ದೊರೈ-ಭಗವಾನ್ (ಬಿ. ದೊರೈರಾಜು-ಎಸ್. ಕೆ. ಭಗವಾನ್‌)

ದೊರೈ-ಭಗವಾನ್

ಎಪ್ಪತ್ತು ಎಂಭತ್ತರ ದಶಕದಲ್ಲಿ ಶ್ರೇಷ್ಠ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದವರು. ಈ ನಿರ್ದೇಶಕದ್ವಯರ ಮಾನಸಿಕ ಸಮತೋಲನ, ಹೊಂದಾಣಿಕೆ ಮೆಚ್ಚುವಂಥದ್ದು. ಕ್ರಿಯಾಶೀಲತೆಯ ವಿಚಾರದಲ್ಲಿ ಎರಡೂ ಮನಸುಗಳು ಒಂದೇ ಕಕ್ಷೆಯಲ್ಲಿ ಪರಿಭ್ರಮಿಸುವುದು ಕಷ್ಟಕರ ಕತೆಯನ್ನು ಬರೆಯುವುದರಲ್ಲಿ ಇರಬಹುದು. ಚಿತ್ರಕತೆಯನ್ನು ವಿಸ್ತರಿಸುವುದರಲ್ಲಿ ಇರಬಹುದು ಅಥವಾ ದೃಶ್ಯಗಳನ್ನು ಪೋಣಿಸುವ ವಿಚಾರದಲ್ಲಿ ಇರಬಹುದು ಎರಡು ಮನಸುಗಳು ಸಮಚಿತ್ತದಿಂದ ಏಕಮುಖವಾಗಿ ಚಲಿಸಬೇಕಾಗಿ ಬಂದಾಗ ಏಕಾಗ್ರತೆ ಹಾಗೂ ಏಕ ಅಭಿರುಚಿ ಬಹು ಮುಖ್ಯವಾಗುತ್ತದೆ. ಕೇವಲ ಒಂದೇ ಒಂದು ಮನಸಿನಲ್ಲೆ ಹಲವಾರು ಚಿಂತನೆಗಳ ಜಿಜ್ಞಾಸೆ ಮೈದೋರುವಾಗ ಎರಡು ಮನಸುಗಳು ಒಟ್ಟಾಗಿ ಚಿಂತಿಸುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ದೊರೈ - ಭಗವಾನರು ವಿಶೇಷವಾಗಿ ನಿಲ್ಲುತ್ತಾರೆ. ತಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು, ತೀಕ್ಷಣ ಪ್ರಚೋದನೆಗಳನ್ನು ಚಿತ್ರವೊಂದರ ರೂಪದಲ್ಲಿ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ. ಕಾದಂಬರಿಗಳನ್ನಾಧರಿಸಿ ಸಿನಿಮಾ ಮಾಡುವಾಗ ಕಾದಂಬರಿಯ ಪಾತ್ರಗಳಿಗೆ ಮನಸುಗಳನ್ನು ಒಗ್ಗಿಸಿಕೊಂಡು ತಾವೇ ಪಾತ್ರವಾಗಿ ಅನುಭವಿಸಿ ತದ ನಂತರ ಕಲಾವಿದರಿಂದ ಕೆಲಸ ಹೊರ ತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಬಿ.ದೊರೈರಾಜು- ಬಿ.ದೊರೈರಾಜ್ ಮೈಸೂರಿನವರು,ಸಂಗೀತ ಚಿತ್ರ ಕಲೆ,ಕ್ರೀಡೆಯಲ್ಲಿ ಆಸಕ್ತರಾಗಿದ್ದ ಇವರು ಚಲನಚಿತ್ರಗಳ ಬಗ್ಗೆ ಬೇಗನೆ ಆಸಕ್ತಿ ತಾಳಿದರು,ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋ ಆರಂಭವಾದಾಗ ಅಲ್ಲಿ ಸಹಾಯಕರಾಗಿ ಸೇರಿ ಮುಂದೆ ಮುಂಬೈನಲ್ಲಿ ಏನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾದರು.ಅನೇಕ ಮಲಯಾಳಿ ಚಿತ್ರಗಳಿಗೆ ಸ್ವತಂತ್ರವಾಗಿ ಛಾಯಾಗ್ರಹಣ ನೀಡಿದ ದೊರೈರಾಜ್ ಅವರು ರಾಜ್ ಅಭಿನಯದ "ಸೋದರಿ"ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಛಾಯಾಗ್ರಾಹಕರಾಗಿ ಬಂದರು.ಅನಂತರ ಅನೇಕ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ದುಡಿದ ಅವರಿಗೆ "ಜಗಜ್ಯೋತಿ ಬಸವೇಶ್ವರ'ಛತ್ರದ ಚಿತ್ರೀಕರಣದ ಸಂದರ್ಬದಲ್ಲಿ ಎಸ್.ಕೆ.ಭಗವಾನ್ ರ ಪರಿಚಯವಾಗಿ ಉಂಡೆ ಈ ಜೋಡಿ ಕನ್ನಡ ಚಿತ್ರ ರಂಗ ಮರೆಯಲಾಗದ ಕೊಡುಗೆಯನ್ನೇ ನೀಡಿತು.

ಎಸ್.ಕೆ. ಭಗವಾನ್-

ಮೈಸೂರಿನವರಾದ ಎಸ್.ಕೆ. ಭಗವಾನ್ ಅವರಿಗೆ ಶಾಲಾ ದಿನಗಳಲ್ಲೇ ರಂಗಭೂಮಿಯತ್ತ ಇದ್ದ ಆಸಕ್ತಿ ಕ್ರಮೇಣ ಚಿತ್ರರಂಗದತ್ತ ಹೊರಳಿತು. ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ರಾಜ್ಯವನ್ನು ಸುತ್ತಿದ ಎಸ್.ಕೆ. ಭಗವಾನ್ ಭಾಗ್ಯೋದಯ ಚಿತ್ರದಲ್ಲಿ (೧೯೫೬) ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಸಹಾಯಕರಾಗಿದ್ದು ಸಂಧ್ಯಾರಾಗ ಹಾಗೂ ರಾಜದುರ್ಗದ ರಹಸ್ಯ ಚಿತ್ರಗಳನ್ನು ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ನಿರ್ದೇಶಿಸಿದರು. ಟಿ.ವಿ.ಸಿಂಗ್ ಠಾಕೂರ್, ಅವರಲ್ಲಿ ಪಳಗಿದ ಭಗವಾನ್, ದೊರೈ ಅವರೊಂದಿಗೆ ನಿರ್ದೇಶಿಸಿದ ಮೊದಲ ಚಿತ್ರ ‘ಜೇಡರ ಬಲೆ’ ಅವರಿಗೆ ಹೆಸರು ತಂದುಕೊಟ್ಟಿತು. ದೊರೈ-ಭಗವಾನ್ ಜೋಡಿಯದು ಕಸ್ತೂರಿ ನಿವಾಸ, ಹೊಸಬೆಳಕು, ಜೀವನ ಚೈತ್ರ ಮೊದಲಾದ ೨೩ಕ್ಕೂ ಹೆಚ್ಚು ಚಿತ್ರಗಳನ್ನು ತೆರೆಗೆ ತಂದ ಹೆಗ್ಗಳಿಕೆ.ಸೌತ್ ಇಂಡಿಯನ್ ಫಿಲಂ ಛೇಂಬರ್ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಭಗವಾನ್ ಪ್ರಸ್ತುತ ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನ ಪ್ರಿನ್ಸಿಪಾಲರು."ನಮನ"