ಡಿಸೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಕೊನೆಯ (ಹನ್ನೆರಡನೆಯ) ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಡಿಸೆಂಬರ್ ಕ್ರಿಸ್ತವರ್ಷದ ಹನ್ನೆರಡನೆಯ ತಿಂಗಳು. ಇದರಲ್ಲಿ 31 ದಿವಸಗಳಿವೆ. ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗುವ ಪ್ರಾಚೀನ ರೋಮ್ ತಾರೀಕುಪಟ್ಟಿಯಲ್ಲಿ ಇದನ್ನು ಹತ್ತನೆಯ ತಿಂಗಳಾಗಿ ಕಾಣಿಸಲಾಗಿತ್ತು. ಪ್ರಾಚೀನ ರೋಮನರು ಶನಿಗ್ರಹ ಸಂಬಂಧವಾದ ಸ್ಯಾಟರ್‍ನೇಲೀಯ ಎಂಬ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸುತ್ತಿದ್ದರು. ಈ ಹಂಗಾಮಿನಲ್ಲಿ ಯೂಲ್ ಎಂಬ ನಡುಚಳಿಗಾಲದ ಹಬ್ಬ ಪ್ರಾಚೀನ ಟ್ಯೂಟೋನಿಕರಿಂದ ಆಚರಿಸಲ್ಪಡುತ್ತಿತ್ತು. ಸಾಮಾನ್ಯವಾಗಿ ಟರ್‍ಕ್ವಾಯ್ಸ್ ಎಂಬ ಒಂದು ಬಗೆಯ ವೈಡೂರ್ಯವನ್ನು ಜಿರ್ಕಾನ್ ಎಂಬ ಖನಿಜವನ್ನೂ ಡಿಸೆಂಬರ್ ತಿಂಗಳಿಗೆ ಅನ್ವಯಿಸುವುದುಂಟು. ಏಸುಕ್ರಿಸ್ತನ ಜನನ ದಿನವನ್ನು ಕುರಿತು ಇರುವ ಸಾಂಪ್ರದಾಯಿಕ ನಂಬಿಕೆಯಂತೆ ಡಿಸೆಂಬರ್ 25ನೆಯ ದಿವಸವನ್ನು ಪ್ರಪಂಚದಾದ್ಯಂತ ಇರುವ ಕ್ರೈಸ್ತರು ಕ್ರಿಸ್ಮಸ್ ಎಂದು ಆಚರಿಸುತ್ತಾರೆ. ಸಾಮಾನ್ಯವಾಗಿ ಈ ಹಬ್ಬದ ಆಚರಣೆ ಮುಂದಿನ ಹೊಸ ವರ್ಷದ ಮೊದಲ ದಿನದ ವರೆಗೂ ನಡೆದಿರುತ್ತದೆ. ಮಕರ ಸಂಕ್ರಮಣ (ವಿಟರ್ ಸಾಲ್ಸ್‍ಟೀಸ್) ಸಂಭವಿಸುವುದು ಈ ತಿಂಗಳಲ್ಲೇ. ಭಾರತೀಯ ಪಂಚಾಂಗದ ರೀತ್ಯ ವೃಶ್ಚಿಕ ಮತ್ತು ಧನುರ್ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ

ಡಿಸೆಂಬರ್ ೨೦೨೪


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: