ಮಯೂರ (ಚಲನಚಿತ್ರ)
೧೯೭೫ರಲ್ಲಿ ತೆರೆಕಂಡ ಮಯೂರ, ಡಾ. ರಾಜ್ ಕುಮಾರ್ ನಟನೆಯ ಚಿತ್ರ. ಕದಂಬರ ಮೊದಲ ದೊರೆ, ಕನ್ನಡದ ಮೊದಲ ದೊರೆಯೆಂದೇ ಖ್ಯಾತರಾದ ಮಯೂರವರ್ಮರ ಕಥೆಯನ್ನಾಧರಿಸಿದ ಚಿತ್ರ.
ಮಯೂರ (ಚಲನಚಿತ್ರ) | |
---|---|
ಮಯೂರ | |
ನಿರ್ದೇಶನ | ವಿಜಯ್ |
ನಿರ್ಮಾಪಕ | ಟಿ.ಪಿ.ವೇಣುಗೋಪಾಲ್ |
ಚಿತ್ರಕಥೆ | ಚಿ.ಉದಯಶಂಕರ್ |
ಕಥೆ | ದೇವುಡು_ನರಸಿಂಹಶಾಸ್ತ್ರಿ |
ಸಂಭಾಷಣೆ | ಚಿ.ಉದಯಶಂಕರ್ |
ಪಾತ್ರವರ್ಗ | ರಾಜಕುಮಾರ್ ಮಂಜುಳ ಶ್ರೀನಾಥ್, ಅಶ್ವಥ್, ಸಂಪತ್, ವಜ್ರಮುನಿ, ಎಂ.ಪಿ.ಶಂಕರ್, ಬಾಲಕೃಷ್ಣ, ಆದವಾನಿ_ಲಕ್ಷ್ಮಿ_ದೇವಿ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಅಣ್ಣಯ್ಯ ಮಲ್ಲಿಕ್ |
ಸಂಕಲನ | ಭಕ್ತವತ್ಸಲಂ |
ಬಿಡುಗಡೆಯಾಗಿದ್ದು | ೧೯೭೫ |
ಸಾಹಸ | ವೈ. ಶಿವಯ್ಯ |
ಚಿತ್ರ ನಿರ್ಮಾಣ ಸಂಸ್ಥೆ | ರಮೇಶ್ ಮೂವೀಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ರಾಜಕುಮಾರ್ |
ಇತರೆ ಮಾಹಿತಿ | ಕದಂಬರ ಮೊದಲ ದೊರೆ, ಕನ್ನಡದ ಮೊದಲ ದೊರೆಯೆಂದೇ ಖ್ಯಾತರಾದ ಮಯೂರವರ್ಮರ ಕಥೆಯನ್ನಾಧರಿಸಿದ ಚಿತ್ರ. |
ಕಥೆ
ಬದಲಾಯಿಸಿಬ್ರಾಹ್ಮಣ ವಟು ಮಯೂರ ಶರ್ಮನು ರಂಗಾ ಜಟ್ಟಿಯವರ ಗರಡಿಯ ಪಟುಗಳನ್ನು ಕುಸ್ತಿಯಲ್ಲಿ ಸೋಲಿಸಿ ರಂಗಾಶೆಟ್ಟಿಗಳ ಪಟ್ಟ ಶಿಷ್ಯನಾಗುತ್ತಾನೆ ಹೆಚ್ಚಿನ ವಿದ್ಯೆ ಕಲಿಯಲು ಅರಸು ಮಕ್ಕಳ ತರಬೇತಿಯನ್ನು ಕದ್ದು ನೋಡುವಾಗ ರಾಜಕುಮಾರನಿಗೆ ಸಹಾಯ ಮಾಡಲು ಹೋಗಿ ಯುವರಾಜ ವಿಷ್ಣು ಗೋಪನ ಕಟ್ಟಿಕೊಳ್ಳುತ್ತಾನೆ. ಹಿರಿಯ ಯುವರಾಜ ಮಯೂರನ ಸಾಹಸ ಮೆಚ್ಚಿ ಕಾದಾಡಲು ತನ್ನ ಕತ್ತಿಯನ್ನು ನೀಡುತ್ತಾನೆ
ತಪ್ಪಿಸಿಕೊಂಡು ರಂಗಾಜಟ್ಟಿಯವರಲ್ಲಿ ಮಯೂರ ತಲೆಮರಿಸಿಕೊಳ್ಳುತ್ತಾನೆ ತಮ್ಮ ಮಗ ಮುತ್ತನ ಜೊತೆ ಸೇರಿ ಮಯೂರನನ್ನು ಗರಡಿ ಮಣ್ಣಲ್ಲಿ ಅವಿತು ಇಡುತ್ತಾರೆ.
ಪಲ್ಲವ ದಳಪತಿಯಿಂದ ಮಯೂರನನ್ನು ರಕ್ಷಿಸಿ ಕಂಚಿಪುರದ ಕೋಟೆಯಿಂದ ಹೊರಗೆ ವನದಲ್ಲಿ ಮಯೂರನನ್ನು ಕಳುಹಿಸಿಕೊಡುತ್ತಾರೆ ಮಯೂರನು ಊರ್ವ ಸನ್ಯಾಸಿ ಮತ್ತು ಆತನ ಮಿತ್ರ ಕಳ್ಳರಪಡೆಯ ನಾಯಕನೊಡನೆ ಸೇಣಸಿ ಅವರ ಗುಂಪಿನ ನಾಯಕನಾಗುತ್ತಾನೆ.
ಪಲ್ಲವರ ದಳಪತಿ ಮಯೂರನು ವಾಸವಿದ್ದ ಕುಹೆಯೊಳಗೆ ಪ್ರವೇಶಿಸಿ ಸನ್ಯಾಸಿ ಮತ್ತು ಕಳ್ಳರ ನಾಯಕನನ್ನು ಬನವಾಸಿ ಪ್ರದೇಶದ ಕದಂಬರ ಪ್ರಧಾನಿ ಮತ್ತು ಸೇನಾಧಿಪತಿ ಎಂದು ಗುರುತಿಸಿ ಮಯೂರನನ್ನು ಬಂಧಿಸಲು ಮುಂದಾಗುತ್ತಾನೆ ಮಯೂರಲು ಚಾಕಚಕ್ಯತೆಯಿಂದ ಪಲ್ಲವರ ಕಾವಲು ಪಡೆ ಮತ್ತು ದಳಪತಿಯನ್ನು ಕಟ್ಟಿ ಹಾಕುತ್ತಾನೆ ಮಯೂರನನ್ನು ಲಘು ಬಗೆಯಿಂದ ಶ್ರೀಶೈಲಕ್ಕೆ ಒಯ್ಯಲು ಶರ್ಮ ಗುಂಪನ್ನು ಸಜ್ಜುಗೊಳಿಸುತ್ತಾನೆ
ತದ್ನಂತರ ಕಳ್ಳರ ಗುಂಪಿನ ನಾಯಕನು ತನ್ನ ಗುರುಗಳಿಗೆ ಮಯೂರನನ್ನು ಪರಿಚಯಿಸುತ್ತಾನೆ ಪಲ್ಲವರ ಖಡ್ಗವನ್ನು ಯುವರಾಜನ ಬಿದರಕ್ಕೆ ತೆಳ್ಳರಿ ತೆರಳಿ ವಾಪಸ್ಸು ಕೊಟ್ಟು ಬರಲು ಧೈರ್ಯವಿದೆಯೇ ಎಂದು ಗುರುಗಳು ಲೇಬಡಿ ಮಾಡುತ್ತಾರೆ
ಹುಚ್ಚಿಗಿಂತ ಮಯೂರ ಖಡ್ಗವನ್ನು ಮರಳಿ ನೀಡಲು ಹೋದಾಗ ಸ್ನೇಹದ ಪ್ರತೀಕವಾಗಿ ಇಟ್ಟುಕೊಳ್ಳುವಂತೆ ತಿಳಿಸುತ್ತಾನೆ ತನಗೆ ಸದಾ ಬರುತ್ತಿದ್ದ ರಾಜ್ಯಲಕ್ಷ್ಮಿ ಖಡ್ಗ ಸಿಂಹಾಸನ ಬಗ್ಗೆ ತಿಳಿಸಲು ಗುರುಗಳನ್ನು ಕೇಳಿಕೊಳ್ಳುತ್ತಾನೆ ಆದಾಗ ಮಯೂರನಿಗೆ ಕದಂಬ ರಾಜಕುಮಾರ ಸನ್ಯಾಸಿಯು ಬನವಾಸಿಯ ಪ್ರಧಾನ ಮಂತ್ರಿ ಸದಾ ನನ್ನ ಶರ್ಮ ಎಂದು ಕಳ್ಳರು ಗುಂಪಿನ ನಾಯಕರು ಬನವಾಸಿಯ ಅಧ್ಯಕ್ಷ ನರಸಿಂಹ ದತ್ತ ಎಂದು ಗುರುಗಳು ಕದಂಬರ ರಾಜಗುರು ಶ್ರೀಶೈಲದ ಜಗದ್ಗುರುಗಳು ಎಂದು ಅರಿವಾಗುತ್ತದೆ ಈ ಸಮಯದಲ್ಲಿ ಮಯೂರನು ಕನ್ನಡಿಗರ ರಾಜವಂಶವಾದ ಕದಂಬ ಸಾಮ್ರಾಜ್ಯವನ್ನು ಮರಳಿ ಹಿಂದಿನ ವೈಭವಕ್ಕೆ ತರುವ ಪ್ರತಿಜ್ಞೆ ಮಾಡುತ್ತಾನೆ
ದಳಪತಿ ಆಸ್ಥಾನಕ್ಕೆ ಮರಳಿ ಮಯೂರನು ಕದಂಬರ ಗುಂಪಿನೊಡನೆ ಕೈಜೋಡಿಸಿರುವ ವಿಷಯವನ್ನು ಪಲ್ಲವ ದೊರೆ ಶಿವ ಸ್ಕಂದ ವರ್ಮ ನಿಗೆ ಅರುಗುತ್ತಾನೆ ರಾಜ್ಯಸಭೆಯಲ್ಲಿ ಏಕಾಏಕಿ ಮಯೂರರು ಪ್ರತ್ಯಕ್ಷವಾಗಿ ದೊರೆ ಶಿವ ಸ್ಕಂದವರ್ಮ ಚಿಕ್ಕ ಯುವರಾಜ ವಿಷ್ಣು ಗೋಪಾಲ ಇವರಿಬ್ಬರನ್ನು ಹೆದರಿಸಿ ತನ್ನ ಮೇಧಾ ಶಕ್ತಿ ಮತ್ತು ಸಾಹಸದ ಪರಿಚಯ ಮಾಡಿಕೊಡುತ್ತಾನೆ ಪಲ್ಲವರು ಕದಂಬರ ರಾಜ್ಯವನ್ನು ಮಲ್ಲಿಸಬೇಕೆಂದು ಇಲ್ಲವಾದಲ್ಲಿ ಯುದ್ಧಕ್ಕೆ ಅಣೆಯಾಗಬೇಕೆಂದು ಎಚ್ಚರಿಕೆ ನೀಡುತ್ತಾನೆ ಮಯೂರದು ಸಣ್ಣ ಸಣ್ಣ ಪ್ರಾಂತ್ಯಗಳಲ್ಲಿ ಜಾಗೃತಿ ಮೂಡಿಸಿ ಸೈನ್ಯ ಕಟ್ಟಿ, ನೀಲಕಂಠ ಗುಪ್ತ ಎಂಬ ಮಾರು ವೇಷದಲ್ಲಿ ಗಣಿಗಾರಿಕೆ ಕಡಲಾಗಿ ವ್ಯಾಪಾರ ಇದೇ ಮೊದಲಾಗಿ ಹಲವು ಬಗೆಗಳಿಂದ ವ್ಯವಹಾರ ನಡೆಸಿ ಹಣ ಸಂಪಾದನೆಗೆ ಬದಲಾಗುತ್ತಾನೆ ನೀಲಕಂಠ ಗುಪ್ತನು ಮಯೂರ ಇರಬಹುದು ಎಂಬ ಸಂಶಯ ಹೊಂದಿದ ಪಲ್ಲವರ ಪ್ರಧಾನಮಂತ್ರಿ ಮಯೂರನ ಸಹಪಾಠಿ ಒಬ್ಬನನ್ನು ಗುಪ್ತನ ಬಳಿಗೆ ಕಳುಹಿಸುತ್ತಾನೆ ಇದನ್ನು ಅರಿತ ಮಯೂರ ತನ್ನ ಸಿಬ್ಬಂದಿ ಮಧುಕೇಶ್ವರನನ್ನು ತನ್ನ ಸ್ಥಾನದಲ್ಲಿ ಕೂಡಿಸಿ ತನ ಸಹಪಾಠಿಗೆ ಮಂಕುಬೂದಿ ಎರಚುತ್ತಾನೆ ಕಡಲ ಪ್ರಾಂತ್ಯ ಮತ್ತು ಶ್ರೀಶೈಲ ಪ್ರಾಂತ್ಯವನ್ನು ತನ್ನ ಮುಷ್ಟಿಗೆ ತೆಗೆದುಕೊಂಡ ಮಯೂರ ದಂಗೆ ಏಳುತ್ತಾನೆ
ಶ್ರೀಶೈಲ ಪ್ರಾಂತ್ಯವನ್ನು ಪುನಹ ಪಲ್ಲವರ ತೆಕ್ಕೆಗೆ ತರಲು ಬಂದ ಯುವರಾಜ ವಿಷ್ಣು ಗೋಪನನ್ನು ಬಂಧಿಸುತ್ತಾನೆ ಆದರೆ ವಿಷ್ಣುಗಪನು ಸಂಚಿನಿಂದ ರಾತ್ರಿ ಹೊತ್ತು ಮಲಗಿದ್ದ ಮಯೂರನನ್ನು ಪ್ರಜ್ಞೆ ತಪ್ಪಿಸಿ ಬಂದಿಯಾಗಿಸುತ್ತಾನೆ
ಬರಿಗಾಲಿನಲ್ಲಿ ಶ್ರೀಶೈಲದಿಂದ ಕಲ್ಲು ಮುಳ್ಳು ತುಂಬಿದ ಹಾದಿಯಲ್ಲಿ ಮಯೂರನನು ನಡೆಸಿ ಕಠಿಣ ಶಿಕ್ಷೆ ನೀಡುತ್ತಾನೆ. ಮಯೂರ ಸೆರೆ ಸಿಕ್ಕ ಸುದ್ದಿ ಕೇಳಿ ಪಲ್ಲವರ ಅರಸು ಮತ್ತು ಹಿರಿಯ ಯುವರಾಜ ಸ್ವತಹ ಮಾರ್ಗ ಮಧ್ಯದಲ್ಲಿ ಎದುರಾಗುತ್ತಾರೆ. ವಿಷ್ಣು ಗೋಪನ ಹೇಡಿತನ ಮತ್ತು ಕಪಟತನವನ್ನು ಮಯೂರ ಹೀಯಾಳಿಸಿದಾಗ ಕೋಪದಿಂದ ಮಯೂರನನ್ನು ಕೊಲ್ಲಲು ಮುಂದಾಗುತ್ತಾನೆ. ಕಡೆಗೆ ತನ್ನ ತಂದೆಯ ಮಾತಿಗೆ ಮಣಿದು, ದ್ವಂದ್ವ ಯುದ್ಧಕ್ಕೆ ಮಯೂರನಿಗೆ ಸವಾಲು ಹಾಕುತ್ತಾನೆ, ಬಳಿದ ಮಯೂರನನ್ನು ಸೋಲಿಸುವುದು ಸುಲಭ ಎಂದು ತಿಳಿದ ವಿಶ್ವಗೋಪನನ್ನು ಮಯೂರನು ಕತ್ತಿವರಸೆಯಲ್ಲಿ ಸೋಲಿಸುತ್ತಾನೆ. ಆತ್ಮ ಪ್ರತಿಷ್ಠೆಗೆ ಧಕ್ಕೆಯಾದ ಸಿಟ್ಟು ತಾಳದ ವಿಷ್ಣು ಗೋಪ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಅದನ್ನು ತಡೆಯುವ ಮಯೂರ ಸ್ನೇಹ ಅಷ್ಟು ಚಾಚುತ್ತಾನೆ ಮಯೂರನ ಸಾಹಸ ತಾಳ್ಮೆ ಮತ್ತು ದೊಡ್ಡ ಗುಣಕ್ಕೆ ಮನಸೋತ ಬಲ್ಲವರ ಅರಸು ಶುಭ ಸ್ಕಂದವರ್ಮ ಸಣ್ಣ ಮಗಳನ್ನು ಮಯೂರರಿಗೆ ಧಾರೆ ತೆರೆದು ಕೊಡುತ್ತಾನೆ ನನ್ನವರನ್ನೆಲ್ಲ ಜೊತೆಗೂಡಿ ಮಯೂರನು ಕದಂಬ ಕದಂಬ ಸಿಂಹಾಸನವನ್ನು ಏರಿ ಕನ್ನಡದ ಮೊದಲ ಅರಸು ಎಂಬುವ ಬಿರುದಿಗೆ ಪಾತ್ರನಾಗುತ್ತಾನೆ.
ಸ್ವಾರಸ್ಯ
ಬದಲಾಯಿಸಿ- ದೇವುಡು ನರಸಿಂಹ ಶಾಸ್ತ್ರಿ ಬರೆದ ಮಯೂರ ಕಾದಂಬರಿಯನ್ನು ಬಾಲಕೃಷ್ಣ ನಿರ್ಮಿಸಲು ಉತ್ಸುಕರಾಗಿರುತ್ತಾರೆ. ಆದರೆ ಜೀವಿ ಅಯ್ಯರ್ ನಿರ್ದೇಶಿಸಲು ಒಪ್ಪದಿದ್ದಾಗ ಈ ಕೆಲಸ ಬದಿಗೆ ಸೇರುತ್ತದೆ. ದೇವುಡು ಕಾದಂಬರಿಯನ್ನು ಪಾರ್ವತಮ್ಮ ರಾಜಕುಮಾರ್ ಓದಿ ನಿರ್ಮಾಪಕ ಟಿಪಿ ವೇಣುಗೋಪಾಲ್ ರಿಗೆ ಚಿತ್ರ ವಾಗಿಸಲು ಸಲಹೆ ನೀಡುತ್ತಾರೆ
- ಚಿ ಉದಯ ಶಂಕರ್ ಚಿತ್ರ ಕಥೆ ಬರೆದು ಮೈಸೂರು ಮಹಾರಾಜರಲ್ಲಿ ಮೈಸೂರು ಅರಮನೆಯಲ್ಲಿ ಚಿತ್ರಿಸಲು ಅವಕಾಶ ಕೇಳಲು ತೆರಳುತ್ತಾರೆ. ರಾಜಕುಮಾರ್ ಅಭಿಮಾನಿ ಆಗಿದ್ದ ಅರಸು ಶ್ರೀ ಜಯಚಾಮರಾಜೇಂದ್ರ ಒಡೆಯರ್ ತುಂಬು ಹೃದಯದಿಂದ ಆಶೀರ್ವದಿಸಿ ಅರಮನೆಯಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡುತ್ತಾರೆ
- ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಂಜುಳಾ ಬದಲು ಬೇರೊಬ್ಬ ನಟಿಯನ್ನು ರಾಜಕುಮಾರಿಯ ಪಾತ್ರದಲ್ಲಿ ನಿಲ್ಲಿಸಲಾಗಿರುತ್ತದೆ. [೧]
- ಶಕ್ತಿಪ್ರಸಾದ್ ಜೊತೆಯಲ್ಲಿ ಅಶ್ವಥ್ ಸಾಹಸ ದೃಶ್ಯಗಳಲ್ಲಿ ತೊಡಗಿದ್ದು, ಮಯೂರದ ವಿಶೇಷ
- ಈ ಚಿತ್ರವನ್ನು ಕನ್ನಡದ ಮೊದಲ ಅರಸು ಮಯೂರನ ಮೇಲೆ ಚಿತ್ರಿಕರಿಸಿ ಕನ್ನಡದ ಕಟ್ಟ ಕಡೆಯ ಅರಸು ಶ್ರೀ ಜಯಚಾಮರಾಜೇಂದ್ರ ಒಡೆಯರಿಗೆ ಅರ್ಪಿಸಲಾಗಿದೆ
ಹೊರಗಿನ ಕೊಂಡಿಗಳು
ಬದಲಾಯಿಸಿ- ಮಯೂರ ಚಲನಚಿತ್ರಕ್ಕೆ ಆಧಾರವಾದ ದೇವುಡು ಅವರ ಕಾದಂಬರಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಇಲ್ಲ.
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ನಾನಿರುವುದೇ ನಿಮಗಾಗಿ | ಡಾ.ರಾಜ್ ಕುಮಾರ್, | |
ಹಗಲೋ ಇರುಳೋ ನನಗೊಂದೂ | ಎಸ್.ಜಾನಕಿ | |
ಈ ಮೌನವ ತಾಳೆನು | ಡಾ.ರಾಜ್ ಕುಮಾರ್, ಎಸ್.ಜಾನಕಿ | |
ಉಲ್ಲೇಖಗಳು
ಬದಲಾಯಿಸಿ