ಗ್ರೆಗೋರಿಯನ್ ಕ್ಯಾಲೆಂಡರ್

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ). ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ ೨೪, ೧೫೮೨ರಂದು ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು.

  • ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ 365 ದಿನಗಳ 6 ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (365 ದಿನಗಳ, 5 ಗಂಟೆ 49 ನಿಮಿಷ) ಎಂದು ತೋರಿಸಿದರು,
ಪೋಪ್ ಹದಿಮೂರನೆಯ ಗ್ರೆಗೊರಿ ಕ್ಯಾಲೆಂಡರ್ ಪ್ರಾರಂಭವನ್ನು ಆಚರಿಸುತ್ತಿರುವುದು-ಗ್ರೆಗೊರಿ ಸಮಾಧಿಯ ಮೇಲಿನ ಉಬ್ಬು ಶಿಲ್ಪ.

ಪರಿಹಾರಸಂಪಾದಿಸಿ

  • ಪ್ರತಿ ನಾಲ್ಕು ವರ್ಷ ಕ್ಕೊಮ್ಮೆ ನಿಖರವಾಗಿ ಭಾಗಿಸಬಹುದಾದ ವರ್ಷ ಅಧಿಕ ವರ್ಷ. ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚು, 29 ದಿನ ತೋರಿಸಿದರು. 100ವರ್ಷಗಳನ್ನು ಹೊರತುಪಡಿಸಿ, ಆದರೆ ಶತಮಾನ ವರ್ಷ ಅಧಿಕ ವರ್ಷಗಳಲ್ಲ 400ರಿಂದ ನಿಖರವಾಗಿ ಭಾಗಿಸಬಹುದಾದರೆ ಅಧಿಕ ವರ್ಷ. ಉದಾಹರಣೆಗೆ 1700, 1800, ಮತ್ತು 1900 ಇವು ಅಧಿಕ ವರ್ಷ ಅಲ್ಲ, ಆದರೆ 2000 ಅಧಿಕ ವರ್ಷ.

ಬಾಹ್ಯ ಸಂಪರ್ಕಗಳುಸಂಪಾದಿಸಿ