ವೃತ್ತಿಯು ಜೀವನ ನಿರ್ವಹಣೆಗೆ ಮಾಡುವ ಕೆಲಸ. ವೃತ್ತಿಯು ಜೀವನ ನಿರ್ವಹಣೆ ಮಾಡುವ ಕೆಲಸವೆಂಬುದನ್ನು ನಮ್ಮ ಶರಣರಾದ ಬಸವಣ್ಣನವರು "ಕಾಯಕವೇ ಕೈಲಾಸ " ವೆಂಬುದನ್ನು ಮಾಮ್ರಿಕವಾಗಿ 12ನೇ ಶತಮಾನ ದಲ್ಲಿಯೇ ತಿಳಿಸಿದ್ದಾರೆ. ಜೀವನ ನಿರ್ವಹಣೆಯಲ್ಲಿ ವೃತ್ತಿಯೇ ಅವಿಭಾಜ್ಯ ಅಂಗ. ಇದು ಇಲ್ಲದಿದ್ದರೆ ಜೀವನದಲ್ಲಿ ಕಷ್ಟನಷ್ಟಗಳು ಮತ್ತು ಸೋಲು ನಿಶ್ಚಯ. ವೃತ್ತಿಯಲ್ಲಿದವನು ಸೋಮಾರಿಯಾಗಿ ಅಲೆದು ಸಮಾಜಕ್ಕೆ ಕಂಟಕಪ್ರಾಯನಾಗುತ್ತಾನೆ.

ವೃತ್ತಿ
ಕೆಲಸ

ವಿಧಗಳು

ಬದಲಾಯಿಸಿ

ವೃತ್ತಿಯಲ್ಲಿ ೨ ವಿಧ

  1. ಸ್ವಯಂವೃತ್ತಿ -ಸ್ವಯಂವೃತ್ತಿಯಲ್ಲಿ ನಾವೇ ಸ್ವಂತ ಉದ್ಯೋಗ ಮಾಡುತ್ತೇವೆ.
  2. ಪರಾವಲಂಬನೆ ವೃತ್ತಿ- ಪರಾವಲಂಬನೆ ವೃತ್ತಿಯಲ್ಲಿ ಇನ್ನೋಬ್ಬರ ಕೈಕೆಳಗೆ [] ಮಾಡುತ್ತಾರೆ. ಸ್ವಯಂವೃತ್ತಿ ಯಲ್ಲಿ ತಾವು ಬೆಳೆಯುತ್ತಾರೆ. ಇತರರನ್ನು ಬೆಳೆಸುತ್ತಾರೆ.

ಇತಿವೃತ್ತ

ಬದಲಾಯಿಸಿ

ಸನಾತನ ಧರ್ಮದಲ್ಲಿ ವೃತ್ತಿಯ ಪ್ರಾಶಸ್ತ್ಯವನ್ನು ಅರಿಯಬಹುದು. ಅಂದಿನ ಜ್ಞಾನಿಗಳು ಅವರವರ ಕುಲಕಸುಬಿಗೆ ತಕ್ಕಂತೆ ಕೆಲಸಗಳನ್ನು ವಿಂಗಡಿಸಿದರು. ವೇದ ಉಪನಿಷತ್ ಕಲಿತು ಕೆಲಸ ಮಾಡುವರನ್ನು ಬ್ರಾಹ್ಮಣರೆಂದರು. ದೇಶ ಕಾಯುವವರು ಮತ್ತು ಪ್ರಜೆಗಳನ್ನು ಕಾಪಾಡುವರನ್ನು ಕ್ಷತ್ರಿಯರೆಂದರು. ವ್ಯಾಪಾರ ವ್ಯವಹರ ಮಾಡುವವರನ್ನು ವೈಶ್ಯರೆಂದರು. ವ್ಯವಸಾಯ ಮಾಡುವವರನ್ನು ಶೂದ್ರರೆಂದರು. ವ್ಯವಸಾಯ ನಮ್ಮ ಜೀವನಕ್ಕೆ ಅತ್ಯಾವಶ್ಯಕ. ವ್ಯವಸಾಯದಿಂದ ವಿಶ್ವದ ಜನರಿಗೆ ಅನ್ನ ನೀಡುತ್ತಾನೆ ರೈತ. ರೈತ ದೇಶದ ಬೆನ್ನೆಲಬು. ರೈತ ದೇಶದ ಅಭಿವೃದ್ದಿಯ ಹರಿಕಾರನೆಂದರೂ ತಪ್ಪಿಲ್ಲ.[]ನಾಗರೀಕತೆಗಳು ಮಾನವನ ದುಡಿಮೆಯ ಪ್ರತಿಬಿಂಬವಾಗಿದೆ.

ವೈವಿಧ್ಯಮಯ ಕೆಲಸ

ಬದಲಾಯಿಸಿ
  • ಜನರು ವೈವಿಧ್ಯಮಯ ಕೆಲಸಗಳನ್ನು ಮಾಡುತ್ತಾರೆ. ಕಾರ್ಮಿಕರು ಕೃಷಿಯಲ್ಲಿ, ಕಾರ್ಖಾನೆಗಳಲ್ಲಿ, ಸಣ್ಣ ಕೈಗಾರಿಕೆಗಳಲ್ಲಿ, ಸಂಸ್ಥೆಗಳು, ಸಂಘಟನೆಗಳು, ಬ್ಯಾಂಕ್ ಗಳು, ಆಸ್ಪತ್ರೆಗಳು ಹಾಗೂ ಇನ್ನಿತರರು ಉದ್ಯೋಗ ಸ್ಥಳಗಳಲ್ಲಿ ದುಡಿಯುತ್ತಾರೆ. ಇವುಗಳಲ್ಲದೆ ಕೆಲವರು ಮನೆಯಲ್ಲಿಯು ದುಡಿಯುತ್ತಾರೆ. ಇವು ಸಾಂಪ್ರಾದಾಯಿಕ ಕೆಲಸಗಳು ಮತ್ತು ಆಧುನಿಕ ಕೆಲಸಗಳಾದ ಕಂಪ್ಯೂಟರ್ ಪ್ರೋಗ್ರಾಮಿಂಗ್, ವೆಬ್ ವಿನ್ಯಾಸ, ಗ್ರಾಫಿಕಲ್ ವಿನ್ಯಾಸ, ಸಂಕಲನ, ಅನುವಾದ, ಇತ್ಯಾದಿ.[]
  • ವೃತ್ತಿ ಪ್ರತಿಯೊಬ್ಬ ಮನುಷ್ಯನು ತನ್ನ ಸ್ವಂತ ಬೆಳವಣಿಗೆಗೆ ಅಂದರೆ ಹಣಕ್ಕಾಗಿ ಮಾಡುವನು. ಮನುಷ್ಯ ದುಡಿಯುವುದರಿಂದ ಆತನ ಜೀವನದ ಶೈಲಿ ಬದಲಾಗುವಂತೆ ಆತನ ಆದಾಯ ದೇಶದ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ನಮ್ಮ ದೇಶದಲ್ಲಿ ನಿರುದ್ಯೋಗದ ಮಟ್ಟ ತುಂಬಾ ಇರುವುದರಿಂದ ಜನರು ದುಡಿಯಲು ಅಡ್ಡದಾರಿಯನ್ನು ಹಿಡಿದಿದ್ದಾರೆ. ಭಾರತ ಏರಡನೆಯ ಅತಿ ದೊಡ್ದ ಕೃಷೀ ಭೂಮಿಯನ್ನು ಹೂಂದಿದೆ. ಆದರೆ ಅದನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ.
  • ನಿರುದ್ಯೋಗ ಒಂದು ದೊಡ್ಡ ಸಮಸ್ಯೆ. ನಮ್ಮ ದೇಶದಲ್ಲಿ ನಿರುದ್ಯೋಗವೆಂದರೆ ಒಬ್ಬ ಮನುಷ್ಯ ಕೆಲಸ ಮಾಡಲು ಇಚ್ಚಿಸುತ್ತಾನೆ. ಆದರೆ ಕೆಲಸ ಸಿಗದ ಕಾರಣ ಅವನು ನಿರುದ್ಯೋಗಿಯಾಗಿರುತ್ತಾನೆ. ನಮ್ಮ ದೇಶದಲ್ಲಿ ಯುವಕರು ನಿರುದ್ಯೋಗದ ಸಮಸ್ಯೆ ಯನ್ನು ಹೆಚ್ಚು ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಅವರ ತಂದೆ ತಾಯಿಯವರು ಕೂಡಿಸಿರುತ್ತಾರೆ. ಆದರೆ ಪ್ರತಿಯೊಂದು ವೃತ್ತಿಯಲ್ಲಿ ಅನುಭವವನ್ನು ಕೇಳುತ್ತಾರೆ.
  • ಇದರಿಂದ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಗನ ಮಟ್ಟಕ್ಕೆ ಏರಿದೆ. ಜನರು ಯಾವುದಾದರು ಓಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಕೊಳ್ಳಬೇಕು. ಇಲ್ಲದಿದ್ದರೆ ಅಡ್ಡದಾರಿ ಹಿಡಿದು, ಕೆಟ್ಟ ಕೆಲಸಗಳನ್ನು ಮಾಡಲಾರಂಭಿಸುತ್ತಾರೆ. ಇತ್ತೀಚೆಗೆ ನಮ್ಮ ಸಮಾಜದಲ್ಲಿ ಕಷ್ಡಗಳು ಅಂದರೆ ಕೆಟ್ಟ ಕೆಲಸಗಳು ಹೆಚ್ಚಾಗುತ್ತಿದೆ.
  • ಇದಕ್ಕೆ ಒಂದು ಕಾರಣ ನಿರುದ್ಯೋಗ ಎನ್ನಬಹುದು. ಈಗೀನ ತಂತ್ರಜ್ಞಾನವನ್ನು ಉಪಯೋಗಿಸಿ ಕೆಲಸಗಳನ್ನು ಪ್ರಾರಂಭಿಸಬಹುದು. ಅದೇ ರೀತಿ ಬೇರೆಯವರಿಗೂ ಕೆಲಸ ಕೊಡಬಹುದು. ಇದರಿಂದ ಅವರು ಮತ್ತೆ ಅವರ ಕೈಕೆಳಗೆ ಕೆಲಸ ಮಾಡುವವರು ಸಹ ಬೆಳೆಯುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ http://www.qcc.cuny.edu/SocialSciences/ppecorino/Profession-Education-text.html
  2. "ಆರ್ಕೈವ್ ನಕಲು". Archived from the original on 2017-02-27. Retrieved 2017-02-08.
"https://kn.wikipedia.org/w/index.php?title=ವೃತ್ತಿ&oldid=1252671" ಇಂದ ಪಡೆಯಲ್ಪಟ್ಟಿದೆ