ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅವರು ೧೯೮೯ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವಲ್ಲವುಗಳಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದರು. ಈ ಎಲ್ಲ ಚಿತ್ರಗಳು ಭಾರಿ ಯಶಸ್ಸು ಕಂಡವು. ಗಜಪತಿ ಗರ್ವಭಂಗ, ಪೋಲಿಸ್‍ನ ಹೆಂಡ್ತಿ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ ಉಡುಗೊರೆಯಂತಹ ಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು.

ಮಾಲಾಶ್ರೀ
ಚಿತ್ರ:Malashri 5.jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1973-08-10) August 10, 1973 (age 48)
ಬೆಂಗಳೂರು ಕರ್ನಾಟಕ
ವರ್ಷಗಳು ಸಕ್ರಿಯ ೧೯೮೯–ಪ್ರಸ್ತಕ
ಪತಿ/ಪತ್ನಿ ರಾಮು