ಸಾವಿತ್ರಿ

ಸತ್ಯವಾನ ಸಾವಿತ್ರಿ
ಸಾವಿತ್ರಿ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ

.

ಸತ್ಯವಾನ ಮತ್ತು ಸಾವಿತ್ರಿ

ಸಾವಿತ್ರಿ - ಹಿಂದೂ ಧರ್ಮಪುರಾಣಗಳಲ್ಲಿನ ಪ್ರಮುಖ ವ್ಯಕ್ತಿಗಳಲ್ಲೊಬ್ಬರು.

ಸತ್ಯವಾನ್ ಅವರ ಪತ್ನಿಯಾದ ಸಾವಿತ್ರಿ, ತನ್ನ ಪತಿ ಮರಣ ಹೊಂದಿದಾಗ ಯಮನೊಡನೆ ಮಾತಿನಲ್ಲೇ ಹೋರಾಡಿ, ತನ್ನ ಪತಿಯ ಪ್ರಾಣವನ್ನು ಯಮನಿಂದ ಹಿಂದಕ್ಕೆ ಪಡೆಯುತ್ತಾಳೆ .ಅಂದಿನಿಂದ ಸತಿಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಸಲಾಗುವ ಸಾವಿತ್ರಿ, ಸತಿ ಸಾವಿತ್ರಿ ಎಂದೇ ಪ್ರಸಿದ್ಧಿ.

ಈ ಸತಿಯ ನೆನೆಯುತ್ತಾ ಪ್ರತಿ ವರ್ಷ ಜ್ಯೇಷ್ಠ ಮಾಸದ [ಶುದ್ಧ] ಹುಣ್ಣಿಮೆಯಂದು "ವಟ ಪೂರ್ಣಿಮಾ" ವ್ರತ ಆಚರಿಸಲಾಗುತ್ತದೆ.

ಶಾದ್ವಲ ದೇಶದ ರಾಜ ದ್ಯುಮತ್ಸೇನ ವಿಧಿವಶಾತ್ ಕುರುಡನಾಗುತ್ತಾನೆ. ಇಂಥ ಅವಕಾಶಕ್ಕಾಗೇ ಕಾಯುತ್ತಿದ್ದ ವೈರಿ ಪಡೆಗಳು ಅವನ ರಾಜ್ಯದ ಮೇಲೆ ದಾಳಿ ಮಾಡುತ್ತಾರೆ. ಬೇರೆ ದಾರಿ ಕಾಣದೇ ದ್ಯುಮತ್ಸೇನ ತನ್ನ ಪತ್ನಿ ಹಾಗು ಪುತ್ರನೊಡನೆ ಕಾಡಿನಲ್ಲಿ ವಾಸಿಸತೊಡಗುತ್ತಾನೆ. ಕಾಡಿನ ವಾತಾವರಣದಲ್ಲಿ ಪುತ್ರ ಸತ್ಯವಾನನು ಬೆಳೆಯುತ್ತಾನೆ.

ಮದ್ರರಾಜ ಅಶ್ವಪತಿಗೆ ಸಂತಾನವಿಲ್ಲದ ಕಾರಣ ಸತತ ೧೮ ವರ್ಷ ಸಾವಿತ್ರಿ ದೇವಿಯ ಉಪಾಸನೆ ಮಾಡುತ್ತಾನೆ. ಅದರ ಫಲವಾಗಿ ಅಶ್ವಪತಿ ದಂಪತಿಗಳಿಗೆ ಕನ್ಯಾರತ್ನ ಪಡೆಯುತ್ತಾರೆ. ಆಕೆಗೆ ಸಾವಿತ್ರಿ ಎಂದು ನಾಮಕರಣ ಮಾಡುತ್ತಾರೆ.ಶಾದ್ವಲ ದೇಶದ ರಾಜ ದ್ಯುಮತ್ಸೇನನ ಮಗ ಸತ್ಯವಾನನನ್ನ ವರಿಸಲು ನಿಶ್ಚಯಿಸುತ್ತಾಳೆ ಹಾಗು ತನ್ನ ಹೆತ್ತವರ ಅಪ್ಪಣೆಯನ್ನ ಪಡೆಯುತ್ತಾಳೆ. ನಾರದರು ಅಶ್ವಪತಿಯಲ್ಲಿಗೆ ಬಂದು ಸತ್ಯವಾನನ ಅಲ್ಪಾಯುಶ್ಯದ ವಿಚಾರವನ್ನು ತಿಳಿಸುತ್ತಾರೆ. ಮಗಳಿಗೆ ಈ ವಿಚಾರವನ್ನ ತಿಳಿಸಿದಾಗ ಸಾವಿತ್ರಿಯು ಮಾನಸಿಕವಾಗಿ ತಾನು ಸತ್ಯವಾನನೇ ತನ್ನ ಪತಿಯೆಂದು ತಿಳಿದಿರುವುದಾಗಿ ತನ್ನ ನಿರ್ಧಾರವನ್ನ ಬದಲಾಯಿಸಲಾರೆನೆಂದು ಹೇಳುತ್ತಾಳೆ.

ಆಗ ಅಶ್ವಪತಿಯು ಆಕೆಯ ವಿವಾಹವನ್ನು ಸತ್ಯವಾನನೊಡನೆ ಅರಣ್ಯದಲ್ಲಿ ನೆರವೇರಿಸುತ್ತಾನೆ. ಪತಿ, ಅತ್ತೆ-ಮಾವರೊಡನೆ ಸಾವಿತ್ರಿ ಅರಣ್ಯವಾಸವನ್ನಾರಂಭಿಸುತ್ತಾಳೆ. ತನ್ನ ಪತಿಗೆ ಅಲ್ಪಾಯುಷ್ಯ ಎಂದು ಗೊತ್ತಾಗಿದ್ದರಿಂದ ಸಾವಿತ್ರಿ ಆತನ ಒಳಿತಿಗಾಗಿ ಅನೇಕ ವ್ರತ ನೇಮಗಳನ್ನ ಆಚರಿಸುತ್ತಾಳೆ.

ಆದೊಂದು ದಿನ ತನ್ನ ಪತ್ನಿಯ ತೊಡೆಯ ಮೇಲೆ ಶಿರವನ್ನಿಟ್ಟು ಸತ್ಯವಾನ್ ಮಲಗಿರುತ್ತಾನೆ ,ಅಲ್ಲಿಗೆ ಯಮಧರ್ಮರಾಯ ಬರುತ್ತಾನೆ. ಸಾವಿತ್ರಿ ತನ್ನ ಸತ್ಯ, ಚಾರಿತ್ರ್ಯ ಹಾಗೂ ಚತುರ ಮಾತುಗಳ ಬಲದಿಂದ ಯಮರಾಜನನ್ನು ಒಲೈಸಲು ಪ್ರಯತ್ನಿಸಿ ಯಶಸ್ವಿಯಾಗುತ್ತಾಳೆ ಕೂಡ. ಯಮರಾಜನು ಆಕೆಯ ಸತ್ಯ, ಚಾರಿತ್ರ್ಯ ಹಾಗೂ ಚತುರ ಮಾತುಗಳಿಂದ ಸಂತುಷ್ಟನಾಗಿ ಮೂರು ವರಗಳನ್ನ ದಯಪಾಲಿಸುತ್ತಾನೆ.