ಗೆಜ್ಜೆಪೂಜೆ (ಚಲನಚಿತ್ರ)

ಕನ್ನಡ ಚಲನಚಿತ್ರ

ಗೆಜ್ಜೆಪೂಜೆ ಚಲನಚಿತ್ರವು ಕನ್ನಡದ ಖ್ಯಾತ ಲೇಖಕಿ, ಎಂ.ಕೆ.ಇಂದಿರ ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರ. ಕಾದಂಬರಿಯ ಹೆಸರು ಕೂಡ ಗೆಜ್ಜೆಪೂಜೆ.
ಜನಪ್ರಿಯ ನಿರ್ದೇಶಕ, ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿನ ಈ ಚಿತ್ರದಲ್ಲಿನ ತಾರಾಗಣದಲ್ಲಿ ಕಲ್ಪನಾ, ಗಂಗಾಧರ್, ಬಾಲಕೃಷ್ಣ, ಆರತಿ, ವಜ್ರಮುನಿ, ಅಶ್ವಥ್, ಲೋಕನಾಥ್, ಲೀಲಾವತಿ, ಪಂಡರೀಬಾಯಿ, ಸಂಪತ್ ಮುಂತಾದವರು ನಟಿಸಿದ್ದಾರೆ. ಸಂಭಾಷಣೆ ನವರತ್ನರಾಂ ಅವರದು. ವಿಜಯಭಾಸ್ಕರ್ ಸಂಗೀತ ನಿರ್ದೇಶಕರಾಗಿರುವ ಈ ಚಿತ್ರಕ್ಕೆ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರ ಅವರ ಹಾಡುಗಾರಿಕೆಯಿದೆ.

ಗೆಜ್ಜೆಪೂಜೆ (ಚಲನಚಿತ್ರ)
ಗೆಜ್ಜೆಪೂಜೆ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕರಾಶಿ ಸಹೋದರರು
ಸಂಭಾಷಣೆನವರತ್ನರಾಂ
ಪಾತ್ರವರ್ಗಗಂಗಾಧರ್ ಕಲ್ಪನಾ, ಆರತಿ ಲೀಲಾವತಿ, ಅಶ್ವಥ್, ಪಂಡರೀಬಾಯಿ, ಬಾಲಕೃಷ್ಣ, ವಜ್ರಮುನಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಚಿತ್ರ ಜ್ಯೋತಿ
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಇತರೆ ಮಾಹಿತಿಎಂ.ಕೆ.ಇಂದಿರ ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರ.