ಎಂ. ಕೆ. ಇಂದಿರ

(ಎಂ.ಕೆ.ಇಂದಿರ ಇಂದ ಪುನರ್ನಿರ್ದೇಶಿತ)

ಎಂ ಕೆ ಇಂದಿರ ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ[]. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ. ಎಂ.ಕೆ.ಇಂದಿರಾ ಅವರ ಗೆಜ್ಜೆ ಪೂಜೆ, ಫಣಿಯಮ್ಮ ಮತ್ತು ಪೂರ್ವಾಪರ ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ ಪ್ರೇಮಾ ಕಾರಂತ್. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. ಎಲ್. ವಿ.ಶಾರದಾ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಎಂ.ಕೆ.ಇಂದಿರಾ (೧೯೧೭,ಜನೆವರಿ ೫-)

ಎಂ.ಕೆ.ಇಂದಿರಾ
ಜನನ೫ ಜನವರಿ ೧೯೧೭
ತೀರ್ಥಹಳ್ಳಿ
ಮರಣ೧೫ ಮಾರ್ಚ್ ೧೯೯೪
ವೃತ್ತಿಲೇಖಕಿ
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕಾದಂಬರಿ

ಜನನ ಹಾಗೂ ಬಾಲ್ಯ :

ಬದಲಾಯಿಸಿ

ತೀರ್ಥಹಳ್ಳಿಯಲ್ಲಿ ಜನಿಸಿದರು. ಇವರ ತಂದೆ 'ತರೀಕೆರೆ ಸೂರ್ಯನಾರಾಯಣರಾವ್'; ತಾಯಿ 'ಬನಶಂಕರಮ್ಮ. ಅನೇಕ ಸುಪ್ರಸಿದ್ಧ ಕನ್ನಡಿಗರು, ಎಂ. ಕೆ. ಇಂದಿರ ರ, ಸಂಬಂಧಿಗಳು. ಸುಪ್ರಸಿದ್ಧ ಶಿಶುಸಾಹಿತಿ, ಹೊಯಿಸಳ, ಇಂದಿರಾರವರ ಸೋದರಮಾವ. ಪ್ರಜಾವಾಣಿಯ ಖ್ಯಾತ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾವ್ (ಟಿಎಸ್ಸಾರ್), ಇವರ ತಮ್ಮ. ಜನಪ್ರಿಯಸಾಹಿತಿ, ಹಾಗೂ ಆಕಾಶವಾಣಿ ನಿರ್ದೇಶಕ, ಡಾ. ಎಚ್.ಕೆ.ರಂಗನಾಥ್, ಇವರ ಚಿಕ್ಕಮ್ಮನ ಮಗ.

ಶಿಕ್ಷಣ, ಮದುವೆ, ಹಾಗೂ ಬರವಣಿಗೆ

ಬದಲಾಯಿಸಿ

ಕನ್ನಡ ಮಾಧ್ಯಮಿಕ ಶಾಲೆಯ ೨ ನೆಯ ತರಗತಿಯವರೆಗೆ ಮಾತ್ರ ಇವರ ಶಿಕ್ಷಣ. ೧೨ನೆಯ ವರ್ಷಕ್ಕೆ ಇವರ ಮದುವೆಯಾಯಿತು. ಇಂದಿರಾರವರು ಬರೆಯಲು ಪ್ರಾರಂಭಿಸಿದ್ದು ೧೯೬೩ರಲ್ಲಿ. ತುಂಗಭದ್ರ ಇವರ ಮೊದಲ ಕೃತಿ. ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ ೬೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸದಾನಂದ, ಫಣಿಯಮ್ಮಈ ಕಾದಂಬರಿಗಳಿಗೆ ಹಾಗು ನವರತ್ನ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೧೯೭೫ರಲ್ಲಿ 'ಶ್ರೇಷ್ಠ ಲೇಖಕಿ' ಹಾಗು 'ಶ್ರೇಷ್ಠ ಚಿತ್ರಕತೆ' ಪ್ರಶಸ್ತಿ ಇವರಿಗೆ ಲಭಿಸಿವೆ. ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಗೆಜ್ಜೆ ಪೂಜೆ` ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ, ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಹಳ್ಳಿಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೊಯಿಸಳ, ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡುಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ "ಗೆಜ್ಜೆಪೂಜೆ", "ಸದಾನಂದ", "ನವರತ್ನ".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. "ಬಿಂದು" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಾದಂಬರಿಗಳು[]

ಬದಲಾಯಿಸಿ
  • ಸದಾನಂದ
  • ನವರತ್ನ
  • ಫಣಿಯಮ್ಮ

ಚಲನಚಿತ್ರವಾಗಿರುವ ಕಾದಂಬರಿಗಳು

ಬದಲಾಯಿಸಿ


ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆಯಿತು. ಜೊತೆಗೆ ಈ ಕೃತಿಯನ್ನು ತೇಜಸ್ವಿನಿ ನಿರಂಜನ ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ. ಈ ಅನುವಾದಕ್ಕೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಕಾದಂಬರಿಗಳು

ಬದಲಾಯಿಸಿ
  • ತುಂಗ ಭದ್ರ
  • ತಾಪದಿಂದ ತಂಪಿಗೆ
  • ಹೆಣ್ಣಿನ ಆಕಾಂಕ್ಷೆ
  • ನೂರೊಂದು ಬಾಗಿಲು
  • ಚಿದ್ವಿಲಾಸ
  • ಮನೋಮಂದಿರ
  • ತಪೋವನದಲ್ಲಿ
  • ಕಲಾದರ್ಶಿ
  • ಕೂಚುಭಟ್ಟ
  • ಬ್ರಹ್ಮಚಾರಿ
  • ಸದಾನಂದ
  • ಮಧುವನ
  • ಗೆಜ್ಜೆಪೂಜೆ
  • ಶಾಂತಿಧಾಮ
  • ಗಿರಿಬಾಲೆ
  • ಡಾಕ್ಟರ್
  • ಮುಸುಕು
  • ಮನತುಂಬಿದ ಮಡದಿ
  • ಮೋಹನಮಾಲೆ
  • ಸುಕಾಂತ
  • ರಸವಾಹಿನಿ
  • ನಾಗವೀಣಾ
  • ಬಿದಿಗೆಚಂದ್ರಮಡೊಂಕು
  • ಆಭರಣ
  • ಮನೆಕೊಟ್ಟುನೋಡು
  • ಕನ್ಯಾಕುಮಾರಿಯಾರಿಗೆ
  • ಜಾತಿಕೆಟ್ಟವಳು
  • ಯಾರುಹಿತವರು?
  • ವರ್ಣಲೀಲೆ
  • ಜಾಲ
  • ಗುಂಡ
  • ಪವಾಡ
  • ಸುಸ್ವಾಗತ
  • ಟುಲೆಟ್
  • ಚಿತ್ರಭಾರತ
  • ಫಣಿಯಮ್ಮ
  • ಹಸಿವು
  • ಒಂದೇನಿಮಿಷ
  • ಅಗೋಚರ
  • ಸಗೋಚರ
  • ಪೂರ್ವಾಪರ
  • ಹೂಬಾಣ
  • ತಗ್ಗಿನಮನೆಸೀತೆ
  • ಸ್ಫೂರ್ತಿ
  • ಕೂಪ
  • ಕವಲು
  • ಆತ್ಮಸಖಿ
  • ಸೂತ್ರಧಾರಿಣಿ
  • ತಾಳಿದವರು
  • ಹಂಸಗಾನ
  • ವಿಚಿತ್ರಪ್ರೇಮ

ಕಥಾ ಸಂಕಲನಗಳು

ಬದಲಾಯಿಸಿ
  • ದಶಾವತಾರ
  • ಅಂಬರದ ಅಪ್ಸರೆ
  • ನವರತ್ನ
  • ನವಜೀವನ
  • ಪೌರ್ಣಿಮೆ
  • ಕಲ್ಪನಾ ವಿಲಾಸ

ನಗೆಹರಟೆಗಳು

ಬದಲಾಯಿಸಿ
  • ನಗಬೇಕು

ಪ್ರವಾಸ ಕಥನ

ಬದಲಾಯಿಸಿ
  • ಅನುಭವಕುಂಜ

ಪ್ರಶಸ್ತಿ/ಪುರಸ್ಕಾರ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. Dr. Kamat's Article on M.K. Indira
  2. Tharu, Susie J.; K, Lalitha (1991). Women Writing in India: 600 B.C. to the Present. Feminist Press. ISBN 1-55861-029-4.