರಿ: ರಜನಿಕಾಂತ್` ಪುಸ್ತಕವನ್ನು ಬರೆದಿದ್ದಾರೆ. `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಕೃತಿಯಲ್ಲಿ ಮೇರು ನಟ ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ ಚಿತ್ರಿಸಲಾಗಿದೆ. ರಜನಿಕಾಂತ್ ಚಿತ್ರಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ. ಚಿತ್ರರಂಗದಲ್ಲಷ್ಟೆ ಅಲ್ಲ, ಸಮಾಜ ಸೇವೆಯಲ್ಲೂ ರಜನಿಕಾಂತ್ ಅವರ ಪಾತ್ರ ಹಿರಿದೆಂಬುದನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಬೆಂಗಳೂರಿನ ಬಳೇಪೇಟೆಯ `ನವಭಾರತ್ ಪಬ್ಲಿಕೇಷನ್` ಸಂಸ್ಥೆ ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತ ವೈ.ಜಿ.ಗಿರಿಶಾಸ್ತ್ರಿ ಅವರು ಹೀಗೆ ಬರೆದಿದ್ದಾರೆ: `ರಜನಿಕಾಂತ್ ಅವರ ಬದುಕಿನ ಚಿತ್ರಣವನ್ನು ಅ.ನಾ.ಪ್ರಹ್ಲಾದರಾವ್ ಅವರು ಈ ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವಸ್ತುನಿಷ್ಠವಾದ ಶ್ರೀಯುತರ ಬರವಣಿಗೆಯಲ್ಲಿ ರಜನಿಕಾಂತ್ ಸುಂದರವಾಗಿ ಅನಾವರಣಗೊಂಡಿದ್ದಾರೆ. ಪ್ರಹ್ಲಾದರಾಯರದು ಸುಭಗ ಶೈಲಿಯ ಬರವಣಿಗೆ. ಪ್ರಗಲ್ಭವಾದ ವಿಷಯವನ್ನು ಅತ್ಯಂತ ಸರಳವಾಗಿ ನಿರೂಪಿಸುವುದರಲ್ಲಿ ಅ.ನಾ.ಪ್ರ ನುರಿತವರು. ಕ್ಲಿಷ್ಟ ಪದಗಳನ್ನು ಬಳಸಿ ಓದುಗರಿಗೆ ಕಷ್ಟಕೊಡುವವರಲ್ಲ.` https://www.bookbrahma.com/book/nanna-dari-vibhinna-dari

ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳು

ಬದಲಾಯಿಸಿ

೧. ಕಥಾಸಂಗಮ
೨. ಬಾಳು ಜೇನು
೩. ಒಂದು ಪ್ರೇಮದ ಕಥೆ
೪. ಸಹೋದರರ ಸವಾಲ್
೫. ಕುಂಕುಮ ರಕ್ಷೆ
೬. ಗಲಾಟೆ ಸಂಸಾರ
೭. ಕಿಲಾಡಿ ಕಿಟ್ಟು
೮. ಮಾತು ತಪ್ಪದ ಮಗ
೯. ಸವಾಲಿಗೆ ಸವಾಲ್
೧೦. ತಪ್ಪಿದ ತಾಳ (ಇದರಲ್ಲಿ ಕಮಲಹಾಸನ್ ಕೂಡ ನಟಿಸಿರುವುದು ವಿಶೇಷ, ಕೆ.ಬಾಲಚಂದರ್ ನಿರ್ದೇಶನ)
೧೧. ಪ್ರಿಯ
೧೨. ಘರ್ಜನೆ

ರಜನೀಕಾಂತ್ ಅಭಿನಯದ ಪ್ರಮುಖ ತಮಿಳು ಚಿತ್ರಗಳು

ಬದಲಾಯಿಸಿ
  • [ಬಿಟ್ಟೋಗಿರುತ್ತದೆ ಕ್ಷಮಿಸಿ[

ರಜನೀಕಾಂತ್ ಅಭಿನಯದ ಪ್ರಮುಖ ಹಿಂದಿ ಚಿತ್ರಗಳು

ಬದಲಾಯಿಸಿ