ಚಿತ್ರಕೂಟ
ಚಿತ್ರಕೂಟ ಭಾರತದ ಮಧ್ಯಪ್ರದೇಶ ರಾಜ್ಯದ ಸತ್ನಾ ಜಿಲ್ಲೆಯ ಒಂದು ಪಟ್ಟಣ ಮತ್ತು ಇದು ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಗಡಿಯಲ್ಲಿದ್ದು , ಬುಂದೇಲ್ಖಂಡ್ ಪ್ರದೇಶದಲ್ಲಿ ಇದೆ. ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿದ ಒಂದು ಪಟ್ಟಣ. ಚಿತ್ರಕೂಟ ಧಾಮ್ (Karwi) ಇದು ಹತ್ತಿರದ ಪಟ್ಟಣ. ಇದು ದೇವಾಲಯಗಳು ಮತ್ತು ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಅನೇಕ ತಾಣಗಳಿಗೆ ಹೆಸರುವಾಸಿಯಾಗಿದೆ.
Chitrakoot | |
---|---|
city | |
ದೇಶ | ಭಾರತ |
ರಾಜ್ಯ | ಮದ್ಯ ಪ್ರದೇಶ |
ಜಿಲ್ಲೆ | ಸತ್ನಾ |
Population (2001) | |
• Total | ೨೨,೨೯೪ |
Languages | |
• Official | ಹಿಂದಿ |
Time zone | UTC+5:30 (IST) |
ಅನೇಕ ಜನರು ಪ್ರತಿ ಅಮಾವಾಸ್ಯೆಯೂ ಇಲ್ಲಿ ಒಂದುಗೂಡುತ್ತಾರೆ.ಸೋಮವತಿ ಅಮಾವಾಸ್ಯೆ , ದೀಪಾವಳಿ, ಶರದ್-ಪೂರ್ಣಿಮ, ಮಕರ ಸಂಕ್ರಾಂತಿ ಮತ್ತು ರಾಮನವಮಿ ಇಂತಹ ವಿಶೇಷ ಸಂದರ್ಭಗಳಲ್ಲಿ ವಿಶೇಷ ಆಚರಣೆಗಳು ಉಚಿತ ಕಣ್ಣಿನ ಆಸ್ಪತ್ರೆ ಶಿಬಿರಗಳಿಂದಾಗಿ ವರ್ಷ ಪೂರ್ತಿ ಜನಸಂದಣಿಯನ್ನು ಆಕರ್ಷಿಸುತ್ತದೆ. 'ಆರೋಗ್ಯಧಾಮ' ದಂತಹ ಖ್ಯಾತ 'ಆಯುರ್ವೇದ' ಮತ್ತು 'ಯೋಗ' ಕೇಂದ್ರಗಳು ಚಿತ್ರಕೂಟ ನೆಲೆಗೊಂಡಿವೆ.
ಚಿತ್ರಕೂಟ 'ಅನೇಕ ಅದ್ಭುತಗಳ ಬೆಟ್ಟ ' ಎಂದರ್ಥ. ಚಿತ್ರಕೂಟ ಪ್ರದೇಶವು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಡಿರುವ ಉತ್ತರ ವಿಂಧ್ಯಾ ಪರ್ವತಗಳ ವ್ಯಾಪ್ತಿಯಲ್ಲಿ ಬರುತ್ತಿದ್ದು . ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲೂ ಮತ್ತು ಮಧ್ಯಪ್ರದೇಶದ ಸತ್ನ ಜಿಲ್ಲೆಯಲ್ಲೂ ಚಿತ್ರಕೂಟವನ್ನು ಸೇರಿಸಲಾಗಿದೆ.
ಇತಿಹಾಸ
ಬದಲಾಯಿಸಿಇದು ರಾಮ, ಸೀತಾ ಮತ್ತು ಅವರ ಸಹೋದರ ಲಕ್ಷ್ಮಣ ತಮ್ಮ ವನಸವಾಸದ ಹದಿನಾಲ್ಕು ವರ್ಷಗಳಲ್ಲಿನ ಹನ್ನೊಂದುವರೆ ವರ್ಷಗಳ ಕಾಲ ಈ ಆಳವಾದ ಕಾಡುಗಳಲ್ಲಿ ಕಳೆದರು. ; ಮಹಾ ಸಂತ ಅತ್ರಿ, ಸತಿ ಅನಸೂಯೆ , ದತ್ತಾತ್ರೇಯ, ಮಹರ್ಷಿ ಮಾರ್ಕಾಂಡೇಯ ,ಮುಂತಾದವರು ಇಲ್ಲಿದ್ದರು. ಇಲ್ಲಿ ಬ್ರಹ್ಮ, ವಿಷ್ಣು ಮತ್ತು ಈಶ್ವರ ಈ ತ್ರಿಮೂರ್ತಿಗಳು ಅವತಾರ ಎತ್ತಿದರು..