ನವರತ್ನರಾಂ ಕನ್ನಡಸಾಹಿತ್ಯದಲ್ಲಿ, ನಗೆ ಬರಹಗಳಿಗೆ ಹೆಸರಾದವರು. ಲಘುವಾದ ಬರಹಗಳಲ್ಲಿ ಗಾಂಭೀರ್ಯತೆ ಕಾಣಬಹುದು. ಹೆಸರಾಂತ ಲೇಖಕಿ ಉಷಾ ನವರತ್ನರಾಂ ಇವರ ಹೆಂಡತಿ.

ನವರತ್ನರಾಂ ಅವರದು (೧೯೩೨-೧೯೯೧) ಸುಸಂಸ್ಕೃತ ಮನೆತನ. ತಂದೆ ನವರತ್ನ ರಾಮರಾಯರು ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಆಡಳಿತೆ ಸೇವೆಗೆ ಸೇರಿ ಅಧಿಕಾರಿಯಾಗಿ ಹಲವಾರು ಕಡೆ ಸೇವೆ ಸಲ್ಲಿಸಿದ್ದಾರೆ. ಮಾಸ್ತಿಯವರ ಸಮಕಾಲೀನರಾಗಿದ್ದ ಆತ, ಮಾಸ್ತಿಯವರ ಮೇಲೂ ಪ್ರಭಾವ ಬೀರಿದ್ದರು. ಅವರ ಜೀವನದನ ನೆನಪುಗಳನ್ನು ಕುರಿತು ಬರೆದಿದ್ದ ಪುಸ್ತಕಕ್ಕೆ 'ರಾಜಸೇವಾ ಪುಸ್ತಕ' ಎಂಬ ಬಿರುದನ್ನು ಆಗಿನ ಮಹಾರಾಜರಾದ ಕೃಷ್ಣರಾಜ ಒಡೆಯರ್ ರಿಂದ ಪಡೆದಿದ್ದರು. ನವರತ್ನರಾಂ ಅವರ ತಾಯಿ ಪುಟ್ಟಮ್ಮ. ನವರತ್ನರಾಂ ಮತ್ತು ಲಕ್ಶ್ಮಣ ಅವಳಿ ಜವಳಿ ಮಕ್ಕಳು. ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ. ಚಿಕ್ಕಂದಿನಿಂದಲೂ ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟಕ ಎಲ್ಲದರಲ್ಲಿಯೂ ಆಸಕ್ತಿ ಹೊಂದಿದ್ದ ನವರತ್ನರಾಂ ರವರಿಗೆ ಅ.ನ.ಸುಬ್ಬರಾಯರ ಪ್ರೋತ್ಸಾಹದಿಂದ ಇವೆಲ್ಲರ ಪ್ರೀತಿ ಹೆಮ್ಮರವಾಗಿ ಬೆಳೆಯಿತು. ಬೆಂಗಳೂರಿನ ಸರ್ಕಾರಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಓದಿದ ಮೇಲೆ ಕೃಷಿ ಕಾಲೇಜ್ ಸೇರಿ ಪದವೀಧರರಾದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಫ್ರಾನ್ಸ್ ಗೆ ಹೋಗಬೇಕಾಗಿ ಬಂತು. ಆದ್ದರಿಂದ ಫ್ರೆಂಚ್ ಭಾಷೆ ಕಲಿಯಬೇಕಾಯಿತು. ಫ್ರೆಂಚ್ ಭಾಷೆ ತಿಳಿದಿದ್ದ ಉಷಾ ಅವರಿಂದ ಆ ಭಾಷೆ ಕಲಿತರು. ನಂತರ ಉಷಾ ಅವರ ಜೊತೆ ಪ್ರೇಮವಿವಾಹವಾಯಿತು. ಮಕ್ಕಳು ಮೂವರು. ಆರತಿ, ಅಂಜಲಿ ಮತ್ತು ಆಶ್ರಮಿ.

ನಾಟಕಗಳು

ಬದಲಾಯಿಸಿ

ವಿದ್ಯಾರ್ಥಿಯಾಗಿದ್ದಾಗ 'ಚಿತ್ರ ಕಲಾವಿದರು' ನಾಟಕ ತಂಡ, 'ಅಕ್ಕ-ಪಕ್ಕ', 'ಕೆಂಬೂತ', 'ಕನಸು-ನನಸು' ಮುಂತಾದ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದರು.

ಇತರೆ ಕೃತಿಗಳು

ಬದಲಾಯಿಸಿ
  • ನವರತ್ನ ರಾಮಾಯಣ
  • ಹೂವೊಂದು ದುಂಬಿನೂರೊಂದು
  • ೬೭ ಹ್ಯಾರಿಸ್ ರಸ್ತೆ
  • ಜಗವೆಲ್ಲಾ ಒಂದೇ ಶಿವ
  • ನೆರೆಹೊರೆಯವರ ಹೊರೆ
  • ಹಾಲು ಹಾಲಾಹಲ
  • ಕಲ್ಲರಳಿ ಹೂವಾಯ್ತು
  • ಜೀವ ಯಾವ ಕುಲ-ಆತ್ಮ ಯಾವ ಕುಲ
  • ಮೆಕ್ಯಾನಿಕ್ ಮಂಜಣ್ಣ
  • ಪ್ಯಾರಿಸ್ ಯಿಂದ ಪ್ರೇಯಸಿಗೆ (ಪ್ಯಾರಿಸ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಉಷಾ ಗೆ ಬರೆದ ಪತ್ರಗಳು ಈ ಹೆಸರಿನ ಪುಸ್ತಕವಾಗಿ ಪ್ರಕಟವಾಯಿತು)

ಹೀಗೆ ಹಲವಾರು...ಪ್ರಸಿದ್ದ ಕೃತಿಗಳು.

ಇನ್ನಿತರ ಮಾಹಿತಿ

ಬದಲಾಯಿಸಿ

ಸುಧಾ ಪತ್ರಿಕೆಯಲ್ಲಿ 'ನೀವು ಕೇಳಿದಿರಿ' ವಿಭಾಗದ ಪ್ರೆಶ್ನೆಗಳಿಗೆ ಉತ್ತರಿಸುತ್ತಿದ್ದ ಬೀchiಯವರು ನಿಧನರಾದ ನಂತರ ,ನವರತ್ನರಾಂ ಅವರು "ಚಿತ್ತಾ" ಎಂಬ ಹೆಸರಿನಲ್ಲಿ ಮುಂದುವರೆಸಿದರು.

ನವರತ್ನರಾಮ್ ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಗೆಜ್ಜೆ ಪೂಜೆ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.