ಒಕ್ಕಲಿಗ

ಹಿಂದೂ ಧರ್ಮದ ಜಾತಿ

ಒಕ್ಕಲು ಮಕ್ಕಳು, ಗೌಡ ಎಂಬ ಹೆಸರುಗಳೂ ಇವರಿಗೆವೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ.[] ದಕ್ಷಿಣ ಕರ್ನಾಟಕದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ. ಬಲವಾದ ಜಾತಿಸಂಘವನ್ನು ಹೊಂದಿರುವ ಇವರಲ್ಲಿ ಸಂಘದ ಯಜಮಾನ ಪಟ್ಟ ಅತ್ಯಂತ ಗೌರವಯುತವಾಗಿದೆ. ಈ ಯಜಮಾನರಿಗೆ ಸಹಾಯಕನಾಗಿ ಊರೊಟ್ಟಿನ ಕಾರ್ಯ ನಿರ್ವಹಿಸಲು 'ಚಿಕ್ಕಯಜಮಾನ' ಇರುತ್ತಾನೆ.

ಇತಿಹಾಸ

  1. ಕವಿರಾಜಮಾರ್ಗ, ಪಂಪ ಭಾರತಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ.
  2. ಒಕ್ಕಲುತನವೆಂದರೆ ಉಳುವುದು, ಬಿತ್ತುವುದು ಹಾಗೂ ಕೃಷಿ ಕೆಲಸಗಳನ್ನು ಮಾಡುವವರು ಒಕ್ಕಲಿಗರು.
  3. ಇವರು ಉತ್ತಮ ಕಾದಾಟಗಾರರಾಗಿದ್ದು ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೋಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಅವರ ಸೈನ್ಯದಲ್ಲಿ ಕಾದಾಡಲು ಇವರುಗಳು ಕಾಯ್ದಿರಿಸಿದ ಸೈನಿಕರಾಗಿರುತ್ತಿದ್ದರು.
  4. ಇವರುಗಳು ಸಂಬಳ ರಹಿತ ಸೈನಿಕರಾದುದರಿಂದ ಇವರ ಉಪಜೀವನಕ್ಕಾಗಿ ಆ ರಾಜರುಗಳು ಗ್ರಾಮಗಳನ್ನು ಉಂಬಳಿ ನೀಡುತ್ತಿದ್ದರು.
  5. ಅಂತಹ ಗ್ರಾಮಗಳಿಗೆ ಇವರ ಮುಖ್ಯಸ್ಥ ನಾಡಗೌಡ ಅಥವಾ ಊರಗೌಡ ಅಗಿ ಊರಿನ ಆಡಳಿತ ನಡೆಸುತ್ತಿದ್ದರು. ಮುಂದೆ ಇವರನ್ನೇ ಪಟೇಲರೆಂದು ಅಧೀಕೃತಗೊಂಡರು.
  6. ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ , ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು.
  7. ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ , ಊರಗೌಡ, ಪಟೇಲ ಇವರದಾಗಿರುತ್ತಿತ್ತು.
  8. ಇದಕ್ಕಾಗಿ ಒಂದು ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು.
  9. ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು.
  10. ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು.
  11. ಕೆಂಗಲ್ ಹನುಮಂತರಾಯರು‌, ಎಸ್‌. ಎಂ. ಕೃಷ್ಣ, ಹೆಚ್. ಡಿ. ದೇವೆಗೌಡರು, ಹೆಚ್‌. ಡಿ. ಕುಮಾರಸ್ವಾಮಿ ಇವರುಗಳು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ ಒಕ್ಕಲಿಗರಾಗಿದಾರೆ.
  12. ಶ್ರೀ ಹೆಚ್. ಡಿ. ದೇವೆಗೌಡರು ಭಾರತದ ಪ್ರಧಾನಮಂತ್ರಿಗಳಾಗಿದ್ದು ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿದವರಾಗಿದ್ದಾರೆ. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು.

ಆಚರಣೆಗಳು

ಯುಗಾದಿಯಿಂದ ಶಿವರಾತ್ರಿಯವರೆಗೆ ಎಲ್ಲಾ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಯುಗಾದಿಯಲ್ಲಿ ಬೇವು-ಬೆಲ್ಲ ತಿನ್ನುವುದಕ್ಕಿಂತ ದನಕರುಗಳನ್ನು ತೊಳೆಯುವುದು, ಆ ವರ್ಷದ ಶುಭಾಶುಭಾ ಫಲಗಳನ್ನು ಕೇಳುವುದು ಮುಖ್ಯವಾಗಿರುತ್ತದೆ. ಗೌರಿಹಬ್ಬದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಮಾಡುವುದಕ್ಕಿಂತ ಹೊಳೆ ಪೂಜೆ ಮಾಡುವುದು, ಮನೆಯ ಹೆಣ್ಣು ಮಕ್ಕಳಿಗೆ ಹಿತವನ್ನುಂಟು ಮಾಡುವುದಿ ಆಪ್ಯಾಯಮಾನವಾಗಿರುತ್ತದೆ. ಸಂಕ್ರಾಂತಿ ಎಳ್ಳು ಬೆಲ್ಲ ಬೀರುವ ಹಬ್ಬವಾಗದೆ ದನ-ಕರುಗಳನ್ನು ಖುಷಿಪಡಿಸುವ, ಅವುಗಳಿಗೆ ಬರಬಹುದಾದ ಖಾಯಿಲೆ ಕಸಾಲೆಗಲನ್ನು ದೂರ ಇಡಲು ಬೇಕಾದ ಆಚರಣೆಗಳನ್ನು ನಡೆಸುವ ಹಬ್ಬವಾಗಿ ಮಾರ್ಪಾಟಾಗುತ್ತದೆ. ಉಳಿದ ಹಬ್ಬಗಲಲ್ಲೂ ಹೀಗೆಯೇ ನವ್ಯತೆಗಿಂತ ಹೆಚ್ಚಾಗಿ ಸಂಪ್ರದಾಯತೆಯನ್ನೇ ಗುರುತಿಸಬಹುದಾಗಿದೆ[][][][]

ಉಪಗುಂಪುಗಳು

ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, ತುಳು ಅರೆಬಾಷೆ ಗೌಡ ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ.

ಗಂಗಟಿಕಾರ/ಗಂಗಡಕಾರ ಒಕ್ಕಲಿಗ

ಗಂಗಟಿಕಾರ ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಗಂಗರಾಜರುಗಳ ಕುಲದವರು ಗಂಗ ದೊರೆಗಳ ಆಳ್ವಿಕೆಯ ಪ್ರಾಂತ್ಯದ ಮನುಷ್ಯ ಎಂದಲೂ ಹೇಳುತ್ತಾರೆ. ಇದು ಈ ನೆಲದ ಗಟ್ಟಿ ಬಾಂಧವ್ಯವನ್ನು ತೊರಿಸುತ್ತದೆ. ಬೆಂಗಳೂರು ನಗರ, ಗ್ರಾಮಾಂತರ,ತುಮಕೂರು, ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ.

ಮೊರಸು

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ

ಹಾಲಕ್ಕಿ ಒಕ್ಕಲಿಗ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ

ಸರ್ಪ ಒಕ್ಕಲಿಗ

ಚಿಕ್ಕಮಗಳೂರು,ಚಿತ್ರದುರ್ಗ,ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳ‌ ಕೆಲವು ಭಾಗಗಳಲ್ಲಿ ಇವರು ವಾಸಿಸುತ್ತಾರೆ. ಇವರಲ್ಲಿ ಎರಡು ಪಂಗಡಗಳು

  1. ಶೆಟ್ಟೆಯವರು
  2. ಲಾದ್ಲೆಯವರು

ಹಳ್ಳಿಕಾರರು

ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲಗಳು ಇರುವುದು ವಿಶೇಷ,

ನಾಮದಾರಿ ಒಕ್ಕಲಿಗ

ನಾಮಧಾರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿದ್ದಾರೆ.

ಮೂಲತಃ 18 ಕುಟುಂಬಗಳಿಗೆ ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಇವರು ಸೇರಿರುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು . ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ.

ತುಳು ಅರೆಬಾಷೆ ಗೌಡ

ತುಳು ಅರೆಬಾಷೆ ಗೌಡ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಭಾರತದ ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ.[]

ಉಪ್ಪಿನ ಕೊಳಗ ಒಕ್ಕಲಿಗರು

ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.[]

ಇದನ್ನೂ ನೋಡಿ

ಉಲ್ಲೇಖಗಳು

  1. "ವಿಶ್ವ ಒಕ್ಕಲಿಗರ ವೇದಿಕೆ". Archived from the original on 2017-10-15. Retrieved 2017-10-17.
  2. https://kannada.oneindia.com/news/chikkaballapur/hosa-devara-habba-celebration-in-chikkaballapur-327953.html
  3. "Suggi Habba: ಉತ್ತರ ಕನ್ನಡದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಸಂಭ್ರಮ!". News18 ಕನ್ನಡ. 2024-04-26. Retrieved 2024-07-18.
  4. "In Uttara Kannada, Natives Celebrate This Harvest Festival By Dancing For 9 Days". News18 (in ಇಂಗ್ಲಿಷ್). 2024-03-21. Retrieved 2024-07-18.
  5. https://www.vijayavani.net/abbethumakur-bhimanadi-tathavil-glitter-fair-celebration-devotees-blessings-giving-dr-gangadhar-sri
  6. Dr. Kodi Kushalappa Gowda (1976). Gowda Kannada. Annamalai University.
  7. ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು
"https://kn.wikipedia.org/w/index.php?title=ಒಕ್ಕಲಿಗ&oldid=1235679" ಇಂದ ಪಡೆಯಲ್ಪಟ್ಟಿದೆ