ವಜ್ರಮುನಿ

ಭಾರತೀಯ ನಟ

ವಜ್ರಮುನಿ (ಮೇ ೧೦, ೧೯೪೪[ಕನಕನಪಾಳ್ಯ]- ಜನವರಿ ೦೫, ೨೦೦೬[ಬೆಂಗಳೂರು]) ಅಂಜನಪುರದ ನಾಯಕ ಮನೆತನದ ದೊಡ್ಡನಾಯಕರ ಮೊಮ್ಮಗ. ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದರು. ಕನ್ನಡ ಚಿತ್ರಗಳಲ್ಲಿ ಇವರು ವಹಿಸಿದ ಖಳನಾಯಕನ ಪಾತ್ರಗಳು ಹೆಚ್ಚು ಪ್ರಸಿದ್ಧಿ ಪಡೆದವು, ಜನಮನದಲ್ಲಿ ಅಚ್ಚಾದವು. ಸುಮಾರು ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

ವಜ್ರಮುನಿ

ಚಿಕ್ಕಂದಿನಿಂದಲೂ ತುಂಟ ಹುಡುಗನಾಗಿಯೇ ಬೆಳೆದು ಕಾಲೇಜು ಮೆಟ್ಟಿಲನ್ನೇರಿದರಾದರೂ ವಿದ್ಯಾಭ್ಯಾಸದ ಕಡೆಗೆ ಅವರ ಗಮನಹರಿಸದೇ ನಾಟಕರಂಗದೆಡೆ ಒಲವನ್ನು ತೋರಿಸಿ ಕಾಲೇಜು ವಿದ್ಯಾಭ್ಯಾಸವನ್ನು ತೊರೆದು ನಾಟಕರಂಗಕ್ಕಿಳಿದರು . ಹಲವು ನೂರು ಪ್ರಯೋಗಗಳನ್ನು ಕಂಡ ಕಣಗಾಲ ಪ್ರಭಾಕರ ಶಾಸ್ತ್ರೀಗಳ "ಪ್ರಚಂಡ ರಾವಣ" ನಾಟಕದಲ್ಲಿ ಇವರು ರೋಚಕವಾಗಿ ಅಭಿನಯಿಸಿದ ರಾವಣನ ಪಾತ್ರ ಅವರಿಗೆ ವಿಶೇಷ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ವಜ್ರಮುನಿಯವರು ಸಿನಿಮಾಟೋಗ್ರಫಿ ಡಿಪ್ಲೊಮಾ ಪಡೆದು ಚಿತ್ರರಂಗವನ್ನು ಸೇರಲು ಬದ್ಧರಾದರು. ೧೯೬೭ ರಲ್ಲಿ ಪುಟ್ಟಣ್ಣನವರ "ಸಾವಿರ ಮೆಟ್ಟಿಲು" ಚಿತ್ರದ ಮೂಲಕ ನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದರಾದರೂ ಆ ಚಿತ್ರ ಬಿಡುಗಡೆಯಾಗಲಿಲ್ಲವೆಂಬ ಕೊರಗಲಿದ್ದರು ನಂತರ ಪುಟ್ಟಣ್ಣನವರೇ ನಿರ್ದೇಶಿಸಿದ "ಮಲ್ಲಮ್ಮನ ಪವಾಡ" ಚಿತ್ರದಲ್ಲಭಿನಯಿಸಿ ಬಿಡುಗಡೆಯೂ ಕಂಡು, ತಮ್ಮ ಮೊದಲನೆಯ ಚಿತ್ರದಲ್ಲಿ ಚಿತ್ರರಸಿಕರ , ಪ್ರೇಕ್ಷಕರ , ವಿಮರ್ಶಕರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದರು ವಜ್ರಮುನಿ . ಹೀಗೆ ತಮ್ಮ ಮೊದಲನೇ ಚಿತ್ರದಲ್ಲಿ ಗಮನ ಸೆಳೆದ ಅತ್ಯುತ್ತಮ ಕಲಾವಿದ ನಂತರ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಕ್ಕೆ ಹತ್ತಿರವಾದರು . ಒಂದೊಂದೆ ಯಶಸ್ಸಿನ ಮೆಟ್ಟಿಲನ್ನೇರಲು ಮುಂದಾದ ವಜ್ರಮುನಿ ಗೆಜ್ಜೆಪೂಜೆ , ನಾಗರಹಾವು , ಉಪಾಸನೆ, ಮಯೂರ , ಬಹದ್ದೂರ್ ಗಂಡು , ಭರ್ಜರಿ ಭೇಟೆ, ಪ್ರೇಮದ ಕಾಣಿಕೆ ಶಂಕರ್ ಗುರು , ಬಂಗಾರದ ಮನುಷ್ಯ , ಗಿರಿಕನ್ಯೆ , ಆಕಸ್ಮಿಕ , ಭಕ್ತ ಕುಂಬಾರ ಮೊದಲಾದ ಚಿತ್ರಗಳು ವಜ್ರಮುನಿಯವರಿಗೆ ಸಾಕಷ್ಟು ಪ್ರಶಂಸೆಯನ್ನು ತಂದುಕೊಟ್ಟ ಚಿತ್ರ , ಅದಷ್ಟೇ ಅಲ್ಲ ಬೆತ್ತಲೆ ಸೇವೆ ಚಿತ್ರದ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿತ್ತು .

ಖಳನಟನಾಗಿ ಪೋಷಕ ಪಾತ್ರದಲ್ಲಷ್ಟೇ ಅಲ್ಲದೇ ಚಿತ್ರದ ನಿರ್ಮಾಣಕ್ಕೂ ಕೈ ಹಾಕಿದರು , "ತಾಯಿಗಿಂತ ದೇವರಿಲ್ಲ ","ಬ್ರಹ್ಮಾಸ್ತ್ರ", "ಗಂಡುಭೇರುಂಡ" ಮೊದಲಾದ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದು . ರಾಜಕೀಯ ಕುಟುಂಬವೊಂದರಲ್ಲಿ ಜನಿಸಿದ್ದ ವಜ್ರಮುನಿಯವರಿಗೆ ಕಲಾ ಕ್ಷೇತ್ರವಷ್ಟೇ ಅಲ್ಲದೇ ರಾಜಕೀಯ ಕ್ಷೇತ್ರವೂ ಕೈಬೀಸಿ ಕರೆದಿತ್ತು . ಹಲವಾರು ಸಂಸ್ಥೆಗಳಲ್ಲಿ ,ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಸಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾತ. ನಟಭೈರವ , ನಟಭಯಂಕರ,ಎಂಬೆಲ್ಲಾ ಬಿರುದಿಗೆ ಪಾತ್ರರಾಗಿರುವ ಕಂಚಿನ ಕಂಠದ ವಜ್ರಮುನಿಯವರು ನಿಜ ಜೀವನದಲ್ಲಿ ತಾವು ಕಷ್ಟದಲ್ಲಿದ್ದರೂ ಪರರ ಕಷ್ಟವನ್ನಾಲಿಸಿ ಸಹಾಯ ಮಾಡುತ್ತಿದ್ದಂತಹ ಸಹೃದಯಿ ಆದರೆ ತೆರೆಮೇಲೆ ಮಾತ್ರ ಕಠಿಣ ಹೃದಯ ಉಳ್ಳ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ವಜ್ರಮುನಿಯವರು ಕಿಡ್ನಿ ವೈಫಲ್ಯದಿಂದ ೦೫ ಜನೇವರಿ,೨೦೦೬ ರಂದು ತಮ್ಮ ಕೊನೆಯುಸಿರನ್ನೆಳೆದರು.೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಪ್ರಿಯರ ಮನಸಿಗೆ ಹತ್ತಿರವಾಗಿದ್ದ ವಜ್ರಮುನಿಯವರ ಸ್ಥಾನವನ್ನು ಈವರೆಗೂ ಯಾವ ಒಬ್ಬ ಕಲಾವಿದ ತುಂಬಲಾಗಿಲ್ಲವೆನ್ನೋದು ವಿಪರ್ಯಾಸದ ಸಂಗತಿ,ಖಳ ನಟನಾಗಿ ನಟನೆಯಲ್ಲಿ ವಜ್ರಮುನಿಗೆ ವಜ್ರಮುನಿಯೇ ಸಾಟಿ."ನಮನ"

ನಾಟಕಗಳು ಸಂಪಾದಿಸಿ

  • ಪ್ರಚಂಡ ರಾವಣನಾಟಕ

ಪ್ರಸಿದ್ಧ ಚಿತ್ರಗಳು ಸಂಪಾದಿಸಿ

ಅವರು ನಟಿಸಿದ ಚಿತ್ರಗಳು ಸಂಪಾದಿಸಿ

ಹೊರಗಿನ ಸಂಪರ್ಕಗಳು ಸಂಪಾದಿಸಿ