ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು. 31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ.


ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್‍ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್‌ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.

ಪ್ರಮುಖ ದಿನಗಳುಸಂಪಾದಿಸಿ

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜನವರಿ&oldid=1092247" ಇಂದ ಪಡೆಯಲ್ಪಟ್ಟಿದೆ