ವಿಜಯಕಲಾ ಕನ್ನಡದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ [೧][೨]. ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೂಲಕ ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ವಿಜಯಕಲಾ ಸುಮಾರು ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ೭೦ ಮತ್ತು ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಲಾ ಅವರ ಪ್ರಮುಖ ಚಿತ್ರಗಳೆಂದರೆ ಮಗ ಮೊಮ್ಮಗ(೧೯೭೪), ಯಾರು ಹಿತವರು (೧೯೭೬) ಮತ್ತು ತೀರದ ಬಯಕೆ(೧೯೮೧).

ವಿಜಯಕಲಾ
Diedಸಪ್ಟೆಂಬರ್ ೩೦, ೨೦೧೩
Occupationಚಲನಚಿತ್ರ ಮತ್ತು ರಂಗ ನಟಿ
Years active೧೯೭೧-೧೯೯೧

ವೃತ್ತಿ ಜೀವನ ಬದಲಾಯಿಸಿ

ಕಲ್ಯಾಣಿ(೧೯೭೧) ಮತ್ತು ತ್ರಿವೇಣಿ(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ ಮಗ ಮೊಮ್ಮಗ(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ ಆಶೀರ್ವಾದ(೧೯೭೫), ಯಾರು ಹಿತವರು(೧೯೭೬) ಮತ್ತು ತೀರದ ಬಯಕೆ(೧೯೮೧). ಪ್ರಖ್ಯಾತ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ನಿರ್ದೇಶನದ ಮಹಾತಪಸ್ವಿ(೧೯೭೭) ಮತ್ತು ಹೊಯ್ಸಳ(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ ಪ್ರೇಮ ಮಂದಿರ(೧೯೮೪) ಮತ್ತು ಡೈಮಂಡ್ ಸಿಕ್ರೆಟ್ ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು[೨].

ನಿಧನ ಬದಲಾಯಿಸಿ

೨೦೧೩ರ ಸಪ್ಟೆಂಬರ್ ೩೦ರಂದು ಉಸಿರಾಟದ ತೊಂದರೆಯಿಂದ ನಿಧನರಾದರು.[೨]

ವಿಜಯಕಲಾ ಅಭಿನಯದ ಕೆಲವು ಚಿತ್ರಗಳು ಬದಲಾಯಿಸಿ

ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೭೧ ತಂದೆ ಮಕ್ಕಳು ಕನ್ನಡ ಎಸ್.ವಿ.ಶ್ರೀಕಾಂತ್ ಜಯಂತಿ, ಬಿ.ಸರೋಜಾ ದೇವಿ, ರಮೇಶ್, ಆರ್.ಎನ್.ಸುದರ್ಶನ್, ಶ್ರೀನಾಥ್
೧೯೭೧ ನಮ್ಮ ಬದುಕು ಕನ್ನಡ ಎಂ.ಎನ್.ಆರಾಧ್ಯ ರಾಜೇಶ್, ಪಂಢರೀಬಾಯಿ, ಪೂರ್ಣಿಮಾ, ಕೆ.ಎಸ್.ಅಶ್ವಥ್
೧೯೭೧ ಕಲ್ಯಾಣಿ ಕನ್ನಡ ಗೀತಪ್ರಿಯ ಜಯಂತಿ, ಗಂಗಾಧರ್, ರಂಗಾ
೧೯೭೨ ತ್ರಿವೇಣಿ ಕನ್ನಡ ಎಂ.ಎನ್.ಪ್ರಸಾದ್ ಕಲ್ಪನಾ, ಉದಯಕುಮಾರ್
೧೯೭೨ ಸುಭದ್ರಾ ಕಲ್ಯಾಣ ಕನ್ನಡ ಕಣಗಾಲ್ ಪ್ರಭಾಕರ ಶಾಸ್ತ್ರಿ ರಾಜೇಶ್, ಕಲ್ಪನಾ, ಗಂಗಾಧರ್, ಬಿ.ವಿ.ರಾಧ
೧೯೭೨ ಸಿಪಾಯಿ ರಾಮು ಕನ್ನಡ ವೈ.ಆರ್.ಸ್ವಾಮಿ ಡಾ.ರಾಜ್ ಕುಮಾರ್, ಲೀಲಾವತಿ, ಆರತಿ
೧೯೭೩ ಧರ್ಮಪತ್ನಿ ಕನ್ನಡ ಆರೂರು ಪಟ್ಟಾಭಿ ರಾಜಾಶಂಕರ್, ಲೀಲಾವತಿ
೧೯೭೪ ಗೃಹಿಣಿ ಕನ್ನಡ ವಿಜಯ ಸತ್ಯಂ ರಾಜೇಶ್, ಬಿ.ಸರೋಜಾ ದೇವಿ, ರಾಮ್ ಗೋಪಾಲ್
೧೯೭೪ ಮಗ ಮೊಮ್ಮಗ ಕನ್ನಡ ವೈ.ಆರ್.ಸ್ವಾಮಿ ದ್ವಾರಕೀಶ್, ಚಂದ್ರಕಲಾ, ಕೆ.ಎಸ್.ಅಶ್ವಥ್, ಲೀಲಾವತಿ, ಶೈಲಶ್ರೀ, ವಜ್ರಮುನಿ
೧೯೭೪ ಮಹಾತ್ಯಾಗ ಕನ್ನಡ ಮಾರುತಿ ಶಿವರಾಂ ಆರತಿ, ಜಯಲಕ್ಷ್ಮಿ, ಲೀಲಾವತಿ
೧೯೭೫ ಜಾಗೃತಿ ಕನ್ನಡ ಬಿ.ಶ್ರೀಧರ್ ಉದಯಕುಮಾರ್, ಜಯಲಕ್ಷ್ಮಿ, ಶೈಲಶ್ರೀ
೧೯೭೫ ದೇವರ ಕಣ್ಣು ಕನ್ನಡ ವೈ.ಆರ್.ಸ್ವಾಮಿ ಲೋಕೇಶ್, ಜಯಲಕ್ಷ್ಮಿ, ಆರತಿ
೧೯೭೫ ಆಶೀರ್ವಾದ ಕನ್ನಡ ಕುಣಿಗಲ್ ನಾಗಭೂಷಣ್ ಉದಯಕುಮಾರ್, ರಾಜೇಶ್, ರಾಜಶ್ರೀ
೧೯೭೬ ಯಾರು ಹಿತವರು ಕನ್ನಡ ಪಿ.ಎಸ್.ಮೂರ್ತಿ ಜಯಮಾಲ, ರಾಮ್ ಗೋಪಾಲ್
೧೯೭೭ ಮಹಾತಪಸ್ವಿ ಕನ್ನಡ ಸಿ.ವಿ.ಶಿವಶಂಕರ್ ಜಿ.ಟಿ.ಯಾದವ್
೧೯೭೮ ಹೊಯ್ಸಳ ಕನ್ನಡ ಸಿ.ವಿ.ಶಿವಶಂಕರ್
೧೯೮೧ ತೀರದ ಬಯಕೆ ಕನ್ನಡ ರಾಜು ರಾಮ್ ಗೋಪಾಲ್
೧೯೮೪ ಪ್ರೇಮ ಮಂದಿರ ಕನ್ನಡ ವಿಜಯಕಲಾ ವಿಜಯಕಲಾ
೧೯೯೧ ಡೈಮಂಡ್ ಸಿಕ್ರೆಟ್ ಕನ್ನಡ ವಿಜಯಕಲಾ ವಿಜಯಕಲಾ, ರವೀಂದ್ರ

[೩]

ಉಲ್ಲೇಖಗಳು ಬದಲಾಯಿಸಿ

  1. "ವಿಜಯಕಲಾ". ಚಿಲೋಕ.
  2. ೨.೦ ೨.೧ ೨.೨ "ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ". ಕನ್ನಡ ಫಿಲ್ಮಿ ಬೀಟ್.
  3. "ವಿಜಯಕಲಾ ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.
"https://kn.wikipedia.org/w/index.php?title=ವಿಜಯಕಲಾ&oldid=1165857" ಇಂದ ಪಡೆಯಲ್ಪಟ್ಟಿದೆ