ಸಂಪತ್
ಭಾರತೀಯ ಕನ್ನಡ ನಟ
ಕನ್ನಡ ಚಿತ್ರರಂಗದ ಪೋಷಕ ನಟ ಸಂಪತ್ ಹೆಸರಿಗೆ ತಕ್ಕಂತೆ ಚಿತ್ರರಂಗದ "ಸಂಪತ್ತು" ಆಗಿದ್ದರು.ಅವರ ನಿಜವಾದ ಹೆಸರು ಎಂ.ಎಸ್.ಚೆಲುವಯ್ಯಂಗಾರ್.ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲೂ ನಿರರ್ಗಳ ಪಾಂಡಿತ್ಯ ಹೊಂದಿದ್ದ ಇವರು,ಚಿತ್ರರಂಗಕ್ಕೆ ಬರುವ ಮುನ್ನ ಮುದ್ರಕರಾಗಿದ್ದರು.ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯಲ್ಲಿ ಇವರ ಸೇವೆ ಗಣನೀಯ.ಭಾರತಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ.ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ, ಖಳ ನಟ ..ಹೀಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
ಇವರ ಅಭಿನಯದ ಕೆಲವು ಪ್ರಮುಖ ಚಿತ್ರಗಳು
ಬದಲಾಯಿಸಿ- ದಲ್ಲಾಳಿ
- ರಾಜಲಕ್ಷ್ಮೀ
- ಮಾಡಿದ್ದುಣ್ಣೋ ಮಹರಾಯ
- ಎರಡು ಮುಖ
- ಬಬ್ರುವಾಹನ
- ಮಯೂರ
- ಬಡವರ ಬಂಧು
- ಮರೆಯದ ದೀಪಾವಳಿ
- ತ್ರಿಮೂರ್ತಿ
- ಶಂಕರ್ ಗುರು
ಸುಮಾರು ೧೩೦ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಕಲಾಪ್ರೌಢಿಮೆ ತೋರಿಸಿದ್ದಾರೆ.ಇವರು ೧೯೮೩ರಲ್ಲಿ ನಿಧನರಾದರು.